ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ತಿಳುವಳಿಕೆ ಎನ್ನುವುದು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನಾವು ಮಾತನಾಡುವ ಪ್ರತಿಯೊಂದು ವಿಚಾರವು ನಮ್ಮ ವಯಸ್ಸಿಗೆ ಹಾಗೂ ಪ್ರೌಢಿಮೆಗೆ ತಕ್ಕಂತೆ ಇರಬೇಕು. ವಯಸ್ಸಿಗೆ ಸೂಕ್ತವಲ್ಲದ ರೀತಿಯಲ್ಲಿ, ತಿಳುವಳಿಕೆ ಶೂನ್ಯರಂತೆ ಮಾತನಾಡಿದರೆ ನಮ್ಮ ಮಾತಿಗೆ ಹಾಗೂ ವ್ಯಕ್ತಿತ್ವಕ್ಕೆ ಯಾವುದೇ ಗೌರವ ಇರುವುದಿಲ್ಲ. ನಮ್ಮ ಸ್ಥಾನಕ್ಕೆ ತಕ್ಕಂತೆ ತಿಳುವಳಿಕೆ ಪೂರ್ಣರಾಗಿ ವರ್ತಿಸುವುದರಿಂದ ಸುತ್ತಲಿನ ಜನರಿಗೂ ಯಾವುದೇ ಗೊಂದಲ ಉಂಟಾಗದು.

ಜೊತೆಗೆ ಜೀವನವನ್ನು ಸಂಪೂರ್ಣವಾಗಿ ಆನಂದಿಸಬಹುದು. ವಾರದ ಆರಂಭದ ದಿನವಾದ ಇಂದು ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಬಯಸುವುದು ಸಹಜ. ಆದರೆ ಕೆಲವು ಗ್ರಹಗತಿಗಳಿಗೆ ಅನುಗುಣವಾಗಿ ಭವಿಷ್ಯದಲ್ಲಿ ಬದಲಾವಣೆಯನ್ನು ಕಾಣಲೇ ಬೇಕಾಗುತ್ತದೆ. ಈ ದಿನ ನಿಮ್ಮ ರಾಶಿ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗಲಿದೆ ಎನ್ನುವುದನ್ನು ತಿಳಿಯಲು ಮುಂದೆ ನೀಡಲಿರುವ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಸುಗಮವಾದ ವ್ಯವಸ್ಥೆಯನ್ನು ಪಡೆದುಕೊಳ್ಳುವಿರಿ. ಮನೆಯಲ್ಲೂ ನೆಮ್ಮದಿ ದೊರೆಯುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಭಗವಂತನ ಕೃಪೆ ಲಭಿಸುವುದು. ಸಾಲವನ್ನು ಕೊಡುವುದು ಅಥವಾ ನೀಡುವ ಪ್ರಕ್ರಿಯೆಗೆ ಮುಂದಾಗದಿರಿ. ಮೂರನೇ ವ್ಯಕ್ತಿಗಳ ವಿಚಾರದಲ್ಲಿ ತಲೆ ಹಾಕದಿರುವುದು ಒಳಿತು. ಮಾಡುತ್ತಿರುವ ಉದ್ಯೋಗದಲ್ಲಿ ಗೌರವ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಸಮಾಧಾನದ ಬದುಕು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದು. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ನಿಶ್ಚಿತವಾಗಿ ಕಾಡುವುದು. ನಿರ್ದಿಷ್ಟವಾದ ಗುರಿಯನ್ನು ತಲುಪಲು ಸಾಧ್ಯವಾಗದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಮಧ್ಯಾಹ್ನದ ನಂತರದ ಸಮಯದಲ್ಲಿ ಜಯಗಳಿಸುವಿರಿ. ವಿದ್ಯಾರ್ಥಿಗಳಿಗೆ ಅಡೆತಡೆ ಹಾಗೂ ಉನ್ನತ ವ್ಯಾಸಂಗದ ಕನಸುಗಳು ಕೂಡ ಭದ್ರವಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಸಮಾಧಾನಕರವಾದ ದಿನ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿರ್ದಿಷ್ಟ ಗುರಿಯನ್ನು ಸಾಧಿಸಿದ ನೆಮ್ಮದಿ ದೊರೆಯುವುದು. ಖಾಸಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಅನುಕೂಲ ಉಂಟಾಗುವುದು. ಹೊಲಿಗೆ ಸೇರಿದಂತೆ ಇನ್ನಿತರ ಉದ್ಯಮಗಳಲ್ಲಿ ತೊಡಗಿಕೊಂಡವರಿಗೆ ಲಾಭ ಉಂಟಾಗುವುದು. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಮಾಡುತ್ತಿರುವ ಉದ್ಯೋಗದಲ್ಲೂ ತೃಪ್ತಿಯನ್ನು ಕಾಣುವಿರಿ. ಅನೇಕ ದಿನಗಳಿಂದ ಚಿಂತಿಸುತ್ತಿರುವ ವಿಚಾರದಲ್ಲಿ ಉತ್ತಮ ಫಲವನ್ನು ಪಡೆದುಕೊಲ್ಳುವಿರಿ. ಮನೆಗೆ ಸಂಬಂಧಿಸಿದಂತೆ ಜಾಗ ಮತ್ತು ಮನೆಯನ್ನು ಖರೀದಿಸುವ ಹವಣಿಕೆಯಲ್ಲಿದ್ದರೆ ನಿಮ್ಮ ಕನಸು ನನಸಾಗುವುದು. ವಿದ್ಯಾರ್ಥಿಗಳ ಕನಸು ನನಸಾಗುವುದು. ಉನ್ನತ ವ್ಯಾಸಂಗಕ್ಕೆ ಮುಂದಾಗಲು ಇಂದು ನಿಮಗೆ ಶುಭ ದಿನ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಮಾನಸಿಕ ಕಿರಿಕಿರಿಯನ್ನು ಎದುರಿಸುವಂತಹ ಲಕ್ಷಣಗಳಿವೆ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ಬರದೆ ಒಂದಿಷ್ಟು ಹೈರಾಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು. ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗಬೇಕಾಗುವ ಪರಿಸ್ಥಿತಿ ಎದುರಾಗುವುದು. ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆ ನಿಮ್ಮನ್ನು ಬಾಧಿಸುವ ಸಾಧ್ಯತೆಗಳಿವೆ. ದೂರದ ಪ್ರದೇಶಗಳಿಗೆ ಪ್ರಯಾಣ ಕೈಗೊಂಡರೆ ಎಚ್ಚರಿಕೆಯಿಂದ ಇರಿ. ಸ್ತ್ರೀಯರಿಗೆ ಚೋರರ ಭಯ ಇರುವುದರಿಂದ ಜನ ನಿಬಿಡ ಪ್ರದೇಶಗಳಿಗೆ ಹೋಗದಿರಿ. ಚಿತ್ರೋದ್ಯಮದಲ್ಲಿ ನೆಮ್ಮದಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಮನೆಯಲ್ಲಿ ಸಮಾಧಾನ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ನಿರ್ದಿಷ್ಟವಾದ ಗುರಿಯನ್ನು ತಲುಪಲು ಏಕಾಗೃತೆಯನ್ನು ವಹಿಸಿ. ಸಹಪಾಠಿಗಳ ನಡುವೆ ಕಲಹ ಹಾಗೂ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯಲ್ಲೂ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಧಾರ್ಮಿಕ ಚಿಂತಕರು ಒಂದಿಷ್ಟು ಅವಮಾನ ಎದುರಿಸಬೇಕಾಗುವದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಮಾಧಾನದ ಬದುಕಿಗೆ ನಾಂದಿಯಾಗುವುದು. ನೀವು ಅಂದುಕೊಂಡಂತೆ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲಿ ಲಾಭ ಮತ್ತು ಯಶಸ್ಸನ್ನೇ ಪಡೆದುಕೊಳ್ಳುವಿರಿ. ಸಣ್ಣ ಪುಟ್ಟ ದಿನ ಕೂಲಿ ಮಾಡುವವರಿಗೂ ಸಹ ನೆಮ್ಮದಿ ಹಾಗೂ ಲಾಭ ದೊರೆಯುವುದು. ಸಂಜೆಯ ಸಮಯದಲ್ಲಿ ಇನ್ನಷ್ಟು ಶುಭ ಸುದ್ದಿಯನ್ನು ಕೇಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಮಾನಸಿಕ ಕಿರಿಕಿರಿ ಮುಂದುವರಿಯುವುದು. ನಿಮ್ಮ ಕೀರ್ತಿಯು ದಿನದಿಂದ ದಿನಕ್ಕೆ ಕುಸಿತವನ್ನು ಕಾಣುವುದು. ಹಿತ ಶತ್ರುಗಳು ನಿಮ್ಮ ಬೆನ್ನಿಗೆ ಇರುವರು. ಕಲಾವಿದರಿಗೆ ಯಶಸ್ಸು ಹಾಗೂ ಉದ್ಯಮದಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಒಂದು ಬಗೆಯಲ್ಲಿ ಸಮಾಧಾನ ಹಾಗೂ ಇನ್ನೊಂದು ಬದಿಯಲ್ಲಿ ಚಿಂತೆಯು ಮುಂದುವರಿಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಜನ್ಮ ಶನಿಯ ಪ್ರಭಾವ ಇರುವುದರಿಂದ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರು ಪೇರು ನಿಮ್ಮನ್ನು ಇನ್ನಷ್ಟು ಹೈರಾಣಗೊಳಿಸುವುದು. ನಿಮ್ಮ ನಿರ್ದಿಷ್ಟ ಗುರಿ ಸಾಧನೆಗೆ ಮೇಲಾಧಿಕಾರಿಗಳು ಹಾಗೂ ಹಿತ ಶತ್ರುಗಳ ಕಾಟದಿಂದ ತೊಂದರೆ ಉಂಟಾಗಬಹುದು. ರಾಜಕೀಯ ನಾಯಕರಿಗೆ ಹಿನ್ನಡೆ ಹಾಗೂ ಆರೋಪಗಳು ಬೆನ್ನೇರುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಸುಂದರವಾದ ನಿಮ್ಮ ಬದುಕಿಗೆ ಕೆಲವು ಅಡೆತಡೆ ಉಂಟಾಗಬಹುದು. ವಿಪರೀತವಾದ ಆಯಾಸ ಹಾಗೂ ಇಲ್ಲಸಲ್ಲದ ಆರೋಪಗಳು ನಿಮ್ಮ ಮನಸ್ಸಿಗೆ ನೋವನ್ನುಂಟು ಮಾಡುವುದು. ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಂಪೂರ್ಣವಾದ ಸಮಾಧಾನ ಲಭ್ಯವಾಗುವುದು. ಲೇಖಕಿಯರಿಗೆ ಅನುಕೂಲಕರವಾದ ದಿನ. ಸಾಹಿತ್ಯ ಕ್ಷೇತ್ರದಲ್ಲಿರುವವರು ಯಶಸ್ಸನ್ನು ಪಡೆದುಕೊಳ್ಳಬಹುದು. ವೈಜ್ಞಾನಿಕ ಕ್ಷೇತ್ರದಲ್ಲಿ ಇರುವವರಿಗೆ ಸಾಮಾನ್ಯ ವಾದಂತಹ ಹಿನ್ನಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಅನಿರೀಕ್ಷಿತ ಸೋಲು ದೂರಾಗುವದು. ಪತ್ರಿಕಾ ಕ್ಷೇತ್ರದಲ್ಲಿರುವವರಿಗೆ ಲಾಭಾಂಶ ದೊರೆಯುವುದು. ಕೆಲವರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಬಿಳಿ ಬಟ್ಟೆಯನ್ನು ಧರಿಸುವುದರಿಂದ ಒಳ್ಳೆಯದಾಗುವುದು. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಸುಂದರವಾದ ಜೀವನಕ್ಕೆ ನಾಂದಿಯಾಗುವುದು. ಮನೆಯಲ್ಲೂ ಸಹ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಗುರುವಿನ ಅನುಗ್ರಹ ದೊರೆಯುವುದು. ರೈತರಿಗೆ ಲಾಭ ಹಾಗೂ ನೆಮ್ಮದಿ ದೊರೆಯುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಲ್ಲಿ ಲಾಭವನ್ನೇ ಪಡೆದುಕೊಳ್ಳುವಿರಿ. ಹೊಸ ಆಸ್ತಿ ಖರೀದಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

English summary

your-daily-horoscope-29-january

Know what astrology and the planets have in store for you today. Choose your zodiac sign and read the details...
Story first published: Monday, January 29, 2018, 7:01 [IST]