For Quick Alerts
ALLOW NOTIFICATIONS  
For Daily Alerts

ಒಟ್ಟು 12 ರಾಶಿಚಕ್ರದವರಲ್ಲಿ ಐದು ರಾಶಿಯವರ ವರ್ತನೆಯು ತುಂಬಾ ಕ್ರೂರವಾಗಿರುತ್ತದೆಯಂತೆ!

|

ಮನುಷ್ಯನ ವರ್ತನೆಗಳು, ನಡವಳಿಕೆಗಳು ಪ್ರತಿಯೊಂದಕ್ಕೂ ಆತನಿಗೆ ತಿಳಿಯದೆ ಇರುವಂತಹ ಕೆಲವೊಂದು ಅಂಶಗಳು ಪರಿಣಾಮ ಬೀರುತ್ತದೆ. ಇದರಲ್ಲಿ ಮುಖ್ಯವಾಗಿ ರಾಶಿಚಕ್ರಗಳು. ಪ್ರತಿಯೊಬ್ಬನ ನಡವಳಿಕೆ, ಮನೋಭಾವ ಎಲ್ಲವೂ ಇನ್ನೊಬ್ಬರಿಗಿಂತ ಭಿನ್ನವಾಗಿರುವುದು. ಇದಕ್ಕೆ ಆತ ಹುಟ್ಟಿರುವಂತಹ ರಾಶಿಚಕ್ರಗಳ ಪ್ರಭಾವವು ಕಾರಣವಾಗಿದೆ. ಯಾಕೆಂದರೆ ಕೆಲವು ರಾಶಿಯವರು ತುಂಬಾ ಸೌಮ್ಯ ಸ್ವಭಾವ ಹೊಂದಿದ್ದರೆ ಇನ್ನು ಕೆಲವು ರಾಶಿಯವರಲ್ಲಿ ಸಿಡುಕಿನ ಸ್ವಭಾವ ಇರುವುದು.

ಇದು ಅವರಾಗಿಯೇ ಮಾಡುವಂತದಲ್ಲ. ಯಾಕೆಂದರೆ ಅವರ ರಾಶಿಚಕ್ರವು ಅವರನ್ನು ಈ ರೀತಿಯಾಗಿ ಮಾಡಿಸುವುದು. ರಾಶಿ ಚಕ್ರಗಳಲ್ಲಿ ಕೆಲವು ರಾಶಿಯವರು ತುಂಬಾ ಹಠಮಾರಿಗಳು ಆಗಿರಬಹುದು. ಪ್ರತಿಯೊಂದು ಕೂಡ ಅವರ ರಾಶಿ ಚಕ್ರದ ಮೇಲೆ ಅವಲಂಬಿತವಾಗಿರುವುದು. ಇದರಿಂದ ನಾವು ಯಾವುದೇ ವ್ಯಕ್ತಿಯನ್ನು ದೂರುವ ಮೊದಲು ಆ ವ್ಯಕ್ತಿಯ ರಾಶಿ ಚಕ್ರ ಯಾವುದೆಂದು ತಿಳಿಯುವುದು ಅತೀ ಅಗತ್ಯವಾಗಿರುವುದು. ಈ ಲೇಖನದಲ್ಲಿ ನಾವು ನಮಗೆ ಕೆಲವು ಕ್ರೂರ ರಾಶಿಚಕ್ರಗಳ ಬಗ್ಗೆ ತಿಳಿಸಲಿದ್ದೇವೆ. ಇವರ ವರ್ತನೆಯು ತುಂಬಾ ಕ್ರೂರವಾಗಿರುವುದು. 12 ರಾಶಿಚಕ್ರಗಳಲ್ಲಿ ತುಂಬಾ ಕ್ರೂರ ಎಂದು ಹೇಳಬಹುದಾಗಿರುವ ಐದು ರಾಶಿಚಕ್ರಗಳು ಯಾವುದು ಎಂದು ತಿಳಿಯಲು ನೀವು ತಯಾರಾಗಿ...

