Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ನಿಮ್ಮ ಹೆಸರಿನ ಕೊನೆಯ ಅಕ್ಷರ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ!
ಬಹುತೇಕ ಸಂದರ್ಭದಲ್ಲಿ ನಾವು ಎಲ್ಲವನ್ನೂ ತಿಳಿದಿದ್ದೇವೆ ಎನ್ನುವ ಹೆಮ್ಮೆ ಹಾಗೂ ಅಹಂ ಅನ್ನು ಹೊಂದಿರುತ್ತೇವೆ. ಆದರೆ ವಾಸ್ತವವಾಗಿ ಚಿಂತಿಸುವುದಾದರೆ ಎಷ್ಟೋ ವಿಚಾರದ ಬಗ್ಗೆ ನಮಗೆ ಸೂಕ್ತ ರೀತಿಯ ಜ್ಞಾನವೇ ಇರುವುದಿಲ್ಲ. ಎಲ್ಲಾ ಬಲ್ಲೆವು ಎನ್ನುವ ಭ್ರಮೆಯಲ್ಲಿ ತೇಲುತ್ತಿರುತ್ತೇವೆ ಅಷ್ಟೇ... ನಾವು ಹುಟ್ಟಿದಾಗ ನಮಗಿಟ್ಟ ಹೆಸರಿನ ಅಕ್ಷರಗಳು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತವೆ ಎನ್ನುವುದನ್ನು ನೀವು ತಿಳಿದಿದ್ದೀರಾ?
ಹೌದು, ತಜ್ಞರ ಪ್ರಕಾರ ವ್ಯಕ್ತಿಯ ಹೆಸರಿನ ಕೊನೆಯ ಅಕ್ಷರ ಅವನ ವ್ಯಕ್ತಿತ್ವವನ್ನು ಹೇಳುತ್ತದೆ ಎಂದು ಹೇಳಲಾಗುವುದು. ಪ್ರಮುಖವಾಗಿ ಹವ್ಯಾಸಗಳು, ಹಿತಾಸಕ್ತಿಗಳು, ಅಭಿರುಚಿ ಹಾಗೂ ವರ್ತನೆಗಳ ಬಗ್ಗೆ ತೆರೆದಿಡುವುದು ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ಹೆಸರಿನ ಕೊನೆಯ ಅಕ್ಷರ ಏನೆಂದು ಹೇಳುತ್ತದೆ? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಎ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಹೆಸರಿನ ಕೊನೆಯಲ್ಲಿ ಎ ಅಕ್ಷರ ಬಂದರೆ ಅಂತಹ ವ್ಯಕ್ತಿಗಳು ಹೆಚ್ಚು ಭಾವೋದ್ರಿಕ್ತ ವ್ಯಕ್ತಿಗಳೆಂದು ಹೇಳಲಾಗುವುದು. ಭಾವನಾತ್ಮಕ ಗುಣದಿಂದಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಇತರರಿಗೆ ಅನುಭೂತಿಯನ್ನು ತೋರುವರು. ಇವರು ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರಲ್ಲಿ ಅತ್ಯುತ್ತಮ ನಾಯಕತ್ವ ಗುಣಗಳಿರುತ್ತವೆ. ಇತರರ ಅಭಿಪ್ರಾಯಗಳಿಮದ ಪ್ರಭಾವಿತರಾಗುವುದಿಲ್ಲ. ಇವರು ಅತ್ಯುತ್ತಮ ಪ್ರೇಮಿಗಳಾಗಿರುತ್ತಾರೆ. ಅಷ್ಟು ಸುಲಭವಾಗಿಯೂ ಪ್ರೀತಿಯಲ್ಲಿ ಬೀಳುವುದಿಲ್ಲ ಎಂದು ಸಹ ಹೇಳಲಾಗುವುದು. ಹಾಗೊಮ್ಮೆ ಪ್ರೀತಿಯಲ್ಲಿ ಬಿದ್ದಾಗ ಅಥವಾ ತಮ್ಮ ಪ್ರೀತಿಪಾತ್ರರಿಗೆ ಪ್ರೀತಿಯ ಕಾಳಜಿಯನ್ನು ತೋರುವರು. ತಮ್ಮ ಕುಟುಂಬದ ಅವಶ್ಯಕತೆಯನ್ನು ನೋಡಿಕೊಳ್ಳುವರು.

ಇ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಇ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರಿನ ವ್ಯಕ್ತಿಗಳು ಸೌಮ್ಯ ಹಾಗೂ ಆಶಾವಾದಿಗಳಾಗಿರುತ್ತಾರೆ. ಇವರು ಇತರರಿಗಿಂತ ಹೆಚ್ಚು ಪ್ರೌಢ ಬುದ್ಧಿಯನ್ನು ಹೊಂದಿದವರಾಗಿರುತ್ತಾರೆ. ಆಧುನಿಕ ಬದಲಾವಣೆಗೆ ಹೊಂದಿಕೊಳ್ಳುವರು. ನಾಟಕ ಸ್ವಭಾವದಿಂದ ದೂರ ಉಳಿಯುವರು. ಸಮರ್ಥರಾದ ಇವರು ಇತರರ ಆಕರ್ಷಣೆಗೆ ಒಳಗಾಗಲು ಬಯಸುವುದಿಲ್ಲ.

