For Quick Alerts
ALLOW NOTIFICATIONS  
For Daily Alerts

  2018ರ ರಾಶಿಫಲ: ಅದೃಷ್ಟದ ಸಾಲಿನಲ್ಲಿ ರಾಶಿಚಕ್ರದ ಪರಿಚಯ...

  By Deepu
  |

  ವ್ಯಕ್ತಿ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟು ದುಡಿಯುತ್ತಾನೆ ಅಥವಾ ನಿಷ್ಠೆಯಿಂದ ಇದ್ದಾನೆ ಎಂದಾದರೂ ಅವನ ಅದೃಷ್ಟ ಅವನ ಜೊತೆ ಇರಬೇಕು ಆಗಲೇ ಯಶಸ್ಸು ಎನ್ನುವ ತುದಿಯನ್ನು ಮುಟ್ಟಲು ಸಾಧ್ಯ. ಅದೃಷ್ಟ ಎನ್ನುವುದು ಇಲ್ಲ ಎಂದಾದರೆ ಪರಿಶ್ರಮ ಎಷ್ಟೇ ಇದ್ದರೂ ಸಾಧನೆ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುವುದಿಲ್ಲ.

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿವರ್ಷವೂ ಗ್ರಹಗತಿಗಳ ಸಂಚಾರ ಬದಲಾವಣೆಯನ್ನು ಕಾಣುತ್ತಿರುತ್ತವೆ. ಆ ಬದಲಾವಣೆಗಳು ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಈ ಪರಿವರ್ತನೆಗಳ ಆಧಾರದ ಮೇಲೆ ವ್ಯಕ್ತಿಯ ಅದೃಷ್ಟ ನಿಂತಿರುವುದು ಎಂದು ಹೇಳಲಾಗುತ್ತದೆ. 2018ರಲ್ಲಿ ರಾಶಿಚಕ್ರಗಳ ಅದೃಷ್ಟದ ಬದಲಾವಣೆ ವಿವಿಧ ಮಜಲುಗಳನ್ನು ಪಡೆದುಕೊಂಡಿದೆ. ಇದರಿಂದ ಕೆಲವು ರಾಶಿ ಚಕ್ರಗಳು ಅದೃಷ್ಟದ ದಾರಿಯಲ್ಲಿ ಮುಂದೆ ನಿಂತಿವೆ. ಇನ್ನೂ ಕಲವು ಹಿಂದೆ ಉಳಿದಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಮುಂದೆ ನಿಂತಿರುವ ಅದೃಷ್ಟವಂತ ರಾಶಿಗಳು ಯಾವವು? ಎನ್ನುವುದನ್ನುತಿಳಿದುಕೊಳ್ಳಬೇಕು ಎನ್ನುವ ಹವಣಿಕೆಯಲ್ಲಿದ್ದರೆ ಈ ಮುಂದಿರುವ ರಾಶಿಚಕ್ರದ ವಿವರಣೆಯನ್ನು ಓದಿ... 

