ಗುರುವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಸಂಬಂಧಗಳು ಸುಂದರವಾಗಿದ್ದಾಗ ನಾವು ಮಾಡಿದ್ದು, ಆಡಿದ್ದು ತಪ್ಪೇ ಆಗಿದ್ದರೂ ಅವೆಲ್ಲವೂ ಸರಿಯಾಗಿಯೇ ಕಾಣಿಸುತ್ತವೆ. ಅದೇ ಸಂಬಂಧಗಳು ಹಳಸಿರುವಾ ಅಥವಾ ಹಾಳಾಗಿದ್ದಾಗ ನಾವು ಮಾಡಿದ್ದು, ಹೇಳಿದ್ದು ಸರಿಯಾಗಿಯೇ ಇದ್ದರೂ ಕೂಡ ಅದು ತಪ್ಪಾಗಿ ಕಾಣಿಸುತ್ತವೆ ಎನ್ನುವ ಮಾತಿದೆ. ಹೌದು, ನಾವು ಏನನ್ನು ಮಾಡುತ್ತೇವೆ? ಏನನ್ನು ನೋಡುತ್ತೇವೆ? ಎನ್ನುವುದೆಲ್ಲವೂ ನಮ್ಮ ಭಾವನೆಯ ಮೇಲೆ ಆಧರಿಸಿಕೊಂಡಿರುತ್ತದೆ. ಹಾಗಾಗಿ ಪ್ರೀತಿಯಲ್ಲಿದ್ದಾರೆ ಎಂದ ಮಾತ್ರಕ್ಕೆ ಇಲ್ಲ ಸಲ್ಲದ ಮಾತುಗಳನ್ನು ಆಡುವುದು ಅಥವಾ ದ್ವೇಷದಲ್ಲಿದ್ದೇವೆ ಎಂದ ಮಾತ್ರಕ್ಕೆ ನಿಂದನೆ ಮಾಡುವ ಕೆಲಸಕ್ಕೆ ಹೋಗಬಾರದು.

ನಮ್ಮಲ್ಲಿ ವಿಶಾಲ ಭಾವನೆ ಇರಬೇಕು. ಪ್ರತಿಯೊಬ್ಬರ ತಪ್ಪಿಗೂ ಕ್ಷಮಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ಒಬ್ಬರನ್ನು ಅತಿಯಾಗಿ ಹೊಗಳುವುದು, ಇನ್ನೊಬ್ಬರನ್ನು ಅತಿಯಾಗಿ ದೂರುವ ಕೃತ್ಯ ಎಸಗಬಾರದು. ಸನ್ನಿವೇಶಗಳನ್ನು ಪರಾಮರ್ಶಿಸುವ ಸಾಮಥ್ರ್ಯದಿಂದ ಎಲ್ಲವನ್ನೂ ಅರಿತುಕೊಳ್ಳಬೇಕು. ಆಗ ಜೀವನ ಸಾರ್ಥಕ ಎನಿಸಿಕೊಳ್ಳುವುದು. ಸಮಾಜವೂ ನಮ್ಮನ್ನು ಗೌರವಿಸುವುದು.