ಎಲ್ ಅಥವಾ ಎಚ್ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಎಲ್ ಅಥವಾ ಎಚ್ ಅಕ್ಷರದಿಂದ ಮುಕ್ತಾಯಗೊಳ್ಳುವ ವ್ಯಕ್ತಿಗಳು ಹೆಚ್ಚು ನಿಷ್ಠಾವಂತರಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಎಲ್ಲಾ ಭರವಸೆಯನ್ನು ಉಳಿಸಿಕೊಳ್ಳಲು ತೋರಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಅವರ ಬದ್ಧತೆಯ ಮಾತುಗಳೇ ಅವರಿಗೆ ಬಹಳಷ್ಟು ಸಂಗತಿಯಾಗಿರುತ್ತದೆ. ಇವರ ಅದ್ಭುತ ಗುಣಗಳಿಂದಾಗಿಯೇ ಇವರ ಸುತ್ತಲಿನ ಜನರು ಇವರನ್ನು ಗೌರವಿಸುತ್ತಾರೆ.

ಓ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಓ ಅಕ್ಷರದಿಂದ ಕೊನೆಗೊಳ್ಳುವ ಹೆಸರು ಅನನ್ಯವಾದದ್ದು ಎಂದು ಹೇಳಲಾಗುವುದು. ಈ ಅಕ್ಷರ ಹೊಂದಿದ ವ್ಯಕ್ತಿಗಳು ಕಲಿಕೆಯಲ್ಲಿ ಹಾಗೂ ಹೊಸ ವಿಚಾರವನ್ನು ಅರ್ಥೈಸಿಕೊಳ್ಳುವಲ್ಲಿ ಜಾಣರಾಗಿರುತ್ತಾರೆ. ಉತ್ತಮ ಹೊಂದಾಣಿಕೆಯ ಗುಣವನ್ನು ಹೊಂದಿರುವ ಈ ವ್ಯಕ್ತಿಗಳು ಎಲ್ಲರ ಗಮನವನ್ನು ಬಹುಬೇಗ ಸೆಳೆದುಕೊಳ್ಳುವರು.

ಎನ್ ಅಥವಾ ಎಮ್ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಎನ್ ಅಥವಾ ಎಮ್ ಅಕ್ಷರದ ಹೆಸರಿನಿಂದ ಮುಕ್ತಾಯಗೊಳ್ಳುವ ವ್ಯಕ್ತಿಗಳು ಸೊಗಸಾದ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲಾ ವಿಚಾರದಲ್ಲೂ ಶಿಸ್ತು, ಅಚ್ಚುಕಟ್ಟು ಹಾಗೂ ಸ್ವಚ್ಛವಾಗಿಡಲು ಬಯಸುತ್ತಾರೆ. ಇವರು ಪ್ರತಿಯೊಂದು ಕ್ಷಣದ ಮೌಲ್ಯವನ್ನೂ ತಿಳಿದ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಜೀವನದಲ್ಲಿ ಪ್ರತಿಯೊಂದು ನಿಮಿಷನ್ನು ಎಚ್ಚರಿಕೆಯಿಂದ ಕಳೆಯುತ್ತಾರೆ. ಆಕರ್ಷಣೆ ಹಾಗೂ ಸೊಬಗಿನಿಂದಲೇ ಎಲ್ಲರನ್ನೂ ಆಕರ್ಷಿಸಲು ಬಯಸುತ್ತಾರೆ.

ಆರ್ ಅಥವಾ ಎಸ್ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ಆರ್ ಅಥವಾ ಎಸ್ ಅಕ್ಷರದಿಂದ ಮುಕ್ತಾಯಗೊಳ್ಳುವ ವ್ಯಕ್ತಿಗಳು ಇತರರಿಗೆ ಮಾದರಿಯ ವ್ಯಕ್ತಿಗಳಾಗಬಲ್ಲರು. ಇವರು ಫ್ಯಾಷನ್ ವಿಚಾರದಲ್ಲಿ ಅತ್ಯುತ್ತಮ ಅಭಿರುಚಿ ಹೊಂದಿರುತ್ತಾರೆ. ಇವರ ಸಹೋದ್ಯೋಗಿಗಳು ಇವರನ್ನು ಕಂಡು ಅಸೂಯೆ ಪಡಬಹುದು. ಉಡುಗೆ ತೊಡುಗೆಯಲ್ಲಿ ಅತ್ಯುತ್ತಮ ಆಯ್ಕೆ ಮಾಡಬಲ್ಲರು. ಇವರು ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳಲಾಗುವುದು.

ವೈ ಅಥವಾ ಟಿ ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು
ವೈ ಅಥವಾ ಟಿ ಅಕ್ಷರದಿಂದ ಮುಕ್ತಾಯಗೊಳ್ಳುವ ವ್ಯಕ್ತಿಗಳು ಸಂಪೂರ್ಣವಾಗಿ ಪ್ರೇಮಿಗಳು ಎಂದು ನಂಬಲಾಗಿದೆ. ಹೆಚ್ಚು ಮಾತನಾಡುವ ಇವರು ಸದಾ ಸಂವಹನದಲ್ಲಿ ತೊಡಗಿಕೊಳ್ಳಲು ಬಯಸುವರು. ಇವರು ಇತರರನ್ನು ತಮ್ಮೆಡೆಗೆ ಗಮನಸೆಳೆಯುವಂತೆ ಮಾಡುವರು. ಇವರ ವ್ಯಕ್ತಿತ್ವ ವರ್ತನೆಗಳು ಅರ್ಥ ಗರ್ಭಿತವಾಗಿರುತ್ತದೆ. ಏನಾದರೂ ತಪ್ಪು ನಡೆಯುತ್ತಿದ್ದರೆ ಅದು ಹೀಗೇ ಎಂದು ಊಹಿಸಬಲ್ಲರು.



Click it and Unblock the Notifications