  ಮಿಥುನ: ಮೇ 22-ಜೂನ್21

  ಮಿಥುನ: ಮೇ 22-ಜೂನ್21

  ನಿಮ್ಮ ಸಾಧ್ಯತೆ ಮತ್ತು ಸಾಮರ್ಥ್ಯ ಎರಡು ಪ್ರಕಾಶ ಮಾನವಾಗಿದೆ. ಈ ಎರಡು ವಿಚಾರದಿಂದಲೂ ನೀವು ಈ ವರ್ಷ ಅನೇಕ ವಿಚಾರದಲ್ಲಿ ಯಶಸ್ಸನ್ನು ಪಡೆದುಕೊಳ್ಳುವಿರಿ. 2018 ನೀವು ಬಯಸಿದ ಎಲ್ಲಾ ವಿಚಾರಗಳನ್ನು ಸಾಕಾರ ಗೊಳಿಸುತ್ತದೆ. ಜೊತೆಗೆ ಸಂತೋಷವನ್ನು ಪಡೆದುಕೊಳ್ಳುವ ವರ್ಷ ಇದು ಎಂದು ಹೇಳಬಹುದು. ಇನ್ನು ಈ ಹೊಸ ವರುಷದಲ್ಲಿ ಈ ರಾಶಿಚಕ್ರ ಚಿಹ್ನೆ ಪ್ರೀತಿಯ ಪರವಾಗಿ ಇರುತ್ತದೆ. ಸೋಮವಾರ, ಬುಧವಾರ, ಶನಿವಾರ ಅಥವಾ ಭಾನುವಾರದಂದು ತಮ್ಮ ಪ್ರೀತಿಯನ್ನು ಕೇಳಬಹುದು. ಇನ್ನು ಇಲ್ಲಿ ಗಮನಿಸಬೇಕಾದ ಸಂಗತಿಗಳೇನೆಂದರೆ ಇವರು ಸದಾ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎನ್ನುವ ಭಯದಲ್ಲಿಯೇ ಇರುತ್ತಾರೆ. ಇವರು ಈ ಭಯದಿಂದ ಹೊರಬರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಹೊಸ ವರ್ಷದಲ್ಲಿ ಕಾರ್ಯವನ್ನು ಕೈಗೊಳ್ಳಲು ಅಡಚಣೆ ಉಂಟಾಗಬಹುದು. ಅಲ್ಲದೆ 2018ರಲ್ಲಿ ಪರಿಪೂರ್ಣತೆ ಪಡೆದುಕೊಳ್ಳಬೇಕೆಂದರೆ ಮೊದಲು ಭಯದಿಂದ ಹೊರ ಬರಬೇಕು.

  ತುಲಾ: ಸೆಪ್ಟೆಂಬರ್ 23- ಅಕ್ಟೋಬರ್ 22

  ತುಲಾ: ಸೆಪ್ಟೆಂಬರ್ 23- ಅಕ್ಟೋಬರ್ 22

  ಈ ರಾಶಿಚಕ್ರದವರು ಅತ್ಯಂತ ಅದೃಷ್ಟ ಹೊಂದಿದ ವ್ಯಕ್ತಿಗಳ ಸಾಲಲ್ಲಿ ಎರಡನೆ ಸ್ಥಾನ ಪಡೆದುಕೊಳ್ಳುತ್ತಾರೆ ಎನ್ನಬಹುದು. ಈ ಹಿಂದಿನ ವರ್ಷದಲ್ಲಿ ಅಂದರೆ 2017ರಲ್ಲಿ ಅಷ್ಟಾಗಿ ಅದೃಷ್ಟವನ್ನು ಹೊಂದಿರಲಿಲ್ಲ ಎಂತಲೇ ಹೇಳಬಹುದು. ಆದರೆ 2018 ನಿಮಗೆ ಅತ್ಯಂತ ಅದೃಷ್ಟಕರವಾದ ವರ್ಷವಾಗಲಿದೆ. ವರ್ಷ ಪೂರ್ತಿ ಸಂತೋಷ ಕರವಾದ ಜೀವನವನ್ನು ಅನುಭವಿಸಲಿದ್ದೀರಿ. ನಿಮ್ಮ ನಿಷ್ಠಾವಂತ ವರ್ತನೆ ನಿಮಗೆ ಪೂರಕವಾದ ಫಲಿತಾಂಶವನ್ನೇ ನೀಡಲಿದೆ. ಇನ್ನು ಈ ಹೊಸ ವರ್ಷದಲ್ಲಿ ಈ ರಾಶಿಚಕ್ರವು ಸಾಕಷ್ಟು ಒತ್ತಡ ಮತ್ತು ಸವಾಲುಗಳನ್ನು ಎದುರಿಸಲಿದೆ. ಆದರೆ ಅವರು ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಅವರು 100% ರಷ್ಟು ಲಾಭದಾಯಕ ಮತ್ತು ಪೂರೈಸುವ ದಿನಗಳನ್ನೂ ಹೊಂದಿರುತ್ತಾರೆ. ಈ ಹೊಸ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಶನಿವಾರ ಮತ್ತು ಭಾನುವಾರಗಳು ಅದೃಷ್ಟದ ದಿನಗಳು. ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿ ಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. 2018ರಲ್ಲಿ ಇವರು ಬೇರೆಯವರ ಸಂತೋಷಕ್ಕಾಗಿ ಮಾಡುವ ಆಲೋಚನೆಗಳನ್ನು ನಿಲ್ಲಿಸಿ, ತಮ್ಮ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗುವುದು.

