Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ ರಾಶಿಚಕ್ರದ ಜನರು ಸಂಬಂಧದ ವಿಚಾರದಲ್ಲಿ ಹೆಚ್ಚು ನಿಷ್ಠಾವಂತ ಸಂಗಾತಿಗಳಾಗಿರುತ್ತಾರೆ
ಸಂಬಂಧ ಎನ್ನುವುದು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕವಾದದ್ದು. ಇಲ್ಲಿ ಒಮ್ಮೆ ನಂಬಿಕೆಗೆ ದ್ರೋಹ ಉಂಟಾದರೆ ಸಂಬಂಧ ಬಹುಬೇಗ ಹಾಳಾಗುವುದು. ಸಂಗಾತಿಗಳಾಗಿ ಅಥವಾ ಪಾಲುದಾರರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಇದ್ದಾಗ ಜೀವನ ಬಹು ಸಂತೋಷದಿಂದ ಕೂಡಿರುವುದು. ಸಂಗಾತಿಗಳ ನಡುವೆ ಗಟ್ಟಿಯಾದ ಬಾಂಧವ್ಯ ಹಾಗೂ ಪ್ರೀತಿ ಇರಬೇಕು ಎಂದಾದರೆ ಅಲ್ಲಿ ನಂಬಿಕೆ ಎನ್ನುವುದು ಪ್ರಭಲವಾಗಿ ಇರಬೇಕು. ಯಾವ ಸಂಬಂಧದಲ್ಲಿ ನಂಬಿಕೆ ಇರುವುದಿಲ್ಲವೋ ಅಲ್ಲಿ ಅನುರಾಗ ಅಥವಾ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ನಿಸ್ವಾರ್ಥ ಪ್ರೀತಿ, ಸಂಗಾತಿಗಾಗಿ ತ್ಯಾಗದ ಮನೋಭಾವ ಮೂಡಬೇಕು ಎಂದಾದರೆ ಅಲ್ಲಿ ನಂಬಿಕೆ ಎನ್ನುವುದು ಆಳವಾಗಿ ಇರಬೇಕು.
ಸಂಸಾರ ಅಥವಾ ಸಂಬಂಧಗಳು ಶಾಶ್ವತವಾಗಿ ಇರಬೇಕಾದರೆ ಹೊಂದಾಣಿಕೆಯ ಗುಣವು ಪ್ರಮುಖವಾದದ್ದು. ನಮಗಾಗಿ ಇನ್ನೊಂದು ಜೀವ ಜೀವನಪರ್ಯಂತ ಜೊತೆಯಲ್ಲಿ ಇರುವುದು, ನಮ್ಮ ಕಷ್ಟ ಸುಖಗಳಿಗೆ ಸಹಕಾರ ನೀಡುತ್ತಾ ಜೀವನ ನಡೆಸುವುದು ಎಂದರೆ ಅದೊಂದು ಅದ್ಭುತ. ನಮಗಾಗಿಯೇ ನಿಷ್ಠಾವಂತರಾಗಿ ಇರುವುದು, ತಮ್ಮ ಕನಸುಗಳನ್ನು ಬದಿಗೊತ್ತಿ ಸಂಗಾತಿಗೆ ಸಹಕಾರ ನೀಡುವುದೇ ನಿಸ್ವಾರ್ಥ ಪ್ರೀತಿ. ತ್ಯಾಗ ಎನ್ನುವುದನ್ನು ತಮ್ಮಲ್ಲಿ ಅರಗಿಸಿಕೊಂಡು ಸಂಸಾರ ಹಾಗೂ ಸಂಗಾತಿಗಾಗಿ ಜೀವನ ನಡೆಸಿದಾಗ ತೃಪ್ತಿಯ ಭಾವ ಮೂಡುವುದು.

