7-11-2018: ಬುಧವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
Subscribe to Boldsky

ಬುಧವಾರದ ದಿನ ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ. ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ (ಬಲಿಪಾಡ್ಯಮಿ) ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ.

ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿ ಪಾಡ್ಯಮಿ ಯಾಗಿ ಆಚರಿಸಲಾಗುತ್ತದೆ. ವಾಮನಾವತಾರದ ಕಥೆಯ ಹಿನ್ನಲೆಯಲ್ಲಿ ಲೋಕ ಪ್ರಸಿದ್ಧವಾದ ಬಲಿಪಾಡ್ಯಮಿಯ ಹಬ್ಬ ನಡೆಯುತ್ತದೆ. ಸಂಜೆಯ ಹೊತ್ತಿಗೆ ಮನೆಯ ಹೊಸಲಿನಲ್ಲೆಲ್ಲ ಬಲೀಂದ್ರನನ್ನು ಮಾಡಿಟ್ಟು ಷೋಡಶೋಪಚಾರಗಳಿಂದ ಪೂಜಿಸಬೇಕು. ಬಾಣಬಿರುಸುಗಳನ್ನು ಹಾರಿಸುವುದುಂಟು. ಬಲೀಂದ್ರ ಭೂಲೋಕಕ್ಕೆ ಬಂದು ಮೂರೂಮೂಕ್ಕಾಲು ಘಳಿಗೆ ಇರುವನೆಂದು ಜನರ ನಂಬಿಕೆ.

ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ವೈಕುಂಠ ಅಧಿಪತಿ ಶ್ರೀ ವಿಷ್ಣು ಲಕ್ಷ್ಮೀಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ

ಮೇಷ

ಕೆಟ್ಟ ಹಠದಿಂದ ದುರ್ಯೋಧನ ಬಿದ್ದ. ಹಠ ಯಾರಿಗೂ ಒಳ್ಳೆಯದಲ್ಲ. ಆದರೆ ನಿಮ್ಮ ಹಠದಿಂದ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರುವುದು. ಕೋಪ ಹಾಗೂ ಹಠವನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ತೊಂದರೆ ಅನುಭವಿಸಿರಿ.ಉತ್ತಮ ಆರೋಗ್ಯ ಇರುವುದು. ಹಣಕಾಸು ವ್ಯವಹಾರದಲ್ಲಿ ಯಶಸ್ಸು ದೊರೆಯುವುದು. ಇಂದು ಸಂತೋಷ, ಸಂಭ್ರಮದಿಂದ ದಿನವನ್ನು ಕಳೆಯುವಿರಿ. ದೂರದಿಂದ ಬರುವ ವಾರ್ತೆಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ನಿಮ್ಮ ಮುಂದಿರುವ ಜವಾಬ್ದಾರಿ ಬಹು ಮಹತ್ತರವಾದದ್ದು. ಅದನ್ನು ನೀವು ಸಲೀಸಾಗಿ ನಿಭಾಯಿಸುವಿರಿ. ಅಕ್ಕಪಕ್ಕದವರು, ನಿಮ್ಮ ಸ್ನೇಹಿತರು ಇದನ್ನು ಕಂಡು ಆಶ್ಚರ್ಯ ಚಕಿತರಾಗುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಮೂರ್ಖರಿಗೆ ನೂರ್ಕಾಲ ಬುದ್ಧಿ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ. ಹಾಗಾಗಿ ಈ ದಿನ ಪರರಿಗೆ ಉಪದೇಶ ಮಾಡಲು ಹೋಗಬೇಡಿ. ನಿಮ್ಮ ಮನಸ್ಸಿನ ನೆಮ್ಮದಿಗಾಗಿ ಕೃಷ್ಣನ ಆರಾಧನೆ ಮಾಡಿ.ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಕಚೇರಿಯಲ್ಲಿನ ಬಿಕ್ಕಟ್ಟು ನಿವಾರಣೆ ಅಗಲಿದೆ. ಮೊಮ್ಮಗುವಿನ ಹುಟ್ಟಿದ ಹಬ್ಬಕ್ಕೆ ಬೆಲೆಬಾಳುವ ವಸ್ತು ಖರೀದಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.ಕೆಲವು ತೀರ್ಮಾನಗಳನ್ನು ತಕ್ಷ ಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ.ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಆಸ್ತಿ, ಮನೆ ಲಪಟಾಯಿಸಲು ಬಂಧು ಬಾಂಧವರೇ ಹೊಂಚು ಹಾಕುತ್ತಿದ್ದಾರೆ. ಹಾಗಾಗಿ ಈ ದಿನ ಆಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕದಿರಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.ಆರ್ಥಿಕ ಅಭಿವೃದ್ಧಿ ಕುಂಠಿತ ವಾದರೂ ಸಂತೃಪ್ತಿಯ ಬದುಕು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ.ಈ ದಿನ ಸ್ವಲ್ಪ ನಿರಾಶೆಯ ವಾತಾವರಣ ಎದುರಾಗುವುದು. ಹಣಕಾಸಿನ ಚಿಂತೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯ ತತ್ಪರತೆಯನ್ನು ಮನತುಂಬಿ ಹೊಗಳುವರು.ಅದೃಷ್ಟ ಸಂಖ್ಯೆ:2