  ಧನು: ನವೆಂಬರ್22-ಡಿಸೆಂಬರ್21

  ಧನು: ನವೆಂಬರ್22-ಡಿಸೆಂಬರ್21

  2017 ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ ಎಂದು ಹೇಳಬಹುದು. ಅಂತೆಯೇ 2018ರಲ್ಲಿ ನಿಮ್ಮ ಅದೃಷ್ಟ ನಿಮಗೆ ಮಹತ್ತರವಾದ ಖುಷಿಯನ್ನು ತಂದುಕೊಡುವುದು. ಉತ್ತಮ ಕೆಲಸದ ರೂಪದಲ್ಲಿ, ಪ್ರೀತಿ ವಿಚಾರ, ಸಂಬಂಧಗಳಲ್ಲಿ ಗೌರವ ಹಾಗೂ ಪ್ರಶಂಸೆಗಳು ನಿಮ್ಮನ್ನು ಅರಸಿ ಬರುತ್ತವೆ. ಇನ್ನು 2018ರಲ್ಲಿ ಇವರ ಈ ಯೋಚನೆಗೆ ಅತ್ಯಂತ ಹೆಚ್ಚು ಅವಕಾಶಗಳು ಹಾಗೂ ಯಶಸ್ಸು ದೊರೆಯುವುದು. ಇವರ ಸಾಧನೆ ಅಥವಾ ಗುರಿಯನ್ನು ತಲುಪಲು ಯಾವುದೇ ಅಡೆತಡೆಗಳು ಅಡ್ಡವಾಗದೆ ಇರುವುದರಿಂದ ಬಹು ಬೇಗ ನಿಮ್ಮ ಕನಸು ನನಸಾಗುವುದು. ಲೆಕ್ಕವಿಲ್ಲದ ಹೊಸ ಹೊಸ ಅವಕಾಶಗಳು ಇವರ ಕಾಲ ಬಳಿ ಬರುವುದು. ಸ್ಥಿರತೆಯನ್ನು ಹೊಂದಿರುವ ಇವರು ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಧನು ರಾಶಿಯವರು ಈ ವರ್ಷ ತಮ್ಮ ಆತ್ಮ ಸಂಗಾತಿಯನ್ನು ಪಡೆದುಕೊಳ್ಳುವ ಒಂದು ವಿಶೇಷ ಅದೃಷ್ಟವನ್ನು ಪಡೆದುಕೊಂಡಿದ್ದಾರೆ. 2018ರ ಇವರ ಪ್ರೀತಿ ಅತ್ಯಂತ ದೊಡ್ಡ ಹಾಗೂ ಅದೃಷ್ಟದ ಚಿಹ್ನೆ ಎಮದು ಪರಿಗಣಿಸಬಹುದು. ಧನು ರಾಶಿಯವರು ವರ್ಷದ ಆರಂಭದಲ್ಲಿ ಪ್ರೀತಿಯ ಜೀವನವನ್ನು ಪಡೆಯಲು ಹಾಗೂ ಅನುಭವಿಸಲು ವಿಶೇಷ ತಯಾರಿ ಅಥವಾ ಹುಡುಕಾಟವನ್ನು ನಡೆಸಬಹುದು. ಈ ವಿಚಾರದಲ್ಲಿ ನಿಮಗೆ ಯಾವುದೇ ಅಡೆತಡೆಗಳು ಅಥವಾ ಒತ್ತಡಗಳು ಇರುವುದಿಲ್ಲ. ನೀವು ಅತ್ಯಂತ ಸಂತೋಷವನ್ನು ಪಡೆದುಕೊಂಡಿದ್ದೀರಿ ಎನ್ನುವುದು ನಿಮಗೆ ಅರಿವಾಗುವುದು.

