Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ರಾಶಿ ಭವಿಷ್ಯ: ಈ ರಾಶಿಯವರಲ್ಲಿ ಕಪಟ-ಮೋಸವಿಲ್ಲ, ಸ್ವಚ್ಛ ಮನಸ್ಸಿನವರು!
ವಿಶ್ವವೆನ್ನುವುದೇ ಹಾಗೆ. ಇಲ್ಲಿ ಕಪಟ ಮುಖವಾಡ ಹೊತ್ತುಕೊಂಡು ಇರಬೇಕಾಗುತ್ತದೆ. ಇನ್ನು ಕೆಲವೊಮ್ಮೆ ನಿಮ್ಮ ನಿಜವಾದ ಮುಖ, ವ್ಯಕ್ತಿತ್ವ ಪ್ರದರ್ಶನ ಮಾಡಬೇಕಾಗುತ್ತದೆ. ಕೆಲವರಿಗೆ ಇದು ಸಹ್ಯವಾಗಲ್ಲ. ಆದರೆ ಬೇರೆ ವಿಧಿ ಇಲ್ಲದೆ ಇಂತಹ ನಾಟಕಗಳು ಅನಿವಾರ್ಯ. ಒಬ್ಬನ ನಡವಳಿಕೆ, ವ್ಯಕ್ತಿತ್ವ ಹಾಗೂ ಗುಣ ಮತ್ತೊಬ್ಬನಂತೆ ಇರುವುದಿಲ್ಲ. ಹೀಗಿರುವುದರಿಂದಲೇ ಸಮಾಜದಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎನ್ನುವುದು ಕಾಣಿಸಿಕೊಳ್ಳುವುದು.
ಒಳ್ಳೆಯವರ ಸುತ್ತಲೂ ಜನರು ಸುತ್ತುವರಿದಿರುವರು. ಅದೇ ಕೆಟ್ಟವರಿಂದ ಜನರು ದೂರು ಹೋಗುತ್ತಲಿರುತ್ತಾರೆ. ನೀವು ಯಾವ ರೀತಿಯ ವ್ಯಕ್ತಿ ಎನ್ನುವುದಕ್ಕಿಂತಲೂ ಜನರು ನಿಮ್ಮ ಬಗ್ಗೆ ಯಾವ ಭಾವನೆ ಇಟ್ಟುಕೊಂಡಿದ್ದಾರೆ ಎನ್ನುವುದು ಮುಖ್ಯ. ನಿಮ್ಮ ವ್ಯಕ್ತಿತ್ವವು ನಿಜವೇ ಅಥವಾ ಕಪಟವೇ ಎನ್ನುವುದು ರಾಶಿಗಳಿಂದ ತಿಳಿದುಬರುವುದು. ನಿಮ್ಮ ರಾಶಿಗಳು ಇದನ್ನು ಯಾವ ರೀತಿಯಿಂದ ಹೊರಗೆಡವುತ್ತದೆ ಎನ್ನುವುದನ್ನು ತಿಳಿಯಿರಿ...

ಮೇಷ
ಮೇಷ ರಾಶಿಯವರು ತುಂಬಾ ನಿಜವಾದ ವ್ಯಕ್ತಿತ್ವದವರಾಗಿರುವರು. ಇವರು ಕಪಟಿಗಳಲ್ಲ ಮತ್ತು ರಾಜತಾಂತ್ರಿಕವಾಗಿರಲು ಇವರಿಗೆ ತುಂಬಾ ಕಷ್ಟ. ಕೆಲಸದ ಕಡೆ ಅವರು ರಾಜತಾಂತ್ರಿಕವಾಗಿ ವರ್ತಿಸಿದರೂ ಇದನ್ನು ಅವರು ದ್ವೇಷಿಸುತ್ತಾ ಇರುವರು. ಇವರು ಮುಖಕ್ಕೆ ಬಡಿದಂತೆ ಜನರಿಗೆ ಸತ್ಯ ಹೇಳಲು ಬಯಸುವರು. ಜನರಿಗೆ ಇದರಿಂದ ನೋವಾದರೂ ಅವರು ಈ ರೀತಿಯಾಗಿರಲು ಇಷ್ಟಪಡುವರು.

ವೃಷಭ
ವೃಷಭ ರಾಶಿಯವರು ಇನ್ನೊಬ್ಬರ ಮಾತನ್ನು ಕೇಳುವುದು ತುಂಬಾ ಕಷ್ಟ. ಕಪಟತನ ಪ್ರದರ್ಶಿಸುವುದು ಇವರಿಗೆ ನೈಸರ್ಗಿಕವಾಗಿ ಬಂದಿಲ್ಲ. ಕೆಲವೊಂದು ಕಠಿಣ ಪರಿಸ್ಥಿತಿ ಮತ್ತು ಕೆಲಸದ ಕಡೆಗಳಲ್ಲಿ ಇವರು ರಾಜತಾಂತ್ರಿಕವಾಗಿ ವರ್ತಿಸಬಹುದು. ಇವರು ತಮ್ಮ ಹತ್ತಿರದ ಹಾಗೂ ಪ್ರೀತಿಪಾತ್ರರೊಂದಿಗೆ ಕಪಟತನ ಪ್ರದರ್ಶಿಸಲ್ಲ.

ಮಿಥುನ
ಮಿಥುನ ರಾಶಿಯವರು ಯಾವಾಗಲೂ ಎರಡು ಮುಖಗಳಿರುವವರು. ಇದರಿಂದ ಈ ರಾಶಿಯವರು ತುಂಬಾ ಕಪಟಿಗಳು. ಈ ರಾಶಿಯವರಲ್ಲಿ ಎರಡು ವಿಧದ ವ್ಯಕ್ತಿತ್ವವಿರುವುದು. ಒಂದು ಹೊರಗಿನ ಜಗತ್ತು ಇವರನ್ನು ನೋಡುವುದು(ಇವರು ಬೇರೆಯವರನ್ನು ಮೆಚ್ಚಿಸುವಂತೆ ನಟಿಸುವರು) ಮತ್ತು ಇನ್ನೊಂದು ಬದಿಯೆಂದರೆ ಇವರು ಪ್ರೀತಿಪಾತ್ರರು ನೋಡುವುದು. ಇವರು ತಮ್ಮ ವೃತ್ತಿ ಬದುಕನ್ನು ತುಂಬಾ ಯಶಸ್ವಿಯಾಗಿರಿಸಿಕೊಳ್ಳಲು ಹೀಗೆ ಮಾಡುವರು.

ಕರ್ಕಾಟಕ
ಕರ್ಕಾಟಕ ರಾಶಿಯವರು ಸ್ವಚ್ಛ ಮನಸ್ಸಿನವರು ಮತ್ತು ಇವರು ಪ್ರತಿಯೊಂದು ವಿಚಾರವನ್ನು ಮನಸ್ಸಿಗೆ ತೆಗೆದುಕೊಳ್ಳುವ ಕಾರಣದಿಂದ ಹೆಚ್ಚಿನವರು ಇವರನ್ನು ಕಪಟಿಗಳೆಂದು ಭಾವಿಸುವರು. ಆದರೆ ವಾಸ್ತವವೆಂದರೆ ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳು. ಇವರನ್ನು ಪ್ರೀತಿಸುವವರಿಗೆ ಇವರು ತುಂಬಾ ನಿಷ್ಠರಾಗಿರುವರು ಮತ್ತು ಸಂಬಂಧದಲ್ಲಿ ಎಲ್ಲವನ್ನೂ ನೀಡುವರು. ಇವರಿಗೆ ಕಪಟತನ ಮಾಡಿ ತಿಳಿದಿಲ್ಲ. ಯಾಕೆಂದರೆ ಇವರು ನಿಜವಾದ ಆತ್ಮ ಮತ್ತು ಮನಸ್ಸನ್ನು ಹೊಂದಿರುವರು.

