ಯಾವ್ಯಾವ ರಾಶಿಯವರು ನಕಲಿ ಸ್ವಭಾವ ಹೊಂದಿದ್ದಾರೆ ಎಂಬುದನ್ನು ನೋಡಿ...

Subscribe to Boldsky

ವಿಶಾಲವಾದ ನಮ್ಮ ಪ್ರಪಂಚದಲ್ಲಿ ವಿವಿಧ ರೀತಿಯ ವ್ಯಕ್ತಿಗಳನ್ನು ಕಾಣಬಹುದು. ಮನಸ್ಸು ಹಾಗೂ ಕೃತ್ಯದಲ್ಲಿ ನಕಾರಾತ್ಮಕ ವರ್ತನೆಯಿಂದ ಕೂಡಿದ್ದರೂ ಸಹ ಉತ್ತಮ ವ್ಯಕ್ತಿಗಳಂತೆ ತೋರಬಹುದು. ಕೆಲವೊಮ್ಮೆ ಉತ್ತಮ ವ್ಯಕ್ತಿಗಳು ಕೆಲವು ಅನುಚುತ ಸಮಯದಲ್ಲಿ ಕೆಟ್ಟ ವ್ಯಕ್ತಿಗಳಂತೆ ಕಾಣಬಹುದು. ಹೀಗೆ ವ್ಯಕ್ತಿಯ ಸೂಕ್ತ ಗುಣವೇನು? ಅವನಲ್ಲಿ ಇರುವ ನಕಲಿ ಗುಣ ಏನು ಎನ್ನುವುದನ್ನು ಸುಲಭವಾಗಿ ಕಂಡುಹಿಡಿಯುವುದು ಕಷ್ಟ. ಹಾಗಾಗಿ ವ್ಯಕ್ತಿಯ ನೈಜತೆ ಯಾವುದು? ನಕಲಿ ಸ್ವಭಾವ ಏನು? ಎನ್ನುವುದನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನೈಜ ಹಾಗೂ ನಕಲಿ ಸ್ವಭಾವ ಇರುತ್ತವೆ. ಅವರು ಸಂದರ್ಭಕ್ಕೆ ತಕ್ಕಂತೆ ನಾಟಕೀಯ ವರ್ತನೆ ತೋರುವುದರಿಂದ ನಿಜವಾದ ಗುಣವನ್ನು ಕಂಡುಹಿಡಿಯಲು ಕಷ್ಟವಾಗುವುದು. ಕೆಲವರಲ್ಲಿ ನೈಜತೆ ಹೆಚ್ಚಿದ್ದರೆ, ಇನ್ನೂ ಕೆಲವರಲ್ಲಿ ನಕಲಿ ಸ್ವಭಾವ ಹೆಚ್ಚಾಗಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ರಾಶಿಚಕ್ರಕ್ಕೆ ಅನುಗುಣವಾಗಿ ಕೆಲವು ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ಗುಣವನ್ನು ಹೊಂದಿದ್ದೀರಿ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ:

ಮೇಷ:

ಮೇಷ ರಾಶಿಯವರು ಅತ್ಯಂತ ನೈಜ ಸ್ವಭಾವ ಹೊಂದಿರುವ ವ್ಯಕ್ತಿಗಳು ಎನ್ನಬಹುದು. ಇವರಲ್ಲಿ ಯಾವುದೇ ನಕಲಿ ವರ್ತನೆ ಇರುವುದಿಲ್ಲ. ಇವರಲ್ಲಿರುವ ರಾಜತಂತ್ರಗುಣಗಳು ಸಹ ಕಠಿಣವಾಗಿರುತ್ತದೆ ಎನ್ನಲಾಗುವುದು. ಇವರು ಕೆಲಸದ ಸ್ಥಳದಲ್ಲಿ ಕೆಲವೊಮ್ಮೆ ರಾಜತಂತ್ರ ಗುಣವನ್ನು ತೋರಿದರೂ ಅದನ್ನು ದೀರ್ಘಕಾಲ ಅನುಸರಿಸುವುದಿಲ್ಲ. ತಮ್ಮದೇ ಆದ ಕೆಲವು ರೀತಿ ನೀತಿಯನ್ನು ಅನುಸರಿಸುವ ಇವರು ಜನರಲ್ಲಿ ಸತ್ಯವನ್ನು ಹೇಳುತ್ತಾರೆ. ಇತರರಿಗೆ ನೋವುಂಟುಮಾಡುವುದನ್ನು ಇಷ್ಟಪಡುವುದಿಲ್ಲ.

ವೃಷಭ:

ವೃಷಭ:

ಈ ರಾಶಿಯ ವ್ಯಕ್ತಿಗಳು ಅಧಿಕ ಮೊಂಡುತನವನ್ನು ಹೊಂದಿರುತ್ತಾರೆ. ಇವರು ಇತರರ ಮಾತನ್ನು ಕೇಳುವುದು ಕಷ್ಟ. ತಮ್ಮದೇ ಆದ ವರ್ತನೆ ತೋರುತ್ತಾರೆ. ಇವರು ತಮ್ಮ ಹೃದಯ ಬಯಸಿದಂತೆ ವರ್ತಿಸುವರು. ಇವರು ನಕಲಿ ಸ್ವಭಾವ ತೋರಲು ನೈಸರ್ಗಿಕವಾಗಿಯೇ ತಿಳಿದಿಲ್ಲ. ಇವರು ಇಕ್ಕಟ್ಟಿನ ಸ್ಥಿತಿಯಿಂದ ಪಾರಾಗಲು ರಾಜತಾಂತ್ರಿಕ ನಿಲುವನ್ನು ಹೊಂದಬಹುದು. ಇವರು ತಮ್ಮ ಹತ್ತಿದವರಿಗೆ ಅಥವಾ ಪ್ರೀತಿಪಾತ್ರರ ವಿಚಾರದಲ್ಲಿ ನಕಲಿತನವನ್ನು ತೋರುವುದಿಲ್ಲ.

Most Read : 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

ಮಿಥುನ:

ಮಿಥುನ:

ಈ ರಾಶಿಯ ವ್ಯಕ್ತಿಗಳನ್ನು ದ್ವಿಮುಖ ವ್ಯಕ್ತಿತ್ವದವರು ಎಂದು ಹೇಳಲಾಗುವುದು. ಹಾಗಾಗಿ ಇವರಲ್ಲಿ ಸಾಕಷ್ಟು ನಕಲಿ ಸ್ವಭಾವ ಇರುತ್ತದೆ ಎಂದು ಹೇಳಲಾಗುವುದು. ಇವರು ಇತರರನ್ನು ಮೆಚ್ಚಿಸಲು ಸಾಕಷ್ಟು ನಾಟಕೀಯ ವರ್ತನೆಯನ್ನು ತೋರುವರು. ತಮ್ಮ ಪ್ರೀತಿ ಪಾತ್ರರಿಗೆ ಮಾತ್ರ ನೈಜ ಸ್ವಭಾವವನ್ನು ತೋರುತ್ತಾರೆ. ವೃತ್ತಿ ಪರ ಸಂಬಂಧಗಳಲ್ಲಿ ಅಥವಾ ಆತ್ಮೀಯ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.

ಕರ್ಕ:

ಕರ್ಕ:

ಇವರು ತಮ್ಮ ನೈಜಗುಣವನ್ನು ತೋರುವರು. ಆದರೆ ಅನೇಕರು ನಕಲಿ ಸ್ವಭಾವ ಎಂದು ಭಾವಿಸುವರು. ಏಕೆಂದರೆ ಇವರು ಎಲ್ಲಾ ಕೆಲಸ ಹಾಗೂ ವರ್ತನೆಗಳನ್ನು ಹೃದಯದ ಮಾತಿನಂತೆ ನಡೆಯುತ್ತಾರೆ. ವಾಸ್ತವವಾಗಿ ಇವರು ಭಾವನಾತ್ಮಕ ಜೀವಿಗಳು. ತಮ್ಮನ್ನು ಪ್ರೀತಿಸುವವರಿಗೆ ಹಾಗೂ ತಮ್ಮವರಿಗಾಗಿ ನೈಜತೆಯಿಂದಲೇ ವರ್ತಿಸುತ್ತಾರೆ. ತಮ್ಮ ವರ್ತನೆಯು ನೈಜತೆಯಿಂದಲೇ ಇರುವಂತೆ ತೋರುತ್ತಾರೆ.

ಸಿಂಹ:

ಸಿಂಹ:

ಈ ರಾಶಿಯವರು ಪರಿಪೂರ್ಣವಾದ ವ್ಯಕ್ತಿತ್ವವನ್ನು ತೋರುವವರಂತೆ ತಮ್ಮ ದೋಷಗಳನ್ನು ಮರೆಮಾಚಿಕೊಳ್ಳುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲಾ ಸಂಗತಿಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಸಕಾರಾತ್ಮಕ ರೀತಿಯಲ್ಲಿ ವರ್ತನೆ ತೋರುತ್ತಾರೆ. ಇವರು ಕೆಲವೊಮ್ಮೆ ನಾಟಕೀಯ ವರ್ತನೆ ತೋರುತ್ತಾರೆಯಾದರೂ ಇತರರನ್ನು ಸಂತೋಷದಿಂದ ಉಳಿಸಿಕೊಳ್ಳಲು ಇಷ್ಟಪಡುತ್ತಾರೆ.