ಆದರೆ ಕೆಲವರು ಸಂಗಾತಿಗಾಗಿ ನಿಷ್ಠೆ ಅಥವಾ ತ್ಯಾಗವನ್ನು ತೋರಿಸುವುದಿಲ್ಲ. ಕೇವಲ ಸ್ವಾರ್ಥ ಮತ್ತು ತಮ್ಮ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಸಂಗಾತಿಗಳಿಗೆ ಹೊಂದಾಣಿಕೆಯ ಸಮಸ್ಯೆ ಹೆಚ್ಚಾಗುವುದು. ಸಂಬಂಧಗಳ ಬಗ್ಗೆ ಯಾವುದೇ ನಂಬಿಕೆ ಇರದು. ಜೊತೆಗೆ ಜೀವನದಲ್ಲಿ ಯಾವುದೇ ಕೆಲಸ ಕೈಗೊಳ್ಳಲು ಹುಮ್ಮಸ್ಸು ಅಥವಾ ಉತ್ಸಾಹ ಇರದು. ಬೇಸರದಲ್ಲಿಯೇ ಜೀವನ ಮುಂದೆಸಾಗುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯಂತ ತ್ಯಾಗದ ಭಾವನೆಯನ್ನು ಹೊಂದಿರುತ್ತಾರೆ. ತಮ್ಮ ಸಂಗಾತಿಗಾಗಿ ಸಾಕಷ್ಟು ಪ್ರೀತಿ ಹಾಗೂ ಸಹಕಾರವನ್ನು ನೀಡುವರು. ಅವರು ತಮ್ಮ ಪಾಲುದಾರರೊಂದಿಗೆ ಬಹಳ ನಿಷ್ಠಾವಂತರಾಗಿ ಇರುವರು ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು? ನೀವು ಆ ಪಟ್ಟಿಯಲ್ಲಿ ಇದ್ದೀರಾ? ಅಥವಾ ನಿಮ್ಮ ಸಂಗಾತಿಯು ನಿಷ್ಠಾವಂತ ರಾಶಿಚಕ್ರದವರೇ? ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಕರ್ಕ
ಈ ರಾಶಿಯವರು ಅತ್ಯಂತ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿ ಅಥವಾ ಪಾಲುದಾರರಿಗಾಗಿ ಎಂತಹ ಸಾಹಸ ಕಾರ್ಯಗಳನ್ನಾದರೂ ಕೈಗೊಳ್ಳುವರು. ಸಾಕಷ್ಟು ತ್ಯಾಗದ ಮೂಲಕ ಸಂಗಾತಿಯ ಪ್ರೀತಿಯನ್ನು ಗಳಿಸುವರು. ಸದಾ ರಕ್ಷಣೆಯ ಭಾವವನ್ನು ನೀಡುವ ಇವರು ಸಂಬಂಧದಲ್ಲಿ ನಿಷ್ಠಾವಂತರಾಗಿರುತ್ತಾರೆ. ಜೀವನದಲ್ಲಿ ಪ್ರೀತಿಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡುವ ಇವರು ಸಂಸಾರ ಸಂತೋಷದಿಂದ ಹಾಗೂ ಸಂಗಾತಿಯನ್ನು ಖುಷಿಯಲ್ಲಿ ಇಡಲು ಬಯಸುತ್ತಾರೆ. ಇವರ ನಿಷ್ಠೆಗೆ ಯಾವುದೇ ಗಡಿಯಿಲ್ಲ ಎಂದು ಹೇಳಲಾಗುವುದು.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಸ್ವಭಾವತಃ ಅತ್ಯಂತ ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ. ಇವರು ಸಂಬಂಧಕ್ಕೆ ಬದ್ಧರಾಗಿರಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುವರು. ಸಂಬಂಧಗಳ ಆರಂಭದಲ್ಲಿ ಇವರಿಗೆ ನಂಬಿಕೆಯಲ್ಲಿ ಕೊಂಚ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ನಿಧಾನವಾಗಿ ಭರವಸೆ ಗಟ್ಟಿಯಾಗುತ್ತಾ ಸಾಗುವುದು. ಸಂಬಂಧಗಳಲ್ಲಿ ಹಾಗೂ ಸಂಗಾತಿಗಾಗಿ ಅತ್ಯಂತ ತಾಳ್ಮೆಯ ಪ್ರವೃತ್ತಿಯನ್ನು ತೋರುವುದರ ಮೂಲಕ ಪ್ರೀತಿಯನ್ನು ಗಳಿಸುವರು. ಇವರು ಒಮ್ಮೆ ಸಂಗಾತಿಯ ಬಗ್ಗೆ ನಂಬಿಕೆ ಹಾಗೂ ಪ್ರೀತಿಯನ್ನು ಪಡೆದುಕೊಂಡರು ಎಂದರೆ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಲು ನೋಡುವರು. ಜೊತೆಗೆ ಅತ್ಯಂತ ಭಾವೋದ್ರಿಕ್ತ ಭಾವನೆಯನ್ನು ತೋರುವರು. ಇವರು ಅತ್ಯಂತ ಆರೈಕೆಯನ್ನು ಮಾಡುವ ಮತ್ತು ವಿಶ್ವಾಸಾರ್ಹ ಪಾಲುದಾರರು ಎನಿಸಿಕೊಳ್ಳುವರು.

