For Quick Alerts
ALLOW NOTIFICATIONS  
For Daily Alerts

9-11-2018: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಶುಕ್ರವಾರದ ದಿನ ಶುಭ ಸೂಚನೆಯಾಗಿ ಪ್ರತಿಯೊಬ್ಬನ ಹಸ್ತದಲ್ಲಿ ಬರುವ ಶುಕ್ರ ರೇಖೆ ಹೆಚ್ಚು ಎತ್ತರವಾಗಿರುವದು ಸ್ತ್ರೀಯರ ಹಸ್ತದಲ್ಲಿಯೇ ಹೆಚ್ಚು. ಪುರುಷನ ಹಸ್ತದಲ್ಲಿ ಈ ರೇಖೆ ಎತ್ತರವಾಗಿದ್ದು ಬೆರಳುಗಳು ಚೂಪಾಗಿಯೂ ಉದ್ದವಾಗಿಯೂ, ಸುಂದರವಾಗಿಯೂ ಇದ್ದರೆ ಸೂಕ್ಷ್ಮ ಸ್ವಭಾವ ನಾಗಿರುವನು. ಆದರೆ ಪ್ರಣಯದಲ್ಲಿ ಸಾಂಸಾರಿಕ ಜೀವನದಲ್ಲಿ ಉತ್ತಮನಾಗಿರುವನು. ಶುಕ್ರ ರೇಖೆ ಎತ್ತರವಾಗಿದ್ದು ಮೃದುವಾಗಿದ್ದರೆ ಸೌಂದರ್ಯದ ಉಪಾಸಕನಾಗಿರುವನು. ಇಂಥವನಿಗೆ ಮಕ್ಕಳು ಬಹಳ, ಇವನು ಸ್ಥಿರ ಮನಸ್ಸಿವನು , ಸದಾ ಸಂತೋಷಿಯೂ, ಸುಖಕ್ಕಾಗಿ ಹಣ ಹಾಗೂ ಜವಾಬ್ದಾರಿಗಳನ್ನು ಎಳ್ಳಷ್ಟೂ ಲಕ್ಷಕ್ಕೆ ತಂದುಕೊಳ್ಳುವುದಿಲ್ಲ.

your daily horoscope-9-November-2018

ಶುಕ್ರ ರೇಖೆಯು ಹಸ್ತದ ಪ್ರಮಾಣಕ್ಕನುಸರಿಸಿ ಎತ್ತರವಾಗಿದ್ದರೆ ಉಳಿದ ಪರ್ವಗಳು ಸಪಾಟಾಗಿದ್ದರೆ ಬಹಳ ಒಳ್ಳೆಯ ಲಕ್ಷಣಗಳು. ಆದರೆ ಹಸ್ತದಲ್ಲಿಯ ಇತರ ಚಿನ್ಹೆಗಳು ಹಾಗೂ ರೇಖೆಗಳು ಚೆನ್ನಾಗಿರದಿದ್ದರೆ ಮಾತ್ರ ಅನೀತಿಪರವಾಗಿ ಸಮಾಜದಿಂದ ಹೊರದೂಡಲ್ಪಡುವನು. ಚಾಮುಂಡೇಶ್ವರಿ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಅವಳು ಯೋಧೆ ದುರ್ಗಾ ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯಯೋಗಿನಿಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡಮತ್ತು ಮುಂಡರ ಸಂಯೋಗವಾಗಿದೆ.ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಮುಕಾಂಬಿಕೆಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ

ಮೇಷ

ನಿಮ್ಮ ಒಳ್ಳೆತನದಿಂದ ಅನೇಕ ಜನರನ್ನು ನಿಮ್ಮತ್ತ ಸೆಳೆಯಲಿದ್ದೀರಿ. ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಉನ್ನತ ವಿದ್ಯಾಭ್ಯಾಸದ ಮೂಲಕ ನೀವು ನಿಮ್ಮ ಹಿರಿಯರಿಗೆ ಸಂತಸ ನೀಡುವಿರಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಗಳು ಪೂರ್ಣಗೊಳ್ಳುವವು. ಹಣಕಾಸಿನ ಸಮಸ್ಯೆ ಕಡಿಮೆ ಆಗುವುದು. ದೊಡ್ಡ ಜನರ ಸಂಪರ್ಕ ಏರ್ಪಡುವುದರಿಂದ ನಿಮ್ಮ ಉದ್ಯೋಗಕ್ಕೆ ಹೆಚ್ಚಿನ ಲಾಭ ಕಂಡು ಬರುವುದು. ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವವು. ಇದರಿಂದ ಸಾಮಾಜಿಕ ವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿ ಕೊಳ್ಳುವಿರಿ. ನಿಮ್ಮನ್ನು ಭಾವಿ ನಾಯಕನೆಂದು ಗುರುತಿಸಿ ಗೌರವಿಸುವ ಸಂದರ್ಭ ಎದುರಾಗುವುದು. ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಹೊರಗೆ ಊಟ ಮಾಡುವ ಸಂದರ್ಭದಲ್ಲಿ ಆಹಾರ ಮತ್ತು ನೀರಿನ ಸ್ವಚ್ಛತೆ ಬಗ್ಗೆ ಖಾತರಿ ಮಾಡಿಕೊಳ್ಳಿ. ಇಲ್ಲವೆ ಕಲುಷಿತ ಆಹಾರದಿಂದ ಆರೋಗ್ಯದಲ್ಲಿ ಏರು ಪೇರು ಆಗುವ ಸಂದರ್ಭವಿದೆ. ಸೂಕ್ತ ಮನೆವೈದ್ಯರ ಸಲಹೆ ಪಡೆಯಿರಿ.ಮನಸ್ಸು ಖಿನ್ನತೆಯಿಂದ ಕುಗ್ಗುವುದು. ಯಾವುದೇ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಶಿವ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ. ದೂರ ಪ್ರವಾಸದ ವಿಚಾರ ಮುಂದೂಡುವುದು ಒಳಿತು. ಆರೋಗ್ಯದ ಕಡೆ ಗಮನ ಹರಿಸಿ.ನಿಮ್ಮ ಮೇಲೆ ಕೆಲ ಗ್ರಹಗಳ ಪ್ರಭಾವ ಹಲವು ರೀತಿಯಲ್ಲಿ ಆಗುವ ಸಾಧ್ಯತೆ ಇದೆ. ವಾಹನಗಳನ್ನು ಓಡಿಸುವಾಗ ಕಟ್ಟೆಚ್ಚರ ಪಾಲಿಸುವುದು ಒಳ್ಳೆಯದು. ಪ್ರಯಾಣ ಮಾಡುವಾಗ ಮೊಬೈಲ್‌ ಉಪಯೋಗಿಸದೆ ಇರುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಸ್ವಜನ ಪ್ರೇಮ ದೊರೆಯಲಿದೆ. ಬೆಲೆಬಾಳುವ ವಸ್ತು, ಒಡವೆಗಳ ಪ್ರಾಪ್ತಿಯಾಗಲಿದೆ ಮತ್ತು ಅಧಿಕಾರ ಪ್ರಾಪ್ತಿಯು ಉಂಟಾಗುವುದು. ಬರಹಗಾರರಿಗೆ ಮತ್ತು ಉಪಾಧ್ಯಾಯ ವೃತ್ತಿಯವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು ಮತ್ತು ಸಾಮಾಜಿಕ ಮನ್ನಣೆ ದೊರೆಯುವುದು.ನಿಮ್ಮ ಕಾರ್ಯಗಳು ಹಿರಿಯರ ಆಶೀರ್ವಾದದಿಂದ ನೆರವೇರುವವು. ಹಣಕಾಸಿನ ವಿಚಾರದಲ್ಲಿ ಪಕ್ಕಾ ಲೆಕ್ಕ ಇಡುವುದು ಒಳ್ಳೆಯದು. ಸಂಗಾತಿ ಸಲಹೆ ಸ್ವೀಕರಿಸಿದಲ್ಲಿ ಉತ್ತಮ ಸಮಯ ಕಳೆಯಬಹುದು.ದೂರ ಊರುಗಳ ಅಥವಾ ದೂರ ದೇಶದ ಪ್ರಯಾಣದ ಕುರಿತು ಚಿಂತಿಸುತ್ತಿದ್ದರೆ ವೀಸಾ ಅನುಮತಿಗಾಗಿ ಅರ್ಜಿ ಹಾಕಿಕೊಳ್ಳುವುದು ಒಳ್ಳೆಯದು. ದೈವಕೃಪೆಯಿಂದ ನಿಮ್ಮ ಕೆಲಸಗಳು ಸುಗಮವಾಗುವವು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಮಕ್ಕಳಿಂದ ಹರ್ಷದಾಯಕ ವಾರ್ತೆ ಕೇಳುವಿರಿ. ಕೆಲವರಿಗೆ ನೌಕರಿ ಸೇರಿಕೊಳ್ಳಲು ಆದೇಶ ಪತ್ರ ಕೈ ಸೇರುವುದು. ಸುಗ್ರಾಸ ಭೋಜನ ಸವಿಯುವಿರಿ. ಕಚೇರಿ ಕೆಲಸಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಬರಬೇಕಾಗಿದ್ದ ಹಣ ಬರುವುದು. ಅಂತೆಯೇ ಮನೆಯಲ್ಲಿ ಮದುವೆ ವಿಚಾರವಾಗಿ ಚರ್ಚೆ ನಡೆಯುವ ಸಂಭವ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಮತ್ತೊಮ್ಮೆ ನಿಮ್ಮ ಬುದ್ಧಿಚಾತುರ‍್ಯ ಪ್ರದರ್ಶನವಾಗುವುದು. ಇದರಿಂದ ನಿಮ್ಮ ಮೇಲಧಿಕಾರಿಗಳು ಸಂತುಷ್ಟರಾಗುವರು. ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಬೇಗನೆ ಬರುವಂತೆ ಒತ್ತಡ ತರುವರು.