  ಸಿಂಹ: ಜುಲೈ23 -ಆಗಸ್ಟ್ 22

  ಸಿಂಹ: ಜುಲೈ23 -ಆಗಸ್ಟ್ 22

  2017ರಲ್ಲಿ ನೀವು ಬಹಳಷ್ಟು ವಿಚಾರದಲ್ಲಿ ವಂಚಿತರಾಗಿದ್ದಿರಿ. ಅಲ್ಲದೆ ಕೆಲವು ವ್ಯಕ್ತಿ ಹಾಗೂ ಅದೃಷ್ಟವನ್ನು ಕಳೆದುಕೊಂಡಿದ್ದೀರಿ ಎಂದೇ ಹೇಳಬಹುದು. ಆದರೆ 2018 ನಿಮಗೆ ಅದೃಷ್ಟದ ವರ್ಷ. ಕಷ್ಟದಿಂದ ಚೇತರಿಕೆಯನ್ನು ಈ ವರ್ಷ ಕಂಡುಕೊಳ್ಳುವಿರಿ. ಕೆಲವು ಆಸೆ ಆಕಾಂಕ್ಷೆಗಳು ನಿಮ್ಮ ಆಸೆಯಂತೆ ನೆರವೇರುವುದು. ಇವರಿಗೆ 2018 ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವರ್ಷ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವರ್ಷ ಇವರ ಹಾದಿಯಲ್ಲಿ ಗೆಲುವು ಸುಲಭವಾಗಿ ದೊರೆಯುವುದು. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗೆಯೇ ಈ ರಾಶಿಯವರೂ ಪ್ರತಿಬಾರಿಯೂ ತಪ್ಪನ್ನು ಮಾಡುತ್ತಾರೆ. ಇದರೊಟ್ಟಿಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಕೈಗೂಡಿ ಬರುವುದು. ವೈಯಕ್ತಿಕ ಮತ್ತು ದಾಂಪತ್ಯದ ಜೀವನವೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ.

  ಮೇಷ: ಮಾರ್ಚ್21-ಏಪ್ರಿಲ್20

  ಮೇಷ: ಮಾರ್ಚ್21-ಏಪ್ರಿಲ್20

  ನಕಾರಾತ್ಮಕ ವಿಚಾರದಿಂದ ಹೊರಬರಲು ಈ ವರ್ಷ ನಿಮಗೆ ಅನುಕೂಲಕರವಾಗಿದೆ. 2018 ನಿಮಗೆ ಸಂತೋಷದ ಕೀಲಿಯನ್ನು ಕಾಣಿಸಿಕೊಡುತ್ತದೆ. ಹಾಗಂತ ಒಂದೇ ರಾತ್ರಿಯಲ್ಲಿ ನೀವು ಅದೃಷ್ಟವನ್ನು ಬದಲಿಸಲು ಸಾಧ್ಯವಿಲ್ಲ. ನಿಧಾನವಾಗಿ ಪಡೆದುಕೊಳ್ಳುವಿರಿ. ಬಹುತೇಕವಾಗಿ ಹೆಚ್ಚು ಅದೃಷ್ಟವನ್ನು ಪಡೆದುಕೊಳ್ಳಲಿರು ಈ ವರ್ಷ ನೀವು ಜೀವನದ ನಿಯಂತ್ರಣದ ಬಗ್ಗೆ ಅರಿಯುವಿರಿ. ಇನ್ನು ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ರಾಶಿಚಕ್ರಕ್ಕೆ ಅದೃಷ್ಟದ ದಿನಗಳು. ಈ ದಿನಗಳಲ್ಲಿ ಹೂಡಿಕೆ ಮಾಡುವ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಸದಾ ಗೆಲುವನ್ನು ಸಾಧಿಸುವ ಹವಣಿಕೆಯಲ್ಲಿರುತ್ತಾರೆ. ಇವರು ತಮ್ಮ ಮೊದಲನೇ ಸ್ಥಾನವನ್ನು ಬಿಟ್ಟು ಎರಡನೇ ಸ್ಥಾನದಲ್ಲಿ ನಿಲ್ಲಲು ಬಯಸುವುದಿಲ್ಲ. ಇವರು ಸದಾ ಸ್ಪರ್ಧಾತ್ಮಕ ಮನೋಭಾವದಲ್ಲಿಯೇ ಇರುತ್ತಾರೆ ಎನ್ನಬಹುದು. ಇವರು ಹೊಸ ವರುಷದಲ್ಲಿ ಅಂದರೆ 2018ರಲ್ಲಿ ಆರೋಗ್ಯಕರ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಸೂಕ್ತ ರೀತಿಯ ತಯಾರಿ ಮಾಡಿಕೊಳ್ಳಬೇಕು.

  ಕರ್ಕ: ಜೂನ್22-ಜುಲೈ22

  ಕರ್ಕ: ಜೂನ್22-ಜುಲೈ22

  ಕರ್ಕದವರ ಜೀವನದಲ್ಲಿ ಹೆಚ್ಚಿನ ಮೌಲ್ಯವು ವೃದ್ಧಿಯಾಗುತ್ತದೆ. ಜೀವನದಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ನೀವು ಪಡೆದುಕೊಳ್ಳಲು ಬಯಸುವಿರಿ.ಆದರೆ ಅದರಲ್ಲಿ ಕೆಲವೊಂದು ಮಾತ್ರ ನೆರವೇರುವುದು. ಕೆಲವು ಹಾಗೆ ಉಳಿಯುವುದು. ಹಾಗೇ ಉಳಿದ ವಿಚಾರವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಬದಲು ಅದಕ್ಕೆ ಆಧ್ಯತೆ ನೀಡುವುದನ್ನು ಕಲಿಯಿರಿ. ಆಗ ಅಷ್ಟು ಬೇಸರ ಉಂಟಾಗದು. ಇನ್ನು ಮಂಗಳವಾರ, ಶನಿವಾರ ಮತ್ತು ಭಾನುವಾರ ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟ ದಿನಗಳು. ಈ ರಾಶಿಚಕ್ರದ ಜನರು ತಮ್ಮ ಭಾವನೆಗಳಿಗೆ ಹೆಸರು ವಾಸಿಯಾಗಿದ್ದಾರೆ ಮತ್ತು ಕೆಲವೊಮ್ಮೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. 2018ರಲ್ಲಿ ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಭಾವನಾತ್ಮಕವಾಗಿ ಲಭ್ಯವಾಗುವಂತೆ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಸ್ವಲ್ಪ ಸಮಯದವರೆಗೆ ತಮ್ಮ ಅಸ್ತಿತ್ವವನ್ನು ಗಮನಹರಿಸಬೇಕು. ಅವರು ತಮ್ಮ ಜೀವನದಲ್ಲಿ ಕಳೆದುಹೋದ ಎಲ್ಲಾ ಸಂಬಂಧಗಳನ್ನೂ ಹೊರಬಿಟ್ಟು ಮುಂದೆ ಸಾಗಬೇಕಾಗುತ್ತದೆ.

  ಕನ್ಯಾ: ಆಗಸ್ಟ್ 23-ಸಪ್ಟೆಂಬರ್ 22

  ಕನ್ಯಾ: ಆಗಸ್ಟ್ 23-ಸಪ್ಟೆಂಬರ್ 22

  ಕನ್ಯಾರಾಶಿಯವರ ಪ್ರಮುಖ ಲಕ್ಷಣವೆಂದರೆ ಚಿತ್ತ ಮತ್ತು ವರ್ತನೆ. ಇವೆರಡರಲ್ಲೂ ತಮ್ಮ ಯೋಗಕ್ಷೇಮ ಹಾಗೂ ಸಂತೋಷವನ್ನು ಇವರು ಪ್ರತಿಬಿಂಬಿಸುತ್ತಾರೆ. ಇವರಿಗೆ 2018 ಕೆಲವು ವಿಚಾರದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡುತ್ತದೆ. ಇವರು ಸ್ಪರ್ಧೆಗೆ ಇಳಿದಾಗ ಸ್ಪರ್ಧೆಯ ಮೇಲೆ ಕೇಂದ್ರಿಕೃತವಾಗಿರಬೇಕು. ಆಗ ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಸಫಲರಾಗುವರು. ಇವರಿಗೆ ಈ ವರ್ಷದಲ್ಲಿ ಅದೃಷ್ಟದ ದಿನಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ. ಈ ರಾಶಿಚಕ್ರದವರ ಆಸೆಗೆ ಅಂತ್ಯ ಎನ್ನುವುದೇ ಇರುವುದಿಲ್ಲ. ಇವರು ತಮ್ಮ ಅಗತ್ಯತೆ ಮತ್ತು ಪ್ರಯತ್ನಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಈ ವರ್ಷ 2018ರಲ್ಲಿ ಕಲಿಯಬೇಕಾದದ್ದು ಹಾಗೂ ಸಾಧಿಸಬೇಕಾದ ಅನೇಕ ವಿಚಾರಗಳಿವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

