ಭಾನುವಾರದ ದಿನ ಭವಿಷ್ಯ

Posted By: Divya pandith
Subscribe to Boldsky

ನಮ್ಮನ್ನು ನಾವು ಎಷ್ಟು ಸಂತೋಷವಾಗಿಟ್ಟುಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಮಾನಸಿಕ ಸ್ಥಿತಿಯ ಮಟ್ಟ ನಿರ್ಧಾರವಾಗುತ್ತದೆ. ಇದ್ದುದ್ದರಲ್ಲೇ ಸಂತೋಷಪಟ್ಟುಕೊಳ್ಳುವ ಸ್ವಭಾವ ನಮ್ಮದಾಗಿದ್ದರೆ ಅದೆಂತಹದ್ದೇ ಪರಿಸ್ಥಿತಿ ಬಂದರೂ ಎದುರಿಸುವ ಸಾಮರ್ಥ್ಯ  ನಮ್ಮಲ್ಲಿರುತ್ತದೆ. ಸನ್ನಿವೇಶಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಆಧಾರದ ಮೇಲೆ ಸಮಾಜದಲ್ಲಿ ನಮ್ಮ ವ್ಯಕ್ತಿತ್ವವೂ ನಿರ್ಧಾರವಾಗುತ್ತದೆ. ನಮ್ಮ ವ್ಯಕ್ತಿತ್ವ ಹಾಗೂ ಮಾನಸಿಕ ಸ್ಥಿತಿಯು ನಮ್ಮ ಹಿಡಿತದಲ್ಲಷ್ಟೇ ಇರುವುದಿಲ್ಲ. ಅದು ನಮ್ಮ ಗ್ರಹಗತಿಗಳನ್ನು ಆಧರಿಸಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