ಅದೃಷ್ಟ ಸಂಖ್ಯೆ:1

ಸಿಂಹ

ಸಿಂಹ

ಆತುರಗಾರನಿಗೆ ಬುದ್ಧಿಮಟ್ಟ ಎಂಬ ಗಾದೆ ಮಾತು ನಿಮಗೆ ಅರಿವಾಗುವುದು. ಆತುರದಿಂದ ಮಾಡಿದ ವಾದವು ನಿಮಗೆ ಮುಖಭಂಗವನ್ನುಂಟು ಮಾಡುವುದು. ಹಾಗಾಗಿ ತಾಳ್ಮೆಯಿಂದ ಎದುರಾಳಿ ಮಾತನ್ನು ಆಲಿಸಿ ವಾದ ಮಾಡಿದಲ್ಲಿ ಜಯ ನಿಮ್ಮದಾಗುವುದು. ಬಿಗುವಿನ ವಾತಾವರಣ ತಿಳಿಯಾಗುವುದು. ಮನೆಯಲ್ಲಿ ಮನದಲ್ಲಿ ಸಂತಸದ ಕ್ಷ ಣಗಳು ಮೂಡುವವು. ಬಂಧುಗಳು, ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು. ಕೆಲಸಗಳು ಸರಾಗವಾಗಿ ನಡೆಯುವವು.

'ಮನೆಗೆದ್ದು ಮಾರುಗೆಲ್ಲು' ಎನ್ನುವರು. ಅಂತೆಯೇ ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಅತ್ಯಂತ ಆನಂದದಿಂದ ಬಾಳುವಿರಿ. ಮನಸ್ಸಿನ ದುಗುಡಗಳು ಕಾಣೆ ಆಗುವವು. ಕುಲದೇವರನ್ನು ಭಜಿಸಿ.

ಅದೃಷ್ಟ ಸಂಖ್ಯೆ:4

ಕನ್ಯಾ

ಕನ್ಯಾ

ಇದ್ದಕ್ಕಿದ್ದಂತೆ ಆಪ್ತ ವಲಯವೇ ನಿಮ್ಮ ವಿರುದ್ಧ ತಿರುಗಿ ಬೀಳವ ಸಾಧ್ಯತೆ ಇದೆ. ಆದರೆ ಅವರನ್ನು ಎದುರಿಸುವ ಕಲೆಗಾರಿಕೆ ನಿಮ್ಮಲ್ಲಿರುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹಿರಿಯರೊಬ್ಬರು ನೀಡುವ ಸಲಹೆ ನಿಮಗೆ ಸಹಕಾರಿಯಾಗುವುದು. ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುವುದರಿಂದ ಮಾನಸಿಕ ಉದಾಸೀನತೆ ಕಾರ್ಯದಲ್ಲಿ ಹಿನ್ನಡೆ ಉಂಟು ಮಾಡಲಿದೆ ಹಾಗೂ ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳಾಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ತುಂಬಾ ಎಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವ ನೀವೇ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು. ಆಹಾರ, ವಿಹಾರದಲ್ಲಿ ನಿಯಮ ಕಾಪಾಡಿ.

