Latest Updates
-
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ
9-10-2018: ಮಂಗಳವಾರದ ದಿನ ಭವಿಷ್ಯ
ಪ್ರತಿಯೊಂದು ಸನ್ನಿವೇಶ ನಡೆಯುವಾಗ ಎಚ್ಚರಗೊಳ್ಳುವ ಜಾಗ್ರತೆ ಇರಬೇಕು. ಆ ಮುನ್ನಸೂಚನೆಯನ್ನು ತಿಳಿಯಲು ದೈವಾನುಗ್ರಹ ಇರಬೇಕು.

ಅದನ್ನು ತಿಳಿಯಲು ಈ ದಿನ ಮಂಗಳವಾರದ ದಿನಭವಿಷ್ಯವನ್ನು ನೋಡಿ

ಮೇಷ
ಅನೇಕ ದಿನದ ನಿರೀಕ್ಷೆ,ಕೆಲಸ ಕಾರ್ಯ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಸೇವೆಯಲ್ಲಿ ಉನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಕಾರ್ಯಸಾಧನೆಯನ್ನು ಒಳಿತಾಗುವುದು ಉತ್ತಮ.

ವೃಷಭ
ಆಲಾಸ್ಯ ನಿರಾಶೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಸ್ವಾಭಿಮಾನವನ್ನು ಕುಂದಿಸುವ ಸಾಧ್ಯತೆ ಇದೆ. ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.

ಮಿಥುನ
ಹಲವು ಕಷ್ಟಕರ ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತೋಷ ಸಂಭ್ರಮವನ್ನುಂಟು ಮಾಡುವಿರಿ.

ಕರ್ಕಾಟಕ
ಅನ್ಯಾಯ ಅಸೂಯೆವನ್ನು ಕಂಡು ಸಹಿಸಲಾರದ ನೀವು ನಿಮ್ಮ ವಿರುದ್ಧಎದುರಾಳಿಯನ್ನು ಎದುರಿಸಲು ಹೆಚ್ಚಿನ ಇಚ್ಚಾಶಕ್ತಿ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಗೆಲುವನ್ನು ಸಂಪಾದಿಸುವಿರಿ.

ಸಿಂಹ
ಯಾವುದು ಸಿಗುವುದಿಲ್ಲವೋ ಎದುರಿಗಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದು ಸರಿಯಲ್ಲ. ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಅಭಿನಂದನೆ ಮನ್ನಣೆ ದೊರೆಯುವುದು.

ಕನ್ಯಾ
ಸಹನೆ ಮತ್ತು ತಾಳ್ಮೆ ಸಹಕಾರ ಸಮಯಾವಧಾನಗಳಿಂದ ಕೆಲ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಯಶಸ್ಸನ್ನು ಗಳಿಸುವಿರಿ. ಹಾಗಾಗಿ ಬರಬೇಕಾಗಿದ್ದ ಹಣವು ಬಹು ಶೀಘ್ರದಲ್ಲಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿ.

ತುಲಾ
ವ್ಯರ್ಥ ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕಲು ಹೋಗದಿರಿ. ಇದರಿಂದ ನಿಮಗೆ ಸಂಕಟ ಎದುರಾಗುವುದು. ಒಳ್ಳೆಯ ಕಾರ್ಯಗಳಿಗೆ ಕೆಲಸಗಳಿಗೆ ಹಣವನ್ನು ಖರ್ಚು ಮಾಡಿ. ಆಗ ನಿಮಗೆ ಭಗವಂತನು ದುಪ್ಪಟ್ಟು ಹಣವನ್ನು ಕೊಡುವನು.

ವೃಶ್ಚಿಕ
ನೀವು ಹಳೆಯ ಗೆಳೆಯ ಸಂಬಂಧಿಕರನ್ನು ಭೇಟಿ ಮಾಡುವಿರಿ. ಅವರ ಮಾತಿನ ಶೈಲಿಯ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲವಾಗುವುದು ಮತ್ತು ಬೇರೊಂದು ಕಡೆ ನೌಕರಿ ದೊರೆಯುವುದು.

ಧನು
ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ನೀವು ಶ್ರಮಪಟ್ಟು ಮಾಡಿದ ಕೆಲಸ ಕಾರ್ಯ ಲಾಭಾಂಶವು ಬೇರೆಯವರ ಪಾಲಾಗುವುದು. ದುರ್ಗಾದೇವಿಯ ಪ್ರಾರ್ಥನೆ ಮಾಡಿ ಮತ್ತು ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.

ಮಕರ
ನಿಮ್ಮ ಏಳಿಗೆಯನ್ನು ಕಂಡು ಅಸಹಿಸಲು ಕಷ್ಟಪಡುತ್ತಿರುವವರು ನಿಮ್ಮ ಮೇಲೆ ಇಲ್ಲದ ವಿನಾಕಾರಣ ಆರೋಪಗಳನ್ನು ಮಾಡುವರು. ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.

ಕುಂಭ
ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ. ಸ್ನೇಹಿತರು ನಿಜವಾಗಿಯೂ ಈ ಸಂದರ್ಭದಲ್ಲಿ ಸಹಾಯ ಮಾಡುವರು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.

ಮೀನ
ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ. ಹಣಕಾಸು ಉತ್ತಮವಾಗಿರುವುದು. ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications