For Quick Alerts
ALLOW NOTIFICATIONS  
For Daily Alerts

  4 January 2018 ಗುರುವಾರದ ದಿನ ಭವಿಷ್ಯ

  By Divya Pandith
  |

  ನಾವು ಸದಾ ಪ್ರಪಂಚದಲ್ಲಾಗುವ ಬದಲಾವಣೆ ಹಾಗೂ ಬೇರೆಯವರ ತಪ್ಪಿನ ಬಗ್ಗೆ ಮಾತನಾಡುತ್ತೇವೆ. ನಮ್ಮಲ್ಲಿರುವ ಹುಳುಕು, ಕೊಳಕುಗಳ ಬಗ್ಗೆ ಅರಿವೇ ಇರುವುದಿಲ್ಲ. ಬೇರೆಯವರ ತಪ್ಪನ್ನು ಬೆರಳು ಮಾಡಿ ತೋರಿಸುವ ಮೊದಲು ನಮ್ಮಲ್ಲಿರುವ ನ್ಯೂನತೆಗಳನ್ನು ಮೊದಲು ಸರಿಮಾಡಿಕೊಳ್ಳಬೇಕು. ಪ್ರಪಂಚದ ಅವಲಕ್ಷಣವನ್ನು ಎತ್ತಿ ತೋರಿಸುವ ಮೊದಲು ನಮ್ಮಲ್ಲಿರುವ ಕುಂದು ಕೊರತೆಯನ್ನು ಸರಿ ಪಡಿಸಿಕೊಳ್ಳಬೇಕು. ಆಗ ನಮಗೆ ಸುತ್ತಲಿನ ಜನರು ಸರಿಯಾಗಿ ಕಾಣುತ್ತಾರೆ.

  ನಾವು ಸಂತೋಷದಿಂದ ಬದುಕಬಹುದು. ಗುರುವಾರವಾದ ಇಂದು ಗುರುಗ್ರಹ ಮತ್ತು ಗುರುವಿಗೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ. ಗುರು ವಾರವನ್ನು ಸಾಮಾನ್ಯವಾಗಿ ಶ್ರೇಷ್ಠ ದಿನ ಎಂದು ಪರಿಗಣಿಸುತ್ತೇವೆ. ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಹುದು ಎಂದು ಸಹ ಹೇಳಲಾಗುತ್ತದೆ. ಈ ಶುಭ ದಿನದಂದು ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆ ಉಂಟಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ರಾಶಿ ಭವಿಷ್ಯದ ವಿವರಣೆಯನ್ನು ಅರಿಯಿರಿ.... 

  ಮೇಷ Mar 20 - Apr 19

  ಮೇಷ Mar 20 - Apr 19

  ಇಂದು ನೀವು ಸಮಾಧಾನದ ಬದುಕನ್ನೇ ಮುಂದುವರಿಸುವಿರಿ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಅನೇಕ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭವನ್ನೇ ಪಡೆದುಕೊಳ್ಳುವಿರಿ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಅನಿರೀಕ್ಷಿತ ಸೋಲನ್ನು ನೀವು ಬಗೆಹರಿಸಿಕೊಳ್ಳುವ ಲಕ್ಷಣಗಳು ಇವೆ. ಸ್ಥಿರ ಆಸ್ತಿಯಲ್ಲೂ ಲಾಭವನ್ನೇ ಪಡೆದುಕೊಳ್ಳುವಿರಿ. ವಿವಿಧ ಕಾರ್ಯ ಕೆಲಸಗಳಲ್ಲೂ ಲಾಭ ಹಾಗೂ ಶುಭವನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಶುಭ ದಿನ. ಉದ್ಯೋಗವನ್ನು ಈಗ ತಾನೆ ಪ್ರಾರಂಭಿಸಿದವರಿಗೂ ಸಹ ಅನುಕೂಲಕರ ವಾತಾವರಣವೇ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

