ಅಚ್ಚರಿ ತರಬಲ್ಲ ರಾಶಿ ಭವಿಷ್ಯ, ನಿಮ್ಮದೂ ಪರಿಶೀಲಿಸಿಕೊಳ್ಳಿ

Posted By: Deepu
Subscribe to Boldsky

ರಾಶಿ ಭವಿಷ್ಯ ನೋಡಿಕೊಂಡು ಕೆಲವೊಂದು ಸಲ ಅದು ನಮ್ಮ ಜೀವನದಲ್ಲಿ ಘಟಿಸುವಂತಹ ವಿದ್ಯಮಾನಗಳಿಗೆ ನಿಕಟವಾಗಿರುವುದು. ಇನ್ನು ಕೆಲವನ್ನು ನಾವು ಸಂಪೂರ್ಣವಾಗಿ ಕಡೆಗಣಿಸುತ್ತೇವೆ. ತುಂಬಾ ನಿಖರವಾಗಿ ಹೇಳುವ ರಾಶಿ ಭವಿಷ್ಯ ನಿಮಗೆ ಅಚ್ಚರಿಯುಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದು ನಿಮ್ಮ ಜೀವನದ ಮೇಲೆ ಸಂಪೂರ್ಣವಾಗಿ ಸಂಬಂಧ ಹೊಂದಿರುವುದು. ನಿಮ್ಮ ರಾಶಿ ಕೂಡ ನಿಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಮುಂದಕ್ಕೆ ಲೇಖನ ಓದುತ್ತಾ ಸಾಗಿ.... 

ಮೇಷ: ಮಾರ್ಚ್ 21-ಎಪ್ರಿಲ್

ಮೇಷ: ಮಾರ್ಚ್ 21-ಎಪ್ರಿಲ್

ಪ್ರೀತಿಪಾತ್ರರೊಂದಿಗನ ಜಗಳ ಮತ್ತು ಅವರನ್ನು ಕಳಕೊಳ್ಳುವುದನ್ನು ಸಂಭಾಲಿಸಲಾರರು. ಜನರು ನಮ್ಮಿಂದ ದೂರ ಹೋಗಲಿ ಎನ್ನುವಂತೆ ನಟಿಸುವರು. ಆದರೆ ವಾಸ್ತವದಲ್ಲಿ ಅವರು ಜಗಳ ಮತ್ತು ಜನರು ದೂರವಾಗುವ ಬಗ್ಗೆ ಪಶ್ಚಾತ್ತಾಪ ಪಡುವರು. ಯಾಕೆಂದರೆ ಅವರಿಗೆ ಸಂಬಂಧ ಮುಖ್ಯವಾಗಿರುವುದು.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ನಮ್ಮ ಸುತ್ತಲು ಯಾರೂ ಇಲ್ಲವೆನ್ನುವ ಭೀತಿ ಅವರನ್ನು ಕಾಡುವುದು ಮತ್ತು ನಮ್ಮನ್ನು ಸುತ್ತಲಿರುವ ಜನರು ಬೇಗನೆ ಮರೆತುಬಿಡುವರು ಎನ್ನುವ ಆಲೋಚನೆಯು ಅವರಲ್ಲಿ ಇರುವುದು. ನಾವು ಯಾರಿಗಾದರೂ ಪ್ರೀತಿಪಾತ್ರರಾಗಿದ್ದೇವೆಯಾ ಅಥವಾ ಇಲ್ಲವಾ ಎನ್ನುವ ಚಿಂತೆ ಅವರನ್ನು ಕಾಡುತ್ತಲೇ ಇರುವುದು.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ಇವರು ಬೇರೆಯವರೊಂದಿಗೆ ಹೊಂದಿಕೊಳ್ಳಲು ಅಥವಾ ಸ್ನೇಹ ಬೆಳೆಸಲು ತುಂಬಾ ಕಠಿಣ ಪ್ರಯತ್ನ ಮಾಡುವರು ಹಾಗೂ ಕೆಲವೊಮ್ಮೆ ತಮ್ಮನ್ನು ತಾವು ಇದಕ್ಕಾಗಿಯೇ ಬದಲಾಯಿಸಿಕೊಳ್ಳುವರು. ಇವರು ಏಕಾಂಗಿಯಾಗಲು ಹೆದರುವ ಕಾರಣ ತಮ್ಮನ್ನು ತಾವು ಬದಲಾಯಿಸಿ ಸ್ನೇಹಿತರನ್ನು ಪಡೆಯಲು ಬಯಸುವರು.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