  ಕುಂಭ: ಜನವರಿ21-ಫೆಬ್ರವರಿ 19

  ಕುಂಭ: ಜನವರಿ21-ಫೆಬ್ರವರಿ 19

  2017ರಲ್ಲಿ ಇವರು ಸಾಕಷ್ಟು ಸಕಾರಾತ್ಮಕ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ ಎನ್ನಬಹುದು. 2018ರಲ್ಲೂ ಸಹ ಮಧ್ಯಮ ಪ್ರಮಾಣದ ಅದೃಷ್ಟವನ್ನು ಪಡೆದುಕೊಳ್ಳುವಲ್ಲಿ ಸಫಲರಾಗುವಿರಿ. ವಿಚಾರಗಳಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯ ನಿರ್ಧಾರ ಹಾಗೂ ಅದರಲ್ಲಿ ಸಂತೋಷವನ್ನು ಕಂಡುಕೊಂಡರೆ ಅದೃಷ್ಟ ಇನ್ನಷ್ಟು ಖುಷಿಯನ್ನು ನೀಡುವುದು ಎನ್ನುವುದರಲ್ಲಿ ಸಂದೇಹವಿಲ್ಲ. ಸಾಮಾನ್ಯವಾಗಿ ಇವರು ಜೀವನದಲ್ಲಿ ಏರಿಳಿತದ ಪಾಲನ್ನು ಹೊಂದಿರುತ್ತಾರೆ. ಆದರೆ ಅದೃಷ್ಟದ ದಿನಗಳಲ್ಲಿ ಮಂಗಳವಾರ ಮತ್ತು ಶನಿವಾರಗಳು. ನಿಮ್ಮ ವಿಶೇಷ ಕೆಲಸ ಕಾರ್ಯಗಳನ್ನು ಈ ದಿನಗಳಲ್ಲಿ ಕೈಗೊಳ್ಳಬಹುದು. ಇವರಿಗೆ ಇತರರು ನೀಡಿದ ಭರವಸೆ ಹಾಗೂ ಮಾತುಗಳಿಂದ ಹೊರ ಬರಬೇಕಾದ ಅನಿವಾರ್ಯತೆಗಳಿವೆ. ಯಾರು ತಮ್ಮ ಮಾತಿಗೆ ಹಾಗೆಯೇ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎನ್ನುವುದನ್ನು ಅರಿಯಬೇಕು. ಇನ್ನು ಈ ಹೊಸ ವರುಷದಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರಬಾರದು ಎನ್ನುವುದನ್ನು ಅರಿಯಬೇಕಿದೆ.

  ಮಕರ: ಡಿಸೆಂಬರ್ 22-ಜನವರಿ 20

  ಮಕರ: ಡಿಸೆಂಬರ್ 22-ಜನವರಿ 20

  ಭವಿಷ್ಯದ ಬಗ್ಗೆ ಈ ರಾಶಿಯವರು ಅತಿಯಾಗಿ ಚಿಂತಿಸುತ್ತಾರೆ. ನಿಮ್ಮ ಹೊಸ ಚಿಂತನೆ ಹಾಗೂ ಕೆಲಸಗಳನ್ನು 2018ರಲ್ಲಿ ಪ್ರರಂಭಿಸಿದರೆ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವ್ಯಕ್ತಿಗಳು ಹೊಸ ವರ್ಷದಲ್ಲಿ ಅವರ ಬಹುನಿರೀಕ್ಷಿತ ಯಶಸ್ಸು ಮತ್ತು ಅಂಗೀಕಾರವನ್ನು ಪಡೆಯುತ್ತಾರೆ. ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟದ ದಿನಗಳು ಸೋಮವಾರ ಮತ್ತು ಭಾನುವಾರಗಳು. ಈ ರಾಶಿಯವರು ಬೇರೆಯವರು ಮಾಡಿರುವ ತಪ್ಪು ಹಾಗೂ ಅವರ ಸ್ಥಿತಿಯ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ತಮ್ಮ ಜೀವನದಲ್ಲಾದ ತೊಂದರೆ ಹಾಗೂ ಕಷ್ಟಗಳ ಬಗ್ಗೆ ಹೆಚ್ಚಿನ ಚಿಂತನೆಯನ್ನೇ ನಡೆಸುವುದಿಲ್ಲ. 2018ರಲ್ಲಿ ಇವರು ತಮ್ಮ ಸ್ಥಿತಿಗತಿಯ ಬಗ್ಗೆ ಚಿಂತನೆ ಹಾಗೂ ಅವುಗಳ ಹಿಡಿತಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಮಾನಸಿಕವಾಗಿ ಸಿದ್ಧತೆಯನ್ನು ನಡೆಸಿಕೊಳ್ಳಬೇಕು.

