For Quick Alerts
ALLOW NOTIFICATIONS  
For Daily Alerts

31-10-2018: ಬುಧವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ.ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ.ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು.

ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ.ಇದೇ ವಿಷ್ಣುವಿನ ದಶಾವತಾರ.ವಿಷ್ಣುವಿನ ದಶವತಾರಗಳು, ಮತ್ಸ್ಯಾವತಾರ,ಕೂರ್ಮಾವತಾರ,ವರಹಾವತಾರ, ನರಸಿಂಹವತಾರ, ಪರಶುರಾಮನವತಾರ, ರಾಮಾವತಾರ ,ಕೃಷ್ಣಾವತಾರ, ಬುದ್ದಾವತಾರ ಮತ್ತು ಕಲ್ಕಿವತಾರ.

ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.ನಾರಾಯಣ ಎಂದೂ ಕರೆಯುತ್ತಾರೆ.

ಧರ್ಮಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕೀರ್ತಿನಾರಾಯಣನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ

ಮೇಷ

ಆಪ್ತರು ಅನಿರೀಕ್ಷಿತವಾಗಿ ನಿಮ್ಮನ್ನು ಭೇಟಿ ಮಾಡಲಿದ್ದಾರೆ ಮತ್ತು ಒಂದು ಮಹತ್ತರ ಕಾರ್ಯಕ್ಕಾಗಿ ಆಪ್ತ ಸಮಾಲೋಚನೆ ನಡೆಸುವರು. ಅವರು ಕೊಡಮಾಡುವ ಸಲಹೆಯನ್ನು ನೀವು ಪಾಲಿಸುವುದರಿಂದ ಇನ್ನು ಹೆಚ್ಚಿನ ಅನುಕೂಲಗಳು ಕಂಡು ಬರುತ್ತವೆ.

ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ಮಕ್ಕಳನ್ನು ಅಲಕ್ಷಿಸಲು ಮುಂದಾಗಬೇಡಿ. ಅವರೊಡನೆ ಸ್ನೇಹದಿಂದ ಮಾತನಾಡಿ ಅವರ ವಿಶ್ವಾಸವನ್ನು ಪಡೆಯಿರಿ. ಈ ದಿನ ಉಲ್ಲಾಸ, ಸಂಭ್ರಮದಿಂದ ಕಾಲ ಕಳೆಯುವಿರಿ. ಮಕ್ಕಳೆದುರು ನೀವು ಉತ್ತಮ ಷೋಷಕರು‌ ಎನಿಸಿಕೊಳ್ಳುವಿರಿ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಸ್ಪಷ್ಟವಾಗಿ ಮಾತನಾಡಿ. ನಿಮ್ಮೊಳಗೆ ನೀವು ಗೊಣಗಿಕೊಳ್ಳವುದನ್ನು ಮತ್ತು ಏರುಧ್ವನಿಯಲ್ಲಿ ಮಾತನಾಡುವುದನ್ನು ತಡೆದಲ್ಲಿ ಒಳಿತಾಗುವುದು. ಇದರಿಂದ ಮನದ ಸಂಕಲ್ಪವನ್ನು ಪೂರೈಸಿಕೊಳ್ಳಲು ಸಹಾಯ ಆಗುವುದು ಮತ್ತು ಸಂಗಾತಿಯ ಪ್ರೀತಿ ಸಂಪಾದಿಸುವಿರಿ.

ಅನ್ಯಮನಸ್ಕತೆ, ಚಾಂಚಲ್ಯದ ಚಿತ್ತವನ್ನು ಬಿಟ್ಟು ಬಿಡಿ. ಹೊಸ ತಂತ್ರಗಳಿಂದ ಕಾರ್ಯ ಆರಂಭಿಸಿದಲ್ಲಿ ಗೆಲುವು ನಿಮ್ಮದಾಗುವುದು. ಗುರುವಿನ ಮಂತ್ರವನ್ನು ತಪ್ಪದೆ ಪಠಿಸಿ.

ನಿಮ್ಮ ಸಹನ ಶೀಲತೆ, ಚಾತುರ್ಯಗಳಿಗೆ ಎಲ್ಲರೂ ಬೆರಗಾಗುತ್ತಾರೆ ಇದರಿಂದ ನಿಮಗೆ ಸಮಾಧಾನ ಉಂಟಾಗುವುದು. ಬಹುದಿನಗಳಿಂದ ಕಾಡುತ್ತಿದ್ದ ಆಂತರಿಕ ಮತ್ತು ಬಾಹ್ಯದ ತೊಂದರೆಗಳು ನಿವಾರಣೆ ಆಗುವವು.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಹೊಸ ಚೈತನ್ಯವು ನಿಮ್ಮಲ್ಲಿ ಕಂಡುಬರುವುದು. ಇದರಿಂದ ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭಾಂಶವನ್ನು ಕಂಡುಕೊಳ್ಳುವಿರಿ. ನಿಮಗೆ ವಿದ್ಯಾದಾನ ಮಾಡಿದ ಗುರುವೊಬ್ಬರ ಭೇಟಿ ಮತ್ತು ಅವರೊಡನೆ ಮಾತುಕತೆ ನಡೆಯುವುದು.

ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಗುರುವಿನ ಬೆಂಬಲ ನಿಮಗೆ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಚಾಲನೆ ಸಿಗಲಿದೆ. ಹಣಕಾಸಿನ ವಿಚಾರದಲ್ಲೂ ಕೂಡಾ ವಿಶೇಷವಾದ ಅನುಕೂಲತೆಗಳು ಕಂಡು ಬರುವುದು. ಕೆಲವು ತೀರ್ಥ ಕ್ಷೇತ್ರಗಳ ದರ್ಶನ ಮಾಡಲು ನಿರ್ಧಾರ ತಳೆಯುವಿರಿ.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಅನುಭವವಿಲ್ಲದಿರುವ ಕಾರ್ಯಕ್ಷೇತ್ರಕ್ಕೆ ಧುಮುಕಿ ಮನಸ್ಸಿನ ಶಾಂತತೆಯನ್ನು ಹಾಳು ಮಾಡಿಕೊಳ್ಳದಿರಿ. ಸದ್ಯಕ್ಕೆ ಇರುವ ನೌಕರಿ ನಿಮಗೆ ವಿರುದ್ಧವಾಗಿದ್ದಲ್ಲಿ ಬೇರೆ ನೌಕರಿಯನ್ನು ಹೊಂದುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.ಇರುವುದನ್ನು ಬಿಟ್ಟು ಇಲ್ಲದಿರುವುದರತ್ತ ಗಮನ ಹರಿಸಬೇಡಿ. ನೂರೆಂಟು ಕಡೆ ಗುಂಡಿ ಅಗೆಯುವುದಕ್ಕಿಂತ ಒಂದೇ ಕಡೆ ಆಳವಾದ ಗುಂಡಿ ತೆಗೆದಲ್ಲಿ ನೀರು ದೊರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಒಂದೇ ಕಡೆ ಗಮನವನ್ನು ಕೇಂದ್ರೀಕರಿಸಿ ಕಡತಗಳಿಗೆ ಸಹಿ ಹಾಕುವ ಮುನ್ನ ಗಡಿಬಿಡಿ ಬೇಡ. ಕಾಗದ ಪತ್ರಗಳಲ್ಲಿನ ವಿಷಯಗಳನ್ನು ಅಮೂಲಾಗ್ರವಾದಿ ತಿಳಿದು ಸಹಿ ಮಾಡಿ. ಇಲ್ಲವೆ ನೀವೇ ಮುಂದೆ ತೊಂದರೆಗೆ ಸಿಲುಕಿಕೊಳ್ಳುವಿರಿ.

ಅದೃಷ್ಟ ಸಂಖ್ಯೆ:3

ಸಿಂಹ

ಸಿಂಹ

ಯಾರೋ ಒಬ್ಬರು ನಿಮ್ಮನ್ನು ಟೀಕಿಸಿಬಿಟ್ಟರು ಎಂದು ಕೊರಗದಿರಿ. ಟೀಕೆ,ಟಿಪ್ಪಣಿಗಳು ಮನುಜ ಜೀವನದಲ್ಲಿ ಬರುವ ಉಳಿಪೆಟ್ಟುಗಳು. ಆ ಪೆಟ್ಟುಗಳನ್ನು ತಿನ್ನದೆ ಇದ್ದಲ್ಲಿ ನೀವು ಪರಿಪೂರ್ಣ ವ್ಯಕ್ತಿ ಆಗಲಾರಿರಿ. ಆದಷ್ಟು ತಾಳ್ಮೆಯಿಂದ ಇರಿ.

ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈಬಿಗಿ ಹಿಡಿಯುವುದು ಒಳ್ಳೆಯದು.ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ತೋರುವುದು. ಗುರುವಿನ ಅನುಗ್ರಹ ಪಡೆಯಿರಿ. ಕಾಲು ಕೆಜಿ ಕಡಲೆಕಾಳನ್ನು ದಾನ ಮಾಡಿ.

ಅದೃಷ್ಟ ಸಂಖ್ಯೆ:4

ಕನ್ಯಾ

ಕನ್ಯಾ

ವಿವಾಹಾಪೇಕ್ಷಿಗಳಿಗೆ ಉತ್ತಮ ಕಾಲ. ದೂರದಿಂದ ಬರುವ ವಾರ್ತೆಯು ನಿಮ್ಮ ಭಾವನೆಗಳಿಗೆ ಪುಕ್ಕವನ್ನು ನೀಡುವವು. ಉತ್ತಮ ದಿನವಾಗಿದ್ದು ನಿಮ್ಮ ಮನೋಕಾಮನೆಗಳು ಯಾವ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು.

ನಿಮ್ಮ ಪರೋಪಕಾರಿ ಗುಣವನ್ನು ಮುಕ್ತ ಕಂಠದಿಂದ ಪ್ರಶಂಸಿಸುವಂತಹ ಜನರು ನಿಮ್ಮನ್ನು ಭೇಟಿ ಆಗಲಿದ್ದಾರೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗಣಪತಿಯ ಪ್ರಭಾವ ಹೆಚ್ಚಿನದಾಗಿದ್ದು ಆತನ ಒಲುಮೆಯಿಂದ ಕ್ಲಿಷ್ಟಕರ ಸನ್ನಿವೇಶಗಳು ಕರಗುವುದು.'ಮೂಕಂ ಕರೋತಿ ವಾಚಾಲಂ' ಎಂಬ ಮಾತು ನಿಮ್ಮ ಅನುಭವಕ್ಕೆ ಬರುವುದು. ಹಾಗಾಗಿ ನಿಮ್ಮಲ್ಲಿನ ಸುಪ್ತ ಪ್ರತಿಭೆಯು ಹೊರ ಜಗತ್ತಿಗೆ ಅನಾವರಣಗೊಳ್ಳುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುವುದು.

ಅದೃಷ್ಟ ಸಂಖ್ಯೆ:5

ತುಲಾ

ತುಲಾ

ಅನೇಕ ರೀತಿಯ ವಾಣಿಜ್ಯದ ವಿಚಾರಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಅದರ ಅನುಕರಣೆ ಮತ್ತು ಅನುಷ್ಠಾನಕ್ಕೆ ತರುವುದರಿಂದ ತೊಂದರೆ ಎದುರಿಸುವಿರಿ. ನೀವು ಆಡುವ ಮಾತಿನಿಂದಲೇ ವೈರತ್ವವನ್ನು ಕಂಡುಕೊಳ್ಳುವಿರಿ. ತಾಳ್ಮೆ ಇರಲಿ.

ಕುಟುಂಬದ ಸದಸ್ಯರೊಡನೆ ದೂರ ಪ್ರವಾಸ ಮಾಡುವ ಸಾಧ್ಯತೆ ಇದೆ. ಇದರಿಂದ ನಗರದ ಜಂಜಾಟದಿಂದ ಕೆಲ ಸಮಯ ದೂರವಿದ್ದು ಮನಸ್ಸಿಗೆ ನೆಮ್ಮದಿ ಉಂಟಾಗುವ ಸಾಧ್ಯತೆ ಇರುತ್ತದೆ. ಕುಲದೇವರ ಅರ್ಚನೆ ಮಾಡಿಸಿ.

ಕೆಲಸದ ಸ್ಥಳದಲ್ಲಿ ಮಾತಿನ ಜಾಣ್ಮೆ, ನಯ, ವಿನಯಗಳಿಂದ ಮೇಲಧಿಕಾರಿಗಳ ಪ್ರಶಂಸೆ ಮತ್ತು ಗೌರವಕ್ಕೆ ಪಾತ್ರರಾಗುವಿರಿ. ನೂತನ ಕಾರ್ಯಭಾರವು ನಿಮ್ಮನ್ನು ಕೈಬೀಸಿ ಕರೆಯುವುದು. ಕೌಟುಂಬಿಕ ಜೀವನ ತೃಪ್ತಿದಾಯಕವಾಗಿರುತ್ತದೆ.

