Just In
Don't Miss
- Movies
ದರ್ಶನ್, ರಾಕ್ಲೈನ್ ಬಿಟ್ಟು 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
25-10-2018: ಗುರುವಾರದ ದಿನ ಭವಿಷ್ಯ
ಗುರುವಾರದ ಅಧಿಪತಿ ಗುರು ಗ್ರಹ.ಗುರು ಗ್ರಹ ಅಂದರೆ ಗುರು ಬೃಹಸ್ಪತಿಗೆಂದೇ ಸೀಮಿತವಾಗಿರುವ ದಿನವದು .ಬೃಹಸ್ಪತಿಯ ಬಣ್ಣ ಹಳದಿ ಬಣ್ಣ ಹಾಗೂ ಗುರು ಗ್ರಹವನ್ನು ಅದೃಷ್ಟ ಮತ್ತು ಸಂಪತ್ತು ತಂದುಕೊಡುವ ಗ್ರಹ ಎಂದು ನಂಬಲಾಗಿದೆ.ಗುರು ಗ್ರಹ ಯಾವ ವ್ಯಕ್ತಿಯ ಜಾತಕದಲ್ಲಿ ಒಳ್ಳೆಯ ಮನೆಯಲ್ಲಿ ಉಚ್ಚಸ್ಥಾನದಲ್ಲಿ ಸ್ಥಿತನಿದ್ದರೆ ಅವರಿಗೆ ಒಳ್ಳೆಯ ಯೋಗ,ಹಣ ಅಧಿಕಾರ, ಸಂಪತ್ತು,ಉತ್ತಮ ಶಿಕ್ಷಣ,ವೃತ್ತಿ,ಪ್ರಾಮಾಣಿಕ,ಸಂಗಾತಿಯ ಜೊತೆಗೆ
ಬುದ್ಧಿವಂತ ಮಕ್ಕಳನ್ನು ಸಹ ಗುರು ಗ್ರಹ ಕರುಣಿಸುವುದು.
ಗುರು ಗ್ರಹ ಚಂದ್ರಗ್ರಹ ಜೊತೆಗೆ ಉತ್ತಮವಾಗಿದ್ದರೆ ಗಜಕೇಸರಿ ಯೋಗ ಬರುವುದು.ಜಾತಕದಲ್ಲಿ ಗುರುಗ್ರಹ ನೀಚನಾಗಿದ್ದರೆ ತೊಂದರೆಗಳನ್ನು ಅನು ಭವಿಸುತ್ತಾನೆ. ಇದರಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807

ಮೇಷ
ಜಯ ಇರುವವರೆಗೂ ಭಯವಿಲ್ಲ. ಅಂತೆಯೇ ಗ್ರಹಸ್ಥಿತಿಗಳು ಉತ್ತಮವಾಗಿರುವುದರಿಂದ ಪ್ರತಿದಿನವೂ ಸಂತೋಷದ ದಿನವಾಗಿದೆ. ಮಕ್ಕಳು ಮತ್ತು ಮಡದಿಯೊಂದಿಗೆ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಮಾತೃ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು, ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು. ಸಂತೋಷಪಡುವ ಸಂಭ್ರಮದ ಕಾರ್ಯಕ್ರಮವೊಂದು ದಿಢೀರಾಗಿ ನಿಶ್ಚಯವಾಗುವುದರಿಂದ ದೂರ ಪ್ರಯಾಣದ ಸಾಧ್ಯತೆ ಇರುವುದು. ಸಂತೋಷದ ಈ ದಿನದಲ್ಲಿ ಮನಸ್ಸು ಹಕ್ಕಿಯಂತೆ ಹಾರಾಡುವುದು.
ಅದೃಷ್ಟ ಸಂಖ್ಯೆ:2

