Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಈ 5 ರಾಶಿಯವರಿಗೆ ಮಾತು ಕಮ್ಮಿ-ಆದರೆ ಇವರ ಆಲೋಚನೆಗಳನ್ನು ಊಹಿಸುವುದೂ ಕಷ್ಟ!
ಮನೆ ಅಥವಾ ಕಚೇರಿಯಲ್ಲಿ ನಿಮಗೆ ಕೆಲವೊಂದು ಜನರನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗಬಹುದು. ಇದು ನಿಮ್ಮ ಸ್ನೇಹಿತರ ಬಳಗದಲ್ಲೇ ಇರಬಹುದು. ಇವರ ಬಗ್ಗೆ ನೀವು ಒಂದು ರೀತಿ ಯೋಚಿಸಿದ್ದರೆ, ಅವರು ಬೇರೆ ರೀತಿಯಲ್ಲಿ ನಿಮಗೆ ಅಚ್ಚರಿ ನೀಡುವರು. ಯಾವುದೇ ವ್ಯಕ್ತಿಯ ಮುಂದಿನ ನಡೆ ಏನು ಎಂದು ನಿಮಗೆ ತಿಳಿಯಲು ತುಂಬಾ ಕಷ್ಟವಾಗುತ್ತಿದೆಯಾ?
ಇದಕ್ಕೆಲ್ಲಕ್ಕೂ ಜ್ಯೋತಿಷ್ಯದಲ್ಲಿ ಉತ್ತರವಿದೆ. ರಾಶಿಚಕ್ರ ಹಾಗೂ ನಕ್ಷತ್ರಗಳಿಗೆ ಅನುಗುಣವಾಗಿ ವ್ಯಕ್ತಿಗಳು ನಡವಳಿಕೆಗಳು ಇರುವುದು ಎಂದು ಜ್ಯೋತಿಷ್ಯವು ಹೇಳುತ್ತದೆ. ಗ್ರಹಗತಿಯು ಯಾವ ಸ್ಥಾನದಲ್ಲಿದೆ ಎನ್ನುವುದರ ಮೇಲೆ ಕೂಡ ಇದು ನಿರ್ಬರವಾಗಿದೆ. ಇದರಿಂದ ನಿಮಗೆ ತುಂಬಾ ರಹಸ್ಯವೆಂದು ಕಾಣುವಂತಹ ಕೆಲವು ವ್ಯಕ್ತಿಗಳ ರಾಶಿಚಕ್ರಗಳು ಯಾವುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ... ಮುಂದೆ ಓದಿ

ವೃಶ್ಚಿಕ
ವೃಶ್ಚಿಕ ರಾಶಿಯವರನ್ನು ಊಹಿಸುವುದು ತುಂಬಾ ಕಷ್ಟ. ವೃಶ್ಚಿಕ ರಾಶಿಯವರ ಕಣ್ಣುಗಳು ಏನನ್ನು ನೋಡುತ್ತಿದೆ ಎಂದು ನಿಮಗೆ ತಿಳಿಸಿಕೊಡಬಹುದು. ಆದರೆ ಅವರು ಏನು ಯೋಚಿಸುತ್ತಿದ್ದಾರೆ ಎಂದು ಹೇಳುವುದು ಅಷ್ಟು ಸುಲಭವಲ್ಲ. ಅವರು ಅತಿಯಾಗಿ ಪರಿಶೀಲಿಸುವರು ಮತ್ತು ಹೇಳುವುದು ಕಡಿಮೆ. ಇವರು ಹೊಸ ವಿಷಯಗಳೊಂದಿಗೆ ಪ್ರಯೋಗ ಮಾಡುತ್ತಿರುವ ಕಾರಣದಿಂದಾಗಿ ಇವರನ್ನು ಊಹೆ ಮಾಡುವುದು ಕಠಿಣ.

ಕನ್ಯಾ
ಕನ್ಯಾ ರಾಶಿಯವರಿಗೆ ತಮಾಷೆ ತುಂಬಾ ಇಷ್ಟ. ಇವರು ತಮಾಷೆ ಮಾಡುವುದನ್ನು ಹಾಗೂ ತಮಾಷೆ ಮಾಡಿಸಿಕೊಳ್ಳುವುದನ್ನು ಇಷ್ಟಪಡುವರು. ಅವರ ಬಗ್ಗೆ ಊಹೆ ಮಾಡಲು ನಿಮಗೆ ಅವಕಾಶ ನೀಡುವರು. ನೀವು ನೋಡುತ್ತಿರುವ ಮತ್ತು ಆಗುತ್ತಿರುವುದು ಎಲ್ಲವೂ ಸರಿಯೆಂದು ಭಾವಿಸುವಿರಿ. ಆದರೆ ಈ ರಾಶಿಯವರು ಸಂಪೂರ್ಣ ವ್ಯಕ್ತಿತ್ವವನ್ನು ಹೊರಹಾಕಲು ಸಾಧ್ಯವಿಲ್ಲವೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಇವರು ಹೃದಯದಿಂದ ತುಂಬಾ ಸರಳವಾಗಿ ಕಾಣಿಸಬಹುದು. ಆದರೆ ಆಳವಾದ ಭಾವನೆಗಳನ್ನು ಹೊಂದಿರುವರು ಮತ್ತು ಇದನ್ನು ಹೇಳಿಕೊಳ್ಳಲ್ಲ.