ಇವರು ಯಾವಾಗಲೂ ತಾನು ಸಂತೋಷವಾಗಿದ್ದೇವೆ ಎನ್ನುವಂತೆ ನಟಿಸುವರು. ಯಾಕೆಂದರೆ ತಾವು ದುಃಖಿಯಾಗಿರುವುದರಿಂದ ಬೇರೆಯವರು ಬೇಸರಗೊಳ್ಳಬಾರದು ಎನ್ನುವುದೇ ಇವರ ಆಶಯ. ಇವರು ಸುಳ್ಳು ನಗುವಿನೊಂದಿಗೆ ಬೇರೆಯವರು ತಮ್ಮ ಬಗ್ಗೆ ಚಿಂತಿಸದಿದ್ದರೂ ಪರವಾಗಿಲ್ಲ ಎನ್ನುವಂತೆ ಇರುವರು.

ಸಿಂಹ: ಜೂನ್ 23- ಆಗಸ್ಟ್ 23

ಸಿಂಹ: ಜೂನ್ 23- ಆಗಸ್ಟ್ 23

ತಮ್ಮನ್ನು ಯಾರೂ ಪ್ರೀತಿಸುವುದಿಲ್ಲವೆಂದು ಇವರು ಭಾವಿಸುತ್ತಾರೆ ಮತ್ತು ಏನಾದರೂ ತಪ್ಪಾದರೆ ಅದು ತಮ್ಮದೇ ತಪ್ಪು ಎಂದು ಅವರು ಭಾವಿಸುವರು. ಇವರು ತುಂಬಾ ಕಠಿಣ ಮನಸ್ಸಿನಿಂದ ವರ್ತಿಸಿ ಪರಿಸ್ಥಿತಿ ಬಗ್ಗೆ ಚಿಂತಿಸುವುದಿಲ್ಲ. ಇವರು ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿರುವರು.

ಕನ್ಯಾ: ಆಗಸ್ಟ್ 24- ಸಪ್ಟೆಂಬರ್ 23

ಕನ್ಯಾ: ಆಗಸ್ಟ್ 24- ಸಪ್ಟೆಂಬರ್ 23

ಇವರು ತಮ್ಮ ಜೀವನದ ಪ್ರಮುಖ ಪರಿಸ್ಥಿತಿ ನಿಭಾಯಿಸಲು ತುಂಬಾ ಸಮಸ್ಯೆಯಾಗುವುದು. ಪ್ರತಿಯೊಂದು ಕೂಡ ಅವರ ನಿಯಂತ್ರಣದಲ್ಲಿ ಇದೆ ಎಂದು ಅನಿಸುವುದು. ಆದರೆ ವಾಸ್ತವದಲ್ಲಿ ದಿನದ ಪ್ರತಿಯೊಂದು ಗಂಟೆಯೂ ಅವರು ಸಮಸ್ಯೆಯಲ್ಲಿರುವರು. ದೀರ್ಘ ಕಾಲದ ತನಕ ಧನಾತ್ಮಕವಾಗಿರುವುದು ಅವರಿಗೆ ತುಂಬಾ ಕಷ್ಟವಾಗುವುದು.

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23

ಇವರು ಯಾವತ್ತೂ ಏಕಾಂಗಿಯಾಗಿರಲ್ಲ ಮತ್ತು ಅವರಿಗೆ ಯಾರಾದರೂ ಜತೆ ಬೇಕೇಬೇಕು. ಇವರು ತಮ್ಮ ಸಮಯವನ್ನು ಬೇರೆಯವರಿಗೆ ವಿನಿಯೋಗಿಸುವರು. ಇದರಿಂದಾಗಿ ಅವರ ಕಡೆ ಗಮನ ಕೇಂದ್ರೀಕರಿಸಲು ಆಗಲ್ಲ. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರು ದ್ವೇಷಿಸುವರು. ಇದರಿಂದಾಗಿ ಅವರು ಯಾವಾಗಲೂ ತಾವು ಸರಿಯಾಗಿದ್ದೇವೆ ಎಂದು ತೋರಿಸಿಕೊಳ್ಳುವರು. ಆದರೆ ಮನಸ್ಸಿನಲ್ಲಿ ಅವರ ನೋವಿರುವುದು ಮತ್ತು ಏಕಾಂಗಿ ಭಾವವಿರುವುದು.