ಅದೃಷ್ಟ ಸಂಖ್ಯೆ:4

ತುಲಾ

ತುಲಾ

ನಿಮ್ಮದಲ್ಲದ ಕೆಲಸವನ್ನು ಅನವಶ್ಯಕವಾಗಿ ಮಾಡಲು ಮುಂದಾಗದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬಂಧು ಬಾಂಧವರಿಗೆ ಸಹಾಯ ಹಸ್ತ ನೀಡುವ ವಿಚಾರದಲ್ಲಿ ಎರಡು ಬಾರಿ ಚಿಂತಿಸಿ ಮುಂದುವರೆಯಿರಿ. ಭಗವಂತನ ಕೃಪೆಯಿಂದ ಧನ್ಯತಾಭಾವ ಮನದಲ್ಲಿ ಮೂಡುವುದು. ಮಹತ್ವದ ಪತ್ರಾಗಮನವಾಗುವುದು. ಬಂಧು ಬಳಗದವರ ಭೇಟಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಹಿರಿಯರ ಗುರುಗಳ ಮಾರ್ಗದರ್ಶನದಂತೆ ನಡೆಯುವುದು ಒಳ್ಳೆಯದು. ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಠುರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರರು ತೋರುವ ಗೌರವ ಕಡಿಮೆ ಆಗುವುದು.

ಅದೃಷ್ಟ ಸಂಖ್ಯೆ:6

ವೃಶ್ಚಿಕ

ವೃಶ್ಚಿಕ

ಹಿರಿಯರಿಂದ ತೀರಾ ಅವಶ್ಯಕವಾದ ಹಲವು ಮಾರ್ಗದರ್ಶನಗಳನ್ನು ಸ್ವೀಕರಿಸಿ. ಈ ದಿನ ಬಹು ಆಪ್ಯಾಯಮಾನವಾಗಿದ್ದು ಮನಸ್ಸಿಗೆ ಮುದ ನೀಡುವ ಕೆಲವು ಘಟನೆಗಳು ಜರುಗುವುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು.

ವಿವಿಧ ಮೂಲಗಳಿಂದ ಹಣ ಬರುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವವು. ಬಂಧು ಬಳಗದವರ ಭೇಟಿಯಾಗಲಿದೆ. ದೈವಾನುಕೂಲತೆಯಿಂದ ಅನುಕೂಲವಾಗಲಿದೆ. ಕೆಲಸದ ಸಂದರ್ಶನ ಉತ್ತಮ ರೀತಿಯಲ್ಲಿ ಆಗುವುದು. ಸಂದರ್ಶನದ ಫಲಿತಾಂಶ ನಿಮ್ಮ ಜೀವನದ ದಿಕ್ಕನ್ನೇ ಧನಾತ್ಮಕವಾಗಿ ಬದಲಿಸುವ ಶಕ್ತಿ ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ.

ಅದೃಷ್ಟ ಸಂಖ್ಯೆ:8

ಧನಸ್ಸು

ಧನಸ್ಸು

ಕಾರಣವಿಲ್ಲದೆ ಜನರು ನಿಮ್ಮ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೋಬಲವೇ ಕುಗ್ಗಿದಂತೆ ಆಗುವುದು. ವಿಷ್ಣು ಸಹಸ್ರನಾಮವನ್ನು ತಪ್ಪದೆ ಪಾರಾಯಣ ಮಾಡಿ. ಹಿತೈಷಿಗಳ ಹಿತವಚನ ಪಾಲಿಸಿ. ಚಂಚಲ ಮನಸ್ಸಿನ ಕಾರಣದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಕಂಡು ಬರಲಿದೆ. ತಾಯಿ ಸಂಬಂಧದವರಿಂದ ಸಹಾಯ ದೊರೆಯಲಿದೆ. ಸ್ಥಿರಾಸ್ಥಿ ಖರೀದಿಗೆ ಚಿಂತನೆ ನಡೆಸುವಿರಿ. ಅಲ್ಪ ಪ್ರವಾಸ ಹಾಗೂ ಬೆಲೆಬಾಳು ವಸ್ತುಗಳ ಖರೀದಿ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು.