  ವೃಷಭ 21 ಏಪ್ರಿಲ್ -21 ಮೇ

  ವೃಷಭ 21 ಏಪ್ರಿಲ್ -21 ಮೇ

  ಸಂಪೂರ್ಣ ಪ್ರಮಾಣದ ಸಮಾಧಾನ ಪಡೆದುಕೊಳ್ಳಲು ವಿಫಲರಾಗುವಿರಿ. ಅನಿರೀಕ್ಷಿತವಾಗಿ ಎದುರಾಗುವ ಸೋಲುಗಳು ಅಥವಾ ಸಮಸ್ಯೆಗಳು ನಿವಾರಣೆ ಹೊಂದುವ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯ ಕುಸಿತವು ಮಾನಸಿಕವಾಗಿ ಹೈರಾಣ ಗೊಳಿಸುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವದು. ಖನಿಜೋತ್ಪನ್ನ ವ್ಯವಹಾರದಲ್ಲೂ ಸಂಪೂರ್ಣ ಲಾಭ ಹಾಗೂ ಸಮಾಧಾನ ಅಲಭ್ಯವಾಗುವುದು. ಮೂರನೇ ವ್ಯಕ್ತಿಗಳ ವಿಚಾರದಲ್ಲಿ ನೀವು ಮೂಗು ತೂರಿಸದಿರಿ. ವೈಜ್ಞಾನಿಕ ಕ್ಷೇತ್ರದಲ್ಲೂ ಸಹ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆ ಮಾಡಿ.

  ಮಿಥುನ 22 ಮೇ -21 ಜೂನ್

  ಮಿಥುನ 22 ಮೇ -21 ಜೂನ್

  ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಬಂಧು ಮಿತ್ರರ ಆಗಮನ ಆಗುವುದು. ನಿರೀಕ್ಷಿತ ಮಟ್ಟದ ಲಾಭಾಂಶದಿಂದ ನಿಮ್ಮ ಮನಸ್ಸಿಗೆ ಒಂದಿಷ್ಟು ಖುಷಿಯನ್ನು ಪಡೆದುಕೊಳ್ಳುವಿರಿ. ಸ್ಥಿರಾಸ್ತಿಗಳಿಂದ ಲಾಭವನ್ನು ಸಹ ಪಡೆದುಕೊಳ್ಳುವ ಲಕ್ಷಣವಿದೆ. ಅನಿವಾರ್ಯ ಕಾರಣಗಳಿಗಾಗಿ ಕೆಲವು ಸ್ನೇಹಿತರನ್ನು ಭೇಟಿ ಮಾಡಬೇಕಾಗುವುದು. ಖಾಸಗಿ ಉದ್ಯೋಗ ಕ್ಷೇತ್ರದಲ್ಲೂ ಲಾಭವನ್ನು ಪಡೆದುಕೊಳ್ಳುವಿರಿ. ಸರ್ಕಾರಿ ನೌಕರರು ಮೇಲಾಧಿಕಾರಿಗಳ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗುರುವಿನ ಪ್ರಾರ್ಥನೆ ಮಾಡಿ.

  ಕರ್ಕ 22 ಜೂನ್ -22 ಜುಲೈ

  ಕರ್ಕ 22 ಜೂನ್ -22 ಜುಲೈ

  ಮಾನಸಿಕವಾಗಿ ಸಂತೋಷವನ್ನು ಅನುಭವಿಸುವಿರಿ. ಅನಿರೀಕ್ಷಿತ ಸೋಲು ನಿಮ್ಮಿಂದ ದೂರವಾಗುವುದು. ಬಂಧು ಮಿತ್ರರ ಆಗಮನ ಹಾಗೂ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸುವುದು. ಕ್ಲಿಷ್ಟಕರವಾದ ಕೆಲವು ಸಮಸ್ಯೆಗಳು ದೂರಾಗುವುದು. ಅಲ್ಲದೆ ಅನುಕೂಲಕರವಾದ ಪರಿಸ್ಥಿತಿಯನ್ನು ಭಗವಂತ ನಿಮಗೆ ಆಶೀರ್ವದಿಸುವನು. ವ್ಯಾಪಾರ ವಹಿವಾಟುಗಳಲ್ಲೂ ಲಾಭವನ್ನು ಗಳಿಸುವಿರಿ. ಮಕ್ಕಳಿಂದಲೂ ಶುಭ ಸಮಾಚಾರವನ್ನೇ ಕೇಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಬಗವಂತನ ಆಶೀರ್ವಾದ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ರಾಘವೇಂದ್ರ ಹಾಗೂ ಗುರುವಿನ ಆರಾಧನೆ ಮಾಡಿ.

  ಸಿಂಹ: ಜುಲೈ 23-ಆಗಸ್ಟ್ 23

  ಸಿಂಹ: ಜುಲೈ 23-ಆಗಸ್ಟ್ 23

  ಇವರು ಆದಷ್ಟು ಕಾಳಜಿಯಿಂದ ಇರಬೇಕಾಗುವುದು. ಮಾನಸಿಕವಾದ ಕಿರಿಕಿರಿ ಮುಂದುವರಿಯುವುದು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ವಿಪರೀತವಾದ ಹಣ ವ್ಯಯಿಸಬೇಕಾಗುವುದು. ಸಾಲದ ಮೊರೆ ಹೋಗುವ ಸಾಧ್ಯತೆಗಳು ಇವೆ. ಮಕ್ಕಳಿಗಾಗಿ ಹಣವನ್ನು ವ್ಯಯಿಸುವುದು ಹಾಗೂ ಜಾಮೀನು ನೀಡಬೇಕಾದಂತಹ ಅನಿವಾರ್ಯ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುವುದು. ಮಾನಸಿಕ ಅಶಾಂತಿಯ ಜೊತೆಗೆ ದೈನಂದಿನ ವ್ಯವಹಾರದಲ್ಲೂ ಕೆಲವು ಅಡೆತಡೆಗಳನ್ನು ನೀವು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ಇಂದು ನಿಮಗೆ ಸಾಮಾನ್ಯವಾದಂತಹ ದಿನ ಎನ್ನಬಹುದು. ಆರ್ಥಿಕ ವಲಯದಲ್ಲಿ ಕುಸಿತವನ್ನು ಕಾಣುವಿರಿ. ಕೆಲವು ವಿಚಾರದಲ್ಲಿ ಅನುಕೂಲಕರವಾದ ಯಶಸ್ಸನ್ನು ನೀವು ಕಾಣುವಿರಿ. ಸ್ತ್ರೀಯರ ಬದುಕಲ್ಲಿ ಒಂದಿಷ್ಟು ಪ್ರಮಾಣದ ಸಮಾಧಾನವನ್ನು ಪಡೆದುಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ವಿದೇಶಯಾನವನ್ನು ಗೈಯುವ ಸಾಧ್ಯತೆಗಳಿವೆ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಗುರುವಿನ ಆರಾಧನೆ ಮಾಡಿ.

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ಇಂದು ನಿಮಗೆ ಮನೆಯಲ್ಲಿ ನೆಮ್ಮದಿ ಹಾಗೂ ಆರ್ಥಿಕವಾಗಿ ಲಾಭವನ್ನು ಪಡೆದುಕೊಳ್ಳುವಂತಹ ದಿನ ಎಂದು ಹೇಳಬಹುದು. ಅನಿರೀಕ್ಷಿತ ಮಟ್ಟದ ಸೋಲು ದೂರ ಆಗುವುದು. ನಿರೀಕ್ಷಿತ ಮಟ್ಟದ ಯಶಸ್ಸು ನಿಮ್ಮ ಬೆನ್ನೇರುವುದು. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಷೇರು ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ ದೊರೆಯುವುದು. ಇನ್ನಷ್ಟು ಸಮಾಧಾನ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ನಿಮಗೆ ಶನಿಯ ಪ್ರಭಾವ ಮುಂದುವರಿಯುತ್ತಿರುವುದರಿಂದ ಸಂಪೂರ್ಣವಾದ ಮಾನಸಿಕ ನೆಮ್ಮದಿ ದೊರೆಯದು. ಅನಿರೀಕ್ಷಿತವಾಗಿ ಬರುವ ಕೆಲವು ಸೋಲುಗಳನ್ನು ನೀವು ಒಪ್ಪಿಕೊಳ್ಳುವ ಪರಿಸ್ಥಿತಿ ಎದುರಾಗುವುದು. ಕೆಲವು ಅಪಮಾನಕರ ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ. ರಾಜಕೀಯದಲ್ಲಿರುವ ವ್ಯಕ್ತಿಗಳಿಗೆ ಹಿನ್ನೆಡೆ ಉಂಟಾಗುವುದು. ಸಮಾಜ ಸೇವಕರಿಗೆ ಒಂದಿಷ್ಟು ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಆದಷ್ಟು ಶಾಂತಯುತವಾದ ವರ್ತನೆಯನ್ನು ನೀವು ತೋರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಶಿವನ ಉಪಾಸನೆ ಮಾಡಿ.

