ಬುಧವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಕನಸು ನೂರಾರು ಇರಬಹುದು, ಆದರೆ ಮನಸ್ಸು ಒಂದೇ ಆಗಿರಬೇಕು. ಯೋಚನೆ ಸಾವಿರಾರು ಆಗಿರಬಹುದು, ಆದರೆ ಗುರಿ ಒಂದೇ ಆಗಿರಬೇಕು. ಈ ಮಾತು ಎಷ್ಟು ನಿಜಾ ಅಲ್ಲವಾ? ನಾವು ಅದೆಷ್ಟೇ ಕನಸು ಕಂಡಿದ್ದರೂ ಆ ಕನಸಿನ ಬಗ್ಗೆ ನಮ್ಮ ಮನಸ್ಸು ಏನು ಹೇಳುತ್ತದೆ ಎನ್ನುವುದರ ಆಧಾರದ ಮೇಲೆಯೇ ನಿರ್ಧಾರ ಕೈಗೊಳ್ಳುತ್ತೇವೆ. ಹಾಗೆಯೇ ಹಲವು ಬಗೆಯನ್ನು ನೋಡಿದಾಗ ಅಥವಾ ಕೇಳಿದಾಗ ಕಲ್ಪನೆಯ ಲೋಕದಲ್ಲಿ ಸಾವಿರಾರು ಆಲೋಚನೆಗಳನ್ನು ಕೈಗೊಳ್ಳುತ್ತೇವೆ.

ಆ ಆಲೋಚನೆಗಳಂತೆ ನಾವು ನಡೆದರೆ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಹಾಗಾಗಿ ಅದೆಷ್ಟೇ ಆಲೋಚನೆಗಳು ನಮ್ಮ ಮನಸ್ಸನ್ನು ತಟ್ಟಬಹುದು. ಆದರೆ ನಾವು ಸೂಕ್ತ ರೀತಿಯ ಒಂದು ಗುರಿಯನ್ನು ಹೊಂದಿರಬೇಕು. ಆ ಗುರಿ ಸಾಧನೆಗಾಗಿ ಶ್ರಮಿಸಬೇಕು ಆಗಲೇ ಯಶಸ್ಸಿನ ತುದಿಯನ್ನು ನಾವು ತಲುಪುತ್ತೇವೆ.

ಬುಧವಾರವಾದ ಇಂದು ಸಾಮಾನ್ಯವಾಗಿ ಬಹುತೇಕ ಜನರು ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ತಲ್ಲೀನರಾಗಿರುತ್ತಾರೆ. ಈ ವಾರದ ಅಂತ್ಯದೊಳಗೆ ಸಾಧನೆಯ ಗುರಿ ತಲುಪಬಹುದೇ? ಎನ್ನುವ ವಿಚಾರದಲ್ಲಿ ಇರುತ್ತಾರೆ. ಇಂತಹ ನಿಮ್ಮ ಬಯಕೆಗೆ ರಾಶಿಚಕ್ರ ಎಷ್ಟು ಸಹಕಾರ ನೀಡುತ್ತವೆ? ಇಂದು ನಿಮ್ಮ ಭವಿಷ್ಯದಲ್ಲಿ ಏನಾಗಬಹುದು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ನೀಡಿರುವ ದಿನ ಭವಿಷ್ಯವನ್ನು ಅರಿಯಿರಿ....