ವೃಷಭ
ಮಕ್ಕಳು ಸ್ವಲ್ಪ ಮೊಂಡಾಟ ನಿಮಗೆ ಕೋಪ ತರಿಸಿ ನಿಮ್ಮ ಆತಂಕಕ್ಕೆ ಕಾರಣವಾಗುವುದು. ಮಕ್ಕಳ ಶಾಲಾ ಪ್ರಗತಿಯ ನ್ಯೂನತೆ ಸರಿಪಡಿಸಲು ಶಾಲೆಯಿಂದ ನಿಮಗೆ ನೋಟೀಸು ಬರುವ ಸಾಧ್ಯತೆ ಇದೆ. ಮಕ್ಕಳನ್ನು ಈ ವಿಚಾರವಾಗಿ ಶಿಕ್ಷಿಸದೆ ಪ್ರೀತಿಯಿಂದ ಬುದ್ಧಿ ಹೇಳಿ.
ತೀರ ಸಣ್ಣದಾದ ವಿಷಯವೊಂದಕ್ಕೆ ಬಂಧು ಬಳಗದವರ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಇದೆ. ಹಾಗಾಗಿ ಕ್ಷ ಮಿಸುವ ಗುಣ ಇದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ.
ಅದೃಷ್ಟ ಸಂಖ್ಯೆ:2

ಮಿಥುನ
ಯಾವುದೇ ತೆರನಾದ ಹೊಸ ಕಾರ್ಯಕ್ರಮದ ಅಂತಿಮ ಪಟ್ಟಿಯನ್ನು ನಿರ್ಣಯಿಸಲು ಕಾಲವಕಾಶ ತೆಗೆದುಕೊಳ್ಳಿ. ನಿಮ್ಮಿಂದ ಶಿಸ್ತುಬದ್ಧ ಕಾರ್ಯಕ್ರಮವನ್ನು ವೀಕ್ಷಿಸಲು ಕೆಲವರು ಕಾತುರರಾಗಿದ್ದಾರೆ. ಅವರಿಗೆ ಭ್ರಮ ನಿರಸನ ಮಾಡಬೇಡಿ.ತೋಟಗಾರಿಕೆ, ಪಶುಪಾಲನೆ ವೃತ್ತಿ ವಿಶೇಷವಾದ ಅದೃಷ್ಟವನ್ನು ತಂದುಕೊಡಲಿದೆ. ನಿಮ್ಮ ಮನೆಗೆ ಹಿತೈಷಿಗಳಾಗಿದ್ದ ಹಿರಿಯರ ದರ್ಶನ ಭಾಗ್ಯ ದೊರೆಯುವುದು. ಅವರ ಸಾಂತ್ವನ ನುಡಿಗಳು ನಿಮಗೆ ಚೇತೋಹಾರಿ ಆಗಿರುತ್ತದೆ.ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:3

ಕಟಕ
ಬಂಧುವೊಬ್ಬರ ಅನಾರೋಗ್ಯ ನಿಮಿತ್ತ ಆಸ್ಪತ್ರೆಗಳಿಗೆ ಓಡಾಟ, ಗಡಿಬಿಡಿ ಜಾಸ್ತಿಯಾಗಲಿದೆ. ಆದರೆ ಎಲ್ಲದಕ್ಕೂ ಸಮಯದ ಕೊರತೆ ಎದ್ದು ಕಾಣುವುದು. ಇತರೆ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ರೋಗಿಯ ಆರೈಕೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ಜೀವನದ ನಾಗಾಲೋಟ ಮತ್ತು ಜನಪರವಾದ ನಿಮ್ಮ ಕಾಳಜಿಯು ಸಮಾಜ ಬಾಂಧವರಿಂದ ಗುರುತಿಸಲ್ಪಡುವುದು. ಅದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು ಅವರು ಆಯೋಜಿಸಿ ನಿಮ್ಮನ್ನು ಆಮಂತ್ರಿಸುವ ಸಾಧ್ಯತೆ ಇರುತ್ತದೆ.
ನಿಮ್ಮ ವಿರೋಧಿಗಳು ನಿಮ್ಮ ಸಾಮಾಜಿಕ ಗೌರವದ ಪ್ರಭಾವ ತಗ್ಗಿಸಲು ಪ್ರಯತ್ನ ಪಡುವರು. ಆದಾಗ್ಯೂ ಗೋಡೆಗೆ ಪುಟಿದ ಚೆಂಡಿನಂತೆ ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:6

ಸಿಂಹ
ಪ್ರತಿದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ.
ಸಾವಿರ ಉಳಿಪೆಟ್ಟಿನಿಂದ ಒಂದು ಸುಂದರ ಮೂರ್ತಿಯ ನಿರ್ಮಾಣವಾಗುವಂತೆ ಕಷ್ಟವು ನಿಮ್ಮನ್ನು ಅಂತರ್‌ಮುಖಿಯನ್ನಾಗಿ ಮಾಡುವುದಲ್ಲದೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗುವುದು.
ಕೆಲ ಗ್ರಹಗಳು ಮಕ್ಕಳಿಂದ ನಿಮ್ಮ ಕನಸುಗಳು ನನಸಾಗುವಂತೆ ಮಾಡುವವು. ಮಗನಿಗೆ ಉತ್ತಮ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹೊಸ ರೀತಿಯ ಕಾರ್ಯಗಳು ನೆರವೇರುವವು. ಕುಲದೇವತಾ ಸ್ಮರಣೆ ಮಾಡಿ.
ಅದೃಷ್ಟ ಸಂಖ್ಯೆ:9

ಕನ್ಯಾ
ಯಾವುದೇ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರೂ ಸಹಧರ್ಮಿಣಿಯ ಸಲಹೆಯನ್ನು ಪಡೆಯಿರಿ. ಅದರಿಂದ ನಿಮ್ಮ ಕಾರ್ಯ ಯೋಜನೆಗಳು ಯಶಸ್ಸಿನತ್ತ ಸಾಗುವುದು. ದೂರದ ಪ್ರಯಾಣವೊಂದಕ್ಕೆ ರೆಡಿ ಆಗುವಿರಿ. ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕುವ ಅಪರೂಪದ ಕಾಯಕದಲ್ಲಿ ಜಯಶೀಲರಾಗಲು ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ನಿಮ್ಮ ಕೈಸೇರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:6

ತುಲಾ
ಪದೇ ಪದೇ ವಿರೋಧಿಗಳಿಂದ ಒದಗಿ ಬರುತ್ತಿರುವ ಕಿರಿಕಿರಿಗಳು ಗೆಳೆಯನ ಬೆಂಬಲದಿಂದ ಪರಿಹಾರಗೊಳ್ಳುವುದು. ಈ ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ಮನಸ್ಸು ಮಾಡುವುದು ಸೂಕ್ತವಲ್ಲ. ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ. ಹಳೆಯ ಕಡತವೊಂದನ್ನು ಅಪಹರಿಸಲು ಇಲ್ಲವೆ ಹಳೆಯ ಲೆಕ್ಕಪತ್ರಗಳನ್ನು ಕೆದಕಿ ನಿಮ್ಮ ಮೇಲೆ ಅಪವಾದ ತರುವ ಹುನ್ನಾರ ನಡೆಯುತ್ತಿದೆ. ಆದಷ್ಟು ಎಚ್ಚರಿದಿಂದ ಇರಿ. ನಿಮ್ಮ ಪ್ರಾಮಾಣಿಕತೆ ನಿಮಗೆ ಸಹಾಯ ಮಾಡುವುದು.
ಅದೃಷ್ಟ ಸಂಖ್ಯೆ:3

ವೃಶ್ಚಿಕ
ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನದ ಪ್ರಸಂಗವಲ್ಲ.
ಕಷ್ಟದ ದಿನಗಳು ಇನ್ನು ಮುಗಿದಿಲ್ಲ. ಹಾಗಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ. ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು. ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷ್ಮೀನರಸಿಂಹನ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿಹೋಗುವುದು.
ಅದೃಷ್ಟ ಸಂಖ್ಯೆ:1

ಧನಸ್ಸು
ಒಳ್ಳೆತನ ಪ್ರದರ್ಶಿಸುವ ನಿಮ್ಮ ವಿನಯವು ಯಶಸ್ಸಿನ ದಾರಿಯನ್ನು ತೋರಿಸಿಕೊಡಲಿದೆ. ಆದಾಯಕ್ಕೆ ತಕ್ಕಷ್ಟೆ ಖರ್ಚು ಬರುವುದರಿಂದ ಹಣಕಾಸಿನ ವಿಷಯದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು. ಗುರು ಹಿರಿಯರ ಬಗ್ಗೆ ವಿಶೇಷವಾದ ಗೌರವ ಮತ್ತು ವಿನಯವನ್ನು ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಈ ದಿನ ಸಂತೋಷ ಸಂಭ್ರಮದಿಂದ ಕಳೆಯುವಿರಿ.ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣವನ್ನು ಕಾಣುವಿರಿ.
ಅದೃಷ್ಟ ಸಂಖ್ಯೆ:8