2018ರಲ್ಲಿ ರಾಶಿ ಚಕ್ರದ ಅನ್ವಯವಾಗಿ ನಮ್ಮ ಮಾನಸಿಕ ಸ್ಥಿತಿಯಲ್ಲಿ ಕೆಲವು ಬದಲಾವಣೆಯನ್ನು ತಂದುಕೊಳ್ಳಬಹುದು. ಅದಕ್ಕೆ ಪೂರಕವಾಗಿ ಗ್ರಹಗತಿಗಳ ಸಹಕಾರ ದೊರೆಯುವುದು ಎಂದು ಕೆಲವು ಜ್ಯೋತಿಷ್ಯ ಶಾಸ್ತ್ರ ದೃಢ ಪಡಿಸುತ್ತಿದೆ. ಹಾಗಾದರೆ ಈ ಹಿಂದೆ ನಾವು ಯಾವೆಲ್ಲಾ ಮಾನಸಿಕ ಸ್ಥಿತಿಗಳನ್ನು ಹೊಂದಿದ್ದೆವು? 2018ರಲ್ಲಿ ಯಾವ ಬದಲಾವಣೆಗೆ ಸಿದ್ಧರಾಗಬೇಕು? ಅದರಿಂದ ನಮ್ಮನ್ನು ನಾವು ಸಂತೋಷವಾಗಿ ಇರಿಸಿಕೊಳ್ಳುವುದು ಹೇಗೆ? ಎನ್ನುವ ಸೂಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗಾಗಿ ಪರಿಚಯಿಸುತ್ತಿದೆ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ಸಮಾಧಾನ ಲಭಿಸುವುದು. ಬಂಧು ಮಿತ್ರರ ಆಗಮ ಆಗುವುದು. ಮನೆಯಲ್ಲಿ ಸಿಹಿ ಭೋಜನವನ್ನು ಸವಿಯುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯನ್ನು ಖರೀದಿಸಲು ಸ್ನೇಹಿತರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಲಾಭ ಉಂಟಾಗುವುದು. ಜೀವನದಲ್ಲಿ ಎಲ್ಲಾ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಸಂಪೂರ್ಣವಾದ ಸಮಾಧಾನ ಇಂದು ನಿಮಗೆ ಲಭಿಸದು. ಯಾವುದೇ ಕಾರಣಗಳಿಗೂ ನಿಮ್ಮ ಆಂತರಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಅನೇಕ ದಿನಗಳಿಂದ ಭೇಟಿಯಾಗದ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಚಿತ್ರೋದ್ಯಮ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲಕರವಾದ ದಿನ ಎಂದು ಹೇಳಬಹುದು. ಆದಷ್ಟು ಪ್ರಾಮಾಣಿಕ ಪ್ರವೃತ್ತಿಯನ್ನು ಹೊಂದಿರಬೇಕು. ಆಗ ಭಗವಂತನೂ ನಿಮ್ಮ ಸಹಾಯಕ್ಕೆ ನಿಲ್ಲುತ್ತಾನೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ನಿಮ್ಮ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ವಿಷ್ಣುವಿನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ಸಮಾಧಾನ ಲಭಿಸುವುದು. ಬಂಧು ಮಿತ್ರರ ಆಗಮ ಆಗುವುದು. ಮನೆಯಲ್ಲಿ ಸಿಹಿ ಭೋಜನವನ್ನು ಸವಿಯುವ ಲಕ್ಷಣ ಗಳಿವೆ. ದೂರದ ಪ್ರಯಾಣ ಕೈಗೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಗುಣಮುಖರಾಗಿ ಮನೆಗೆ ಹಿಂತಿರುಗಬಹುದು. ನಿಮ್ಮ ಜೀವನದಲ್ಲಿ ಇನ್ನಷ್ಟು ಸಂತೋಷ ಹಾಗೂ ಪ್ರಗತಿಯನ್ನು ಪಡೆದುಕೊಳ್ಳಲು ಗಣೇಶನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಕಪ್ಪು ಬಟ್ಟೆಯನ್ನು ಧರಿಸದಿರಿ. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರಸ್ಥರು ಸಹ ಉತ್ತಮವಾದ ಲಾಭವನ್ನೇ ಪಡೆದುಕೊಳ್ಳುವರು. ಸ್ಥಿರ ಆಸ್ತಿಯಿಂದ ಲಾಭವನ್ನು ಪಡೆದುಕೊಳ್ಳುವ ಲಕ್ಷಣವಿದೆ. ನಿಮ್ಮ ಜೀವನದಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗಲು ಹಾಗೂ ಸಂತೋಷಕರವಾದ ಜೀವನವನ್ನು ನಡೆಸಲು ವಿಷ್ಣುವಿನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಅನಿರೀಕ್ಷಿತವಾಗಿ ಹಲವು ಸೋಲುಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ಮಾನಸಿಕ ನೋವು ಮುಂದುವರಿಯುವುದು. ಅನೇಕ ಅವಮಾನ ಹಾಗೂ ಅಪವಾದಗಳನ್ನು ಅನುಭವಿಸಬೇಕಾಗುವುದು. ರಾಜಕೀಯ ವ್ಯಕ್ತಿಗಳಿಗೆ ವಿಪರೀತವಾದ ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕೆಲವು ಒತ್ತಡದ ವಿಚಾರವು ನಿಮ್ಮ ಮನಸ್ಸಿಗೆ ಅಸಮಧಾನ ಹಾಗೂ ಗೊಂದಲವನ್ನು ಸೃಷ್ಟಿ ಮಾಡುತ್ತವೆ. ಚಿತ್ರೋದ್ಯಮ ಕ್ಷೇತ್ರದಲ್ಲಿರುವವರು ಒಂದಿಷ್ಟು ಅಡೆತಡೆಗಳನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇಂದು ನಿಮಗೆ ಉತ್ತಮವಾದ ದಿನ. ಮನೆಯಲ್ಲಿ ನೆಮ್ಮದಿ ಹಾಗೂ ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಹದಗೆಟ್ಟ ಆರೋಗ್ಯದಿಂದ ಸುಧಾರಣೆಯನ್ನು ಕಾಣುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಲಾಭವನ್ನು ತಂದಿಡುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯಿಂದ ಲಾಭ ಪಡೆದುಕೊಳ್ಳುವಿರಿ. ಕೆಲವು ಉಪಯುಕ್ತ ವಿಚಾರದ ಕುರಿತು ಸ್ನೇಹಿತರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ವಿಷ್ಣು ಮತ್ತು ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಮಾಧಾನದ ಬದುಕನ್ನು ನೀವು ಕಾಣುವಿರಿ. ಮನೆಯಲ್ಲಿ ನೆಮ್ಮದಿ ಕಾಣುವಿರಿ. ಮಕ್ಕಳಿಗೆ ಇದ್ದ ಅಡೆತಡೆಗಳು ದೂರವಾಗುವುದು. ವಿವಾಹಕ್ಕೂ ಸಹ ಅನುಕೂಲಕರವಾದ ದಿನ ಆಗುವುದು. ಇಂದು ನಿಮಗೆ ಅನುಕೂಲಕರವಾದಂತಹ ದಿನ. ವಿದೇಶದಿಂದ ಬರುವ ಸ್ನೇಹಿತರು ಶುಭ ವಾರ್ತೆಗಳನ್ನು ಹೊತ್ತು ತರುವರು. ನೆಮ್ಮದಿಯನ್ನು ಕಂಡುಕೊಳ್ಳುವಂತಹ ದಿನ. ವೈಜ್ಞಾನಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಂಪೂರ್ಣ ಪ್ರಮಾಣದ ಸಮಾಧಾನ ಲಭಿಸದು. ಒಂದಿಷ್ಟು ಅಜೀರ್ಣ ಸಮಸ್ಯೆಗಳು ನಿಮ್ಮನ್ನು ಬಾಧಿಸುವ ಸಾಧ್ಯತೆಗಳಿವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಿರಿಯರ ಮಾತನ್ನು ಮೀರದಿರಿ. ಆದಷ್ಟು ಶಾಂತಿ ಹಾಗೂ ಸಮಾಧಾನವನ್ನು ಪಡೆದುಕೊಳ್ಳುವುದರಿಂದ ಇನ್ನಷ್ಟು ಪ್ರಗತಿಯನ್ನು ಸಾಧಿಸಬಹುದು. ಪತ್ರಕರ್ತರಿಗೆ ಅನುಕೂಲ ಉಂಟಾಗುವುದು. ಹೊಸ ಆಯಾಮಗಳು ನಿಮ್ಮ ಯಶಸ್ಸಿಗೆ ಕಾರಣವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಜನ್ಮ ಶನಿಯ ಪ್ರಭಾವ ಇರುವುದರಿಂದ ಆಂತರಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಜಗಳಗಳು ಉಂಟಾಗುವ ಸಾಧ್ಯತೆಗಳಿವ. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ಒಂದಿಷ್ಟು ಅಡೆತಡೆಗಳನ್ನು ಅನುಭವಿಸುವಿರಿ. ಆರ್ಥಿಕ ಅನುಕೂಲಕ್ಕಾಗಿ ಸಾಲ ಪಡೆದುಕೊಳ್ಳುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಗೊಂದಲ ಹಾಗೂ ಅನಾನುಕೂಲ ಪರಿಸ್ಥಿತಿ ಎದುರಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ಆಂಜನೇಯನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಸುಂದರವಾದ ಜೀವನವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುವಿರಿ. ಕೆಲವು ನಿರ್ಧರಿತ ವಿಚಾರಗಳಿಂದ ಅನುಕೂಲ ಉಂಟಾಗುವುದು. ಕೆಲವು ಕೆಲಸ ಕಾರ್ಯಗಳ ಪರಿಣಾಮವಾಗಿ ಮಾನಸಿಕ ನೆಮ್ಮದಿ ಹಾಗೂ ಖುಷಿಯನ್ನು ಅನುಭವಿಸುವಿರಿ. ಹಿರಿಯರಿಂದ ಒಂದಿಷ್ಟು ಹಣದ ಸಹಾಯ ದೊರೆಯುವುದು. ಕೈಗಾರಿಕೋದ್ಯಮಗಳಲ್ಲಿ ಕೆಲಸಮಾಡುವವರಿಗೆ ಅನುಕೂಲ ಹಾಗೂ ಲಾಭವನ್ನೇ ತಂದುಕೊಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇಂದು ನಿಮಗೆ ಶುಭ ದಿನ. ಅನಿರೀಕ್ಷಿತ ಸೋಲು ದೂರಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಣುವಿರಿ. ಕಲಾವಿದರಿಗೆ ಚಿತ್ರೋದ್ಯಮ ಕ್ಷೇತ್ರದಲ್ಲಿ ಒಂದಿಷ್ಟು ಅವಕಾಶಗಳು ದೊರೆಯುವುದು. ಜನಪ್ರಿಯ ನಾಯಕರುಗಳು ಒಂದಿಷ್ಟು ಅನುಕೂಲವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಜೀವನದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಂತೋಷದ ಬದುಕನ್ನು ಪಡೆಯಲು ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ನಿಮಗೆ ಶುಭ ದಿನ. ಮನೆಯಲ್ಲೂ ನೆಮ್ಮದಿಯನ್ನೇ ಕಾಣುವಿರಿ. ಲೇಖಕರಿಗೆ ಸನ್ಮಾನ ಹಾಗೂ ಗೌರವಾದಿಗಳು ದೊರೆಯುವುದು. ಕಲಾವಿದರಿಗೆ ಅನುಕೂಲ ಹಾಗೂ ಚಿತ್ರೋದ್ಯಮ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಸಣ್ಣ ಪುಟ್ಟ ಗೃಹ ಕೈಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ ಉಂಟಾಗುವ ಸಾಧ್ಯತೆಗಳಿವೆ. ಇಂದು ಬಾಲ್ಯರಿಂದ ಹಿಡಿದು ವೃದ್ಧರವರೆಗೂ ಅನುಕೂಲಕರವಾದಂತಹ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

your-daily-horoscope-7-January-2018

Know what astrology and the planets have in store for you today. Choose your zodiac sign and read the details..
Story first published: Sunday, January 7, 2018, 7:01 [IST]