Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ನಿಮ್ಮ ವ್ಯಕ್ತಿತ್ವದ ಇನ್ನೊಂದು 'ಕರಾಳ ಮುಖ' ತೋರ್ಪಡಿಸುವ ರಾಶಿಚಕ್ರಗಳು
ಪ್ರತಿ ರಾಶಿಫಲದ ವ್ಯಕ್ತಿಗಳಲ್ಲಿಯೂ ಕ್ರೂರತ್ವದ ಒಂದು ಮುಖವಿದ್ದೇ ಇರುತ್ತದೆ ಹಾಗೂ ಕೆಲವು ಸಂಗತಿಗಳು ಈ ಮುಖವನ್ನು ಅನಾವರಣಗೊಳಿಸುತ್ತವೆ. ಈ ಸಂಗತಿಗಳನ್ನು ಹೆಚ್ಚಿನವರು ಮುಕ್ತವಾಗಿ ಪ್ರಕಟಿಸಬಯಸುವುದಿಲ್ಲ ಅಥವಾ ಈ ಬಗ್ಗೆ ಓದಿ ತಿಳಿದುಕೊಳ್ಳಲೂ ಇಚ್ಛಿಸುವುದಿಲ್ಲ.
ಆದರೆ ಒಂದು ವೇಳೆ ನಿಮಗೆ ನಿಮ್ಮ ಕ್ರೂರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವ ಹಂಬಲವಿದ್ದರೆ ಈ ಲೇಖನದಲ್ಲಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸಲಾಗಿದೆ. ಕೆಲವೊಮ್ಮೆ ಕೆಲವು ವ್ಯಕ್ತಿಗಳ ಈ ಅವ್ಯಕ್ತ ಗುಣ ಅವರಿಗೆ ಅರಿವೇ ಇಲ್ಲದೇ ಯಾವುದೋ ಸಂಧರ್ಭವೊಂದರಲ್ಲಿ ವಿಜೃಂಭಿಸಿ ಅನಾಹುತಕ್ಕೆ ಕಾರಣವಾಗಬಹುದು. ಒಂದು ವೇಳೆ ಈ ಬಗ್ಗೆ ನಿಮಗೆ ಮೊದಲೇ ತಿಳಿದಿದ್ದರೆ ಈ ಸಂದರ್ಭಗಳಲ್ಲಿ ಸೂಕ್ತವಾದ ಎಚ್ಚರಿಕೆ ವಹಿಸುವ ಮೂಲಕ ಅನಾಹುತವನ್ನು ತಡೆಗಟ್ಟಬಹುದು. ಬನ್ನಿ, ನಿಮ್ಮ ಪ್ರಾಮಾಣಿಕತೆಗೇ ಕಳಂಕವಾಗಬಲ್ಲ ನಿಮ್ಮ ಕ್ರೂರವ್ಯಕ್ತಿತ್ವವನ್ನು ನಿಮ್ಮ ರಾಶಿಫಲ ಹೇಗೆ ವಿವರಿಸುತ್ತದೆ ಎಂಬುದನ್ನು ನೋಡೋಣ...

ಮೇಷ: 28 ಮಾರ್ಚ್ -20 ಏಪ್ರಿಲ್
ನೀವು ಸಾಮಾನ್ಯವಾಗಿ ಅವ್ಯವಸ್ಥಿತರಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಈ ಅವ್ಯವಸ್ಥೆ ಸಾಮಾನ್ಯವಾಗಿ ಎಲ್ಲೆಡೆ ಇರುತ್ತದೆ ಹಾಗೂ ನಿಮ್ಮೊಂದಿಗೆ ಒಡನಾಟದಲ್ಲಿರುವವರಿಗೆ ನಿಮ್ಮ ಈ ಅವ್ಯವಸ್ಥೆ ಸಾಮಾನ್ಯವಾಗಿ ಕಿರಿಕಿರಿಯ ವಿಷಯವಾಗಿರುತ್ತದೆ.

ವೃಷಭ: 21 ಏಪ್ರಿಲ್ -21 ಮೇ
ಕೆಲ ಸಂದರ್ಭದಲ್ಲಿ ನೀವು ವಿಪರೀತ ಹಠಮಾರಿಗಳೂ ಅಹಂಭಾವವುಳ್ಳವರೂ ಆಗಿರುತ್ತೀರಿ. ನಿಮ್ಮ ಈ ಗುಣವನ್ನು ಅರಿತವರು ನಿಮ್ಮೊಂದಿಗೆ ವಾದಕ್ಕಿಳಿಯದೇ ಇರುವುದನ್ನು ನೀವು ನಿಮ್ಮ ಜಯವೆಂದು ಭಾವಿಸುತ್ತೀರಿ. ವಾಸ್ತವವಾಗಿ ನಿಮ್ಮೊಂದಿಗೆ ವಾದಿಸಿ ಯಾವುದೇ ಪ್ರಯೋಜನವಿಲ್ಲ ಎಂಬ ಭಾವನೆಯಿಂದಲೇ ಅವರು ಸುಮ್ಮನಿದ್ದಾರೆಯೇ ವಿನಃ ವಾಸ್ತವವಾಗಿ ನಿಮ್ಮಿಂದ ಅವರು ದೂರವಾಗಿದ್ದಾರೆ!

