Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಶಿ ಭವಿಷ್ಯ: ಹುಚ್ಚುತನ ಯಾವ್ಯಾವ ರಾಶಿಯಲ್ಲಿ ಎಷ್ಟಿದೆ ತಿಳಿಯಿರಿ
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಹುಚ್ಚುತನವೆನ್ನುವುದು ಇದ್ದೇ ಇರುತ್ತದೆ. ಕೆಲವರಲ್ಲಿ ಇದು ಹೆಚ್ಚಿದ್ದರೆ, ಇನ್ನು ಕೆಲವರಲ್ಲಿ ಕಡಿಮೆ ಇರುವುದು. ಇದಕ್ಕೆ ಪ್ರಮುಖ ಕಾರಣ ರಾಶಿ ಚಕ್ರಗಳು. ಈ ರಾಶಿಚಕ್ರಗಳ ಅನುಗುಣವಾಗಿಯೇ ವ್ಯಕ್ತಿತ್ವ ಕೂಡ ಕಂಡುಬರುವುದು. ಈ ಲೇಖನದಲ್ಲಿ ಹುಚ್ಚುತನಕ್ಕೆ ಅನುಗುಣವಾಗಿ ರಾಶಿಚಕ್ರಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ. ರಾಶಿಚಕ್ರದವರು ತಮ್ಮ ಮಾಜಿ ಪ್ರೇಯಸಿಯನ್ನು ಯಾವ ರೀತಿಯಿಂದ ನಡೆಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಕೂಡ ಹೇಳಲಾಗಿದೆ.
ರಾಶಿಚಕ್ರದ ಅನುಗುಣವಾಗಿಯೇ ಕೆಲವರು ಜೀವನದಲ್ಲಿ ನಡೆದುಕೊಳ್ಳುವರು. ಈ ರಾಶಿಚಕ್ರಗಳ ಲಕ್ಷಗಳನ್ನು ತಿಳಿದುಕೊಳ್ಳಬೇಕು. ಇದರಿಂದ ನಿಮ್ಮ ಮಾಜಿಯು ಎಷ್ಟು ಹುಚ್ಚುತನವಿರುವವರು ಎಂದು ತಿಳಿದುಬರಲಿದೆ. ಈಗ ಅಧಿಕ ಹುಚ್ಚುತನ ಮತ್ತು ಕಡಿಮೆ ಹುಚ್ಚುತನವಿರುವ ರಾಶಿಚಕ್ರವನ್ನು ಪಟ್ಟಿ ಮಾಡಲಾಗಿದೆ. ಈ ರಾಶಿಚಕ್ರಗಳು ಯಾವುದು ಎಂದು ನೀವು ತಿಳಿಯಿರಿ...

ವೃಶ್ಚಿಕ: ಅ.24-ನ.22
ಇದು ತುಂಬಾ ಅಪಾಯಕಾರಿಯಾದ ಚಿಹ್ನೆ. ಈ ರಾಶಿಯವರು ದಿನದಲ್ಲಿ ನಿಮಗೆ ನೂರು ಸಲ ಕರೆ ಮಾಡಿ ತೊಂದರೆ ನೀಡುವುದಿಲ್ಲವೆಂದು ಭರವಸೆ ನೀಡಬಹುದು. ಈ ರಾಶಿಯವರು ತಮ್ಮ ಮಾಜಿಯನ್ನು ನಿರ್ವಹಿಸುವಲ್ಲಿ ತುಂಬಾ ಜಾಣ ಮತ್ತು ಹುಚ್ಚುತನವುಳ್ಳವರು. ಇವರು ಒಳಗೊಳಗೆ ಕುದಿಯುತ್ತಾ ಇದ್ದರೂ ಸಂತೋಷದ ಕಪಟ ನಾಟಕವಾಡಬಹುದು. ನಿಮ್ಮನ್ನು ಅವರು ಬಿಟ್ಟಿದ್ದರೂ ನಿಮ್ಮ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ನಿಮ್ಮನ್ನು ಗಮನಿಸುತ್ತಾ ಇದ್ದಾರೆಂದು ನಿಮಗನಿಸಿದರೆ ಆಗ ಅಚ್ಚರಿ ಪಡಬೇಡಿ.