ವೃಶ್ಚಿಕ: ಅಕ್ಟೋಬರ್ 24-ನ.22

ವೃಶ್ಚಿಕ: ಅಕ್ಟೋಬರ್ 24-ನ.22

ಇವರು ಜನರಿಗೆ ಹತ್ತಿರವಾಗಲು ತುಂಬಾ ಹೆದರುವರು. ಬೇರೆಯವರು ತಮ್ಮ ಮೇಲೆ ನಂಬಿಕೆಯಿಡುವುದನ್ನು ಇಷ್ಟಪಡುವರು. ಆದರೆ ಬೇರೆಯವರನ್ನು ನಂಬಲು ಇವರು ತುಂಬಾ ಕಷ್ಟಪಡುವರು. ಒಂದು ದಿನ ಪ್ರತಿಯೊಬ್ಬರನ್ನು ದೂರ ತಳ್ಳಬಹುದು ಎಂಬ ಭೀತಿಯಿರುವುದು. ಆದರೆ ನಿಜವಾಗಿಯೂ ಅವರು ಅಸಹಾಯಕರು ಮತ್ತು ಸಮಸ್ಯೆ ಹೇಗೆ ಪರಿಹರಿಸಬೇಕೆಂದು ತಿಳಿದಿರುವುದಿಲ್ಲ.

ಧನು: ನ.23ರಿಂದ ಡಿ.22

ಧನು: ನ.23ರಿಂದ ಡಿ.22

ಇವರು ಪ್ರೀತಿಸುವುದನ್ನು ಇಷ್ಟಪಡುವರು. ಇವರು ಯಾರ ಜತೆಗೂ ಇಲ್ಲದೆ ಇರುವಾಗ ತಾನು ಯಾರಿಗೂ ಇಷ್ಟವಲ್ಲ ಎನ್ನುವಂತಹ ಹತಾಶ ಭಾವನೆ ಇವರಲ್ಲಿ ಮೂಡುವುದು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಇವರು ತಮ್ಮ ಮೇಲೆ ಹೂಡಿಕೆ ಮಾಡಿ ಉನ್ನತಿಗೇರಲು ಪ್ರಯತ್ನಿಸುವರು. ಇದರಿಂದ ಅವರು ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳಲು ಬಯಸಲ್ಲ. ಇಂತಹ ನಡವಳಿಕೆಯಿಂದಾಗಿ ಅವರು ಏಕಾಂಗಿಯಾಗುತ್ತಾರೆ ಎನ್ನುವ ಭೀತಿ ಅವರಲ್ಲಿ ಇರುವುದು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ತಾವು ಭಾವನಾತ್ಮಕವಾಗಿ ಯಾವ ರೀತಿ ಇರಬೇಕೆಂದು ಬಯಸುತ್ತಾರೋ ಆ ರೀತಿಯಲ್ಲಿ ಇರಲು ಇವರಿಗೆ ಆಗದು. ಇವರು ಸಂಬಂಧದಲ್ಲಿ ಬಂಧಿಯಾಗುವರು ಮತ್ತು ಬೇರೆ ಏನೂ ಇವರಿಗೆ ತಿಳಿಯದು. ಇದರಿಂದಾಗಿ ಅವರಿಗೆ ತಮ್ಮ ಮೇಲೆಯೇ ನಿರಾಶೆ ಉಂಟಾಗುವುದು ಮತ್ತು ತಮ್ಮಲ್ಲಿ ಏನೋ ತಪ್ಪಿದೆ ಎಂದು ಭಾವಿಸುವರು.

ಮೀನ: ಫೆ.19-ಮಾ.20

ಮೀನ: ಫೆ.19-ಮಾ.20

ಜೀವನದಲ್ಲಿ ತಾವು ಏನು ಮಾಡುತ್ತೇವೆ ಎನ್ನುವ ಆಲೋಚನೆ ಅವರಿಗೆ ಇರುವುದಿಲ್ಲ. ಅವರ ಹಗಲು ಕನಸುಗಳು ಅವರಿಗೆ ಒಳ್ಳೆಯ ಭಾವನೆ ಉಂಟು ಮಾಡುವುದು. ಇವರು ತುಂಬಾ ಗೊಂದಲಕ್ಕೆ ಒಳಗಾಗುವವರು. ಇವರು ಬೇರೆಯವರ ನೆರವು ಕೇಳಲು ದ್ವೇಷಿಸುವರು ಮತ್ತು ಪ್ರತಿಯೊಂದು ತಮ್ಮ ನಿಯಂತ್ರಣದಲ್ಲಿ ಇದೆ ಎಂದು ಭಾವಿಸುವರು.

English summary

zodiac-predictions-that-accurately-define-each-zodiac-sign

We tend to read so many predictions based on zodiac signs. There are times when we can connect to these predictions and there are times when these predictions make us feel that it is just not so us! Here are some of the most accurate predictions of each zodiac sign. These are the predictions which are so perfect that you would connect to them instantly! So, find out about the zodiac signs and their predictions in the list below!
Story first published: Tuesday, January 30, 2018, 13:45 [IST]