ಮೇಷ

ಮೇಷ

ಅಗ್ನಿಯ ಚಿಹ್ನೆ ಆಗಿರುವ ಈ ರಾಶಿಯವರು ತುಂಬಾ ಸಿಡುಕರು ಎಂದು ಹೇಳಲಾಗುತ್ತದೆ. ಕರುಣಾಮಯಿ ಹೃದಯ ಮತ್ತು ಅತ್ಯುತ್ಸಾಹವನ್ನು ಹೊಂದಿರುವಂತಹ ಈ ರಾಶಿಯವರನ್ನು ಬೇರೆ ಯಾರಾದರೂ ಕೆಣಕಿದರೆ ಆಗ ಅವರು ತುಂಬಾ ಕ್ರೋಧಕ್ಕೆ ಒಳಗಾಗುವರು. ನೀವು ಉದ್ದೇಶಪೂರ್ವಕವಾಗಿಯೋ ಅಥವಾ ಉದ್ದೇಶಪೂರ್ವಕವಲ್ಲದೆಯೋ ತಪ್ಪನ್ನು ಮಾಡಿರಬಹುದು. ಆದರೆ ಇದನ್ನು ಅವರು ಖಂಡಿತವಾಗಿಯೂ ಪರಿಗಣಿಸಲ್ಲ. ಅವರು ನಿಮ್ಮ ಮೇಲೆ ಕೋಪ ವ್ಯಕ್ತಪಡಿಸುವುದು ಖಚಿತ.

ಮೇಷ

ಮೇಷ

ಇವರು ತಮ್ಮ ಮೇಲೆ ನಿಯಂತ್ರಣ ಕಳಕೊಂಡಿದ್ದಾರೆ ಎಂದು ಅವರ ಮಾತುಗಳಿಂದ ತಿಳಿದುಬರುವುದು ಮತ್ತು ತಮ್ಮ ಕ್ರೋಧ ತೋರಿಸಿಕೊಳ್ಳುವರು. ಇದೇ ರೀತಿಯಾಗಿ ಅವರ ಕ್ರೋಧಾಗ್ನಿಯು ತಣ್ಣಗಾದ ಬಳಿಕ ಆಗಿರುವಂತಹ ಎಲ್ಲಾ ಜಗಳವನ್ನು ಆದಷ್ಟು ಬೇಗನೆ ಮರೆತು ಬಿಡುವರು. ಆದರೆ ಅವರು ಹೇಳಿರುವಂತಹ ಮಾತುಗಳನ್ನು ನೀವು ಮನಸ್ಸಿಗೆ ಹಚ್ಚಿಕೊಳ್ಳಬೇಡಿ.

Most Read:2019ರಲ್ಲಿ ಎಲ್ಲಾ12 ರಾಶಿ ಚಕ್ರಗಳ ಮದುವೆ ಭವಿಷ್ಯವು ಹೇಗಿರಲಿದೆ?

ಕರ್ಕಾಟಕ

ಕರ್ಕಾಟಕ

ಹೌದು, ನೀವು ಸರಿಯಾಗಿಯೇ ಓದುತ್ತಲಿದ್ದೀರಿ. ಕರ್ಕಾಟಕ ರಾಶಿಯವರು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳು ಎಂದು ನೀವು ಈಗಾಗಲೇ ತಿಳಿದಿರುವಂತಹ ವಿಚಾರವಾಗಿದೆ. ಇದೇ ರೀತಿಯಾಗಿ ಅವರು ತುಂಬಾ ಕ್ರೂರಿಯು ಆಗಬಹುದು. ಯಾಕೆಂದರೆ ಇವರು ನಿಮ್ಮನ್ನು ದ್ವೇಷಿಸಲು ಆರಂಭಿಸಿದರೆ ಆಗ ತುಂಬಾ ಕ್ರೂರಿಯಾಗುವರು. ನೀವು ಅವರಿಗೆ ನೋವುಂಟು ಮಾಡಿದ ವೇಳೆ ಅವರು ತುಂಬಾ ಗೊಂದಲದ ಪ್ರತಿಕ್ರಿಯೆ ನೀಡುವರು. ಆದರೆ ಒಮ್ಮೆ ನೀವು ಅವರ ನಿಜವಾದ ಗೆಳೆಯ ಅಲ್ಲವೆಂದು ತಿಳಿದ ಬಳಿಕ ಅವರು ತಮ್ಮ ಕುಟುಕುವ ಸ್ವಭಾವನ್ನು ಬಳಸಿಕೊಂಡು ನಿಮ್ಮ ಘನತೆ ಜತೆಗೆ ಆಟವಾಡಬಹುದು.

ಕರ್ಕಾಟಕ

ಕರ್ಕಾಟಕ

ದ್ವೇಷದ ಅಗ್ನಿಯು ಅವರ ಹೃದಯದಿಂದ ಹಾಗೆ ಸುಮ್ಮನೆ ತಣಿಯದು. ನಿಮ್ಮ ದೌರ್ಬಲ್ಯಗಳನ್ನು ಅರಿತುಕೊಂಡು ಅದರ ವಿರುದ್ಧ ಕೆಲಸ ಮಾಡಲು ಇದು ಅವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ರಾಶಿಯವರು ನಿಮ್ಮನ್ನು ನಿರಂತರವಾಗಿ ಕಾಡುತ್ತಲೇ ಇರುವರು ಮತ್ತು ಅಷ್ಟು ಸುಲಭವಾಗಿ ನಿಮ್ಮನ್ನು ಮರೆತು ಬಿಡುವುದಿಲ್ಲ. ಇದರಿಂದ ಕರ್ಕಾಟಕ ರಾಶಿಯವರ ಜತೆಗೆ ದ್ವೇಷ ಕಟ್ಟಿಕೊಳ್ಳುವ ಮೊದಲು ನೀವು ಚೆನ್ನಾಗಿ ಆಲೋಚನೆ ಮಾಡಿಕೊಳ್ಳಿ.

 ಮಕರ

ಮಕರ

ಮಕರ ರಾಶಿಯವರು ಹಾಗೆ ಬಂದು ನಿಮಗೆ ಯಾವಾಗಲೂ ತೊಂದರೆ ನೀಡುವುದಿಲ್ಲ. ಯಾಕೆಂದರೆ ವೃತ್ತಿ ಬಗ್ಗೆ ಹೆಚ್ಚಿನ ಗಮನ ನೀಡಿರುವಂತಹ ಇವರು ತಮ್ಮ ಜೀವನದಲ್ಲೇ ಮುಳುಗಿ ಹೋಗಿರುವರು. ಅದಾಗ್ಯೂ, ತಮ್ಮ ದಾರಿಗೆ ಅಡ್ಡ ಬಂದು ಯಾವುದೇ ರೀತಿಯ ಕಿರುಕುಳವು ಇವರಿಗೆ ಸಿಕ್ಕಿದರೆ ಆಗ ಇವರು ತಮ್ಮ ಮಿತಿಯನ್ನು ದಾಟಿಕೊಂಡು ಬಂದು ಎಲ್ಲಾ ರೀತಿಯಲ್ಲಿ ನಿಮ್ಮನ್ನು ಕಾಡುವರು.

ಮಕರ

ಮಕರ

ಇವರು ತಮ್ಮ ವಿರುದ್ಧ ದ್ವೇಷ ಕಟ್ಟಿಕೊಳ್ಳುವವರ ಬಗ್ಗೆ ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ. ಇದರಿಂದಾಗಿ ಇವರ ಜೀವನದಲ್ಲಿ ನೀವು ಮೂಗು ತೂರಿಸಲು ಹೋಗದೆ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡುವುದು ತುಂಬಾ ಒಲಿತು.

ಸಿಂಹ

ಸಿಂಹ

ತುಂಬಾ ಜನಪ್ರಿಯ ರಾಶಿಯಾಗಿರುವಂತಹ ಸಿಂಹ ರಾಶಿಯವರು ನಿಮ್ಮನ್ನು ಅವಮಾನ ಮಾಡಿ ಕರ್ಕಾಟಕ ರಾಶಿಯವರಂತೆ ಕುಟುಕುವರು. ತುಂಬಾ ಸೂಕ್ಷ್ಮವಾಗಿರುವಂತಹ ಕರ್ಕಾಟಕ ರಾಶಿಯವರು ತಮ್ಮ ಮನಸ್ಸಿನಲ್ಲಿನ ಭೀತಿಯಿಂದಾಗಿ ತುಂಬಾ ತೀವ್ರ ಗತಿಗೆ ತಲುಪಬಹುದಾದ ಪರಿಸ್ಥಿತಿಯಿಂದ ದೂರ ಉಳಿಯುವರು.