ಸಿಂಹ
ಸಿಂಹ ರಾಶಿಯವರು ಲೋಷದೋಷಗಳನ್ನು ತುಂಬಾ ಸುಂದರವಾಗಿ ತೆಗೆದುಕೊಳ್ಳುವರು ಮತ್ತು ಇವರು ತಮ್ಮ ತಪ್ಪುಗಳನ್ನು ಒಳ್ಳೆಯ ಅಭ್ಯಾಸ ಒಪ್ಪಿಕೊಂಡಂತೆ ಅಪ್ಪಿಕೊಳ್ಳುವರು. ಇವರು ಮಾಡುವ ಪ್ರತಿಯೊಂದರಲ್ಲೂ ಏನಾದರೂ ಒಳ್ಳೆಯ ಅರ್ಥ ಹುಡುಕುವರು ಮತ್ತು ಇತರರನ್ನು ಕ್ಷುಲಕವಾಗಿ ರಾಜತಾಂತ್ರಿಕತೆಯಲ್ಲಿ ಕೂರಿಸುವುದಿಲ್ಲ. ಇವರದ್ದು ಧನಾತ್ಮಕ ಆತ್ಮ. ಪರಿಸ್ಥಿತಿ ಏನೇ ಆಗಿದ್ದರೂ ಜನರು ಸತ್ಯ ಹೇಳಬೇಕೆಂದು ಬಯಸುವರು. ಇವರು ಇತರರನ್ನು ಸಂತೋಷವಾಗಿಡುವರು.

ಕನ್ಯಾ
ಕೆಟ್ಟ ನಡವಳಿಕೆಗೆ ಕನ್ಯಾ ರಾಶಿಯವರು ಯಾವತ್ತೂ ಕ್ಷಮೆ ಕೋರಲ್ಲ ಮತ್ತು ಇವರು ಟೀಕೆಗಳನ್ನು ಲಘುವಾಗಿ ಪರಿಗಣಿಸಲ್ಲ. ಇತರರಿಗೆ ನೋವಾದರೂ ಇವರು ತಮ್ಮ ಮಾತನ್ನು ನೇರವಾಗಿ ಹೇಳಿಬಿಡುವರು. ಇವರು ಯಾವಾಗಲೂ ಸತ್ಯ ಹೇಳುವರು. ಇದರಿಂದ ಜನರು ಇವರನ್ನು ಹೃದಯವಿಲ್ಲದವರೆಂದು ಹೇಳಬಹುದು. ಆದರೆ ಇತರರನ್ನು ಸಂತೋಷವಾಗಿಡಲು ಇವರು ಯಾವತ್ತೂ ಕಪಟಿಯಾಗಿಲ್ಲ.

ತುಲಾ
ಈ ರಾಶಿಯವರನ್ನು ಪ್ರತಿಯೊಬ್ಬರನ್ನು ಎಲ್ಲರನ್ನು ಮೆಚ್ಚಿಸಲು ಪ್ರಯತ್ನಿಸುವರು. ಇದರಿಂದ ಇವರು ಕಪಟಿಯಾಗುವರು ಮತ್ತು ಕೆಲವೊಮ್ಮೆ ಇವರಿಗೆ ತಿಳಿಯದಂತೆ ಹೀಗೆ ಆಗುವುದು. ಇವರು ಇತರರನ್ನು ಸಂತೋಷವಾಗಿಡಲು ಏನು ಬೇಕಿದ್ದರೂ ಮಾಡಬಲ್ಲರು. ಇದರಿಂದಾಗಿ ಇವರು ಕಪಟಿಯಾಗುವಂತೆ ಕಾಣುವರು. ಈ ಬಿರುದಿನಿಂದ ಹೊರಬರಲು ಅವರು ನಿಧಾನವಾಗಿ ಯೋಚಿಸಿ, ಜನರನ್ನು ಅವರಿರುವಂತೆ ಬಿಡುವರು.