ಮಿಥುನ: ಮೇ 21 ಜೂನ್ 20
ಎಲ್ಲಾ ರಾಶಿಗಳಲ್ಲಿಯೀ ಈ ರಾಶಿಯ ವ್ಯಕ್ತಿಗಳು ಅತಿ ಹೆಚ್ಚು ಗೊಂದಲದಲ್ಲಿರುತ್ತಾರೆ. ಇವರು ಗೊಂದರಲ್ಲಿರುವುದು ಮಾತ್ರವಲ್ಲ, ಇತರರನ್ನೂ ಗೊಂದಲಕ್ಕೀಡು ಮಾಡುತ್ತಾರೆ. ನಿಮ್ಮ ಜೀವನ ಹಾಗೂ ನಿರ್ಧಾರಗಳ ಕುರಿತಾಗಿ ನಿಮಗೆ ಹೆಚ್ಚಿನ ಹಿಡಿತದ ಅವಶ್ಯಕತೆ ಇದೆ.

ಕಟಕ: ಜೂನ್ 21-ಜುಲೈ 22
ನಿಮ್ಮ ಅಸುರಕ್ಷತಾ ಭಾವನೆಯೇ ನಿಮ್ಮ ಅತಿ ದೊಡ್ಡ ಶತ್ರುವಾಗಿದೆ. ಒಂದು ವೇಳೆ ನೀವು ಈ ಭಾವನೆಯನ್ನು ಬದಲಿಸಿಕೊಳ್ಳದೇ ಇದ್ದರೆ ಈ ಗುಣವೇ ನಿಮ್ಮನ್ನು ಹಲವು ತೊಂದರೆಗಳಿಗೆ ಈಡು ಮಾಡುತ್ತದೆ. ಹೆಚ್ಚಿನ ಸಮಯದಲ್ಲಿ ನೀವು ಇಲ್ಲದ ತೊಂದರೆಯನ್ನೇ ಕಲ್ಪಿಸಿಕೊಂಡು ಬವಣೆಗೆ ಒಳಪಡುವಂತಾಗುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23
ಈ ವ್ಯಕ್ತಿಗಳಿಗೆ ಅವರ ಅಹಂಭಾವವೇ ದೊಡ್ಡ ಶತ್ರುವಾಗಿದೆ. ನಿಮ್ಮ ಸುತ್ತಮುತ್ತಲಿನವರೊಂದಿಗೆ ನೀವು ಒರಟಾಗಿ ನಡೆದುಕೊಳ್ಳುವುದನ್ನು ನಿಲ್ಲಿಸದೇ ಅವರ ಮನವನ್ನು ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಅಹಂಭಾವಕ್ಕೂ ಮೀರಿದ ವಿಷಯಗಳು ಈ ಜಗತ್ತಿನಲ್ಲಿವೆ ಎಂದು ಅರಿಯಿರಿ.

ಕನ್ಯಾ:
ಈ ರಾಶಿಯ ವ್ಯಕ್ತಿಗಳು ತಾವು ಮಾತ್ರ ಪರಿಪೂರ್ಣರು, ಉಳಿದವರೆಲ್ಲಾ ಅವಿವೇಕಿಗಳು ಎಂಬ ದುಷ್ಟ ಮನೋಭಾವ ಹೊಂದಿರುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಇತರರನ್ನು ಟೀಕಿಸುವುದೇ ಇವರ ಒಂದು ಕೆಲಸವಾಗಿದ್ದು ಈ ಗುಣವೇ ನಿಮ್ಮ ಒಳ್ಳೆಯ ಗುಣಗಳನ್ನೂ ಮಸುಕಾಗಿಸುತ್ತದೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ನಿಮ್ಮ ತೊಂದರೆಗಳನ್ನೇ ಎಲ್ಲರ ಬಳಿ ಕೇಳಿ ಇದಕ್ಕೆ ಪರಿಹಾರ ಒದಗಿಸಲು ಅವಲತ್ತುಕೊಳ್ಳುವ ಗುಣ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಇತರರ ಬಗ್ಗೆ ನಿಮಗೂ ಕೆಲವು ಹೊಣೆಗಾರಿಕೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಗುಣವೇ ನಿಮ್ಮಿಂದ ಎಲ್ಲರನ್ನೂ ದೂರವಾಗಿಸುತ್ತದೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಯ ಜನರೇಕೆ ಇಷ್ಟೊಂದು ಅಹಂಭಾವ ಹೊಂದಿರುತ್ತಾರೆ ಗೊತ್ತೇ? ನಿಮ್ಮಲ್ಲಿ ನಿಜವಾದ ಪ್ರತಿಭೆ ಇಲ್ಲದೇ ಹೋದರೂ ನಿಮ್ಮಲ್ಲಿ ಈ ಪ್ರತಿಭೆ ಇದೆ ಎಂದು ಇತರರಿಗೆ ಮನವರಿಕೆ ಮಾಡಿಕೊಡುವ ನಿಮ್ಮ ಪ್ರಯತ್ನಗಳೇ ನಿಮ್ಮವರನ್ನು ನಿಮ್ಮಿಂದ ದೂರವಾಗಿಸುತ್ತವೆ.