 ಕಟಕ

ಕಟಕ

ಹಣಕಾಸಿನ ಲೇವಾದೇವಿಯಲ್ಲಿ ಎಚ್ಚರಿಕೆಯಲ್ಲಿರಿ. ಕಮೀಷನ್‌ ಏಜೆಂಟ್ಸ್‌ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹಣದ ಅಡಚಣೆ ಆಗುವ ಸಂದರ್ಭವಿದ್ದು ಸುಬ್ರಮಣ್ಯ ಸ್ವಾಮಿಯ ಪ್ರಾರ್ಥನೆಯನ್ನು ಮಾಡಿ.ಗುರಿ ಸಾಧಿಸುವಲ್ಲಿ ಗುರುವಿನ ಪಾತ್ರ ಹಿರಿದು. ಗುರುವನ್ನು ಮನಸಾರೆ ಕೊಂಡಾಡಿ. ಸಾಧ್ಯವಾದಲ್ಲಿ ಗುರು ಮಂದಿರಕ್ಕೆ ಹೋಗಿ ಪೂಜೆ ಮಾಡಿಸಿ. ಮಾತುಗಾರಿಕೆಯ ಪ್ರಭಾವ ಹೆಚ್ಚಾಗುವುದು.ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಇದರಿಂದ ನಿಮಗೆ ನೂತನ ಅನುಭವ ವಾಗುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರವನ್ನು ನೀಡುವರು. ಅದೃಷ್ಟ ಸಂಖ್ಯೆ:1

ಸಿಂಹ

ಸಿಂಹ

ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ನಿಮ್ಮ ಮನೆಯ ಸದಸ್ಯರೇ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿಲ್ಲ. ಹಾಗಾಗಿ ಈ ವಿಷಯವಾಗಿ ನೀವು ಹೊರಗಿನವರಿಂದ ಟೀಕೆಗೆ ಒಳಗಾಗುವ ಸಂಭವವಿರುತ್ತದೆ.ಸ್ವಂತ ವ್ಯಾಪಾರ-ವ್ಯವಹಾರದಿಂದ ಅಧಿಕ ಲಾಭವಾಗುವುದು. ವಿನಾಕಾರಣ ನಿಮ್ಮನ್ನು ನೀವು ಹೊಗಳಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಿ. ಸಂಗಾತಿಯನ್ನು ಗೌರವದಿಂದ ಕಾಣಬೇಕು.ನಿಮ್ಮ ಆತ್ಮವಿಶ್ವಾಸ ಬಲು ದೊಡ್ಡದು. ಆದರೆ ಹುಂಬುತನದಿಂದ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಹಾಗಾಗಿ ಜಾಗ್ರತೆ ಅಗತ್ಯ. ಅತ್ಯಂತ ನಂಬಿದ ಸ್ನೇಹಿತರುಗಳೆ ಕೈಕೊಡುವ ಸಂದರ್ಭವಿರುತ್ತದೆ.ಅದೃಷ್ಟ ಸಂಖ್ಯೆ:1