ಅದೃಷ್ಟ ಸಂಖ್ಯೆ:6

ವೃಶ್ಚಿಕ

ವೃಶ್ಚಿಕ

ನಿಮ್ಮ ಅವಿರತವಾದ ಪ್ರಯತ್ನಶೀಲತೆಯಿಂದ ಕಾರ್ಯ ಸಿದ್ಧಿಸುವುದು. ಇದರಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ ಮತ್ತು ದೇವಿ ಆರಾಧನೆ ಮಾಡುವುದು ಒಳ್ಳೆಯದು.ಜೂಜು, ರೇಸು, ಲಾಟರಿ ಎಂದು ಗ್ಯಾಂಬ್ಲಿಂಗ್‌ ಚಟುವಟಿಕೆಗಳಲ್ಲಿ ಹಣ ಹೂಡಿ ಕಳೆದುಕೊಳ್ಳದಿರಿ. ಕೂಡಿಟ್ಟ ಹಣ ಮುಂದಿನ ದಿನಗಳಿಗೆ ಸಹಾಯ ಮಾಡುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.ನಿಮ್ಮ ಸಲಹೆ ಸೂಚನೆಗಳನ್ನು ನಿಮ್ಮ ಕೈಕೆಳಗಿನವರು ಪಾಲಿಸುವುದಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಗ್ರಹಗಳು ಕೆಟ್ಟಾಗ ಮನೆಮಂದಿಯೇ ಆದರಿಸುವುದಿಲ್ಲ. ಹಾಗಾಗಿ ಈ ಸತ್ಯವನ್ನು ತಿಳಿದು ತಾಳ್ಮೆಯಿಂದ ಇರುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:9

ಧನಸ್ಸು

ಧನಸ್ಸು

ವಿವಿಧ ರೀತಿಯ ಜನರು ಆಮಿಷವನ್ನು ತೋರಿಸುವ ಮೂಲಕ ಮತ್ತು ಮೋಹಕ ಮಾತುಗಳಿಂದ ನಿಮ್ಮ ಸಖ್ಯ ಬೆಳೆಸಿ ನಿಮಗೇ ಅಪಚಾರ ಮಾಡುವ ಇಲ್ಲವೆ ಅವಮಾನವನ್ನುಂಟು ಮಾಡುವ ಪ್ರಕ್ರಿಯೆಗೆ ಇಳಿಯುವರು. ಈ ಬಗ್ಗೆ ಎಚ್ಚರ ಇರಲಿ.

ದೂರ ಪ್ರದೇಶದ ಪ್ರಯಾಣದ ಅವಕಾಶ ನಿಮಗೆ ಬರಲಿದೆ. ಇದರಿಂದ ನಿಮ್ಮ ವೈಯಕ್ತಿಕ ಬದುಕಿಗೂ ಸಹಾಯವಾಗುವುದು ಮತ್ತು ಹಣಕಾಸು ಕೂಡಾ ಬರುವುದು.ನ್ಯಾಯಬದ್ಧವಾದ ಮಾತುಗಾರಿಕೆ ಪ್ರಭಾವದಿಂದ ಎದುರಾಳಿಗಳನ್ನು ಜಯಿಸುವಿರಿ. ಇದರಿಂದ ಜೀವನದಲ್ಲಿ ಮಹತ್ತರ ತಿರುವಿಗೆ ಕಾರಣವಾಗುವುದು ಮತ್ತು ಕೌಟುಂಬಿಕವಾಗಿಯೂ ನೀವು ಉನ್ನತ ಸ್ಥಾನಮಾನಗಳನ್ನು ಹೊಂದುವಿರಿ.

ಅದೃಷ್ಟ ಸಂಖ್ಯೆ:4

ಮಕರ

ಮಕರ

ಕೃಷಿಯ ವಿಚಾರದಲ್ಲಿ ನಿರಂತರ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದರೆ ಸರಿಯಾದವರ ಜೊತೆಗೆ ಸಂಪರ್ಕಿ ಬೆಳೆಸಿ. ಮಾತುಕತೆಗಳ ಮೂಲಕ ಲಾಭದಾಯಕವಾಗುವುದು. ಶ್ರೀನರಸಿಂಹ ಸ್ವಾಮಿಯನ್ನು ಮನಸಾ ಸ್ಮರಿಸಿ.ಇತ್ತೀಚಿನ ದಿನಗಳ ವೈಫಲ್ಯಗಳ ಬಗ್ಗೆ ಯೋಚನೆ ಹೆಚ್ಚಾಗಿದೆ. ಈ ಬಗ್ಗೆ ಯೋಚಿಸದೇ ಹೊಸ ಉತ್ಸಾಹದಿಂದ ಕಾರ್ಯ ಆರಂಭಿಸಿ. ಇದರಿಂದ ಹೆಚ್ಚಿನ ಹಣಕಾಸು ಬರುವುದು. ಮಾನಸಿಕ ನೆಮ್ಮದಿ ದೊರೆಯುವುದು.ನಿಮ್ಮ ನಿತ್ಯ ನೈಮಿತ್ತಿಕ ಕಾರ್ಯಗಳಿಗೆ ಯಾವುದೇ ಬಾಧಕ ಉಂಟಾಗುವುದಿಲ್ಲ. ಆದರೆ ಹೆಚ್ಚಿನ ಪ್ರಗತಿ ಸಾಧಿಸಲು ಹಣದ ಮುಗ್ಗಟ್ಟು ಎದುರಾಗುವುದು. ಹಾಗಾಗಿ ಸದ್ಯಕ್ಕೆ ಹೊಸ ಕಾರ್ಯ ಮಾಡುವುದು ಬೇಡ.

ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ನಿಮ್ಮ ಪ್ರತಿಭಾಪೂರ್ಣವಾದ ಶಕ್ತಿಯನ್ನು ಹೊರ ಹಾಕಲಿದ್ದೀರಿ. ಇದರಿಂದ ನಿಮ್ಮ ಮಾರ್ಗದರ್ಶಕನಿಗೆ ಮತ್ತು ಮುಖ್ಯಸ್ಥರಿಗೆ ಸಂತೋಷವಾಗುವುದು. ನಿಮ್ಮ ಕಾರ್ಯಗಳು ಸುಲಲಿತವಾಗುವುದು.ವಿವಾಹ ಯೋಗ್ಯ ವಧು, ವರರಿಗೆ ಸೂಕ್ತ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಕೌಟುಂಬಿಕ ಜೀವನದಲ್ಲಿ ಉತ್ತಮ ದಿನಗಳನ್ನು ಕಾಣುವಿರಿ. ಬಹುದಿನದ ಆಸೆ ನೆರವೇರುವುದು.ನಿಮ್ಮ ಮಾತಿನ ಶಕ್ತಿಗೆ ದೈವದ ಸಹಾಯವಿದೆ. ಹಾಗಾಗಿ ನೀವು ಎಲ್ಲೆಡೆ ವಿಜೃಂಭಿಸುವಿರಿ. ಬರಬೇಕಾದ ಹಣವು ವಿವಿಧ ಮೂಲಗಳಿಂದ ನಿಮ್ಮ ಕೈಸೇರುವುದು. ಮಾತಾಪಿತರ ಆರೋಗ್ಯದ ಕಡೆ ಗಮನ ಕೊಡಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ನಡೆಯುವ ಮನುಜ ಎಡುವುವನು. ಅಂತೆಯೇ ಕೆಲವು ಕಾರ್ಯಗಳಲ್ಲಿ ತಪ್ಪು ನುಸುಳುವುದು ಸಹಜ. ಆದರೆ ಅದರ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿನ ಕಾರ್ಯಗಳ ಬಗ್ಗೆ ಚಿಂತಿಸುವುದು ಒಳ್ಳೆಯದು.ಹೊಸದಾದ ಸಂತೋಷವನ್ನು, ಚೈತನ್ಯವನ್ನು ಹೊಂದುವಿರಿ. ಗುರುಗ್ರಹದ ಜಪ ಇಲ್ಲವೆ ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.

ಗುಡ್ಡಕ್ಕೆ ಮಣ್ಣು ಹೊರುವಂತೆ ಸಕಲ ಕಾರ್ಯಗಳು ವ್ಯರ್ಥವಾಗುವ ಸಂದರ್ಭ ವಿರುತ್ತದೆ. ಹಾಗಾಗಿ ಮಾಡಬೇಕೆಂದಿರುವ ಮಹತ್ತರ ಕೆಲಸಗಳನ್ನು ಮುಂದೂಡುವುದು ಒಳಿತು.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-31-october-2018

Know what astrology and the planets have in store for you today. Choose your zodiac sign and read the details...
Story first published: Wednesday, October 31, 2018, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X