ಗುರುವಾರವಾದ ಇಂದು ಗುರು ರಾಯರ ಸ್ಮರಣೆಯಿಂದ ದಿನವನ್ನು ಆರಂಭಿಸಿ. ಈ ದಿನದಲ್ಲಿ ಉಂಟಾಗುವ ಆಗುಹೋಗುಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿವೆ? ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಸಮಾಧಾನದ ಬದುಕು ಲಭ್ಯವಾಗುವುದು. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಆಮದು ಮತ್ತು ರಫ್ತು ವ್ಯಾಪಾರದಲ್ಲಿ ಸಮಾಧಾನ ಮತ್ತು ಲಾಭವನ್ನು ಗಳಿಸುವ ಸಾಧ್ಯತೆಗಳಿವೆ. ಮನೆಯ ಕೆಲವು ಕೆಲಸಗಳು ಸಮಸ್ಯೆಯಿಲ್ಲದೆ ನೆರವೇರುವುದು. ವ್ಯಾಪಾರಸ್ಥರು ಲಾಭವನ್ನು ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇಂದು ನಿಮಗೆ ಸಮಾಧಾನದ ಬದುಕು ಕಷ್ಟವಾಗುವುದು. ಬಂಧು ಮಿತ್ರರಿಂದ ಇಲ್ಲಸಲ್ಲದ ಆರೋಪಗಳನ್ನು ನೀವು ಕೇಳಬಹುದು. ಹತ್ತು ಹಲವು ರೀತಿಯ ಅಸಮಧಾನಗಳು ನಿಮ್ಮನ್ನು ಕಾಡುವುದು. ವಿದ್ಯಾರ್ಥಿಗಳ ಕನಸಲ್ಲಿ ಅಡೆತಡೆಗಳು ಹಾಗೂ ವಿಳಂಬ ಸಾಧ್ಯತೆಗಳು ಹೆಚ್ಚಾಗಿ ಕಾಣುವುದು. ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಸಮಾಧಾನದ ಬದುಕು ದೊರೆಯುವುದು. ಮನೆಯಲ್ಲಿ ನೆಮ್ಮದಿ ಹಾಗೂ ಸ್ತ್ರೀಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಬಂಧುಗಳ ಸಕಾರಾತ್ಮಕ ವರ್ತನೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಖುಷಿಯನ್ನು ಪಡೆಯುವಿರಿ. ಪಾಲಕರ ಆಶೀರ್ವಾದ ಹಾಗೂ ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸಿಕೊಳ್ಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆಯನ್ನು ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವರು. ಎಲ್ಲಾತರಹದ ವ್ಯಾಪಾರೋದ್ಯಮಗಳಲ್ಲೂ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಮಿತ್ರರಿಂದ ಅನುಕೂಲ ಉಂಟಾಗುವುದು. ವಿದೇಶ ಪ್ರಯಾಣ ಕೈಗೊಳ್ಳಬಹುದಾದ ದಿನ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವುದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಹತ್ತು ಹಲವಾರು ಅಡ್ಡಿ ಆತಂಕಗಳನ್ನು ನೀವು ಎದುರಿಸಬೇಕಾಗುವುದು. ಇವು ನಿಮ್ಮ ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಬಾಧಿಸುವುದು. ಬಂಧುಗಳಿಂದ ಕಿರಿಕಿರಿ ಹಾಗೂ ಮಿತ್ರರಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರು ಪೇರು ನಿಮ್ಮನ್ನು ಹೈರಾಣ ಗೊಳಿಸುವುದು. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗುವ ಸಾಧ್ಯತೆಗಳಿವೆ. ಜೀವನದಲ್ಲಿ ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಸಮಾಧಾನದ ಬದುಕನ್ನು ಕಾಣುವಿರಿ. ಸ್ತ್ರೀಯರಿಗೆ ನೆಮ್ಮದಿ ದೊರೆಯುವುದು. ಪಾಲಕರ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ಹೊಸ ಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆಗಳಿವೆ. ಆಮದು ರಫ್ತು ವ್ಯಾಪಾರದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣುವಿರಿ. ಷೇರು