ಕನ್ಯಾ:

ಕನ್ಯಾ:

ಈ ರಾಶಿಚಕ್ರದವರಲ್ಲಿ ತಾಳ್ಮೆಯ ಗುಣ ಇರುತ್ತದೆಯಾದರೂ ಟೀಕೆಗಳು ಬಂದರೆ ಅದನ್ನು ಲಘುವಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಇವರು ಹೇಳುವ ಮಾತುಗಳು ಕೆಲವೊಮ್ಮೆ ಇತರರಿಗೆ ನೋವನ್ನುಂಟುಮಾಡಬಹುದು. ಇತರರನ್ನು ಮೆಚ್ಚಿಸಲು ನಕಲಿ ವರ್ತನೆಯನ್ನು ತೋರುವರು ಇವರು.

ತುಲಾ:

ತುಲಾ:

ಇವರು ಒಂದು ಬಗೆಯ ಅಂತರ್ಗತ ಬಯಕೆಯನ್ನು ಹೊಂದಿರುತ್ತಾರೆ. ಅವು ಕೆಲವವೊಮ್ಮೆ ನಕಲಿ ವರ್ತನೆ ತೋರುವಂತೆ ಮಾಡುತ್ತದೆ. ಇವರು ಕೆಲವೊಮ್ಮೆ ಸದುದ್ದೇಶಗಳಿಗಾಗಿ ನಕಲಿ ವರ್ತನೆ ತೋರುತ್ತಾರೆ. ಆದ್ದರಿಂದ ಜನರು ಅವರನ್ನು ನಕಲಿ ವ್ಯಕ್ತಿತ್ವ ಎಂದು ಗುರುತಿಸುವ ಸಾಧ್ಯತೆಗಳಿವೆ. ಈ ಹಣೆಪಟ್ಟಿಯಿಂದ ಮುಕ್ತಿ ಹೊಂದಲು ಜನರು ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯವನ್ನು ನೀಡಬೇಕು.

ವೃಶ್ಚಿಕ:

ವೃಶ್ಚಿಕ:

ಇವರು ಸತ್ಯವನ್ನು ಹೇಳುವ ವ್ಯಕ್ತಿ ಎಂದು ಹೇಳಬಹುದು. ಇವರು ತಮ್ಮ ಬಗ್ಗೆ ಏನಾದರೂ ಕೆಟ್ಟ ವಿಷಯ ಅಥವಾ ಸಲ್ಲದ ಸಂಗತಿಗಳನ್ನು ಹೇಳಿದರೆ ಅವರನ್ನು ನೇರವಾಗಿ ಪ್ರಶ್ನಿಸುವರು. ಇವರು ಹೆಚ್ಚು ಮಾತನಾಡದೆ ಇರುವುದರಿಂದ ಇವರ ಹತ್ತಿರದ ವ್ಯಕ್ತಿಗಳು ಪ್ರದರ್ಶನ ಪ್ರಿಯರು ಎಂದು ನಿರ್ಧರಿಸುವರು. ಇವರು ತಮ್ಮ ಆಲೋಚನೆಗಳಿಗೆ ಯಾರು ಹೆಚ್ಚಿನ ಮೌಲ್ಯಮಾಪನ ಮಾಡುವರೋ ಅವರಿಗೆ ಹೆಚ್ಚಿನ ಅವಕಾಶ ನೀಡುವರು.

ಧನು:

ಧನು:

ಇವರಲ್ಲಿ ನಕಲಿ ಹಾಗೂ ನೈಜ ಸ್ವಭಾವ ಎರಡು ಸಮ್ಮಿಶ್ರಣಗೊಂಡಿರುತ್ತವೆ. ಇವರು ಸಂದರ್ಭಕ್ಕೆ ತಕ್ಕಂತೆ ತಮ್ಮ ವ್ಯಕ್ತಿತ್ವವನ್ನು ಬದಲಿಸಬಲ್ಲ ಅಚ್ಚರಿ ಸ್ವಭಾವವನ್ನು ಹೊಂದಿರುತ್ತಾರೆ. ಇವರು ನಿಜವಾಗಿಯೂ ನೈಜ ವ್ಯಕ್ತಿತ್ವ ಅಥವಾ ಸ್ವಭಾವ ಹೊಂದಿದ್ದರೂ ಕೆಲವು ಸಂದರ್ಭಗಳಿಗೆ ರಾಜತಾಂತ್ರಿಕ ಗುಣ ತೋರುವುದರಿಂದ ಆ ವಿಷಯವು ನಿಮ್ಮ ಪರವಾಗಿ ಕಾರ್ಯನಿರ್ವಹಿಸುವುದು.

Most Read : ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

ಮಕರ:

ಮಕರ:

ಇವರು ಬಹಳ ಗಣನೀಯ ವ್ಯಕ್ತಿಗಳಾಗಿರುತ್ತಾರೆ. ಅದು ಅವರ ಕೆಲಸದಲ್ಲಿ ಅದ್ಭುತವನ್ನು ನೀಡುತ್ತದೆ. ಹಾಗಾಗಿ ಸಂದರ್ಭಕ್ಕೆ ತಕ್ಕಂತೆ ರಾಜತಾಂತ್ರಿಕ ಸ್ವಭಾವವನ್ನು ತೋರುತ್ತಾರೆ. ಇದರಿಂದ ಬಹುತೇಕ ಮಂದಿ ನಕಲಿ ಸ್ವಭಾವ ಎಂದು ಪರಿಗಣಿಸುವರು. ಇವರಿಗೆ ಕಾಳಜಿಯಿಲ್ಲ ಎಂದು ಭಾವಿಸುವರು. ಇವರು ಉತ್ತಮ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುವರು. ಜನರು ಇವರ ಬೆನ್ನಿನ ಹಿಂದೆ ಮಾತನಾಡಬಹುದು.

ಕುಂಭ:

ಕುಂಭ:

ಇವರು ವಿಚಿತ್ರವಾದ ನಕಲಿತನವನ್ನು ತೋರುವರು. ಇವರು ಯಾವುದಕ್ಕೂ ಹೆದರುವುದಿಲ್ಲ. ಇವರು ಬಹುತೇಕ ವಿಚಾರಗಳಿಗೆ ಹೆದರುವುದಿಲ್ಲ. ತಮ್ಮ ಹೃದಯವನ್ನು ಹೇಗೆ ಸಂತೋಷಪಡಿಸಬೇಕು ಎನ್ನುವುದನ್ನು ತಿಳಿದಿದ್ದಾರೆ. ಇವರ ಸ್ನೇಹಿತರು ಹಾಗೂ ಕುಟುಂಬದವರು ಇವರ ನೈಜ ಗುಣವನ್ನು ನೋಡಿರುವುದಿಲ್ಲ ಎಂದು ಹೇಳಬಹುದು.

Most Read : ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಮೀನ:

ಮೀನ:

ಇವರು ತುಲಾ ರಾಶಿಯವರಂತೆ ಇತರರನ್ನು ಮೆಚ್ಚಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವರು. ಇವರು ಸಾಕಷ್ಟು ಸಮಯದಲ್ಲಿ ನಕಲಿ ವರ್ತನೆಯನ್ನು ತೋರುವುದರಿಂದ ನಕಲಿ ಸ್ವಭಾವದವರು ಎಂದು ಹೇಳಲಾಗುತ್ತದೆ. ಇವರು ಟೀಕೆಯನ್ನು ಸಹಿಸದ ವ್ಯಕ್ತಿಗಳಾಗಿರುತ್ತಾರೆ. ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಹಾಗಾಗಿ ಯಾವುದೇ ಕೆಲಸದಲ್ಲಿ ಸಂಪೂರ್ಣವಾಗಿ ತಪ್ಪು ಕೆಲಸವನ್ನು ಮಾಡುವುದಿಲ್ಲ. ಆದರೆ ಸಂದರ್ಭಕ್ಕೆ ಅನುಗುಣವಾಗಿ ಕೆಲವೊಮ್ಮೆ ನಕಲಿ ವರ್ತನೆಯನ್ನು ತೋರುವರು.

For Quick Alerts
ALLOW NOTIFICATIONS
For Daily Alerts

    English summary

    Zodiac signs that are considered most fake

    The world is a big place and there are all sorts of people who live here --- some genuine and well, some not so genuine. However, no matter what kind of a person you personally are, what matters is that how you treat others around you vis-à-vis your own personality type. So are you fake or real? While only you can answer this question in the best possible way, your zodiac sign too can reveal quite a bit…
    Story first published: Sunday, September 30, 2018, 8:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more