ವೃಶ್ಚಿಕ
ನಿಮ್ಮ ಬಗ್ಗೆ ಏನಾದರೂ ಕೆಟ್ಟ ವಿಚಾರ ಬಂದರೆ ಆಗ ನೀವು ಸತ್ಯವನ್ನೇ ಹೇಳುತ್ತೀರಿ ಮತ್ತು ನಿಮ್ಮ ಬಗ್ಗೆ ಕೆಟ್ಟ ವಿಚಾರ ಹೇಳಿದ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡುವಿರಿ. ಇನ್ನೊಂದು ಕಡೆಯಲ್ಲಿ ನೀವು ಯಾವಾಗಲೂ ನೇರವಾಗಿ ಮಾತನಾಡುವ ಕಾರಣದಿಂದ ನಿಮ್ಮನ್ನು ಇತರರು ಹೃದಯಹೀನರೆಂದು ಕರೆಯುವರು. ವ್ಯಕ್ತಿಯಾಗಿ ನೀವು ಬದಲಾಗಬೇಕಾಗಿದೆ. ನಿಮ್ಮ ಆಲೋಚನೆಗಳಿಗೆ ಮೌಲ್ಯ ನೀಡುವಂತಹ ಜನರಿಗೆ ಅಭಿಪ್ರಾಯ ಮಿತಿಗೊಳಿಸಬೇಕು.

ಧನು
ಧನು ರಾಶಿಯವರು ಕಪಟಿ ಹಾಗೂ ನಿಜದ ಸರಿಯಾದ ಮಿಶ್ರಣ. ನೀವು ಪರಿಸ್ಥಿತಿಗೆ ಅನುಗುಣವಾಗಿ ವ್ಯಕ್ತಿತ್ವ ಬದಲಾಯಿಸುವಂತಹ ಸಾಮರ್ಥ್ಯವನ್ನು ಹೊಂದಿರುವಿರಿ. ನೀವು ನಿಜವಾದ ವ್ಯಕ್ತಿತ್ವ ಹೊಂದಿದ್ದರೂ ಕೆಲವೊಂದು ಸಂದರ್ಭದಲ್ಲಿ ರಾಜತಾಂತ್ರಿಕವಾಗಿರುವಿರಿ. ಇದು ನಿಮ್ಮ ಪರವಾಗಿ ಕೆಲಸ ಮಾಡುವುದು.

ಮಕರ
ಮಕರ ರಾಶಿಯವರು ತುಂಬಾ ಲೆಕ್ಕಾಚಾರದ ವ್ಯಕ್ತಿಗಳು ಮತ್ತು ಇದರಿಂದ ಇವರು ಕೆಲಸದ ಕಡೆ ಅದ್ಭುತವಾಗಿರುವರು. ಇವರು ಕೆಲವೊಂದು ಸಲ ರಾಜ ತಾಂತ್ರಿಕವಾಗಿಯು ವರ್ತಿಸುವರು. ಇವರನ್ನು ಕೆಲವರು ಕಪಟಿಗಳೆಂದು ಭಾವಿಸಿದರೂ ಅದರ ಬಗ್ಗೆ ಇವರು ತಲೆಕೆಡಿಸಿಕೊಳ್ಳಲ್ಲ. ಇವರ ಕೆಲಸ ಮಾಡುವ ತನಕ ಒಳ್ಳೆಯವರಾಗಿರುವರು. ಇವರು ಕಚೇರಿಯಲ್ಲಿ ಒಳ್ಳೆಯ ಮ್ಯಾನೇಜರ್ ಗಳಾಗಿರುವರು. ಆದರೆ ಜನರು ಮಾತ್ರ ಇವರ ಬೆನ್ನ ಹಿಂದೆ ಮಾತನಾಡುವರು. ಇದರಿಂದ ಅವರ ಕಠಿಣ ಕೆಲಸ ಮಾಡಲು ಯಾವುದೇ ನಿರಾಶೆಯಾಗದು.

ಕುಂಭ
ಕುಂಭ ರಾಶಿಯವರು ತುಂಬಾ ಭಿನ್ನ ಕಪಟಿಗಳಾದರೂ ಅದರ ಬಗ್ಗೆ ಚಿಂತಿಸಲ್ಲ. ಅವರು ನಿಜವೂ ಅಲ್ಲ, ಕಪಟಿಯೂ ಅಲ್ಲ. ಇವರು ಈ ಎರಡರ ಮಧ್ಯದಲ್ಲಿ ಇರುವವರು. ಇವರು ತಮ್ಮ ಹೃದಯ ಹೇಳಿದಂತೆ ಕೇಳುವರು ಮತ್ತು ಪ್ರೀತಿ ಪಡೆಯುವುದನ್ನು ಮಾಡುವರು. ಆದರೆ ಇವರು ಪ್ರತ್ಯೇಕವಾಗಿರುವರು. ಇವರು ಕುಟುಂಬದವರು ಮತ್ತು ಸ್ನೇಹಿತರು ಇವರ ನಿಜವಾದ ಮುಖ ನೋಡಿಲ್ಲ. ಇವರು ಸಮಾಜದ ನಿಯಮಗಳಿಗೆ ಹೊಂದಿಕೊಳ್ಳಲ್ಲ.

ಮೀನ
ತುಲಾ ರಾಶಿಯವರಂತೆ ಮೀನ ರಾಶಿವರು ಕೂಡ ಪ್ರತಿಯೊಬ್ಬರನ್ನು ಮೆಚ್ಚಿಸಲು ಪ್ರಯತ್ನಿಸುವರು. ಮೀನ ರಾಶಿಯವರಿಗೆ ತಾವು ಕಪಟಿಗಳು ಎಂದು ತಿಳಿದಿದೆ. ಆದರೆ ಇತರರನ್ನು ಸಂತೋಷವಾಗಿಡಲು ಇವರು ಕಪಟತನ ಪ್ರದರ್ಶಿಸುವರು. ಇವರು ಟೀಕೆಯನ್ನು ಸರಿಯಾಗಿ ಸ್ವೀಕರಿಸಲ್ಲ ಮತ್ತು ತುಂಬಾ ಭಾವನಾತ್ಮಕವಾಗಿರುವರು. ಪರಿಸ್ಥಿತಿಗೆ ಅನುಗುಣವಾಗಿ ಅವರನ್ನು ಸಂಪೂರ್ಣವಾಗಿ ಕಪಟಿಗಳು ಎಂದು ಹೇಳುವಂತಿಲ್ಲ.

ನೀವು ಕಪಟಿಗಳಾ?
ನೀವು ಎಷ್ಟು ಕಪಟಿಗಳು ಮತ್ತು ನಿಜವಾಗಿರುವವರು ಎನ್ನುವುದು ಮಹತ್ವದ್ದಲ್ಲ. ಆದರೆ ಅದನ್ನು ನಿಮ್ಮ ಪ್ರಗತಿಗೆ ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯವಾಗಿದೆ. ನಿಮ್ಮ ವ್ಯಕ್ತಿತ್ವವನ್ನು ಪ್ರತೀ ಸಲ ಬದಲಾಯಿಸುವ ಬದಲು ಸರಿಯಾದ ಹಾದಿಯಲ್ಲಿಟ್ಟರೆ ಒಳ್ಳೆಯದು. ಅಗತ್ಯಬಿದ್ದಾಗ ನೀವು ರಾಜತಾಂತ್ರಿಕವಾಗಿರಿ ಮತ್ತು ಇತರ ಸಮಯದಲ್ಲಿ ನಿಮ್ಮತನದಲ್ಲಿರಿ.



Click it and Unblock the Notifications