  ವೃಷಭ: ಏಪ್ರಿಲ್21- ಮೇ 21

  ವೃಷಭ: ಏಪ್ರಿಲ್21- ಮೇ 21

  ನಿಮ್ಮ ಅತೃಪ್ತಿಗೆ ಅಥವಾ ಸೋಲಿಗೆ ಇತರ ವ್ಯಕ್ತಿಗಳೇ ಕಾರಣ ಎನ್ನುವುದನ್ನು ಬಹು ಬೇಗ ತೋರಿಸಿಕೊಡುತ್ತೀರಿ. ನೀವು ಒಳ್ಳೆಯ ಹಾಗೂ ಧನಾತ್ಮಕ ಉದ್ದೇಶ ಹೊಂದಿರುವ ವ್ಯಕ್ತಿಗಳೇ ಆಗಿದ್ದರೂ ಸಹ ಕೆಲವೊಮ್ಮೆ ಇತರರನ್ನು ದೂಷಿಸುವಿರಿ. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಆಯ್ಕೆಯನ್ನು ನೀವು ಮಾಡಿಕೊಂಡರೆ ಮುನ್ನಡೆಯ ಜೀವನ ಸಾಗಿಸುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟದ ದಿನಗಳು ಬುಧವಾರ ಮತ್ತು ಗುರುವಾರ. ಇದು ಅವರಿಗೆ ಅಸಾಧಾರಣವಾಗಿ ಅದೃಷ್ಟ ಶಾಲಿಯಾಗಿದೆ. ವಾರದ ಈ ಎರಡು ದಿನಗಳಲ್ಲಿ ಮಾಡಿದ ಯಾವುದನ್ನಾದರೂ ಅವುಗಳು ಪ್ರತಿಫಲವನ್ನು ಪೂರೈಸುವಲ್ಲಿ ಪಡೆಯಬಹುದು. ಈ ರಾಶಿ ಚಕ್ರದವರು ಸರಿಪಡಿಸುವ ಅಭ್ಯಾಸವನ್ನು ಪಡೆದುಕೊಳ್ಳಬೇಕು. ಇವರು ಮಾಡುವ ತಪ್ಪಿನ ಬಗ್ಗೆಯೂ ಸೂಕ್ತ ರೀತಿಯ ಚಿಂತನೆ ನಡೆಸಬೇಕು. ಇವರು ಎಲ್ಲಾ ವಿಚಾರದಲ್ಲೂ, ಎಲ್ಲವೂ ಸರಿಯಾಗಿದೆ ಎಂದೇ ಚಿಂತಿಸುತ್ತಿರುತ್ತಾರೆ. 2018ಕ್ಕೆ ಸೂಕ್ತ ರೀತಿಯ ಗುರಿಯನ್ನು ಹೊಂದುವುದರ ಜೊತೆಗೆ ಅದು ಸುಲಭವಾಗಿ ನೆರವೇರುವಂತೆ ನೋಡಿಕೊಳ್ಳಬೇಕು.