ಮಕರ
ಗೆಳೆಯರು ಬೆಂಬಲದ ಭರವಸೆ ಕೊಟ್ಟು ಹಿಂಜರಿಯುತ್ತಾರೆ. ಈ ಬಗ್ಗೆ ನಿರಾಶರಾಗದಿರಿ. ಸರ್ವ ವಿಘ್ನ ಪರಿಹಾರಕನಾದ ಗಣೇಶನನ್ನು ಪ್ರಾರ್ಥಿಸಿ. ಸಂಜೆ ಬಡವರಿಗೆ ಆಹಾರ ನೀಡಿ.
ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಬೆಲೆಬಾಳುವ ವಸ್ತುಗಳ ಕಣ್ಮರೆ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದ ಇರಿ. ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ನೀವು ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.
ಅದೃಷ್ಟ ಸಂಖ್ಯೆ:9

ಕುಂಭ
ಬಹು ಮುಖ್ಯವಾದ ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಚೇರಿಯಲ್ಲಿ ಮತ್ತು ಮನೆಯಲ್ಲಿ ನಿಮ್ಮ ಮಾತಿಗೆ ಎಲ್ಲರೂ ಬೆಲೆ ಕೊಡುವರು. ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗುವಿರಿ. ನಿಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟಪಡುತ್ತಾರೆ. ನಿಮಗಿಂದು ಸಾಮಾಜಿಕ ನಾಯಕತ್ವ ಲಭ್ಯವಾಗಲಿದೆ. ಇದರೊಟ್ಟಿಗೆ ನಿಮ್ಮ ಜವಾಬ್ದಾರಿಯೂ ಹೆಚ್ಚುವುದು. ಎಲ್ಲವೂ ಗುರುವಿನ ಮಹಿಮೆ ಎಂದು ತಿಳಿಯಿರಿ.
ನಿಮ್ಮ ಬಂಧುಬಳಗದವರಿಂದ ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ
ಅದೃಷ್ಟ ಸಂಖ್ಯೆ:2

ಮೀನ
ನಿಮ್ಮ ಕಾರ್ಯವೈಖರಿಯನ್ನು ಯಾರೂ ಪತ್ತೆ ಮಾಡಲು ಸಾಧ್ಯವಿಲ್ಲ. ನೀರಿನಲ್ಲಿಯ ಮೀನಿನ ಹೆಜ್ಜೆಯನ್ನು ಗುರುತು ಹಿಡಿಯಲು ಕಷ್ಟಸಾಧ್ಯವೆಂಬಂತೆ ನಿಮ್ಮ ಮನಸ್ಸು ವಿಚಿತ್ರವಾದುದು. ಹಾಗಾಗಿ ಕೆಲವರು ನಿಮ್ಮನ್ನು ತಪ್ಪಾಗಿ ಅರ್ಥೈಹಿಸಿ ಕೊಳ್ಳುವರು. ನಿಮ್ಮ ಜರೂರಾದ ಪ್ರವಾಸ ಕಾರ್ಯಕ್ರಮಗಳು ಅನಿರೀಕ್ಷಿತವಾಗಿ ಮುಂದೂಡಲ್ಪಡುವುದು. ಹಾಗಾಗಿ ಸ್ವಲ್ಪ ನಿರಾಸೆ ಉಂಟಾಗುವುದು. ಆದರೆ ಇದಕ್ಕೆ ಬೇಸರಿಸುವ ಅಗತ್ಯವಿಲ್ಲ. ಆದದ್ದೆಲ್ಲಾ ಒಳಿತೇ ಆಯಿತು ಎನ್ನಿ.ಏಕಾಂತತೆಯು ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ. ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
ಅದೃಷ್ಟ ಸಂಖ್ಯೆ:1
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp