ಶನಿವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವನೇ ಕೆಟ್ಟದಾಗಬೇಕೆಂದೇನೂ ಇಲ್ಲ. ರಾತ್ರಿ ಕಳೆದು ಹಗಲು ಬರುವಂತೆ, ಒಳ್ಳೆಯ ದಿನಗಳು ಬಂದೇ ಬರುತ್ತವೆ. ಜೀವನದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸುವ ಮನಃಸ್ಥಿತಿಯನ್ನು ಹೊಂದಿರಬೇಕು. ಆತ್ಮವಿಶ್ವಾಸ, ಕೃತಜ್ಞ ಭಾವ, ದೃಢವಿಶ್ವಾಸ ಎನ್ನುವ ಅಮೂಲ್ಯವಾದ ಆಸ್ತಿಗಳನ್ನು ಸದಾ ನಮ್ಮ ಬಳಿ ಇಟ್ಟುಕೊಂಡಿರಬೇಕು. ಆಗ ನಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಬದಲಿಗೆ ನಿಧಾನವಾಗಿಯೇ ಆದರೂ ಸಾಧನೆಯ ಮೆಟ್ಟಿಲೇರಬಹುದು. ಅಂಜಿಕೆ, ಅನುಮಾನ, ನಿರ್ಲಕ್ಷ ಭಾವನೆ, ಅಹಂಕಾರ ಎನ್ನುವುದು ನಮ್ಮನ್ನು ಸೋಲಿನತ್ತ ಕೊಂಡೊಯ್ಯುತ್ತದೆಯೇ ಹೊರತು ಜಯದ ದಾರಿಗಲ್ಲ ಎನ್ನುವುದನ್ನು ನಾವು ಸದಾ ನೆನಪಿಟ್ಟುಕೊಂಡಿರಬೇಕು.

ಅನೇಕರು ಶನಿವಾರ ಎಂದರೆ ಕಷ್ಟದ ವಾರ, ಅಶುಭ ಎಂದೆಲ್ಲಾ ಭಯಪಡುತ್ತಾರೆ. ಅಂತಹ ಅಂಜಿಕೆ ಅಥವಾ ತಾತ್ಸರದ ಭಾವನೆಯನ್ನು ಹೊಂದುವ ಅಗತ್ಯವಿಲ್ಲ. ವಾರ ಶನಿವಾರ ಆದರೂ ನಿಮ್ಮ ಅದೃಷ್ಟ ಉತ್ತುಂಗಕ್ಕೆ ಏರಬಹುದು. ಶನಿ ದೇವನು ಕೇವಲ ಕಷ್ಟವನ್ನಷ್ಟೇ ಅಲ್ಲ ಉತ್ತಮ ಬದುಕಿನ ನಿರ್ವಹಣೆಯ ಕಲೆಯನ್ನು ಕಲಿಸುವ ಗುರು. ಈ ಶುಭ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಯು ಉಂಟಾಗಬಹುದು ಎನ್ನುವುದನ್ನು ತಿಳಿಸುಕೊಳ್ಳಲು ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ... 

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಸಮಾಧಾನದ ಬದುಕನ್ನು ಕಾಣುವಿರಿ. ಹೊಸ ಹೊಸ ಅವಕಾಶಗಳು ನಿಮ್ಮ ಕೈಸೇರುವ ಸಾಧ್ಯತೆಗಳಿವೆ. ವೈಜ್ಞಾನಿಕ ಕ್ಷೇತ್ರದಲ್ಲಿ ಇರುವವರು ನೆಮ್ಮದಿಯನ್ನು ಕಾಣುವರು. ಅನೇಕ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಕಂಡುಕೊಳ್ಳುವಿರಿ. ಅನೇಕ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಬಗೆ ಹರಿಯುವುದು. ನ್ಯಾಯಾಂಗದಲ್ಲಿ ಲಾಭ ಮತ್ತು ಜಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಇನ್ನಷ್ಟು ಸಮಾಧಾನ ಹಾಗೂ ಪ್ರಗತಿ ಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಈ ರಾಶಿಯವರು ಆದಷ್ಟು ಕಾಳಜಿಯಿಂದ ಇರಿ. ಸಾಲವನ್ನು ಪಡೆಯುವುವುದು ಅಥವಾ ನೀಡುವ ಗೋಜಿಗೆ ಹೋಗದಿರಿ. ಮೂರನೆ ವ್ಯಕ್ತಿಯ ವಿಚಾರದಲ್ಲಿ ಮೂಗು ತೂರಿಸುವುದು ಅಥವಾ ಮಧ್ಯಸ್ಥಿಕೆ ವಹಿಸುವ ಕೆಲಸಕ್ಕೆ ಮುಂದಾಗದಿರಿ. ಬಂಧು ಮಿತ್ರರಿಂದಲೂ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳಿಂದ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಅಶುಭ ವಾರ್ತೆ ಕೇಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಆಂಜನೇಯನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಶುಭ ದಿನ. ಮಕ್ಕಳಿಂದಲೂ ಶುಭ ವಾರ್ತೆಯನ್ನೇ ಕೇಳುವಿರಿ. ಮಿತ್ರರ ಆಗಮನ ಹಾಗೂ ನಿರ್ದಿಷ್ಟ ಗುರಿಯನ್ನು ತಲುಪುವ ಸಾಧ್ಯತೆಗಳು ಕಂಡುಬರುತ್ತವೆ. ಅನೇಕ ದಿನಗಳಿಂದ ಅಂದುಕೊಂಡ ಕಾರ್ಯಗಳು ಸುಗಮಗೊಂಡು ಶುಭವನ್ನು ತಂದೊಡ್ಡುವುದು. ಪತ್ರಕರ್ತರಿಗೆ ಅನುಕೂಲಕರ ವಾತಾವರಣ ಲಭಿಸುವುದು. ಮೇಲ್ದರ್ಜೆಯ ಅಧಿಕಾರಿಗಳಿಗೂ ಅನುಕೂಲ ಹಾಗೂ ನೆಮ್ಮದಿ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸುಖಕರವಾದ ಬದುಕಿಗೆ ಆಂಜನೇಯನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನಿಮಗೆ ಶುಭ ದಿನ. ಇಂದು ನೀವು ಮಾಡುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆಯನ್ನು ಇಡಲಿದ್ದೀರಿ. ಮಕ್ಕಳಿಂದಲೂ ಶುಭ ಸುದ್ದಿ ಕೇಳುವಿರಿ. ಉನ್ನತ ವ್ಯಾಸಂಗದ ವಿಚಾರವಾಗಿ ಶುಭ ಸುದ್ದಿಯನ್ನೇ ಕೇಳುವಿರಿ. ತಂತ್ರಜ್ಞಾನ ಕ್ಷೇತ್ರದಲ್ಲಿರುವವರಿಗೂ ಅನುಕೂಲ ಉಂಟಾಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಅನಿರೀಕ್ಷಿತ ಸೋಲು ನಿಮ್ಮಿಂದ ದೂರ ಹೋಗುವುದು. ಚಿಲ್ಲರೆ ವ್ಯಾಪಾರಿಗಳು ಅಧಿಕ ಲಾಭವನ್ನು ಗಳಿಸುವ ಸಾಧ್ಯತೆಗಳಿವೆ. ಇಂದು ನೀವು ಆಂಜನೇಯ ಸ್ವಾಮಿಯ ದರ್ಶನ ಮಾಡುವುದರ ಮೂಲಕ ಕೆಲಸ ಆರಂಭಿಸಿ. ಇನ್ನಷ್ಟು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಪಂಚಮ ಶನಿಯ ಪ್ರಭಾವ ಇರುವುದರಿಂದ ಮಾನಸಿಕ ಕಿರಿಕಿರಿ ಮುಂದು ವರಿಯುವುದು. ಬಂಧು ಮಿತ್ರರಿಂದಲೂ ಅಸಮಧಾನ ಉಂಟಾಗುವುದು. ತೈಲೋತ್ಪನ್ನ ಹಾಗೂ ಖನಿಜೋತ್ಪನ್ನ ವ್ಯಾಪಾರ ವಹಿವಾಟುಗಳಲ್ಲಿ ಸಂಪೂರ್ಣ ಪ್ರಮಾಣದ ಲಾಭ ಮತ್ತು ಸಮಾಧಾನ ಪಡೆದುಕೊಳ್ಳಲು ಕಷ್ಟವಾಗುವುದು. ರತ್ನ ಆಭರಣ ವ್ಯಾಪಾರಿಗಳಿಗೆ ಒಂದಿಷ್ಟು ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯ ಕಾರಣವಾಗಿ ಕಿತ್ತಾಟ ನಡೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇಂದು ನಿಮಗೆ ಶುಭ ದಿನ. ಮಾನಸಿಕ ನೆಮ್ಮದಿ ಉಂಟಾಗುವುದು. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನೇ ಕಾಣುವಿರಿ. ನಿಮ್ಮ ನಿರೀಕ್ಷೆಯಂತೆಯೇ ಗುರಿಯನ್ನು ತಲುಪುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಲ್ಲಿಯೂ ಯಶಸ್ಸನ್ನು ಕಾಣುವಿರಿ. ಚಿತ್ರೋದ್ಯಮ ಕ್ಷೇತ್ರದಲ್ಲಿ ಇರುವವರು ನೆಮ್ಮದಿ ಪಡೆದುಕೊಳ್ಳುವರು. ಇನ್ನಷ್ಟು ಸಮಾಧಾನ ಹಾಗೂ ಸಮಸ್ಯೆಗಳ ನಿವಾರಣೆಗೆ ಆಂಜನೇಯನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ನಿಮಗೆ ಒಳ್ಳೆಯ ದಿನ. ಮನೆಯಲ್ಲಿ ನೆಮ್ಮದಿ ಕಾಣುವಿರಿ. ಬಂಧುಗಳ ಆಗಮನ. ಖನಿಜೋತ್ಪನ್ನ ವ್ಯವಹಾರಗಳಲ್ಲಿ ಹಾಗೂ ಸ್ಥಿರಾಸ್ತಿಗಳಿಂದಲೂ ಲಾಭವನ್ನೇ ಪಡೆದು ಕೊಳ್ಳುವಿರಿ. ನಿಮ್ಮ ನಿರೀಕ್ಷೆಯಂತೆಯೇ ಯಶಸ್ಸನ್ನು ಕಾಣುವಿರಿ. ಸಹೋದರಿಯಿಂದ ಒಂದಿಷ್ಟು ಸಹಾಯವನ್ನು ಪಡೆದುಕೊಳ್ಳುವಿರಿ. ನಿರುದ್ಯೋಗಿಗಳಿಗೆ ಇಂದು ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಂತೋಷಕ್ಕಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇಂದು ನೀವು ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಭಿನ್ನಾಭಿಪ್ರಾಯಗಳು ನಿಮ್ಮ ಮನಸ್ಸಿಗೆ ನೋವನ್ನು ಉಂಟುಮಾಡುವ ಸಾಧ್ಯತೆ ಇದೆ. ಅನಿವಾರ್ಯ ಕಾರಣದಿಂದ ದೂರದ ಪ್ರಯಾಣ ಕೈಗೊಳ್ಳುಬೇಕಾಗುವುದು. ಟ್ರಾವೆಲ್ ಏಜೆನ್ಸಿಯಲ್ಲಿ ಇರುವವರು ಒಂದಷ್ಟು ಅಡೆತಡೆಯನ್ನು ನಿರ್ವಹಿಸ ಬೇಕಾಗುವುದು. ಬೆಂಕಿಯ ಬಗ್ಗೆ ಎಚ್ಚರಿಕೆಯಿಂದ ಇರಿ. ಮಕ್ಕಳಿಗೆ ಗದರಿಸುವ ಕೆಲಸ ಮಾಡದಿರಿ. ಪ್ರಗತಿಯ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಸಹೋದ್ಯೋಗಿಗಳಿಂದ ಒಂದಿಷ್ಟು ಕಿರಿಕಿರಿಯನ್ನು ಅನುಭವಿಸುವಿರಿ. ಭಿನ್ನಾಭಿಪ್ರಾಯಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವದು. ಮಾಲೀಕರ ನಡುವೆ ಒಂದಿಷ್ಟು ಕಿರಿಕಿರಿ ಮತ್ತು ಅಡೆತಡೆ ಸೃಷ್ಟಿಯಾಗುವುದು. ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಬೇಕಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇಂದು ನಿಮಗೆ ಸಮಾಧಾನಕರವಾದ ದಿನ. ಬಂಧುಗಳ ಆಗಮನ ಕಾಣುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಭಗವಂತನ ಆಶೀರ್ವಾದ ಲಭಿಸುವುದು. ವಿದೇಶಯಾನದ ಕನಸು ನನಸಾಗುವ ಸಾಧ್ಯತೆಗಳಿವೆ. ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲ ಉಂಟಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಸ್ಮರಣೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇಂದು ನಿಮಗೆ ಶುಭ ದಿನ. ಹೊಸದಾದ ನಿಮ್ಮ ಯೋಜನೆಗಳು ಲಾಭವನ್ನು ತಂದುಕೊಡುವುದು. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಎಲ್ಲಾವಿಚಾರದಲ್ಲೂ ಇಂದು ನಿಮಗೆ ಸುಗಮವಾದಂತಹ ದಿನವಾಗಲಿದೆ. ವಿದ್ಯಾರ್ಥಿಗಳಿಗೂ ಶುಭ ದಿನ. ಕಪ್ಪು ಬಟ್ಟೆಯನ್ನು ಧರಿಸದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಂತೋಷಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ನಿಮಗೆ ಸುಂದರವಾದ ಜೀವನ ಲಭಿಸುವುದು. ಕೆಲವು ವ್ಯಾಪಾರ ವ್ಯವಹಾರಗಳಲ್ಲಿ ಅನುಕೂಲ ಹಾಗೂ ಲಾಭವನ್ನೇ ಗಳಿಸುವಿರಿ. ಸಹೋದರರ ಸಹಕಾರ ದೊರೆಯುವುದು. ಒಂದಷ್ಟು ಸಮಸ್ಯೆಗಳು ದೂರವಾಗುವುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಮನೆಯಲ್ಲಿ ನೆಮ್ಮದಿ ಲಭಿಸುವುದು. ದೂರದ ಪ್ರಯಾಣ ಕೈಗೊಳ್ಳಬೇಕಾಗುವುದು. ಪ್ರಯಾಣದಲ್ಲೂ ಮನೋಲ್ಲಾಸವನ್ನೇ ಅನುಭವಿಸುವಿರಿ. ಇಂದು ಎಲ್ಲರಿಗೂ ಅನುಕೂಲವನ್ನೇ ತಂದುಕೊಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

your-daily-horoscope-6-January-2018

Know what astrology and the planets have in store for you today. Choose your zodiac sign and read the details..
Story first published: Saturday, January 6, 2018, 5:01 [IST]