ಕನ್ಯಾ

ಕನ್ಯಾ

ಅಜ್ಜಿ ನೂತಿದ್ದೆಲ್ಲಾ ಮೊಮ್ಮಗನ ಉಡುದಾರಕ್ಕೆ ಎನ್ನುವಂತೆ ನೀವು ಶ್ರಮಪಟ್ಟು ಗಳಿಸಿದ ಹಣವು ಮಕ್ಕಳ ಐಷಾರಾಮಿ ಜೀವನಕ್ಕೆ ಖರ್ಚಾಗುವುದು. ನೀವು ನಿಮ್ಮ ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಿ.ಮನುಜ ಒಂದು ಬಾಗಿಲು ಮುಟ್ಟಿದರೆ ದೇವರು ಸಾವಿರ ಬಾಗಿಲನ್ನು ತೆರೆಯುವನು. ಹಾಗಾಗಿ ಯಾವುದನ್ನು ಮಾಡಿದರೆ ಒಳಿತಾಗುವುದು ಎಂದು ಚಿಂತಿಸಿ ಕಾರ್ಯ ಪ್ರವೃತ್ತರಾಗಿ.ಸರ್ಕಾರಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದರಿಂದ ಈ ದಿನ ನಿಮಗೆ ಬಹು ಬೇಸರವುಂಟಾಗುವ ಸಾಧ್ಯತೆ ಇದೆ. ತಾಳ್ಮೆ ಕಳೆದುಕೊಳ್ಳದಿರಿ. ಕಚೇರಿಯಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯನ್ನು ರೂಢಿಸಿಕೊಳ್ಳಿ.ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಸಾಲ ಮಾಡಿ ತುಪ್ಪ ತಿನ್ನಬೇಕೆನ್ನುವುದು ಕೆಲವರ ವಾದ. ಆದರೆ ಆ ಸಾಲವನ್ನು ತೀರಿಸುವ ಬಗೆಗೂ ಲೆಕ್ಕಾಚಾರ ಇಟ್ಟುಕೊಂಡಲ್ಲಿ ಬಾಳಲ್ಲಿ ಯಶಸ್ಸನ್ನು ಹೊಂದುವಿರಿ. ಧನಾತ್ಮಕ ಚಿಂತನೆಯಿಂದ ಧನ್ಯತೆಯನ್ನು ಪಡೆಯಿರಿ.ಕೆಲಸ ಕಾರ್ಯಗಳಲ್ಲಿನ ಅಚ್ಚುಕಟ್ಟುತನ ಮತ್ತು ಸಮಯ ಪಾಲನೆ ಇದು ನಿಮಗೆ ಮುಖ್ಯವಾದದ್ದು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದುವಿರಿ. ಅವಿವಾಹಿತರು ಹಾಗೂ ಪ್ರೇಮಿಗಳಿಗೆ ಉತ್ತಮ ದಿನ. ಕೆಲವರಿಗೆ ಮದುವೆ ಪ್ರಸ್ತಾಪಗಳು ಎದುರಾಗುವುದು. ಪ್ರೇಮಿಗಳನ್ನು ಒಂದು ಮಾಡಲು ಮನೆಯವರು ಸ್ನೇಹಿತರು ಪ್ರಾಮಾಣಿಕ ಪ್ರಯತ್ನ ಮಾಡುವರು.ಅದೃಷ್ಟ ಸಂಖ್ಯೆ:9

ವೃಶ್ಚಿಕ

ವೃಶ್ಚಿಕ

ಹಣ ನಿಮ್ಮ ಕೈಯಲ್ಲಿ ಹರಿದಾಡುತ್ತಿರುವುದು. ಸುಖಾಸುಮ್ಮನೆ ಗಳಿಸಿದ ಹಣವನ್ನು ನೀರಿನಂತೆ ಖರ್ಚು ಮಾಡುವುದು ಉಚಿತವಲ್ಲ. ಈ ಬಗ್ಗೆ ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ. ಸ್ನೇಹಿತರೊಂದಿಗೆ ಮಾತನಾಡಿ.ಸಮಸ್ಯೆಗಳು ಯಾರಿಗಿಲ್ಲ. ಈಗಿರುವ ಸಮಸ್ಯೆಯೇ ದೊಡ್ಡದು ಎಂದು ಕೈ ಹೊತ್ತು ಕುಳಿತುಕೊಳ್ಳುವುದರಿಂದ ಕಾರ್ಯ ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಆನಂದದಿಂದ ಇರಬೇಕು.ಹೆದರುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ಸಂತೋಷದ ಕೂಟಗಳಿಗೆ ಹಣ ಖರ್ಚು ಮಾಡುವ ಪ್ರಮೇಯ ಒದಗಿ ಬರುವುದು. ಅದೃಷ್ಟ ಸಂಖ್ಯೆ:9