ಸಿಂಹ: ಜುಲೈ 23-ಆಗಸ್ಟ್ 23
ಈ ದುರಾಭಿಮಾನಿಯಾಗಿರುವ ಸಿಂಹವು ತಮ್ಮ ಸಂಬಂಧವು ಮುರಿದುಬಿದ್ದಿದೆ ಎಂದು ಬೇರೆಯವರಿಗೆ ತಿಳಿಯದಿರುವಂತೆ ಮಾಡಲು ತುಂಬಾ ಕಷ್ಟಪಡುವರು. ಇದಕ್ಕಾಗಿ ಅವರು ಯಾವುದೇ ಹಂತಕ್ಕೂ ಹೋಗಬಹುದು. ಇವರ ಹುಚ್ಚುತನವು ವಿಪರೀತವಾದಾಗ ಅದನ್ನು ಸುತ್ತಲಿನವರು ಎದುರಿಸಬೇಕು. ಇದರ ಬಗ್ಗೆ ಮಾಜಿ ಪ್ರೇಯಸಿ ಕೂಡ ಎಚ್ಚರಿಕೆ ವಹಿಸಬೇಕು. ಇವರು ಯಾವುದೇ ಪರಿಸ್ಥಿತಿಯಲ್ಲೂ ಅವರೊಂದಿಗೆ ಸಂಪರ್ಕದಲ್ಲಿರುವರು ಮತ್ತು ಎಲ್ಲವನ್ನೂ ಇತ್ಯರ್ಥಪಡಿಸಲು ಬಯಸುವರು. ಇವರು ಅನುಭವಿಸುವಂತಹ ನೋವಿನಿಂದಲೇ ಆ ಹುಚ್ಚುತನ ಬರುವುದು. ಇವರು ಪ್ರೀತಿಯಲ್ಲಿ ಬಿದ್ದಾಗ ತನ್ನ ಸಂಗಾತಿಯು ತುಂಬಾ ವಿಶೇಷವಾಗಿ ಭಾವಿಸುವಂತೆ ಮಾಡುವರು ಮತ್ತು ಅವರನ್ನು ಕಳೆದುಕೊಳ್ಳುವುದು ಇವರಿಗೆ ದೊಡ್ಡ ಆಘಾತ.

ಮಿಥುನ: ಮೇ21-ಜೂನ್ 20
ತಮ್ಮ ಹೃದಯ ಒಡೆದಿರುವುದಕ್ಕೆ ಈ ಅವಳಿಗಳು ತುಂಬಾ ತೊಂದರೆ ನೀಡುವರು. ಅವರು ನಿಮ್ಮನ್ನು ಈಗ ಪ್ರೀತಿಸದೇ ಇರಬಹುದು. ಆದರೆ ಅವರು ತಮ್ಮ ಅಸ್ತಿತ್ವ ತೋರಿಸಿಕೊಡುವರು. ಯಾಕೆಂದರೆ ಅವರು ಏಕಾಂಗಿಯಾಗುತ್ತಾರೆಂಬ ಭೀತಿ ಕಾಡುತ್ತಿರುವುದು. ನಿಮ್ಮನ್ನು ಮರಳಿ ಪಡೆಯಲು ಅವರು ಅವಲಂಬಿತರಾಗಿರುವರು. ಒಂದು ಕ್ಷಣ ಅವರು ಸ್ನೇಹಿತರಾಗಿರಲು ಯಾವುದೇ ತೊಂದರೆಯಿಲ್ಲವೆಂದು ನಿಮಗೆ ಹೇಳಬಹುದು. ಆದರೆ ಮರುಕ್ಷಣವೇ ಅವರು ಸಂಪೂರ್ಣವಾಗಿ ಯೂಟರ್ನ್ ತೆಗೆದುಕೊಂಡು ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಬಹುದು. ನಿಮ್ಮನ್ನು ಕಳೆದುಕೊಳ್ಳುವ ಭೀತಿ ಅವರಲ್ಲಿ ಇರುವುದು. ಇದರಿಂದಾಗಿಯೇ ಅವರ ನಡವಳಿಕೆಯಲ್ಲಿ ಇಂತಹ ಧ್ರುವೀಕರಣ ಕಂಡುಬರುವುದು.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23
ಇವರು ತುಂಬಾ ಸಾಧುಸ್ವಭಾವದವರಾದರೂ ತಮ್ಮ ಹೃದಯ ಒಡೆದಾಗ ಹಾಗೆ ಇರುವುದಿಲ್ಲ. ಸಂಬಂಧ ಮುರಿದು ಬಿದ್ದರೂ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುವರು. ಯಾಕೆಂದರೆ ಅವರು ತಮ್ಮ ಕೋಪ ನಿಯಂತ್ರಣದಲ್ಲಿ ಇರಿಸಲು ಬಯಸುವರು. ಆರಂಭದಲ್ಲಿ ಅವರು ನಿಮ್ಮಿಂದ ದೂರವಾದರು ಎಂದು ನಿಮಗೆ ಅನಿಸಬಹುದು. ಆದರೆ ಕೆಲವು ಸಮಯದ ಬಳಿಕ ಅವರು ನಿಮ್ಮನ್ನು ಎಷ್ಟು ದ್ವೇಷಿಸುತ್ತಾರೆ ಎಂದು ನಿಮಗೆ ಮನವರಿಕೆಯಾಗುವುದು. ಅವರು ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಬಹುದು. ಇದರ ಬಗ್ಗೆ ಎಚ್ಚರದಿಂದ ಇರಿ.

ಮೀನ: ಫೆ.19-ಮಾ.20
ಈ ರಾಶಿಯವರು ತುಂಬಾ ಭಾವನಾತ್ಮಕವಾಗಿರುವ ವ್ಯಕ್ತಿಗಳು. ಇವರು ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಮೀನ ರಾಶಿಯವರು ಸೈಕೋ ರೀತಿ ನಿಮಗೆ ತೊಂದರೆ ಉಂಟು ಮಾಡಲ್ಲ. ಅವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾರೆನ್ನುವ ಕೊರಗು ನಿಮಗೆ ಆಗಲಿದೆ. ಸಾವಿನ ಬಳಿಕದ ವಿಚಾರದ ಬಗ್ಗೆ ಮಾತನಾಡಿ ಅವರು ತೊಂದರೆ ನೀಡಬಹುದು ಮತ್ತು ಅವರು ನಿಮ್ಮೊಂದಿಗೆ ಶಾಂತಿ ಬಯಸುವರು. ಅವರು ಕೆಲಸದಲ್ಲಿ ಎಷ್ಟೇ ವ್ಯಸ್ತರಾಗಿದ್ದರೂ ಸಹಿತ ನಿಮ್ಮೊಂದಿಗೆ ಮಾತನಾಡಲು ಅವರು ದಾರಿ ಕಂಡುಕೊಳ್ಳುವರು ಎಂದು ನಿಮಗೆ ತೋರಿಸಿಕೊಡುವರು.

ಕರ್ಕಾಟಕ: ಜೂನ್ 21-ಜುಲೈ22
ಈ ರಾಶಿಯವರು ತುಂಬಾ ಹೃದಯಮಯಿಗಳಾಗಿರುವರು. ಇವರು ತಮ್ಮ ಮಾಜಿಗೆ ತೊಂದರೆ ನೀಡುವಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲುವರು. ಇವರು ಎಲ್ಲಿಗೆ ಹೋದರೂ ಅವರು ತಮ್ಮ ಪ್ರೀತಿ ಬಿತ್ತರಿಸುವರು. ಪ್ರೀತಿಯ ಸಂಬಂಧ ಮುರಿದು ಬಿದ್ದಾಗ ತಮ್ಮೊಳಗೆ ಕೊರಗುವರು. ಒಂದು ಹಂತದಲ್ಲಿ ಇವರು ಪ್ರತೀಕಾರ ತೀರಿಸುವ ಬಗ್ಗೆ ಯೋಚಿಸುವರು. ಆದರೆ ಇದೇ ವೇಳೆ ಇವರಿಗೆ ಪ್ರತಿಕ್ರಿಯಿಸಲು ಹೃದಯವು ಒಡೆದಿರುವುದು.

ಮಕರ: ಡಿ.23-ಜ.20
ಆಡಿನ ಚಿಹ್ನೆ ಹೊಂದಿರುವ ಈ ರಾಶಿಯವರು ತುಂಬಾ ತಾಳ್ಮೆಯವರಾಗಿರುವರು. ಇವರು ತುಂಬಾ ಬೇಸರಗೊಂಡರೂ ತನ್ನ ಮಾಜಿಗೆ ಯಾವುದೇ ತೊಂದರೆ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಇವರು ನಿಮ್ಮನ್ನು ಬೇಗನೆ ಮರೆಯಲು ಪ್ರಯತ್ನಿಸುವರು ಮತ್ತು ಯಾವುದೇ ಕೆಲಸದಲ್ಲಿ ತೊಡಗಿಕೊಂಡು ತಮ್ಮ ವೈಯಕ್ತಿಕ ಬೆಳವಣಿಗೆ ಬಗ್ಗೆ ಗಮನಹರಿಸುವರು. ಇದು ಆರಂಭದಲ್ಲಿ ಅವರಿಗೆ ತುಂಬಾ ಕಠಿಣವಾಗಿರುವುದು. ಆದರೆ ವ್ಯಸ್ತ ವೇಳಾಪಟ್ಟಿಯಲ್ಲಿ ತೊಡಗಿಕೊಂಡು ಎಲ್ಲವನ್ನು ಮರೆಯಲು ಪ್ರಯತ್ನಿಸುವರು.

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23
ಪ್ರೀತಿಯ ಸಂಬಂಧ ಮುರಿದು ಬೀಳುವುದರಿಂದ ಇವರು ತುಂಬಾ ಆಘಾತಕ್ಕೆ ಒಳಗಾಗುವರು. ಆದರೆ ತನ್ನ ಮಾಜಿಗೆ ಯಾವುದೇ ತೊಂದರೆ ನೀಡಲ್ಲ. ನಿಮ್ಮನ್ನು ಅವರು ಎಷ್ಟೇ ಮಟ್ಟಿಗೆ ಪ್ರೀತಿಸಿದ್ದರೂ ಸಹಿತ ಅವರು ಎಲ್ಲವನ್ನು ಸರಿಯಾಗಿಸಿಕೊಂಡು ನಿಮಗಿಂತ ವೇಗವಾಗಿ ಜೀವನದಲ್ಲಿ ಮುಂದೆ ಸಾಗುವರು. ಇವರು ಉದ್ವೇಗಕ್ಕೆ ಬಲಿಯಾಗುವುದಿಲ್ಲ. ಇನ್ನೊಂದು ಕಡೆಯಲ್ಲಿ ಇವರು ಯಾವಾಗಲು ಏನೇ ತಪ್ಪು ಕೆಲಸ ಮಾಡುವುದಿದ್ದರೂ ಅದರ ಬಗ್ಗೆ ತುಂಬಾ ಗಾಢವಾಗಿ ಚಿಂತಿಸುವರು.

ಕುಂಭ: ಜ.21-ಫೆ.18
ಈ ರಾಶಿಯವರಿಗೆ ತುಂಬಾ ಆಪ್ತರಾಗಿರುವವರಿಗೆ ಕೂಡ ಇವರ ಸಂಬಂಧ ಮುರಿದು ಬಿದ್ದಿದೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಇವರು ತುಂಬಾ ನೋವು ಅನುಭವಿಸಿದರೂ ಅವರು ಇದನ್ನು ಶಕ್ತಿಯಾಗಿ ಪರಿವರ್ತಿಸಲು ಬಯಸುವರು. ಇವರಿಗೆ ಕೆಲಸವೇ ಮುಖ್ಯವಾಗಿರುವುದು. ಇದರಿಂದಾಗಿ ಅವರು ಪ್ರತಿಕಾರದ ಬಗ್ಗೆ ಯಾವತ್ತೂ ಯೋಚಿಸಲ್ಲ. ಇವರು ತಮ್ಮ ಸಮಯ ಮತ್ತು ಶಕ್ತಿಯನ್ನು ಕೆಲಸಕ್ಕೆ ಮೀಸಲಿಡುವರು.