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇಂದು ನಿಮಗೆ ಸಮಾಧಾನಕರವಾದ ದಿನ. ಎಲ್ಲಾ ಬಗೆಯ ವ್ಯವಸ್ಥೆಗಳಿಗೆ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ಲಾಭ ದೊರೆಯುವುದು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಮಕ್ಕಳಿಂದ ಶುಭ ವಾರ್ತೆಗಳನ್ನು ನಿರೀಕ್ಷೆ ಮಾಡಬಹುದು. ಉನ್ನತ ವ್ಯಾಸಂಗದ ಕನಸು ನನಸಾಗುವುದು. ವ್ಯಾಪಾರಿಗಳಿಗೆ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಕಾರ್ಯದಲ್ಲಿ ವಿಳಂಬವನ್ನು ಅನುಭವಿಸಬೇಕಾಗುವುದು. ಅನಿರೀಕ್ಷಿತ ಕಾರಣಗಳಿಗೆ ಒಂದಿಷ್ಟು ಹಣವನ್ನು ವ್ಯಯ ಮಾಡಬೇಕಾಗುವುದು. ಆತ್ಮೀಯರಿಂದ ಒಂದಿಷ್ಟು ವಂಚನೆಗೆ ತುತ್ತಾಗಬೇಕಾಗುವುದು. ಸಹೋದರರ ನಡುವೆ ಒಂದಿಷ್ಟು ಭಿನ್ನಾಭಿಪ್ರಾಯಗಳು ಉಲ್ಭಣಿಸುವ ಸಾಧ್ಯತೆಗಳಿವೆ. ಬಂಧುಗಳು ಅಗಲಿದಂತಹ ದುರ್ವಾರ್ತೆಗಳನ್ನು ಕೇಳಬೇಕಾಗುವುದು. ಅಪಘಾತದ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಕಾಳಜಿಯಿಂದ ಇರುವುದು ಸೂಕ್ತ. ಮನೆಯಿಂದ ಹೊರಡುವ ಮುನ್ನ ಐದು ನಿಮಿಷ ಮೊದಲೇ ಹೊರಡಿ. ನಿಮ್ಮ ಹುಂಬತನವೇ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಯನ್ನು ಉಂಟಾಗುವುದು. ಸ್ತ್ರೀಯರ ಮನಸ್ಸು ಡೋಲಾಯಮಾನವಾಗಿರುತ್ತದೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ದುರ್ಗಾದೇವಿಯ ಪ್ರಾರ್ಥನೆ ಹಾಗೂ ವಿಷ್ಣುವಿನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಸಮಾಧಾನ ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭ್ಯವಾಗುವುದು. ಬಂಧು ಮಿತ್ರರ ಆಗಮನದಿಂದ ಸಿಹಿ ಭೋಜನ ಮಾಡುವ ಲಕ್ಷಣಗಳಿವೆ. ಅನಿರೀಕ್ಷಿತ ಸಮಸ್ಯೆಗಳು ದೂರವಾಗುವುದು. ಅನೇಕ ದಿನಗಳಿಂದ ಅಂದುಕೊಂಡ ತೀರ್ಮಾನಗಳು ಲಾಭವನ್ನು ತಂದುಕೊಡುವುದು. ಉದ್ಯೋಗದಲ್ಲಿ ಪ್ರಗತಿ ಹಾಗೂ ಲಾಭ ದೊರೆಯುವುದು. ಉನ್ನತ ವ್ಯಾಸಂಗದ ಕನಸು ನನಸಾಗುವುದು. ಇನ್ನಷ್ಟು ಪ್ರಗತಿ ಹಾಗೂ ಖುಷಿಗೆ ರಾಮ ಮತ್ತು ಶ್ರೀಕೃಷ್ಣನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ನೀವು ಮಾಡುತ್ತಿರುವ ಉದ್ಯೋಗದಲ್ಲಿ ಲಾಭ ದೊರೆಯುವುದು. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಫ್ಯಾನ್ಸಿ ಸ್ಟೋರ್ ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಹಾಗೂ ಚಿಕಿತ್ಸೆ ನೀಡುವವರಿಗೆ ಉತ್ತಮ ಲಾಭ ಉಂಟಾಗುವುದು. ಅನೇಕ ದಿನಗಳಿಂದ ಅಂದುಕೊಂಡ ಕನಸು ಇಂದು ನನಸಾಗುವುದು. ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ನಿಮಗೆ ವಿಪರೀತವಾದ ಒತ್ತಡ ಕಾಡುವುದು. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಬೇಕಾಗುವ ಸಂದರ್ಭ ಒದಗಿ ಬರುವುದು. ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರು ಅಪವಾದವನ್ನು ಹೊರಬೇಕಾಗುವುದು. ಅನ್ಯರ ಮಾತಿಗೆ ಕಿವಿಕೊಡದಿರಿ. ನಿಮ್ಮ ನಿರ್ಧಾರದಲ್ಲಿ ಸ್ಪಷ್ಟತೆ ಇರಲಿ. ಮಾಡುತ್ತಿರುವ ಉದ್ಯೋಗದಲ್ಲಿ ಕೆಲವು ಲಾಭವನ್ನು ಗಳಿಸಿಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇಂದು ನಿಮಗೆ ನೆಮ್ಮದಿಯ ಬದುಕು ದೊರೆಯುವುದು. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣುವಿರಿ. ದೂರದ ಬಂಧುಗಳು ಅಗಲಿದ ದುರ್ವಾತೆಯನ್ನು ಕೇಳುವ ಸಾಧ್ಯತೆಗಳಿವೆ. ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಉಪಶಮನವಾಗುವುದು. ಆರ್ಥಿಕ ವಲಯದ ಮುಗ್ಗಟ್ಟಿನಿಂದ ಇಂದು ನೀವು ಪಾರಾಗುವಿರಿ. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಮಾಧಾನದ ಬದುಕನ್ನು ನೀವು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ಬದುಕನ್ನು ಕಾಣುವ ಲಕ್ಷಣಗಳಿವೆ. ಇಂದು ಧಾರ್ಮಿಕ ಚಿಂತಕರಿಗೆ ಹಾಗೂ ಪತ್ರಕರ್ತರಿಗೆ ಅನುಕೂಲಕರವಾದ ದಿನವಾಗಲಿದೆ. ಇಂದು ನಿಮಗೆ ಸುಗಮವಾದ ದಿನವಾಗಲಿದೆ. ವಿವಾಹಕ್ಕೆ ಇದ್ದ ಅಡೆತಡೆ ದೂರವಾಗುವುದು. ಪ್ರೇಮ ವೈಫಲ್ಯದ ಸಮಸ್ಯೆಗಳು ದೂರಾಗಿ ಸಂತೋಷದ ಬದುಕನ್ನು ಕಾಣುವಿರಿ. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ಲಭಿಸುವುದು. ಗೃಹ ಕೈಗಾರಿಕೆಗಳಲ್ಲಿ ಲಾಭ ಉಂಟಾಗುವುದು. ಆಸ್ತಿಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಆರ್ಥಿಕ ವಲಯದಲ್ಲಿ ಏರುಪೇರು ಉಂಟಾಗುವುದು. ಅನಿರೀಕ್ಷಿತ ಸೋಲು ನಿಮ್ಮ ಮನಸ್ಸಿಗೆ ನೋವನ್ನುಂಟುಮಾಡುವುದು. ಆದಷ್ಟು ಕಾಳಜಿಯಿಂದ ಇರುವುದು ಸೂಕ್ತ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಲ್ಲೂ ಸಂಪೂರ್ಣ ಸಮಾಧಾನ ನೀಡದು. ರೈತರು ಕೆಲವು ಸಮಸ್ಯೆಗೆ ಒಳಗಾಗಬಹುದು. ಸಾಲದ ಬಾಧೆಗೆ ಒಳಗಾಗುವ ಸಾಧ್ಯತೆಗಳಿವೆ. ಬ್ಯಾಂಕ್ ಉದ್ಯಮಿಗಳು ವಂಚಕರ ಜಾಲಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಮಾನಸಿಕ ಕಿರಿಕಿರಿಯನ್ನು ನೀವು ಅನುಭವಿಸಬೇಕಾಗುವುದು. ಅಪಮಾನ ಎನ್ನುವುದು ನಿಮ್ಮ ಬೆನ್ನಿಗೆ ಇರುತ್ತದೆ. ಸ್ತ್ರೀಯರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹಿನ್ನೆಡೆ ಉಂಟಾಗುವುದು. ವಿಪರೀತ ಆಯಾಸವು ನಿಮ್ಮನ್ನು ಹೈರಾಣಗೊಳಿಸುವುದು. ಅತಿಯಾದ ಸುಳ್ಳು ನಿಮ್ಮನ್ನು ಕೊಚ್ಚಿಕೊಂಡು ಹೋಗುವ ಸಾಧ್ಯತೆಗಳಿವೆ. ಸಾಲ ನೀಡುವುದು ಅಥವಾ ಜಾಮೀನು ನೀಡುವ ಕೆಲಸಕ್ಕೆ ಮುಂದಾಗದಿರಿ. ಎಲ್ಲಾರೀತಿಯ ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ವಿಷ್ಣುವಿನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ನಿಮಗೆ ಶನಿ ಪ್ರಭಾವ ಇರುವುದರಿಂದ ಅಹಂಕಾರಕ್ಕೆ ಒಳಗಾಗದಿರಿ. ಸ್ತ್ರೀಯರು ರೂಪದರ್ಶಿಗಳಾಗಿದ್ದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ನಟ ನಟಿಯರಿಗೆ ಅನುಕೂಲಕರವಾದಂತಹ ದಿನ. ಕಲಾವಿದರಿಗೆ ಲಾಭ ದೊರೆಯುವುದು. ಬಟ್ಟೆ ವ್ಯಾಪಾರಿಗಳು ಸಮೃದ್ಧಿಯನ್ನು ಪಡೆದುಕೊಳ್ಳುವ ಸಧ್ಯತೆಗಳಿವೆ. ಅನೇಕ ಶುಭ ಶಕುನಗಳನ್ನು ಬರಮಾಡಿಕೊಳ್ಳಲು ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಸ್ತ್ರೀಯರು ಅಧಿಕ ಪ್ರಮಾಣದ ಸಮಾಧಾನವನ್ನು ಕಾಣುವಿರಿ. ತೈಲೋದ್ಯಮ ಅಧಿಕ ಪ್ರಮಾಣದ ಲಾಭವನ್ನು ತಂದೊಡ್ಡುವುದು. ಪತ್ರಿಕೋದ್ಯಮದಲ್ಲೂ ಪುರುಷರಿಗೆ ಅಧಿಕ ಲಾಭ ದೊರೆಯುವುದು. ಉನ್ನತ ವ್ಯಾಸಂಗದ ಕನಸು ನನಸಾಗುವುದು. ಜೊತೆಗೆ ಅನುಕೂಲವನ್ನು ಕಲ್ಪಿಸಿಕೊಡುವುದು. ನ್ಯಾಯಾಂಗ ಕ್ಷೇತ್ರದಲ್ಲಿ ಲಾಭವನ್ನು ಪಡೆಯುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನದಲ್ಲಿ ಅನುಕೂಲ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನದಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಮನೆಯಲ್ಲೂ ನೆಮ್ಮದಿಯ ವಾತಾವರಣ ಲಭಿಸುವುದು. ಸ್ತ್ರೀಯರ ಮಾತನ್ನು ಅಲ್ಲಗಳೆಯದಿರಿ. ಸ್ತ್ರೀಯರಿಗೆ ಗೌರವಿಸುವುದರಿಂದ ನಿಮ್ಮ ಜೀವನ ಸಂತೋಷದಿಂದ ಕೂಡಿರುವುದು. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪಲು ವಿಷ್ಣುವಿನ ಆರಾಧನೆ ಮಾಡಿ. ಜೀವನದಲ್ಲಿ ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ವೆಂಕಟೇಶ್ವರನ ಆರಾಧನೆ ಮಾಡಿ.

English summary

your-daily-horoscope-31-january

Know what astrology and the planets have in store for you today. Choose your zodiac sign and read the details...