For Quick Alerts
ALLOW NOTIFICATIONS  
For Daily Alerts

  ಈ ಐದು ರಾಶಿಯವರು ಮೋಸ ಮಾಡಿದರೂ ಸಿಕ್ಕಿಬೀಳುವುದಿಲ್ಲ!

  By Deepu
  |

  ತುಂಬಾ ಪ್ರಾಮಾಣಿಕವಾಗಿ ಇರುವವರಿಗೆ ಮೋಸ ಮಾಡಲು ಬರಲ್ಲ. ಆದರೆ ಕೆಲವರಿಗೆ ಇದು ಜನ್ಮದಿಂದಲೇ ಕರಗತವಾಗಿರುವುದು. ಯಾಕೆಂದರೆ ಕೆಲವು ರಾಶಿಯವರು ಎಷ್ಟು ಸುಲಭವಾಗಿ ಮೋಸ ಮಾಡುತ್ತಾರೆಂದರೆ ಅದು ತಿಳಿಯುವುದೇ ಇಲ್ಲ. ಯಾವುದೇ ಸಂದರ್ಭದಲ್ಲಿ ಮತ್ತು ಎಷ್ಟೇ ಬೆಲೆ ತೆತ್ತಾದರೂ ಮೋಸ ಮಾಡುವ ಕೆಲವು ರಾಶಿಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

  ಈ ಲೇಖನದಲ್ಲಿ ಅದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ರಾಶಿಯವರು ತಮ್ಮ ಸಂಗಾತಿ ಮತ್ತು ಸ್ನೇಹಿತರಿಗೆ ಯಾವುದೇ ಹಿಂಜರಿಕೆಯಿಲ್ಲದೆ ಮೋಸ ಮಾಡುವರು. ಇಂತಹ ರಾಶಿಗಳ ಬಗ್ಗೆ ನೀವು ಕೂಡ ತಿಳಿಯಿರಿ....

  ಮೇಷ: ಮಾ.21-ಎ.19

  ಮೇಷ: ಮಾ.21-ಎ.19

  ಮೇಷ ರಾಶಿಯವರಿಗೆ ಮಂಗಳನು ಅಧಿಪತಿ. ಮಂಗಳನು ಅಭಿನಯ, ಆಕ್ರಮಣಶೀಲತೆ ಮತ್ತು ಲೈಂಗಿಕತೆಗೆ ಹೆಸರುವಾಸಿ. ಈ ರಾಶಿಯವರು ಸ್ವಲ್ಪ ಚಿಂತಿಸದೆ ಮೋಸ ಮಾಡುವರು. ಅವರ ತಿಕ್ಕಲುತನ ಮತ್ತು ಆಸೆಯು ಅವರಿಗೆ ಅತ್ಯುತ್ತಮ ತೀರ್ಪಿನ ದಾರಿಯಲ್ಲಿರುವುದು. ಇವರಿಗೆ ಆಕರ್ಷಣೆಯು ತುಂಬಾ ಕಡಿಮೆಯಾಗಿರುವುದು ಮತ್ತು ಇವರೊಂದಿಗೆ ಇವರ ರೋಮ್ಯಾಂಟಿಕ್ ಸಂಗಾತಿಗಳು ಇವರಿಗೆ ಸ್ವಲ್ಪ ಸಮಯದ ಬಳಿಕ ಬೇಸರ ಮೂಡಿಸುವುದು. ಇವರಿಗೆ ಆಕರ್ಷಣೆ

  ದೊಡ್ಡ ವಿಷಯವಲ್ಲ. ಇವರಿಗೆ ತಮ್ಮ ಸಂಬಂಧವನ್ನು ಅಡಗಿಸಿಡುವಲ್ಲಿ ತುಂಬಾ ಕಷ್ಟವಾಗುವುದು. ಆದರೂ ಇವರು ಮೋಸ ಮಾಡುವಲ್ಲಿ ಪರಿಗಣತರು.

  ಮೇಷ: ಮಾ.21-ಎ.19

  ಮೇಷ: ಮಾ.21-ಎ.19

  ಇನ್ನು ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಸ್ವಾವಲಂಬಿಗಳು ಮತ್ತು ಇದರಿಂದಾಗಿ ಅವರಿಗೆ ಸ್ವರಕ್ಷಣೆಯು ತಿಳಿದಿರುವುದು. ಮೇಷ ರಾಶಿಯವರು ಶಕ್ತಿಯು ಅವರ ನಾಯಕತ್ವದ ಗುಣಗಳು, ನಿರ್ಭೀತಿಯ ಸ್ವಭಾವ ಮತ್ತು ಕೆಲಸ ಮಾಡುವ ಶಕ್ತಿಯನ್ನು ಅವಲಂಬಿಸಿದೆ.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಮಿಥುನ ರಾಶಿಯವರು ಯಾವಾಗಲೂ ಮೋಸ ಮಾಡುವರು. ಈ ರಾಶಿಯ ಚಿಹ್ನೆಯ ಅವಳಿಯಾಗಿರುವುದರಿಂದ. ಇವರಲ್ಲಿ ಎರಡು ವಿಧದ ವ್ಯಕ್ತಿತ್ವವಿರುವುದು. ಇದರ ಬಗ್ಗೆ ಹೆಚ್ಚಿನವರಿಗೆ ತಿಳೀದಿರುವುದು. ಇವರಿಗೆ ವೈವಿಧ್ಯತೆ, ತುಂಬಾ ಸ್ವಾತಂತ್ರ್ಯ ಮತ್ತು ಸಂತೋಷವಾಗಿರಲು ನಮ್ಯತೆ ಬೇಕಾಗಿರುವುದು. ಇವರು ಪ್ರತಿಯೊಂದರಲ್ಲೂ

  ಎರಡನ್ನು ಪಡೆಯುವರು. ಇದೇ ಕಾರಣದಿಂದ ಲೌಕಿಕವಾಗಿಯೂ ಇದೇ ರೀತಿಯಾಗಿರುವರು. ಇದರಿಂದಾಗಿ ಹಲವಾರು ಸಂಬಂಧಲ್ಲಿ ಇವರು ತೊಡಗಿಕೊಳ್ಳುವರು. ಆದರೆ ಇದನ್ನು ಮೋಸವೆಂದು ಅವರು ಪರಿಗಣಿಸುವುದಿಲ್ಲ. ಅವರು ಸಿಕ್ಕಿಬಿದ್ದರೆ ಆಗ ನೀವು ಏನು ಕೇಳಬಯಸುತ್ತೀರೋ ಅದನ್ನೇ ಅವರು ಹೇಳುವರು. ಮತ್ತೆ ಇದೇ ರೀತಿ ಮಾಡಿದರೆ ನೀವು ಅಚ್ಚರಿ ಪಡಬೇಡಿ. ಯಾಕೆಂದರೆ ಅವರ ಗ್ರಹಗತಿಯು ಹಾಗೆ ಮಾಡಿಸುವುದು. ಇನ್ನು ಇನ್ನು ಈ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ಇವರು ಗಣಿತದಲ್ಲಿ ಉತ್ತಮರಾಗಿದ್ದು ವಾಣಿಜ್ಯ ವಹಿವಾಟುದಾರದು, ಲೆಕ್ಕಪರಿಶೀಲಿಕರು, ಭೌತವಿಜ್ಞಾನಿ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳನ್ನು ಸಫಲವಾಗಿ ನಿರ್ವಹಿಸುವವರಾಗಿರುತ್ತಾರೆ.

  ತುಲಾ: ಸೆ.24- ಅ.23

  ತುಲಾ: ಸೆ.24- ಅ.23

  ತುಲಾ ರಾಶಿಯವರು ತಾವು ಮಾಡುವಂತಹ ಪ್ರತಿಯೊಂದರಲ್ಲೂ ಸಮತೋಲನ ಕಾಯ್ದುಕೊಳ್ಳುವರು. ಇವರು ಸ್ವಭಾತಃ ಪ್ರೇಮಿಗಳು ಮತ್ತು ಶಾಂತಿವಾದಿಗಳು. ಈ ರಾಶಿಯ ವ್ಯಕ್ತಿಗಳು ಮೋಸ ಮಾಡಿದರೆ ಆಗ ಅವರು ತಮ್ಮ ಸಂಗಾತಿಯಿಂದ ಸಿಗದೇ ಇರುವ ಕಾರಣಕ್ಕಾಗಿ ಮಾತ್ರ. ಮೋಸ ಮಾಡುವುದರಿಂದ ಅವರು ತುಂಬಾ ತಪ್ಪಿತಸ್ಥ ಭಾವನೆಗೆ ಒಳಗಾಗುವರು. ಆದರೆ ಶಾಂತಿಯನ್ನು ಕಾಪಾಡುವ ಸಲುವಾಗಿ ಇವರು ತಮ್ಮ ಸಂಗಾತಿಯಿಂದ ಎಲ್ಲವನ್ನು ಮುಚ್ಚಿಡುವರು. ಇವರು ಸಂಗಾತಿಗೆ ಸಿಕ್ಕಿಬಿದ್ದರೆ ಆಗ ಅವರು ತಾವು ಮಾಡಿರುವಂತಹ ಕೆಲಸವನ್ನು ನಿರಾಕರಿಸುವರು. ಇವರು ತಮ್ಮ ತಪ್ಪನ್ನು ಒಪ್ಪಿಕೊಂಡರೆ ಆಗ ಇವರು ಪ್ರಾಮಾಣಿಕವಾಗಿರುವರು. ಇವರು ಮೋಸ ಮಾಡುವುದನ್ನು ತಡೆಯಲು ಇವರನ್ನು ಸಂತೃಪ್ತವಾಗಿಡಬೇಕು.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರು ಬೇರೆಲ್ಲಾ ರಾಶಿಗಳಿಗಿಂತ ತುಂಬಾ ನಂಬಿಕಸ್ಥರಾಗಿರುವರು. ಆದರೆ ಮೋಸ ಮಾಡಿದರೆ ಅವರು ಇದನ್ನು ರಹಸ್ಯವಾಗಿಡುವರು. ಯಾಕೆಂದರೆ ಇದು ಅವರಿಗೆ ಜನ್ಮಗುಣದಿಂದ ಬಂದಿದೆ. ವೃಶ್ಚಿಕ ರಾಶಿಯವರು ಅಲೆದಾಡುವುದು ಹೇಗೆಂಬುವುದಕ್ಕೆ ಕೆಲವೊಂದು ಆಳವಾದ ಕಾರಣಗಳಿವೆ. ಇವರು ಭಾವನಾತ್ಮಕವಾಗಿ ನೋವು ಅಥವಾ ಸಂಬಂಧ ದೂರವಾದರೆ ಇವರು ಮೋಸ ಮಾಡುವರು. ಇವರು ಯಾವುದೇ ಸಂಬಂಧವನ್ನು ಮುಚ್ಚಿಡುವಲ್ಲಿ ಇವರು ತುಂಬಾ

  ಜಾಣರಾಗಿರುವರು. ಇವರು ತಮ್ಮ ಮೋಸವನ್ನು ಮುಚ್ಚಲು ಹೆಚ್ಚಿನ ಶ್ರಮ ವಹಿಸುವರು ಮತ್ತು ತಮ್ಮ ಮೋಸದ ಬಗ್ಗೆ ಸುಲಭವಾಗಿ ಬಾಯಿ ಬಿಡಲ್ಲ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ಇನ್ನು ವೃಶ್ಚಿಕ ರಾಶಿಯವರ ಜತೆಗೆ ನೀವಿದ್ದರೆ ಆಗ ಶೀತ ಕಂಪನಗಳ ಅನುಭವ ನಿಮಗೆ ಆಗಿರಬಹುದು. ವೃಶ್ಚಿಕ ರಾಶಿಯವರು ತುಂಬಾ ಲೆಕ್ಕಾಚಾರದವರು ಮತ್ತು ತಾವು ಯಾರೊಂದಿಗೆ ಸ್ನೇಹ ಮಾಡಬೇಕೆಂದು ಕೂಡ ಅವರು ತುಂಬಾ ಯೋಚಿಸುವರು. ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂಧು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು. ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ. ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ

  ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು.ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ

  ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

  ಮೀನ: ಫೆ.19-ಮಾ.20

  ಮೀನ: ಫೆ.19-ಮಾ.20

  ಇವರು ಗ್ರಹಗಳಿಂದಾಗಿ ತುಂಬಾ ಕುತೂಹಲಿಗರಾಗಿರುವರು ಮತ್ತು ಇದರಿಂದಾಗಿ ಅವರು ವಿರುದ್ಧ ಲಿಂಗದವರಿಗೆ ಆಕರ್ಷಣೆಗೆ ಒಳಗಾಗುವರು. ಇವರು ರಹಸ್ಯ ಕಾಪಾಡುವುದಲ್ಲಿ ತುಂಬಾ ಜಾಣರಾಗಿರುವರು. ಬೇರೆಯವರ ವಿಚಾರಗಳ ಬಗ್ಗೆ ಮಾತನಾಡುವುದು ಇವರ ಕೆಲಸವಲ್ಲವೆಂದು ಭಾವಿಸುವರು. ಇನ್ನೊಂದು ಬದಿಯಲ್ಲಿ ಇವರು ತಮ್ಮ ಸಂಬಂಧವನ್ನು ಆನಂದಿಸುವರು. ಇವರು ಕಲ್ಪನೆಗೆ ಬಿದ್ದು ಸಂಬಂಧ ಮಾಡುವರು. ಇವರು ತುಂಬಾ ಸಾಧುವಾಗಿರುವ ಕಾರಣದಿಂದ ಯಾವುದೇ

  ಸಂಘರ್ಷ ಬಯಸಲ್ಲ. ಇವರು ತಮ್ಮಿಂದ ಆಗುವಷ್ಟು ಮಟ್ಟಿಗೆ ಎಲ್ಲವನ್ನು ಮುಚ್ಚಿಡುವರು. ನಿಮ್ಮ ರಾಶಿಚಕ್ರಗಳು ಇದರಲ್ಲಿ ಇದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

   

  English summary

  Zodiac Signs That Are Likely To Cheat -Never Get Caught

  According to astrologers, there are some of the zodiac signs that are known for cheating others, and some will even put the effort in to hide it. These individuals seem to cheat easily and also not get caught most of the time! Here, we are sharing the list of the zodiac signs that are known to cheat at any given moment and at any given cost.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more