  ಧನು: 23 ನವೆಂಬರ್ -22 ಡಿಸೆಂಬರ್

  ಧನು: 23 ನವೆಂಬರ್ -22 ಡಿಸೆಂಬರ್

  ಆಂತರಿಕ ವಿಚಾರಗಳು ಇಂದು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ. ಮನೆ ಮಂದಿಯಿಂದ ವಿಭಿನ್ನವಾದ ನಿಲುವು ಉಲ್ಭಣಗೊಳಿಸುವ ಸಾಧ್ಯತೆಗಳಿವೆ. ಸಹೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು. ಸ್ಥಿರಾಸ್ತಿಗಾಗಿ ಜಗಳ ಸಂಭವಿಸುವ ಸಾಧ್ಯತೆಗಳಿವೆ. ಇಲ್ಲ ಸಲ್ಲದ ಆರೋಪ ಮತ್ತು ಅಪವಾದಗಳನ್ನು ನೀವು ಎದುರಿಸಬೇಕಾಗುವ ಸಾಧ್ಯತೆಗಳಿವೆ. ಸ್ತ್ರೀಯರ ಮನಸ್ಸನ್ನು ನೋಯಿಸದಿರಿ. ಪತ್ನಿಯ ಸಲಹೆ ಅಥವಾ ಮಾತನ್ನು ಕೇಳಿ. ಪ್ರಗತಿಪರ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

  ಮಕರ: ಡಿಸೆಂಬರ್ 23-ಜನವರಿ 20

  ಮಕರ: ಡಿಸೆಂಬರ್ 23-ಜನವರಿ 20

  ಇಂದು ನಿಮಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು. ಶನಿಯ ಪ್ರಭಾವ ಇರುವುದರಿಂದ ಕೆಲವು ವಿಚಾರದಲ್ಲಿ ಅಪಜಯ. ಬಂಧುಗಳಿಂದ ಯಾವುದೇ ಸಹಕಾರ ದೊರೆಯದು. ಬದಲಿಗೆ ಪವಮಾನ ಉಂಟಾಗುವುದು. ಹಿತಶತ್ರುಗಳಿಂದ ತೊಂದರೆ. ಸಹೋದ್ಯೋಗಿಗಳಿಂದಲೂ ಕಿರಿಕಿರಿ. ಆಸ್ತಿಯಲ್ಲಿ ನಷ್ಟ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗುರು ಮತ್ತು ಶಿವನ ಆರಾಧನೆ ಮಾಡಿ.

  ಕುಂಭ: ಜನವರಿ 20-ಫೆಬ್ರವರಿ 18

  ಕುಂಭ: ಜನವರಿ 20-ಫೆಬ್ರವರಿ 18

  ಸಮಾಧಾನದ ಬದುಕಿಗೆ ನಾಂದಿಯಾಗುವಿರಿ. ಬಂಧು ಮಿತ್ರರ ಆಗಮನ. ನಿರ್ಧಿಷ್ಟ ಮಟ್ಟದ ಗುರಿಯನ್ನು ತಲುಪುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನೇ ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಗುರುವಿನ ಆರಾಧನೆ ಮಾಡಿ.

  ಮೀನ: 20 ಫೆಬ್ರವರಿ -20 ಮಾರ್ಚ್

  ಮೀನ: 20 ಫೆಬ್ರವರಿ -20 ಮಾರ್ಚ್

  ಸುಂದರವಾದ ಜೀವನಕ್ಕೆ ಸಾಕ್ಷಿಯಾಗುವಿರಿ. ಮನೆಯಲ್ಲಿ ನೆಮ್ಮದಿಯನ್ನು ಕಾಣುವ ನಿರೀಕ್ಷೆಯನ್ನು ನೀವು ತಳೆಯಬಹುದು. ಬಂಧುಗಳ ಆಗಮ. ಸಿಹಿ ಸುದ್ದಿಯನ್ನೇ ನೀವು ಕೇಳುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ಭೇಟಿಯಾಗುವ ಸ್ನೇಹಿತರಿಂದ ಶುಭ ಸುದ್ದಿಯನ್ನೇ ಕೇಳುವಿರಿ. ವಿದೇಶಯಾನದ ಕನಸು ನನಸಾಗುವ ದಿನ. ನಿಮ್ಮ ಸುಂದರವಾದ ಕನಸಿನ ಜೀವನವನ್ನು ನೀವು ಪಡೆದುಕೊಳ್ಳಬೇಕೆಂದರೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

  English summary

  your-daily-horoscope-4-January-2018

  Know what astrology and the planets have in store for you today. Choose your zodiac sign and read the details..
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more