ಸಿಂಹ

ಸಿಂಹ

ಆದರೆ ಸಿಂಹ ರಾಶಿಯವರು ತುಂಬಾ ಲೆಕ್ಕಾಚಾರದ ವ್ಯಕ್ತಿಗಳು ಆಗಿರುವರು. ಇವರು ತುಂಬಾ ಸುಲಭವಾಗಿ ಗುರಿಯನ್ನು ಹುಡುಕುವರು ಮತ್ತು ದಾಳಿ ಮಾಡುವರು. ಇದರಿಂದಾಗಿ ಇವರು ತಮ್ಮ ಅಧಿಕಾರದ ಪ್ರವೃತ್ತಿಯನ್ನು ತುಂಬಾ ಬಲಿಷ್ಠವಾಗಿಟ್ಟು ಕೊಳ್ಳುವರು.

Most Read:2019ರಲ್ಲಿ ಮೂರು ರಾಶಿಯವರು ವೃತ್ತಿ ಜೀವನದಲ್ಲಿ ಸ್ಟಾರ್ ರೀತಿಯಲ್ಲಿ ಯಶಸ್ಸನ್ನು ಕಾಣುವರು

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಇದರಲ್ಲಿ ಸಂಶಯವೇ ಬೇಡ. ವೃಶ್ಚಿಕ ರಾಶಿಯವರು ಎಲ್ಲಾ ರೀತಿಯ ಗುಣಗಳ ಸಮ್ಮಿಶ್ರಣವಾಗಿದೆ. ಕ್ರೂರತೆ ವಿಚಾರ ಬಂದಾಗ ವೃಶ್ಚಿಕ ರಾಶಿಯವರು ಖಂಡಿತವಾಗಿಯೂ ಅಲ್ಲಿರುವರು. ಇವರು ತುಂಬಾ ಕ್ರೋಧಗೊಂಡಾಗ ನಿಮ್ಮ ಘನತೆ ಬಗ್ಗೆ ಯಾವುದೇ ಆಲೋಚನೆ ಮಾಡದೆ ನಿಮ್ಮ ಮುಖಕ್ಕೆ ಹೊಡೆದಂತೆ ಅವಮಾನ ಮಾಡುವರು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ತಮಗೆ ನೋವುಂಟು ಮಾಡುವ ಜನರ ಬಗ್ಗೆ ಇವರು ಯಾವುದೇ ಕರುಣೆ ತೋರುವುದಿಲ್ಲ. ಇಂತಹ ಸಮಯದಲ್ಲಿ ಇವರು ನಿಮ್ಮ ಮೌಲ್ಯ ಮತ್ತು ಉದ್ದೇಶದ ಮೇಲೆ ಕೂಡ ದಾಳಿ ಮಾಡಬಹುದು. ಈ ಕಾರಣದಿಂದಾಗಿಯಾಗಿಯೇ ಎಲ್ಲರು ವೃಶ್ಚಿಕ ರಾಶಿಯವರನ್ನು ಯಾಕೆ ಇಷ್ಟಪಡುವುದಿಲ್ಲ ಎನ್ನುವುದು ತಿಳಿಯುತ್ತದೆ. ಅದಾಗ್ಯೂ, ಕೆಲವೊಂದು ಸಂದರ್ಭಗಳಲ್ಲಿ ಇವರ ಪ್ರೀತಿ ಹಾಗೂ ಆರೈಕೆಯು ಅತಿಯಾಗಿ ಹರಿದು ಬರಬಹುದು.

English summary

Zodiac Signs Known To Be The Most Cruel

In this world full of diversities, it is also reflected in the way people have different behaviours and ways of dealing with different situations. While love, care, respect, hatred and anger, all these emotions are inherent in nature, the proportion of one might be a little more in a person. In this case, one's zodiac sign is the true mirror to reflect his ways.
X
Desktop Bottom Promotion