ವೃಷಭ: ಎಪ್ರಿಲ್ 20-ಮೇ 20
ಈ ರಾಶಿಯವರ ಪ್ರೀತಿಯ ಸಂಬಂಧ ಮುರಿದು ಬಿದ್ದಾಗ ಅವರು ನಿಮಗೆ ಕರೆ ಮಾಡಿ ಮಾತನಾಡಲ್ಲ. ಅವರು ಎಷ್ಟೇ ನೋವಿಗೊಳಗಾದರೂ ನಿಮ್ಮಿಂದ ದೂರವೇ ಇರಲು ಬಯಸುವರು. ನೀವು ಅವರನ್ನು ಮತ್ತೆ ಗೇಲಿ ಮಾಡಿದರೂ ಅವರು ಕ್ಷಮೆ ನೀಡುವಂತಹ ಗುಣ ಹೊಂದಿರುವರು.

ಧನು: ನವಂಬರ್ 23-ಡಿಸೆಂಬರ್ 22
ಈ ರಾಶಿಯವರು ನಿಮ್ಮ ಬಗ್ಗೆ ಚಿಂತೆ ಮಾಡದೆ ಮತ್ತೊಂದು ಸಂಬಂಧದಲ್ಲಿ ತೊಡಗಿಕೊಳ್ಳುವರು. ಇವರು ಅಷ್ಟು ಸುಲಭವಾಗಿ ನೋವಿಗೆ ಒಳಗಾಗಲ್ಲ ಮತ್ತು ಹೃದಯ ಒಡೆದರೂ ಸಾಮಾನ್ಯವಾಗಿರುವರು. ಇವರು ಹೃದಯ ಒಡೆದ ಕಾರಣ ನೋವಿಗೆ ಒಳಗಾದರೂ ಇದನ್ನು ಬೇಗನೆ ಮರೆತುಬಿಡಲು ಬಯಸುವರು. ಇದಕ್ಕೆ ಬದಲಾಗಿ ಅವರು ತಮ್ಮ ಶಕ್ತಿಯನ್ನು ವಿಶ್ವಪರ್ಯಟನೆಗೆ ಬಳಸುವರು ಮತ್ತು ಜೀವನದಲ್ಲಿ ತುಂಬಾ ಸಾಹಸಮಯ ಪ್ರವೃತ್ತಿಯಲ್ಲಿ ತೊಡಗಿಕೊಳ್ಳುವರು.

ಮೇಷ: ಮಾ.21-ಎಪ್ರಿಲ್ 19
ಈ ರಾಶಿಯವರು ಒಂದು ಕ್ಷಣಕ್ಕೂ ಹಿಂತಿರುಗಿ ನೋಡಲ್ಲ. ಇವರು ತುಂಬಾ ಸಹನೆ ಹಾಗೂ ಶಾಂತ ವ್ಯಕ್ತಿಗಳು ಎಂದು ಪರಿಗಣಿಸಲಾಗಿದೆ. ಸಂಬಂಧವು ಸರಿಯಾಗಿಲ್ಲವೆಂದು ಅವರಿಗೆ ಅನಿಸಿದರೆ ಆಗ ನೇರವಾಗಿ ಮುಂದೆ ಸಾಗುವರು. ಇವರು ಶಾಂತಿ ಬಯಸುವರು ಮತ್ತು ಜಗಳವನ್ನು ಕಡೆಗಣಿಸುವರು.



Click it and Unblock the Notifications











