ಈ 4 ರಾಶಿಯವರು, ತಮ್ಮ ಕೆಟ್ಟ ಗುಣಗಳಿಂದಲೇ ಹೆಸರು ಹಾಳು ಮಾಡಿಕೊಳ್ಳುತ್ತಾರೆ

Posted By: Deepu
Subscribe to Boldsky

ಸಮಾಜದಲ್ಲಿ ನೀವು ಹಲವಾರು ರೀತಿಯ ಜನರನ್ನು ನೋಡುತ್ತೀರಿ ಮತ್ತು ಭೇಟಿಯಾಗುತ್ತೀರಿ. ಇದರಲ್ಲಿ ಕೆಲವು ಮಂದಿ ತುಂಬಾ ಜನಪ್ರಿಯರಾಗಿ, ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದಿರುವರು. ಇನ್ನು ಕೆಲವರು ತಮ್ಮ ಕೆಟ್ಟ ಕೆಲಸಗಳಿಂದ ಕುಖ್ಯಾತಿಗೆ ಒಳಗಾಗಿರುವರು. ಆದರೆ ಇವರು ಕುಖ್ಯಾತಿಗೆ ಒಳಗಾಗಲು ಇವರ ರಾಶಿಚಕ್ರವು ಕಾರಣವಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಹೌದು, ರಾಶಿಚಕ್ರಕ್ಕೆ ಅನುಗುಣವಾಗಿ ಕೆಲವರಿಗೆ ಕೀರ್ತಿ, ಇನ್ನು ಕೆಲವರಿಗೆ ಅಪಕೀರ್ತಿ, ಯಶಸ್ಸು, ಅಪಯಶಸ್ಸು ಸಿಗುವುದು. ಇಂತಹ ರಾಶಿಚಕ್ರಗಳು ಯಾವುದು ಎಂದು ನಿಮಗೆ ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ...

ಮೇಷ ಮಾ.21-ಎ.19

ಮೇಷ ಮಾ.21-ಎ.19

ಇವರು ತುಂಬಾ ಪರಿಶ್ರಮಿಗಳು. ಆದರೆ ಮೂರ್ಖರಲ್ಲ. ಇವರಿಗೆ ತಮ್ಮದೇ ಆಗಿರುವ ದಾರಿಯಲ್ಲಿ ಸಾಗಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕೆಂದು ತಿಳಿದಿದ್ದರೂ, ಅವರು ತಮ್ಮದೇ ಹಾದಿ ಹಿಡಿಯುವರು. ವೈಯಕ್ತಿಕವಾಗಿ ಇವರು ಒಳ್ಳೆಯ ನಾಯಕರು. ಆದರೆ ಇವರ ರಾಶಿಚಕ್ರದಿಂದಾಗಿ ಇವರು ಯಾವುದೇ ವಿಷಯದ ಬಗ್ಗೆ ತುಂಬಾ ಕಠಿಣವಾಗಿ ಚಿಂತಿಸುವುದಿಲ್ಲ ಮತ್ತು ಬೇರೆಯವರಿಗೆ ನೋವಾಗುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉಳಿದವರು ಭಾವಿಸುತ್ತಾರೆ.

ಮಿಥುನ ಮೇ 21-ಜೂನ್ 20

ಮಿಥುನ ಮೇ 21-ಜೂನ್ 20

ಇವರ ಸ್ವಭಾವವು ಮೋಸಗೊಳಿಸುವುದಾಗಿದೆ. ಇತರರೊಂದಿಗೆ ಇವರು ಸಂಪರ್ಕ ಬೆಳೆಸುವುದು ಮತ್ತು ಸಂವಹನ ನಡೆಸುವುದು ಇದೇ ಕಾರಣಕ್ಕಾಗಿ. ಇವರ ಮೋಸಗೊಳಿಸುವ ಪ್ರವೃತ್ತಿಯಿಂದಾಗಿ ಇವರ ಸುತ್ತಲಿನ ಜನರು ಗೊಂದಲಕ್ಕೆ ಸಿಲುಕುವರು. ಇವರು ಆಡುವ ಮಾತುಗಳು ಇವರ ವ್ಯಕ್ತಿತ್ವವನ್ನು ಹೇಳುವುದಿಲ್ಲ.

ಕರ್ಕಾಟಕ ಜೂ.21-ಜು. 22

ಕರ್ಕಾಟಕ ಜೂ.21-ಜು. 22

ಇವರು ಗೊಂದಲದ ಮನಸ್ಥಿತಿ ಮತ್ತು ಕೆಲವೊಮ್ಮೆ ಆಕ್ರಮಣಕಾರಿ. ಬೇರೆ ಯಾವುದೇ ರಾಶಿಗಳು ನೀಡದೇ ಇರುವಂತಹ ಮೌನ ಚಿಕಿತ್ಸೆ ಇವರು ನೀಡಬಲ್ಲರು. ಎಲ್ಲಾ ಸಮಯದಲ್ಲೂ ಇವರಿಗೆ ಪರಿಹಾರ ಸಿಗುವುದಿಲ್ಲ. ಆದರೆ ಇವರ ಕೆಟ್ಟ ಮನಸ್ಥಿತಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಕೆಡುವುದು. ಇವರು ತುಂಬಾ ಸಿಟ್ಟಿನಲ್ಲಿ ಇರುವಾಗ ಇವರನ್ನು ಕಡೆಗಣಿಸಿ, ದೂರವಿರುವುದೇ ಒಳ್ಳೆಯದು.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ಇವರ ಸ್ವಭಾವವು ತುಂಬಾ ಕ್ರೂರ, ಮೋಸಗೊಳಿಸುವ ಮತ್ತು ದುರ್ಬಳಕೆ ಮಾಡಿಕೊಳ್ಳುವಂತವರು. ಇನ್ನೊಂದು ಬದಿಯಲ್ಲಿ ಇವರು ತುಂಬಾ ನಿಗೂಢವಾಗಿರುವರು. ಇದರಿಂದ ಬೇರೆಯವರಿಗೆ ಇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು. ಅವರಲ್ಲಿ ಪ್ರತಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವರು. ಆದರೆ ನೀವು ಮೋಸ ಮಾಡಿದರೆ, ಆಗ ಅವರ ಕ್ರೋಧಾಗ್ನಿ ಎದುರಿಸಲು ವಿಶ್ವದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಇವರು ತಮ್ಮ ಕೋಪದಿಂದಲೇ ನಿಮ್ಮನ್ನು ಕೊಂದು ಬಿಡುವರು. ಈ ರಾಶಿಗಳ ಬಗ್ಗೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಿ. ಯಾಕೆಂದರೆ ಇವರು ತುಂಬಾ ಕುಖ್ಯಾತಿಯವರು.

English summary

Zodiac Signs That Are Famous For Their Bad Reputation

Can you imagine that the attitude some people have can be related to their zodiac sign? Well, according to astrology, there are certain zodiac signs which are known to be the badass of all the zodiac signs there are. These zodiac signs are ranked as being the worst zodiac signs, as these individuals are known for their badass nature. They are often labelled as the mostmisunderstood zodiacs, but are known for their attitude, which can give chills to other zodiacs. So, find out more about these signs...