  ವೃಶ್ಚಿಕ: ಅಕ್ಟೋಬರ್ 23- ನವೆಂಬರ್ 21

  ವೃಶ್ಚಿಕ: ಅಕ್ಟೋಬರ್ 23- ನವೆಂಬರ್ 21

  ನೀವು ಆಳವಾದ ಮತ್ತು ಗಾಢವಾದ ಭಾವನೆಯನ್ನು ಹೊಂದಿರುತ್ತೀರಿ. ದುರ್ಬಲತೆ ನಿಮ್ಮಲ್ಲಿ ಭಯವನ್ನು ಸೃಷ್ಟಿಸುತ್ತದೆ. 2018ರಲ್ಲಿ ತಕ್ಕ ಮಟ್ಟಿನ ಅದೃಷ್ಟವನ್ನು ಅನುಭವಿಸುವಿರಿ. ಜನರು ನಿಮ್ಮನ್ನು ಹೆಚ್ಚು ನಂಬುತ್ತಾರೆ. ಸೂಕ್ತ ನಿರ್ಧಾರ ಹಾಗೂ ಕಾರ್ಯವನ್ನು ಕೈಗೊಳ್ಳಬೇಕು. ಇವರಿಗೆ ಸೋಮವಾರ, ಶುಕ್ರವಾರ ಮತ್ತು ಭಾನುವಾರಗಳು ತಮ್ಮ ಅದೃಷ್ಟದ ದಿನಗಳಲ್ಲಿ ಅದನ್ನು ಮಾಡಬಹುದು. ಇನ್ನು ಇವರು ಸೂಕ್ತ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ತಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಂಡು ತಮ್ಮ ತನವನ್ನು ಕಳೆದು ಕೊಳ್ಳುತ್ತಾರೆ ಎನ್ನಬಹುದು. 2018ರಲ್ಲಿ ಇವರು ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವ ಪರಿಯನ್ನು ತಿಳಿಯಬೇಕಿದೆ. ಅದೊಂದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸೂಕ್ತವಾದ ವರ್ಷವಾಗಿದೆ ಎಂದು ಹೇಳಬಹುದು.

  ಮೀನ: ಫೆಭ್ರುವರಿ 20-ಮಾರ್ಚ್ 20

  ಮೀನ: ಫೆಭ್ರುವರಿ 20-ಮಾರ್ಚ್ 20

  ಎಲ್ಲಾ ಚಿಹ್ನೆಯವರಿಗೆ ಹೋಲಿಸಿದರೆ ನೀವು ಅತ್ಯಂತ ಸೂಕ್ಷ್ಮತೆಯನ್ನು ಹೊಂದಿರುವ ವ್ಯಕ್ತಿಗಳು. ನೀವು ನಿಮಗೆ ಆಧ್ಯತೆ ನೀಡುವುದಿಲ್ಲ. 2018ರಲ್ಲಿ ನಿಮ್ಮ ಅದೃಷ್ಟ ಸಾಮಾನ್ಯ ಪ್ರಮಾಣದ ಅದೃಷ್ಟವನ್ನು ಹೊಂದುವಿರಿ. ಕೆಲವರು ನಿಮ್ಮನ್ನು ಕಂಡು ಅಸೂಯೆ ಪಡುವರು. ಈ ರಾಶಿಚಕ್ರದವರಿಗೆ ಸೋಮವಾರ ಅದೃಷ್ಟದ ವಾರ. ಈ ರಾಶಿಯವರು ಎಲ್ಲಾ ವಿಚಾರಕ್ಕೂ ಅಧಿಕವಾಗಿ ಚಿಂತಿಸುತ್ತಾರೆ. ಕೆಲವು ವಿಷಯಗಳಿಗೆ ಮಾನಸಿಕವಾಗಿ ಚಿಂತಿಸುವ ಬದಲು ಹೃದಯದ ಮೂಲಕ ಚಿಂತಿಸಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು. ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತಹ ಗುಣವನ್ನು ಹೊಂದಿರಬೇಕು. 2018ರಲ್ಲಿ ಅತಿಯಾದ ಚಿಂತನೆಗೆ ಒಳಗಾಗುವುದನ್ನು ನಿಲ್ಲಿಸಿ, ಸಂಭವಿಸಬೇಕಾದ ವಿಚಾರಗಳನ್ನು ಹಾಗೆಯೇ ನೆರವೇರಲು ಬಿಡಿ.

  English summary

  Zodiac Ranking Of Who Will Be The Happiest In 2018

  The only thing worse than missing out on an opportunity is missing out on an opportunity twice. Here’s what your zodiac sign has to say about what you must take advantage of in 2018 so that you don’t make the same mistakes next year. The only thing worse than missing out on an opportunity is missing out on an opportunity twice. Here’s what your zodiac sign has to say about what you must take advantage of in 2018 so that you don’t make the same mistakes next year.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more