ವೃಷಭ
ಈ ರಾಶಿಯ ವ್ಯಕ್ತಿಗಳು ಸಂಬಂಧಗಳಿಗೆ ಅಥವಾ ಸಂಗಾತಿಗೆ ಅತ್ಯಂತ ಪ್ರೀತಿ ತೋರುವುದರ ಮೂಲಕ ಶರಣಾಗುತ್ತಾರೆ. ಇವರು ಸಂಬಂಧದಲ್ಲಿ ಒಮ್ಮೆ ನಿರ್ಣಯ ತೆಗೆದುಕೊಂಡರೆ ಅದನ್ನು ಅಷ್ಟು ಸುಲಭವಾಗಿ ಹಿಂತೆಗೆದುಕೊಳ್ಳುವುದಿಲ್ಲ. ಈ ರಾಶಿಚಕ್ರದವರು ಸ್ವಭಾವತಃ ಬಹಳ ಸ್ಥಿರ ಮತ್ತು ಪ್ರಾಯೋಗಿಕವಾಗಿ ಇರುತ್ತಾರೆ. ದೀರ್ಘಾವಧಿಯ ಸಂಬಂಧವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾರೆ. ಇವರು ಸಂಗಾತಿಗೆ ಸಹಕಾರ ಹಾಗೂ ಪ್ರೀತಿ-ರಕ್ಷಣೆಯನ್ನು ನೀಡುವ ವ್ಯಕ್ತಿಗಳಾಗಿರುತ್ತಾರೆ.

ತುಲಾ
ಇವರು ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಮುಂದಾಗುತ್ತಾರೆ. ಶಾಂತಿ ಪ್ರಿಯರಾದ ಇವರು ಸಂಬಂಧದಲ್ಲಿ ಪ್ರೀತಿ ವಿಶ್ವಾಸವನ್ನು ಬಯಸುತ್ತಾರೆ. ಜೊತೆಗೆ ತಮ್ಮ ವರ್ತನೆಯನ್ನು ಹಾಗೆಯೇ ಇರಿಸಿಕೊಳ್ಳುವರು. ಉತ್ತಮ ಭವಿಷ್ಯದ ಯೋಜನೆಯನ್ನು ಕೈಗೊಳ್ಳುವುದರ ಮೂಲಕ ಸಂಗಾತಿಗೆ ಉತ್ತಮ ಸ್ಥಿತಿಯನ್ನು ಕಲ್ಪಿಸಿಕೊಡುವರು.

ಮಕರ
ಇವರು ಸಾಮೂಹಿಕ ಡೇಟಿಂಗ್ ಹಾಗೂ ತೋರ್ಪಡಿಕೆಯ ಪ್ರೀತಿಯನ್ನು ಇಷ್ಟಪಡುವುದಿಲ್ಲ. ಇವರು ಪ್ರೀತಿಯನ್ನು ಆಂತರಿಕ ಭಾವನೆಯಲ್ಲಿಯೂ ಇರಬೇಕು ಎಂದು ಬಯಸುವ ವ್ಯಕ್ತಿಗಳು. ತಾವು ತೋರಿಸುವ ಪ್ರೀತಿಯು ನಿಷ್ಠಾವಂತವಾಗಿರಬೇಕು ಹಾಗೂ ಸಂಗಾತಿ ತೋರುವ ಪ್ರೀತಿಯು ಶುದ್ಧವಾಗಿರಬೇಕು ಎಂದು ಬಯಸುವರು. ಸಹಾನುಭೂತಿಯ ವ್ಯಕ್ತಿಗಳಾದ ಇವರು ಸಂಬಂಧಗಳ ವಿಚಾರದಲ್ಲಿ ಗಂಭೀರತೆಯನ್ನು ತೋರುವರು. ಇವರು ತಮ್ಮ ಸಂಗಾತಿಗೆ ಯಾವುದೇ ರೀತಿಯ ಮೋಸವನ್ನು ಮಾಡಲಾರರು.

ಸಿಂಹ
ಇವರು ತಮ್ಮವರು ಅಥವಾ ಸಂಗಾತಿ ಎಂದಾದರೆ ಅತ್ಯಂತ ಪ್ರೀತಿಯನ್ನು ತೋರುವರು. ಸುಂದರವಾದ ಕುಟುಂಬ ಹಾಗೂ ನಿಸ್ವಾರ್ಥ ಪ್ರೀತಿಯನ್ನು ತೋರುವುದರ ಮೂಲಕ ಸುಂದರ ಜೀವನವನ್ನು ನಡೆಸುವರು. ಸಾಹಸಿಗಳು ಹಾಗೂ ಧೈರ್ಯವಂತರಾದ ಇವರು ಸಂಗಾತಿಯೊಂದಿಗೆ ಸದಾ ಪ್ರೀತಿಯಿಂದ ಇರುವರು. ಅಲ್ಲದೆ ಉತ್ತಮ ವಿನೋದವನ್ನು ಮಾಡುವುದರ ಮೂಲಕ ಹೆಚ್ಚು ಸಂತೋಷವನ್ನು ನೀಡುವರು.



Click it and Unblock the Notifications