ಮಾರುಕಟ್ಟೆಯಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಪ್ರಗತಿಯ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ನಿಮಗೆ ಇಂದು ಸಮಾಧಾನಕರವಾದ ದಿನವಾಗುವುದು. ಬಡವರಿಗೆ ಅನುಕೂಲಕರವಾದ ದಿನವಾಗಲಿದೆ. ವಿದ್ಯಾರ್ಥಿಗಳ ಕನಸು ನನಸಾಗುವುದು. ದಿನದಿಂದ ದಿನಕ್ಕೆ ಏರುತ್ತಿರುವ ನಿಮ್ಮ ಜನಪ್ರಿಯತೆ ಇಮ್ಮಡಿಗೊಳ್ಳುವುದು. ರಾಜಕಾರಣಿಗಳಿಗೆ ಶುಭ ಯೋಗ. ಹೊಸ ಅವಕಾಶಗಳು ಲಭಿಸುವ ಸಾಧ್ಯತೆಗಳಿವೆ. ಬ್ಯಾಂಕ್ ನೌಕರರಿಗೆ ಸಮಾಧಾನ ದೊರೆಯುವುದು. ಹತ್ತು ಹಲವಾರು ಶುಭಫಲಗಳನ್ನು ಇಂದು ನೀವು ಅನುಭವಿಸಲಿದ್ದೀರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇಂದು ನೀವು ಸಂಪೂರ್ಣವಾದ ಸಮಾಧನವನ್ನು ಪಡೆಯಲು ಸಾಧ್ಯವಾಗದು. ವೃತ್ತಿಕ್ಷೇತ್ರದಲ್ಲಿ ಅನೇಕ ಅಡೆತಡೆಗಳು ಹಾಗೂ ಹಿತ ಶತ್ರುಗಳ ಬಾಧೆ ಉಂಟಾಗುವುದು. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರಲಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನಿಮಗೆ ಮಾನಸಿಕವಾದ ಕಿರಿಕಿರಿ ಮುಂದುವರಿಯುವುದು. ವಿಪರೀತ ಆಯಾಸ ಹಾಗೂ ಹದಗೆಟ್ಟ ಆರೋಗ್ಯದ ಏರು ಪೇರು ನಿಮ್ಮನ್ನು ಹೈರಾಣಗೊಳಿಸುವುದು. ಬಂಧುಗಳ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿವೆ. ಸನ್ನಿವೇಶವನ್ನು ನಿಭಾಯಿಸುವುದನ್ನು ನೀವು ಅರಿಯಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಜೀವನಕ್ಕಾಗಿ ಗಣೇಶನ ಆರಾಧನೆ ಮತ್ತು ಕುಲದೇವರ ಸ್ಮರಣೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇಂದು ನಿಮಗೆ ಸಾಮಾನ್ಯವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಬಂಧುಗಳಿಂದ ಸಹಕಾರ ದೊರೆಯುವುದು. ಮಾಡುತ್ತಿರುವ ಉದ್ಯೋಗದಲ್ಲಿ ಉಂಟಾಗುವ ಏರುಪೇರು ಮನಸ್ಸಿಗೆ ನೋವನ್ನುಂಟುಮಾಡುವುದು. ಮಿತ್ರರಿಂದ ಅವಮಾನ ಉಂಟಾಗುವುದು. ಹತ್ತು ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇಂದು ನಿಮಗೆ ಉತ್ತಮವಾದ ದಿನ. ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಅನುಕೂಲ ಉಂಟಾಗುವುದು. ತರಕಾರಿ ವ್ಯಾಪಾರಿಗಳಿಗೆ ಸಮಾಧಾನ ಲಭಿಸುವುದು. ಸರ್ಕಾರಿ ನೌಕರರಿಗೆ ಪ್ರಗತಿ ಉಂಟಾಗುವುದು. ಜೀವನದಲ್ಲಿ ಪ್ರಗತಿ ಹಾಗೂ ವರ್ಗಾವಣೆಯನ್ನು ಕಾಣುವ ಸಾಧ್ಯತೆಗಳು ಇವೆ. ಇನ್ನಷ್ಟು ಸಮಾಧಾನ ಹಾಗೂ ಸಂತೋಷದ ಬದುಕಿಗೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಸಮಾಧಾನದ ಬದುಕನ್ನು ಕಾಣುವಿರಿ. ಬಂಧುಗಳ ಆಗಮನ ಉಂಟಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಬಹುದಾದ ಲಕ್ಷಣಗಳಿವೆ. ಹಲವಾರು ಶುಭಪ್ರದವಾದ ಕೆಲಸಗಳಿಗೆ ಧನಾತ್ಮಕ ರೀತಿಯಲ್ಲಿ ವರ್ತಿಸಿ. ಜೀವನದಲ್ಲಿ ಇನ್ನಷ್ಟು ಸಮಾಧಾನ ಹಾಗೂ ಸಮೃದ್ಧ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

English summary

your-daily-horoscope-25-january

Know what astrology and the planets have in store for you today. Choose your zodiac sign and read the details..
Story first published: Thursday, January 25, 2018, 7:01 [IST]