Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಯಾವ್ಯಾವ ರಾಶಿ ಚಕ್ರದವರು ಉತ್ತಮ ಹಾಡುಗಾರರು ಎಂದು ನೋಡಿ
ಹಾಡು ಹೇಳುವುದು ಎಂದರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ? ಎಲ್ಲರೂ ಸಾಮಾನ್ಯವಾಗಿ ಒಂದಲ್ಲಾ ಒಂದು ಬಾರಿ ಹಾಡನ್ನು ಹೇಳಿರುತ್ತಾರೆ. ಮನಸ್ಸಿಗೆ ಸಂತೋಷವಾದಾಗ ಹಾಡನ್ನು ಹೇಳುವುದು ಅದೇ ಮನಸ್ಸಿಗೆ ನೋವುಂಟಾದಾಗ ಹಾಡನ್ನು ಕೇಳುವುದರ ಮೂಲಕ ಮನಸ್ಸಿಗೆ ಸಾಂತ್ವನ ನೀಡುತ್ತೇವೆ. ಹಾಡು ಹಾಡಲು ಧ್ವನಿ ಬೇಕೆಂದೇನೂ ಇಲ್ಲ.
ನಮ್ಮ ಮನಸ್ಸಿಗೆ ಸಂತೋಷವನ್ನು ಉಂಟುಮಾಡಲು ಬೇಕಾದ ಹಾಗೆ ಹಾಡುವುದು ಸಹಜ. ಅಲ್ಲದೆ ಅದರಲ್ಲಿ ಒಂದು ಬಗೆಯ ಸಂತೋಷ ದೊರೆಯುವುದು. ಅದೇ ಕೆಲವರಿಗೆ ಹಾಡಲು ಇಂಪಾದ ಧ್ವನಿ ಹಾಗೂ ಹಾಡುವ ಬಗೆಯ ಬಗ್ಗೆ ಸೂಕ್ತ ಜ್ಞಾನವನ್ನು ಹೊಂದಿರುತ್ತಾರೆ. ಅಂತಹ ಪ್ರತಿಭಾವಂತರು ಹಾಡುಗಳು ಸರ್ವರ ಮನಸ್ಸನ್ನು ಸೂರೆಗೈಯುವುದು. ವ್ಯಕ್ತಿಯಲ್ಲಿ ಹಾಡುವ ಕಲೆ ಹಾಗೂ ಅದರಿಂದಲೇ ಯಶಸ್ಸು ಪಡೆದುಕೊಳ್ಳುವುದು ಅವನ ರಾಶಿಚಕ್ರಕ್ಕೆ ಅನುಗುಣವಾಗಿ ಎಂದು ಹೇಳಲಾಗುತ್ತದೆ.
ಕೆಲವೊಮ್ಮೆ ಉತ್ತಮ ಹಾಡುಗಾರರಾಗಿದ್ದರೂ ಅವರಲ್ಲಿರುವ ಅಂಜಿಕೆ ಅಥವಾ ಮುಜುಗರ ಇಲ್ಲವೇ ಇನ್ಯಾವುದೋ ಕೆಲವು ಸಮಸ್ಯೆಗಳಿಂದ ಹಾಡನ್ನು ಹಾಡದೇ ಇರುವುದು ಉಂಟು. ವ್ಯಕ್ತಿಯಲ್ಲಿ ಹಾಡುವ ಕಲೆ ಹಾಗೂ ಅದರ ಶ್ರೇಷ್ಠತೆಯು ಅವರನ್ನು ಆಳುವ ಗ್ರಹಗತಿಗಳ ಪ್ರಭಾವದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಹಾಗಾದರೆ ಯಾವ ರಾಶಿಚಕ್ರದವರು ಉತ್ತಮ ಹಾಡುಗಾರರು? ಅವರಲ್ಲಿ ಇರುವ ಯಾವ ಸಮಸ್ಯೆಯಿಂದ ಎಲೆಮರೆಯ ಕಾಯಂತೆ ಉಳಿದುಕೊಳ್ಳುತ್ತಾರೆ ಎಂದು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ವ್ಯಕ್ತಿಯ ಪ್ರತಿಭೆ
ವ್ಯಕ್ತಿ ಬೆಳೆಯುವ ಪರಿಸರವು ಅವನ ವ್ಯಕ್ತಿತ್ವದ ಮೇಲೆ ಮಹತ್ತರವಾದ ಬದಲಾವಣೆಯನ್ನು ತಂದುಕೊಡುತ್ತದೆ. ಅವನ ಆಸಕ್ತಿಗಳೇ ಅವನಲ್ಲಿ ಪ್ರತಿಭೆಯನ್ನು ಪ್ರೇರೇಪಿಸುವುದು ಎನ್ನಬಹುದು. ಯಾರು ತಮ್ಮ ಪ್ರತಿಭೆಗೆ ಸೂಕ್ತವಾದ ಪ್ರೋತ್ಸಾಹ ಹಾಗೂ ವಿದ್ಯೆಯನ್ನು ಪಡೆದುಕೊಳ್ಳುವರೋ ಅಂತಹವರು ತಮ್ಮ ಪ್ರತಿಭೆಯಿಂದಲೇ ಜಗತ್ ಪ್ರಸಿದ್ಧರಾಗುವರು. ಕೆಲವು ರಾಶಿಚಕ್ರದವರು ತಮ್ಮ ಗ್ರಹಗಳಿಗೆ ಅನುಗುಣವಾಗಿ ವಿಭಿನ್ನ ಅನುಭವವನ್ನು ಪಡೆದುಕೊಳ್ಳುವರು.

ಮಿಥುನ, ಸಿಂಹ ಮತ್ತು ಧನು ರಾಶಿಯವರು ಹಾಡಲು ಕಷ್ಟ ಆದರೂ ಹಾಡುತ್ತಾರೆ...
ಕೆಲವರಿಗೆ ಹಾಡಲು ವೇದಿಕೆ, ಅದಕ್ಕೆ ಸೂಕ್ತವಾದ ವಿದ್ಯೆ ಅಥವಾ ಧ್ವನಿ ಇರಬೇಕೆಂದು ಪರಿಗಣಿಸುವುದಿಲ್ಲ. ಅವರಿಗೆ ಹಾಡಬೇಕು ಎಂದೆನಿಸಿದಾಗ ತಮ್ಮದೆ ಆದ ರೀತಿಯಲ್ಲಿ ಹಾಡನ್ನು ಹಾಡುತ್ತಲಿರುತ್ತಾರೆ. ಅದು ಅವರಿಗೆ ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಇವರು ತಮ್ಮ ಹಾಡಿನಿಂದ ಇತರರು ಬೇಸರಕ್ಕೆ ಒಳಗಾಗಬಹುದು ಅಥವಾ ತೊಂದರೆ ಉಂಟಾಗಬಹುದು ಎಂದು ಭಾವಿಸುವುದಿಲ್ಲ. ತಮ್ಮ ಮನಸ್ಸಿಗೆ ಬಂದಾಗ ಹಾಡುವುದು ಅಥವಾ ಕೆಲವು ಪದಗಳನ್ನು ಗೊಣಗುವುದರ ಮೂಲಕ ಸಂತೋಷವಾಗಿರುತ್ತಾರೆ. ಇಂತಹ ಗುಣಗಳು ಸಾಮಾನ್ಯವಾಗಿ ಮಿಥುನ, ಸಿಂಹ ಮತ್ತು ಧನು ರಾಶಿಯವರಲ್ಲಿ ಇರುತ್ತದೆ ಎಂದು ಹೇಳಲಾಗುವುದು.

ಮೇಷ ವೃಷಭ ಹಾಗೂ ಮಕರ ರಾಶಿಯವರು- ಹಾಡನ್ನು ಇಷ್ಟಪಡದ ವ್ಯಕ್ತಿಗಳಾಗುವರು
ಕೆಲವು ರಾಶಿಚಕ್ರದವರು ತಾವು ಉತ್ತಮ ಗಾಯಕರು ಅಥವಾ ಹಾಡುಗಾರಿಕೆ ತಿಳಿದವರಾಗಿರುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ಅವರಿಗೆ ಹಾಡಲು ಅವಕಾಶ ಸಿಗದೆ ಇರಬಹುದು. ಅಥವಾ ಅವರ ಧ್ವನಿಯನ್ನು ಇತರರು ಗುರುತಿಸದೆ ಇರಬಹುದು. ಅಂತಹ ಸಂದರ್ಭದಲ್ಲಿ ಬೇರೆಯವರು ಹಾಡಿದರೆ ಅವರ ಹಾಡಿನ ಬಗ್ಗೆ ಇವರು ಸಾಕಷ್ಟು ಮಾತನ್ನು ಆಡುವರು. ಅವರು ಹಾಡಿರುವ ಹಾಡಿನ ಬಗ್ಗೆ, ಗುಣಮಟ್ಟ, ಧ್ವನಿ, ಯಾವುದೂ ಸೂಕ್ತವಾಗಿಲ್ಲ ಎನ್ನಬಹುದು. ಜೊತೆಗೆ ಅವರಿಗಿಂತ ತಮ್ಮ ಧ್ವನಿಯೇ ಉತ್ತಮವಾಗಿದೆ ಎಂದು ಭಾವಿಸುವರು. ಅಂತಹ ಸ್ವಭಾವದಲ್ಲಿ ಮೇಷರಾಶಿಯವರು, ವೃಷಭ ರಾಶಿಯವರು ಮತ್ತು ಮಕರ ರಾಶಿಯವರು ಇರುತ್ತಾರೆ ಎಂದು ಹೇಳಬಹುದು.

ಕನ್ಯಾ, ವೃಶ್ಚಿಕ ಹಾಗೂ ಕುಂಭ ರಾಶಿಯವರು ಚೆನ್ನಾಗಿ ಹಾಡುತ್ತಾರೆ, ಆದರೆ ನಾಚಿಕೆ ಹೆಚ್ಚು
ಕೆಲವು ಮಂದಿ ಬಹಳಷ್ಟು ಸುಂದರವಾಗಿ ಹಾಡುತ್ತಾರೆ. ಅವರ ಹಾಡಿಗೆ ಸೂಕ್ತ ಧ್ವನಿ ಗೂಡಿಸುವುದರ ಮೂಲಕ ಉತ್ತಮ ಪ್ರತಿಭೆಯನ್ನು ಹೊಂದಿರುತ್ತಾರೆ. ಇವರಿಗೆ ತಮ್ಮ ಪ್ರತಿಭೆಯ ಸಾಮಥ್ರ್ಯ ಏನು ಎನ್ನುವುದು ತಿಳಿದಿರುವುದಿಲ್ಲ. ಜೊತೆಗೆ ಆ ಪ್ರತಿಭೆಯನ್ನು ನಾಲ್ಕು ಜನರ ಮುಂದೆ ಪ್ರದರ್ಶಿಸಲು ಭಯಪಡುತ್ತಾರೆ. ಅವರಲ್ಲಿ ಇರುವ ಅತೀವ ನಾಚಿಕೆಯ ಸ್ವಭಾವವು ಅವರು ಏಕಾಂಗಿಯಾಗಿರುವಾಗ ಅಥವಾ ನಾಲ್ಕು ಗೋಡೆಯ ಮಧ್ಯೆ ಇರುವಾಗ ಮಾತ್ರ ಹಾಡುವಂತೆ ಮಾಡುತ್ತದೆ. ಇಂತಹ ಗುಣಗಳನ್ನು ಸಾಮಾನ್ಯವಾಗಿ ಕನ್ಯಾ, ವೃಶ್ಚಿಕ ಹಾಗೂ ಕುಂಭ ರಾಶಿಯವರಲ್ಲಿ ಇರುವುದನ್ನು ನೋಡಬಹುದು.

ತುಲಾ, ಮೀನ ಮತ್ತು ಕರ್ಕಾಟಕ ರಾಶಿಯವರು ಉತ್ತಮವಾಗಿ ಹಾಡಬಲ್ಲರು
ಕೆಲವರು ಅತ್ಯುತ್ತಮ ಧ್ವನಿ ಹಾಗೂ ಸುಂದರವಾಗಿ ಏರಿಳಿತವನ್ನು ಅನುಸರಿಸಿ ಹಾಡುವವರು ಪರಿಪೂರ್ಣತೆಯನ್ನು ಪಡೆದುಕೊಳ್ಳುವರು. ಇವರು ತಮ್ಮ ಹಾಡಿನಿಂದ ಇತರರನ್ನು ಆಕರ್ಷಿಸುವರು. ಜೊತೆಗೆ ಇವರ ಹಾಡುಗಾರಿಕೆ ಹಾಗೂ ಪ್ರತಿಭೆಯನ್ನು ಕಂಡು ಕೆಲವರಿಗೆ ಅಸೂಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ತಮ್ಮ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವ ರಾಶಿಚಕ್ರದವರು ಎಂದರೆ ತುಲಾ, ಮೀನ ಮತ್ತು ಕರ್ಕಾಟಕ ರಾಶಿಯವರಾಗಿರುತ್ತಾರೆ.



Click it and Unblock the Notifications