ಅದೃಷ್ಟ ಸಂಖ್ಯೆ:8

ಮಕರ

ಮಕರ

ಕೌಟುಂಬಿಕ ವಲಯದಲ್ಲಿ ಕೊಂಚ ವಿರೋಧಾಭಾಸಗಳು ಉಂಟಾಗುವ ಸಾಧ್ಯತೆ ಇದೆ. ಶಿವ ಪಾರ್ವತಿ ದೇವರನ್ನು ನೆನೆದು ಕಾರ್ಯ ಪ್ರವೃತ್ತರಾಗಿ. ಸಿನಿಮಾ ರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು. ಮನೆಯಿಂದ ದೂರವಿದ್ದು ವಾಸಮಾಡುವ ಸಂದರ್ಭದವಿದೆ. ಹೊಸ ಪರಿಸರದಲ್ಲಿ ಆಹಾರ-ವಿಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಪರಿಣಾಮ ಬೀರುವುದು. ಹಣಕಾಸಿನ ತೊಂದರೆ ಎದುರಿಸುವಿರಿ. ಕುಲದೇವತಾ ಸ್ತೋತ್ರ ಮಾಡಿ. ಆದಷ್ಟು ಪರರಿಗೆ ದಾನ ಮಾಡಿ. ಕೌಟುಂಬಿಕ ವಲಯದಲ್ಲಿ ಕಿರಿಕಿರಿಯಾಗುವ ವಾದವಿವಾದಗಳನ್ನು ತಪ್ಪಿಸಿ ಕೊಳ್ಳಲು ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಕ್ರಮವರಿತ ಅಥವಾ ಶಿಸ್ತುಬದ್ಧವಾದ ನಿಮ್ಮ ಜೀವನ ಇತರರಿಗೆ ಮಾದರಿಯಾಗುವುದು.

ಅದೃಷ್ಟ ಸಂಖ್ಯೆ:4

ಕುಂಭ

ಕುಂಭ

ದೂರದ ಊರೊಂದಕ್ಕೆ ಪ್ರವಾಸ ಮಾಡುವ ಸಂದರ್ಭ ದಿಢೀರನೆ ಬರುವುದು. ಅದನ್ನು ಮನಸಾ ಸ್ವೀಕರಿಸಿ ಪ್ರಯಾಣ ಬೆಳೆಸಿ. ಇದರಿಂದ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ಒಂದು ಬೃಹತ್‌ ಕೆಲಸವನ್ನು ಸಕಾಲದಲ್ಲಿ ಮುಗಿಸಿದ ಆತ್ಮತೃಪ್ತಿಯೂ ನಿಮ್ಮದಾಗುವುದು. ವಿವಿಧ ಮೂಲಗಳಿಂದ ಬರುವ ಹಣದ ಮಾರ್ಗ ತಿಳಿಯುವುದು. ತಾಳ್ಮೆ ಹಾಗೂ ನಿಮ್ಮ ಸೂಕ್ಷ್ಮಮತಿಯು ಹೊಸ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರು ಬರುವುದು.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಕೃಷಿಕರಿಗೆ ಉತ್ತಮವಾದ ಕಾರ್ಯ ಯೋಜನೆ ರೂಪಿಸಿಕೊಳ್ಳಲು ಅನುವು ಉಂಟಾಗುತ್ತದೆ. ಕುಲದೇವತಾ ಕೃಪೆಯನ್ನು ಹೊಂದುವುದು ಅವಶ್ಯಕ. ಬಡವರಿಗೆ ಆಹಾರ ನೀಡಿ. ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ. ನಿಮಗೆ ಆತ್ಮೀಯ ಹಿತೈಷಿಗಳಿಂದ ನಿಮ್ಮ ವ್ಯವಹಾರದಲ್ಲಿ ಪಾಲುದಾರಿಕೆಯು ಉಂಟಾಗುವ ಸಾಧ್ಯತೆ ಇರುತ್ತದೆ. ಅಮೂಲ್ಯ ವಸ್ತುಗಳ ಖರೀದಿ-ವಿಕ್ರಿಯಿಂದ ಲಾಭವಾಗುವುದು. ಕೆಲವು ಸಂದರ್ಭಗಳಲ್ಲಿ ಸಂಗಾತಿ ಸಲಹೆ ಪಡೆಯಿರಿ.

ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-9-November-2018

Know what astrology and the planets have in store for you today. Choose your zodiac sign and read the details...
Story first published: Thursday, November 8, 2018, 15:36 [IST]
X
Desktop Bottom Promotion