ಈ ನಾಲ್ಕು ರಾಶಿಯವರು ಎಲ್ಲಾ ವಿಷಯವನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವರು!

By Hemanth
Subscribe to Boldsky

ಜೀವನ ಎನ್ನುವುದು ದೇವರು ಕೊಟ್ಟಿರುವ ಕೊಡುಗೆ. ಅದನ್ನು ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ಸಮಾಜದಲ್ಲಿ ಒಂದು ಒಳ್ಳೆಯ ಹೆಸರು ಮಾಡಿದರೆ ಅದರಿಂದ ಜೀವನ ಸಾರ್ಥಕವಾಗುವುದು. ಕೆಲವರಿಗೆ ಮಾತ್ರ ಜೀವನದ ಬಗ್ಗೆ ಗೊತ್ತು ಗುರಿ ಎನ್ನುವುದೇ ಇರಲ್ಲ, ಆದರೆ ಇನ್ನು ಕೆಲವರು ಜೀವನವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ತಮ್ಮ ಗುರಿ ಸಾಧಿಸುವರು. ಇದಕ್ಕೆ ಪ್ರಮುಖವಾಗಿ ಅವರ ರಾಶಿಚಕ್ರಗಳು ಕಾರಣವಾಗಿದೆ.

ಇಂತಹ ರಾಶಿಯವರು ಜೀವನದ ಬಗ್ಗೆ ತುಂಬಾ ತೀವ್ರವಾಗಿ ಗಮನಹರಿಸುವರು. ಈ ಲೇಖನದಲ್ಲಿ ಇಂತಹ ರಾಶಿಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇವರು ಪ್ರತಿಯೊಂದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವರು. ಆದರೆ ಅವರು ತುಂಬಾ ಆರಾಮವಾಗಿದ್ದುಕೊಂಡು, ಕೋಪ ಮಾಡಿಕೊಳ್ಳದೆ, ಎಲ್ಲದಕ್ಕೂ ಜೀವನದಲ್ಲಿ ಪರಿಹಾರವಿದೆ ಎಂದು ತಿಳಿಯಬೇಕು. ಆ ರಾಶಿಗಳು ಯಾವುದು ಎಂದು ತಿಳಿಯಿರಿ...

ವೃಶ್ಚಿಕ: ಅ. 24ರಿಂದ ನ.22

ವೃಶ್ಚಿಕ: ಅ. 24ರಿಂದ ನ.22

ಈ ರಾಶಿಯವರು ಜೀವನದಲ್ಲಿ ತುಂಬಾ ಗಂಭೀರವಾಗಿರುವರು. ಇವರು ಕೆಲವೊಮ್ಮೆ ನಗುವುದನ್ನು ಕೂಡ ಮರೆತುಬಿಡುವರು. ಒತ್ತಡ ನಿವಾರಣೆ ಮಾಡಲು ನಗು ಅತ್ಯುತ್ತಮ ಪರಿಹಾರವೆಂದು ಅವರು ತಿಳಿದುಕೊಳ್ಳಬೇಕು. ಜೀವನದಲ್ಲಿ ತಮಾಷೆಯನ್ನು ಕಂಡುಕೊಂಡರೆ ಆಗ ಎಲ್ಲಾ ಸಮಯದಲ್ಲೂ ಗಂಭೀರವಾಗಿರುವ ಬದಲು ಸ್ವಲ್ಪ ಆರಾಮವಾಗಿರಬಹುದು. ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು. ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

ಮಕರ: ಡಿ.21-ಜ.20

ಮಕರ: ಡಿ.21-ಜ.20

12 ರಾಶಿ ಚಕ್ರಗಳಲ್ಲಿ ಅತ್ಯಂತ ಶ್ರಮಜೀವಿಗಳಾಗಿ ಕೆಲಸ ಮಾಡುವ ರಾಶಿಚಕ್ರದವರು ಯಾರೆಂದು ನೋಡಿದರೆ ಮಕರ ರಾಶಿಯವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರಿಗೆ ಕೆಲಸ ದೊಡ್ಡದಾಗಿರಲಿ ಅಥವಾ ಚಿಕ್ಕದೇ ಆಗಿರಲಿ, ಮಾಡುವ ಕೆಲಸದಲ್ಲಿ ಅತ್ಯಂತ ಶ್ರದ್ಧೆ ಹಾಗೂ ತಲ್ಲೀನತೆಯನ್ನು ತೋರುತ್ತಾರೆ. ಈ ರಾಶಿಯವರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಕೆಗೆ ಹೋಲಿಸುತ್ತಾರೆ. ಮೇಕೆಯು ಅತ್ಯಂತ ಶ್ರಮಜೀವಿ. ಹಾಗೂ ಗಟ್ಟಿಯಾದ ತಲೆಯನ್ನು ಹೊಂದಿರುತ್ತಾರೆ. ಇವರು ಮಾಡುವ ಕೆಲಸದಲ್ಲಿ ಪರಿಪೂರ್ಣತೆಯೊಂದಿಗೆ ಗುರಿಯನ್ನು ತಲುಪುತ್ತಾರೆ. ಈ ರಾಶಿಯವರಿಗೆ ತಮ್ಮ ಗುರಿಯ ಬಗ್ಗೆ ಇವರು ಕ್ರಿಯಾತ್ಮಕವಾಗಿ ಕೆಲಸ ಮಾಡದೇ ಇದ್ದರೆ ಆಗ ಇವರಿಗೆ ಕಳೆದುಕೊಂಡ ಭಾವನೆಯಾಗುವುದು. ಕೆಲಸದ ಬಗ್ಗೆ ಇವರಿಗಿರುವ ದೃಷ್ಟಿಕೋನವನ್ನು ಶ್ಲಾಘಿಸಬೇಕು. ಆದರೆ ಕೆಲವೊಂದು ಸಲ ಇವರು ಇನ್ನಿಲ್ಲದ ರೀತಿಯಲ್ಲಿ ಒತ್ತಡವನ್ನು ತಮ್ಮ ಮೇಲೆ ಹಾಕಿಕೊಳ್ಳುವರು. ಭವಿಷ್ಯಕ್ಕೆ ಯೋಜನೆಗಳನ್ನು ಹಾಕಿಕೊಳ್ಳುವುದು ಒಳ್ಳೆಯದು. ಆದರೆ ಜೀವನವನ್ನು ಆನಂದಿಸುವುದನ್ನು ಬಿಡಬಾರದು ಎಂದು ತಿಳಿಯಬೇಕು. ಸಣ್ಣ ಸಣ್ಣ ವಿಷಯಗಳಲ್ಲೂ ಸಂತೋಷ ಪಡೆಯುವುದು ಅಥವಾ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದ ಆರಾಮ ಸಿಗುವುದು.

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ: ಜೂನ್ 21- ಜುಲೈ 22

ಹೊರಗಿನ ಜಗತ್ತು ತುಂಬಾ ಕೆಟ್ಟದು ಮತ್ತು ಭೀತಿ ಮೂಡಿಸುತ್ತದೆ ಎನ್ನುವ ಭಾವನೆಯು ಕರ್ಕಾಟಕ ರಾಶಿಯವರಲ್ಲಿ ಬಂದರೆ ಆಗ ಇವರಿಗೆ ಸುರಕ್ಷಿತ ಜಾಗ ಮನೆ. ಎಲ್ಲರೂ ಅವರನ್ನು ಪಡೆಯಲು ಬಯಸಿದ್ದಾರೆಂದು ತಿಳಿದಾಗ ಅವರು ತುಂಬಾ ಸಂಶಯಗ್ರಸ್ತ ಹಾಗೂ ರಕ್ಷಣಾತ್ಮಕವಾಗುವರು. ಈ ವೇಳೆ ಅವರು ಚಿಪ್ಪಿನೊಳಗೆ ಹೋಗುವರು ಮತ್ತು ನಂಬಿಕೆ ಇಲ್ಲದೆ ಬೇರೆಯವರನ್ನು ಹತ್ತಿರಕ್ಕೆ ಬರಲು ಬಿಡುವುದಿಲ್ಲ. ಇವರ ಹತ್ತಿರಕ್ಕೆ ಜನರು ಬರಲು ನಿಲ್ಲಿಸಿದಾಗ ಇವರು ತುಂಬಾ ಗಂಭೀರವಾಗುವರು. ಇನ್ನು ಈ ರಾಶಿಫಲದ ವ್ಯಕ್ತಿಗಳೂ ಪ್ರಬಲರಾಗಿದ್ದು ವಿಶೇಷವಾಗಿ ಉತ್ತಮ ಪ್ರೇಮಿಗಳೂ ಇತರರ ಬಗ್ಗೆ ಕಾಳಜಿ ವಹಿಸುವವರೂ ಆಗಿರುತ್ತಾರೆ. ಇವರು ಸದಾ ಮುನ್ನುಗ್ಗುವ ವ್ಯಕ್ತಿತ್ವದವರಾಗಿದ್ದು ಇದಕ್ಕಾಗಿ ಇವರ ಕೊರತೆಗಳು ಎಂದೂ ಅಡ್ಡಿಯಾಗುವುದಿಲ್ಲ. ಇವರು ತಮ್ಮ ಗುರಿಯತ್ತ ಹೆಚ್ಚು ಗಮನ ಹರಿಸುವವರಾಗಿದ್ದು ತಾವು ಕಾಳಜಿ ವಹಿಸುವ ವ್ಯಕ್ತಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲೂ ಹಿಂಜರಿಯದವರಾಗಿರುತ್ತಾರೆ. ತಾವು ಸಾಧಿಸಬಹುದಾದ ಗುರಿಗಳನ್ನೇ ಹಿಂಬಾಲಿಸಿ ಹೋಗುವ ಇವರು ತಮಗೆ ತಾವೇ ಪ್ರೇರೇಪಿಸುವಂತಹವರಾಗಿರುತ್ತಾರೆ.

ಮೀನ: ಫೆ.19-ಮಾ.20

ಮೀನ: ಫೆ.19-ಮಾ.20

ಈ ರಾಶಿಯವರು ತುಂಬಾ ಗಂಭೀರವಾಗಿರುವರು ಮತ್ತು ಪ್ರತಿಯೊಂದು ವಿಚಾರವನ್ನು ಗಂಭೀರವಾಗಿ ಪರಿಗಣಿಸುವರು. ಇವರು ತುಂಬಾ ಸೂಕ್ಷ್ಮವೆಂದು ಪರಿಗಣಿಸಲಾಗಿದೆ ಮತ್ತು ಆಲೋಚಿಸುವರು ಎಂದು ನಂಬಲಾಗಿದೆ. ಇವರಿಗೆ ನೋವು ಅಥವಾ ಟೀಕೆಗಳನ್ನು ಮಾಡಿದಾಗ ಇವರು ಚಿಪ್ಪಿನೊಳಗೆ ಹೋಗಿ ಮುದುಡಿಕೊಳ್ಳುವರು. ಇವರು ಜೀವನದ ನಿರಾಶವಾದಿ ಭಾಗವನ್ನು ನೋಡುವರು. ಏನಾದರೂ ಒಳ್ಳೆಯದು ಆದರೆ ಆಗ ಅದರ ಹಿಂದೆ ಏನಾದರೂ ಕೆಟ್ಟದು ಆಗಲಿದೆ ಎಂದು ನಂಬುವರು. ಇವರು ಆರಾಮವಾಗಿದ್ದು, ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸಬೇಕು. ಇನ್ನು ಈ ರಾಶಿಯವರು ತುಂಬಾ ಸ್ನೇಹಮಹಿ ಹಾಗೂ ಸಹಾನೂಭೂತಿಯವರಾಗಿರುವರು. ಉದಾರಿ ಹಾಗೂ ನಿಸ್ವಾರ್ಥಿಯಾಗಿರುವುದು ನಿಮ್ಮ ಒಳಗಿರುವ ಒಳ್ಳೆಯ ಗುಣ. ನೀವು ಭಾವನಾತ್ಮಕವಾಗಿ ತುಂಬಾ ಜಾಣರಾಗಿರುವಿರಿ. ಭಾವನೆಗಳನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ನಿಮ್ಮಲ್ಲಿರುವುದಿಲ್ಲ. ಅಂತಃಪ್ರಜ್ಞೆ ನಿಮಗೆ ಸಿಕ್ಕಿರುವ ಉಡುಗೊರೆಯಾಗಿದೆ. ಏನಾದರೂ ತಪ್ಪಾಗುತ್ತಾ ಇದ್ದರೆ ನಿಮಗೆ ಮೊದಲೇ ಅದನ್ನು ಗ್ರಹಿಸಬಲ್ಲೀರಿ.

For Quick Alerts
ALLOW NOTIFICATIONS
For Daily Alerts

    English summary

    Zodiac Signs That Are Known For Being Serious In Life

    According to astrology, there are a few zodiac signs which are known to be more serious than others. Though they are serious in life, it doesn't mean that they don't have a sense of humour or that they are unhappy in life. It is just that they seem to be intensely focused in life. Here, in this article, we are revealing the list of the superserious zodiac signs who need to take a chill pill.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more