ಮಕರ
ಮಕರ ರಾಶಿಯವರಿಗೆ ವೈಫಲ್ಯದ ಬಗ್ಗೆ ದೊಡ್ಡ ಭೀತಿಯಿರುವುದು ಮತ್ತು ಇದು ಅವರಲ್ಲಿ ಅಡಗಿರುವಂತಹ ದೊಡ್ಡ ರಹಸ್ಯವಾಗಿದೆ. ಮಕರ ರಾಶಿಯವರ ಮುಂದಿನ ನಡೆ ಏನು ಎಂದು ತಿಳಿಯಲು ನಿಮಗೆ ಸಾಧ್ಯವಾಗಲ್ಲ. ಶತ್ರುಗಳ ಬಗ್ಗೆ ಇವರು ತುಂಬಾ ಜಾಗೃತರಾಗಿರುವರು. ಆದರೆ ಇವರು ನಂಬಬಾರದ ಕೆಲವೊಂದು ವ್ಯಕ್ತಿಗಳನ್ನು ನಂಬುವರು. ಹೆಚ್ಚಿನವರು ಇವರ ಬಗ್ಗೆ ಊಹೆ ಮಾಡುವರು. ಆದರೆ ವಿಚಾರ ಬೇರೆಯೆ ಆಗಿರುವುದು. ಇವರ ವ್ಯಕ್ತಿತ್ವದಿಂದಾಗಿ ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳುವರು.

ಕುಂಭ
ಹೆಚ್ಚಿನ ಕುಂಭ ರಾಶಿಯವರು ತುಂಬಾ ಕಡಿಮೆ ಮಾತನಾಡುವರು. ಆದರೆ ಇವರ ರಹಸ್ಯ ವ್ಯಕ್ತಿತ್ವವು ಹೆಚ್ಚಾಗಿ ಗೋಚರಿಸುವುದು. ಇವರು ಯಾರನ್ನಾದರೂ ಅಥವಾ ಯಾವುದನ್ನಾದರೂ ಗಮನಿಸುವುದು ಸುಲಭವಾಗಿ ತಿಳಿಯುವುದು. ಭವಿಷ್ಯದಲ್ಲಿ ತಮಗೆ ನೋವಾಗಲಿದೆ ಎಂದು ತಿಳಿದಾಗ ಇವರನ್ನು ಊಹೆ ಮಾಡುವುದು ತುಂಬಾ ಕಠಿಣ. ಎಲ್ಲಾ ಕುಂಭ ರಾಶಿಯವರು ತುಂಬಾ ರಹಸ್ಯವಾಗಿರುವುದಿಲ್ಲ. ಕೆಲವರು ಹೆಚ್ಚು ಮಾತನಾಡಲ್ಲ ಮತ್ತು ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು.

ಮೀನ
ಮೀನ ರಾಶಿಯವರ ವ್ಯಕ್ತಿತ್ವವು ತುಂಬಾ ರಹಸ್ಯವಾಗಿರುವ ಕಾರಣದಿಂದಾಗಿ ಇವರನ್ನು ಊಹಿಸುವುದು ತುಂಬಾ ಕಷ್ಟವೆಂದು ಹೆಚ್ಚಿನ ಜನರು ಭಾವಿಸಿರುವರು. ಆದರೆ ಕೆಲವೊಂದು ಸಂದರ್ಭದಲ್ಲಿ ಇವರು ತಮ್ಮ ಆಯ್ಕೆಯ ಬಗ್ಗೆಯೇ ಅರ್ಥ ಮಾಡಿಕೊಳ್ಳಲು ವಿಫಲರಾಗುವರು. ಇವರನ್ನು ಯಾವುದೇ ಪರಿಸ್ಥಿತಿಯಲ್ಲೂ ಊಹಿಸಬಾರದು. ರಹಸ್ಯವಾಗಿರುವ ರಾಶಿಯಲ್ಲಿ ಇವರು ವೃಶ್ಚಿಕ ರಾಶಿಯ ಬಳಿಕದ ಸ್ಥಾನ ಪಡೆಯುವರು.



Click it and Unblock the Notifications











