ಮಂಗಳವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಜೀವನದಲ್ಲಿ ನಾವು ಸೋಲುವುದು ಸಣ್ಣ ಪುಟ್ಟ ತಪ್ಪುಗಳಿಂದ ಹೊರತು ದೊಡ್ಡ ತಪ್ಪುಗಳಿಂದ ಅಲ್ಲ. ಉದಾಹರಣೆಗೆ ನಾವು ನಡೆದು ಸಾಗುವಾಗ ಒಂದು ಸಣ್ಣ ಕಲ್ಲು ತಾಗಿದಾಗ ಎಡವಿ ಬೀಳುತ್ತೇವೆಯೇ ಹೊರತು, ದೊಡ್ಡ ಬಂಡೆಗೆ ಎಡವಿ ಬೀಳುವುದಿಲ್ಲ... ಅದಕ್ಕಾಗಿಯೇ ನಮ್ಮ ನಡವಳಿಕೆಯಲ್ಲಿ ಸೂಕ್ಷ್ಮತೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ನಾವು ಮಾಡುವ ಕೆಲಸಗಳಲ್ಲಿ ಅಥವಾ ತೀರ್ಮಾನಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದಾಗ, ಒಂದು ದೊಡ್ಡ ಸಮಸ್ಯೆಗಳು ಅಥವಾ ಕಷ್ಟಗಳು ಎದುರಾಗಬಹುದು. ಹಾಗಾಗಿ ನಾವು ಮಾತನಾಡುವಾಗ ಅಥವಾ ಕೆಲಸ ಮಾಡುವಾಗ ಒಂದು ಸಣ್ಣ ತಪ್ಪು ಅಥವಾ ಸಣ್ಣ ವಿಚಾರ ಎಂದು ಯಾವುದನ್ನೂ ನಿರ್ಲಕ್ಷಿಸಬಾರದು. ಜೀವನದಲ್ಲಿ ಸಣ್ಣ ಸಣ್ಣ ವಿಚಾರಗಳು ಸಹ ಮಹತ್ತರವಾದದ್ದೇ ಆಗಿರುತ್ತದೆ.

ಮಂಗಳವಾರವಾದ ಇಂದು ಗೌರಿ ದೇವಿಗೆ ಪ್ರಶಸ್ತವಾದ ದಿನ. ಮಾಡುವ ಕೆಲಸದ ಮೊದಲು ಮಂಗಳ ಗೌರಿಯನ್ನು ನೆನೆದು ಕೆಲಸವನ್ನು ಪ್ರಾರಂಭಿಸಿ. ನಿಮ್ಮ ಇಂದಿನ ಕೆಲಸ ಕಾರ್ಯಗಳಲ್ಲಿ ರಾಶಿ ಚಕ್ರಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ರಾಶಿ ಭವಿಷ್ಯವನ್ನು ನೋಡಿ ಅರಿಯಿರಿ.... 

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಂದ ಇಂದು ಲಾಭವನ್ನು ಪಡೆದುಕೊಳ್ಳುವಿರಿ. ಹೊಸ ಆಯಾಮದ ತಿರುವು ನಿಮಗೆ ಸಂತೋಷವನ್ನು ತಂದು ಕೊಡುವುದು. ಮಕ್ಕಳಿಂದ ಶುಭವಾರ್ತೆಯನ್ನು ಕೇಳುವಿರಿ. ವಿದೇಶಯಾನದ ಕನಸು ಹೊಂದಿರುವವರು ಇಂದು ಪ್ರಯತ್ನಕ್ಕೆ ಮುಂದಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಇಂದು ಸಂತೋಷದ ದಿನವಾಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಮೃದ್ಧಿಗಾಗಿ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನೀವು ಲಾಭವನ್ನು ಪಡೆದುಕೊಳ್ಳುವಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು. ಸಣ್ಣ ಪುಟ್ಟ ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಲ್ಲೂ ಉತ್ತಮ ಲಾಭ ಉಂಟಾಗುವುದು. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಉಂಟಾಗುವುದು. ನೀವು ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಜಯ ನಿಮ್ಮ ಪರವಾಗುವುದು. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಹೆಚ್ಚು ಕಾಳಜಿಯಿಂದ ಇರಬೇಕು. ಹದಗೆಟ್ಟ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ಹೋಗಲೇ ಬೇಕಾಗುತ್ತದೆ. ಸಕ್ಕರೆ ಮತ್ತು ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಹೈರಾಣಗೊಳಿಸುವುದು. ಕೆಲವು ದೂರ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವುಂಟಾಗುವುದು. ಹಿತಶತ್ರುಗಳ ಬಾಧೆ ಉಂಟಾಗುವುದು. ಅನಿವಾರ್ಯ ಕಾರಣಗಳಿಗೆ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ವಿದ್ಯಾರ್ಥಿಗಳ ಕನಸು ಭಗ್ನವಾಗುವುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಸಮಾಧಾನಕರವಾದ ಬದುಕನ್ನು ಕಾಣುವ ಲಕ್ಷಣಗಳಿವೆ. ಅನಿರೀಕ್ಷಿತವಾಗಿ ಕಾಣುವ ಹಲವಾರು ಸೂಲುಗಳು ದೂರವಾಗುವುದು. ಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಸುಂದರವಾದ ಜೀವನಕ್ಕೆ ನಾಂದಿಯಾಗುವುದು. ಹೊಸ ಆಯಾಮಗಳು ನಿಮ್ಮ ಜೀವನದ ತಿರುವಿಗೆ ಕಾರಣವಾಗುವುದು. ಅನಿರೀಕ್ಷಿತ ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಮಾಧಾನಯುತವಾದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಅನಿರೀಕ್ಷಿತ ಸೋಲು ದೂರವಾಗುವುದು. ಸ್ಥಿರಾಸ್ತಿಯಿಂದ ಲಾಭ ಪಡೆದುಕೊಳ್ಳುವಿರಿ. ನ್ಯಾಯಾಂಗ ವಿಚಾರದಲ್ಲಿ ಜಯ ಲಭಿಸುವುದು. ಅನೇಕ ದಿನಗಳಿಂದ ನಿಮ್ಮ ಕೈ ಸೇರಬೇಕಿದ್ದ ಆಸ್ತಿ ಮತ್ತು ಹಣಗಳು ನಿಮ್ಮದಾಗುವುದು. ಮಾತಿನ ಮೂಲಕವೇ ಅನೇಕ ಸಮಸ್ಯೆಗಳನ್ನು ಇಂದು ಬಗೆ ಹರಿಸಿಕೊಳ್ಳಬಹುದು. ಇನ್ನಷ್ಟು ಸಮೃದ್ಧಿ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಮಾಧಾನದ ಸಂಪೂರ್ಣ ಜೀವನವನ್ನು ನೀವು ಕಾಣಲು ಸಾಧ್ಯವಾಗದು. ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಅನೇಕ ಸೋಲುಗಳು ನಿಮ್ಮನ್ನು ಬಾಧಿಸಬಹುದು. ಕೆಲವು ಅವಮಾನಕರವಾದ ವಾತಾವರಣವನ್ನು ನೀವು ಎದುರಿಸಬೇಕಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರು ಸಹ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸಮಾಜ ಸುಧಾರಕರಿಗೂ ಇಂದು ಅಷ್ಟು ಉತ್ತಮವಾದ ದಿನವಾಗದು. ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ವಹಿಸಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಪ್ರಗತಿಯ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಶನಿಯ ಪ್ರಭಾವ ಇರುವುದರಿಂದ ಆಂತರಿಕ ವಿಚಾರಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ. ಸ್ತ್ರೀಯರಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿ ಕುಗ್ಗುವುದು. ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೂ ಸಹ ಒಂದಿಷ್ಟು ಸಮಸ್ಯೆ ಕಾಡುವುದು. ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಅನುಕೂಲ ಲಭ್ಯವಾಗುವುದು. ಕಪ್ಪು ಬಟ್ಟೆಯನ್ನು ಇಂದು ತೊಡದಿರಿ. ಪ್ರಗತಿಯ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಸುಂದರವಾದ ಜೀವನಕ್ಕೆ ನಾಂದಿಯಾಗುವುದು. ಅನೇಕ ದಿನದಿಂದ ಅಂದುಕೊಂಡ ತೀರ್ಮಾನಗಳು ಶುಭವನ್ನು ಉಂಟುಮಾಡುವುದು. ಕೆಲವರಿಗೆ ಅಡೆತಡೆಗಳು ಹಾಗೂ ಸಮಾಧಾನಕರವಾದ ಪರಿಸ್ಥಿತಿಯು ಉಂಟಾಗಬಹುದು. ಹಿರಿಯರಿಂದ ಒಂದಿಷ್ಟು ಹಣದ ಸಹಾಯ ಲಭಿಸುವುದು. ಕೈಗಾರಿಕೋದ್ಯಮದವರಿಗೆ ಇಂದು ಅನುಕೂಲಕರವಾದ ದಿನವಾಗಲಿದೆ. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಪ್ರಗತಿಗಾಗಿ ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಸಮಾಧಾನಕರವಾದ ದಿನವಾಗಲಿದೆ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಅನಿರೀಕ್ಷಿತವಾಗಿ ಬರುವ ಸೋಲುಗಳು ದೂರವಾಗುವುದು. ಚಿತ್ರೋದ್ಯಮದಲ್ಲಿ ತೊಡಗಿಕೊಂಡವರಿಗೆ ಹೊಸ ಹೊಸ ಅವಕಾಶಗಳು ಹಾಗೂ ಚರ್ಚೆಗಳು ಸಂಭವಿಸುವ ಸಾಧ್ಯತೆಗಳಿವೆ. ಜನಪ್ರಿಯ ನಾಯಕರುಗಳು ಸಹ ಒಂದಿಷ್ಟು ಸಮಾಧಾನವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಲೇಖಕರಿಗೆ ಇಂದು ಸನ್ಮಾನ ಸತ್ಕಾರಗಳು ಲಭಿಸುವ ಸಾಧ್ಯತೆಗಳಿವೆ. ಕಲಾವಿದರಿಗೆ ಅನುಕೂಲ. ಚಿತ್ರೋದ್ಯಮದವರಿಗೆ ನೆಮ್ಮದಿ ದೊರೆಯುವುದು. ಸಣ್ಣಪುಟ್ಟ ಗೃಹ ಕೈಗಾರಿಕೆಯಲ್ಲಿ ತೊಡಗಿಕೊಂಡವರು ಲಾಭವನ್ನು ಪಡೆದುಕೊಳ್ಳುವ ಲಕ್ಷಣಗಳಿವೆ. ಎಲ್ಲಾ ವಯೋಮಾನದವರಿಗೂ ಇಂದು ಲಾಭ ಹಾಗೂ ಅನುಕೂಲವನ್ನು ತಂದುಕೊಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

your-daily-horoscope-30-january

Know what astrology and the planets have in store for you today. Choose your zodiac sign and read the details...