ಧನಸ್ಸು

ಧನಸ್ಸು

ಆಕಾಶಕ್ಕೆ ಏಣಿ ಹಾಕುವ ನಿಮ್ಮ ಮನಸ್ಥಿತಿಯು ಉತ್ತಮವಾದದ್ದೆ. ಆದರೆ ಅದು ಎಷ್ಟರಮಟ್ಟಿಗೆ ಫಲ ನೀಡುವುದು ಎಂಬುದೇ ಅನುಮಾನ. ಧೈರ್ಯಶಾಲಿ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ.ಇಂದು ಮಹತ್ತರ ದಿನವಾಗಿ ಪರಿವರ್ತನೆ ಆಗುವುದು. ಈ ದಿನವನ್ನು ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ.ನಿಮ್ಮ ಬಾಯಿ ದೊಡ್ಡದು. ಅಂದರೆ ಮಾತುಗಳಿಗೆ ಲಗಾಮಿಲ್ಲ. ಸಿಕ್ಕಾಪಟ್ಟೆ ಮಾತನಾಡಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇದೆ. ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿ.ಅದೃಷ್ಟ ಸಂಖ್ಯೆ:8

ಮಕರ

ಮಕರ

ಬದುಕಿನ ಏಕತಾನತೆಯನ್ನು ಹೊರದೂಡಲು ಹೊರ ಸಂಚಾರ ಕೈಗೊಳ್ಳುವಿರಿ. ಇದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಆಹಾರ ದಾನ ಮಾಡಿ. ಶಿವಾಲಯದಲ್ಲಿ ದೀಪ ಹಚ್ಚಿ.ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು.ಒಟ್ಟೊಟ್ಟಿಗೆ ಹಲವು ಕೆಲಸಗಳು ಹೆಗಲೇರುವುದರಿಂದ ಈ ದಿನ ವಿಶ್ರಾಂತಿಗೆ ಸಂಚಕಾರ ಬರಲಿದೆ. ಸಾಧ್ಯವಾದಷ್ಟು ಸಂಭಾಳಿಸಿಕೊಂಡು ಹೋಗಲು ಪ್ರಯತ್ನಿಸಿ. ಆರ್ಥಿಕ ಮುಗ್ಗಟ್ಟು ಎದುರಾಗುವುದು.ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ವಿರೋಧಿಗಳು ತೊಂದರೆ ನೀಡಿದರೂ ಸಮಾಧಾನದಿಂದಲೇ ಅವರನ್ನು ಸಾಗಹಾಕಿರಿ. ಈ ನಿಮ್ಮ ತಾಳ್ಮೆಯು ನಿಮಗೆ ಅನುಕೂಲವಾಗಿ ಪರಿಣಮಿಸುವುದು. ಸರ್ಕಾರದ ವತಿಯಿಂದ ಸಿಹಿ ಸುದ್ದಿಯನ್ನು ಕೇಳುವಿರಿ.ಒಂದು ಪ್ರಮುಖ ಫಲಿತಾಂಶಕ್ಕೆ ಕಾಯುತ್ತಿರುವಿರಿ. ಅದು ನಿಮಗೆ ಅನುಕೂಲಕರವಾಗಿಯೇ ಇಂದು ಬರುವುದು. ಇದರಿಂದ ನಿಮ್ಮನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಮುಖಭಂಗವಾಗುವುದು.ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಈ ದಿನವು ನಿಮಗೆ ಅತ್ಯಂತ ಶುಭದಾಯಕವಾದ ದಿನವಾಗಿದೆ. ಕಚೇರಿಯಲ್ಲಿ ಮತ್ತು ಮನೆಯಲ್ಲಿ ನಿಮ್ಮ ಕಾರ್ಯ ಕುರಿತು ಎಲ್ಲರೂ ಹೊಗಳುವರು. ಹೊಸ ಯೋಜನೆಯೊಂದಕ್ಕೆ ಇಂದು ನಾಂದಿಯಾಗುವುದು.ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ರಾಜಕೀಯ ನಾಯಕರಿಗೆ ಹಾಗೂ ಪುಸ್ತಕ ಬರಹಗಾರರಿಗೆ ಉತ್ತಮ ದಿನ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು.ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆಗಳು ದಟ್ಟವಾಗಿವೆ. ವರ್ಗ ಆಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸದೇ ಮುಂದಡಿ ಇಡುವುದು ಜಾಣತನದ ಲಕ್ಷ ಣವಲ್ಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

For Quick Alerts
ALLOW NOTIFICATIONS
For Daily Alerts

    English summary

    your daily horoscope-7-November-2018

    Know what astrology and the planets have in store for you today. Choose your zodiac sign and read the details...
    Story first published: Wednesday, November 7, 2018, 10:13 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more