ಧನು: 23 ನವೆಂಬರ್ -22 ಡಿಸೆಂಬರ್
ನೀವು ನಿಮ್ಮ ಬಗ್ಗೆ ಅತಿಹೆಚ್ಚು ವಿಶ್ವಾಸಿಗಳಾಗಿರುವ ಅಗತ್ಯವಿಲ್ಲ. ಸದಾ ನೀವೇ ಸರಿ ಎಂದು ಸಾಧಿಸಲು ಯತ್ನಿಸುವ ನಿಮ್ಮ ಪ್ರಯತ್ನ ನಿಮ್ಮ ಹಿನ್ನಡೆಗೆ ಕಾರಣವಾಗಿದೆ. ಜೀವನವನ್ನು ಅರಿತುಕೊಳ್ಳಿ, ಇತರರೂ ಸರಿ ಎಂಬ ಧನಾತ್ಮಕ ಧೋರಣೆ ಅನುಸರಿಸಿ.

ಮಕರ: ಡಿಸೆಂಬರ್ 23-ಜನವರಿ 20
ನೀವು ಎಲ್ಲಾ ವಿಷಯಗಳನ್ನು ಅಗತ್ಯಕ್ಕೂ ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಮತ್ತು ಈ ಬಗ್ಗೆ ಅತಿ ಹೆಚ್ಚೇ ಶಿಸ್ತಿನ ಕ್ರಮ ಅನುಸರಿಸುವುದು ಇತರರಿಗೆ ಕಿರಿಕಿರಿಯಾಗಬಹುದು. ನಿಮ್ಮ ಮನೋಭಾವವೂ ಪರಿಸ್ಥಿತಿಗನುಗುಣವಾಗಿ ಬದಲಾಗುತ್ತಿರುತ್ತದೆ. ಇದನ್ನು ನಿಯಂತ್ರಿಸದೇ ಇದ್ದರೆ ಈ ಗುಣ ನಿಮ್ಮನ್ನು ದೊಡ್ಡ ಕಷ್ಟಕ್ಕೆ ಗುರಿಯಾಗಿಸಬಹುದು.

ಕುಂಭ: ಜನವರಿ 20-ಫೆಬ್ರವರಿ 18
ನಿಮ್ಮ ಬಗ್ಗೆ ಇತರರು ಭರವಸೆ ಇಟ್ಟುಕೊಳ್ಳದೇ ಇರಲು ನಿಮ್ಮ ಭಾವನೆಗಳು ಮತ್ತು ಯೋಚನೆಗಳ ವಿರುದ್ದ ನೀವು ಹಿಡಿತವಿರಿಸಿಕೊಳ್ಳದಿರುವುದೇ ಆಗಿದೆ. ಆದ್ದರಿಂದ ನಿಮ್ಮ ಯೋಚನೆಗಳು ಮತ್ತು ನಿರ್ಧಾರಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದು ಅಗತ್ಯವಾಗಿದೆ.

ಮೀನ: 20 ಫೆಬ್ರವರಿ -20 ಮಾರ್ಚ್
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ತಾವು ಎದುರಿಸುವ ಎಲ್ಲಾ ವಿಷಯಗಳ ಬಗ್ಗೆ ಕೊರತೆಗಳನ್ನೇ ಮುಂದಿಟ್ಟು ಗೋಳಾಡುತ್ತಾರೆ. ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳು ಈ ಚಿಕ್ಕ ಪುಟ್ಟ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳದೇ ನೀವು ಮಾತ್ರ ಇದರ ಬಗ್ಗೆ ವರಾತ ಹಚ್ಚುವುದನ್ನು ಯಾರೂ ಇಷ್ಟಪಡುವುದಿಲ್ಲ.



Click it and Unblock the Notifications