For Quick Alerts
ALLOW NOTIFICATIONS  
For Daily Alerts

14-10-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಭಾನುವಾರದ ದಿನ ಸೂರ್ಯ ಎಲ್ಲಾ ರಾಶಿಯ ಮೇಲೆ ಪ್ರಭಾವ ಹೊಂದಿರುತ್ತಾನೆ.ಚಿಕ್ಕ ಚಿಕ್ಕ ವಿಷಯಗಳಿಗೂ
ಹೇಗೆ ತನ್ನ ಕ್ರಿಯಾತ್ಮಕವಾಗಿ ಹಾಗೂ ಕ್ರಿಯಾಶೀಲನಾಗಿರುತ್ತಾನೆ ಎಂಬುವುದನ್ನು ಈ ದಿನದ ರಾಶಿ ಭವಿಷ್ಯವನ್ನು ಗಮನಿಸೋಣ.

ಮೇಷ

ಮೇಷ

ಸಣ್ಣಪುಟ್ಟ ಅನಾರೋಗ್ಯವನ್ನು ನೀವು ಎದುರಿಸಬೇಕಾಗುವುದು.ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಕುಲದೇವತೆಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.ಉತ್ತಮ ಕಂಠವನ್ನು ಹೊಂದಿರುವ ನೀವು ಸುಶ್ರಾವ್ಯವಾಗಿ ಹಾಡು ಹೇಳಬಲ್ಲಿರಿ. ಆದರೆ ಏಕೋ ಹಾಡನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಾಡುಗಾರಿಕೆಯಿಂದ ಇತರರಿಗೆ ಸಂತೋಷ ಕೊಡುವ ಶಕ್ತಿ-ಯುಕ್ತಿ ಎರಡೂ ಇದ್ದು ಅದರ ಸದುಪಯೋಗ ಮಾಡಿಕೊಳ್ಳಿ.ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ.

ಅದೃಷ್ಟ ಸಂಖ್ಯೆ: 8

ಮಿಥುನ

ಮಿಥುನ

ನೇರವಾದ ಮಾರ್ಗವು ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಯಾವುದೇ ರೀತಿಯ ಅಡ್ಡಮಾರ್ಗವನ್ನು ಹಿಡಿಯದಿರಿ ಮತ್ತು ಅಡ್ಡದಾರಿಗಳ ಬಗ್ಗೆ ಯೋಚನೆಯನ್ನು ಮಾಡದಿರಿ. ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ.

ಅದೃಷ್ಟ ಸಂಖ್ಯೆ: 3

ಕರ್ಕಾಟಕ

ಕರ್ಕಾಟಕ

ಕೆಲ ಗ್ರಹಗಳ ಕಾಟದಿಂದ ತಪ್ಪಿಸಿಕೊಳ್ಳಲು ಗುರು-ಹಿರಿಯರ ಆಶೀರ್ವಾದವನ್ನು ಪಡೆಯಿರಿ ಮತ್ತು ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿ. ಇದರಿಂದ ಮಹತ್ತರವಾದ ಕೆಲಸವನ್ನು ಸಾಧಿಸಬಹುದು. ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ: 1

ಸಿಂಹ

ಸಿಂಹ

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ. ನಿಮ್ಮ ಬಂಧುವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈಬಗ್ಗೆ ಅನಗತ್ಯ ಭಯ ಬೇಡ.

ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಮುದವನ್ನುಂಟು ಮಾಡುವುದು.

ಅದೃಷ್ಟ ಸಂಖ್ಯೆ: 9

ಕನ್ಯಾ

ಕನ್ಯಾ

ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು.ಮಕ್ಕಳು ಶುಭ ವಾರ್ತೆಯನ್ನು ತರಲಿದ್ದಾರೆ. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಗೌರವ ಆದರಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

ಅದೃಷ್ಟ ಸಂಖ್ಯೆ: 2

ತುಲಾ

ತುಲಾ

ಸದ್ಯದಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಸುಖವಾಗುವುದು.ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು. ತಾಳ್ಮೆಯಿಂದ ಇರಿ.ಧರ್ಮ, ನ್ಯಾಯ ಹಾಗೂ ಸತ್ಯಗಳನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅಥೈರ್‍ಸಿಕೊಂಡು ಕೆಲಸದಿಂದ ದೂರ ಸರಿಯುವರು. ಗುರು ಮಂತ್ರ ಪಠಿಸಿ.

ಅದೃಷ್ಟ ಸಂಖ್ಯೆ: 4

ವೃಶ್ಚಿಕ

ವೃಶ್ಚಿಕ

ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರೆಯವರು ಕೊರಗುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಅವರು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.

ನಿಮ್ಮ ಸೇವೆಯ ರೀತಿ ನೀತಿಗಳಿಂದ ಪ್ರಭಾವಿತರಾದ ಜನರು ನಿಮ್ಮನ್ನೆ ಮುಂದಿನ ಮುಖಂಡನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿವುಂಟಾಗುವುದು.

ಅದೃಷ್ಟ ಸಂಖ್ಯೆ: 1

ಧನು

ಧನು

ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ.ನಿಮ್ಮ ಸಹೋದರ ಸಹೋದರಿಯರ ಜೊತೆಯಲ್ಲಿ ವಾದ ವಿವಾದ ಬೇಡ. ನಿಮಗೆ ಇಷ್ಟವಾದದ್ದನ್ನು ನೇರವಾಗಿ ಹೇಳಿ. ಇದರಿಂದ ಉಭಯತರರಿಗೂ ಅನುಕೂಲವಾಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

ಅದೃಷ್ಟ ಸಂಖ್ಯೆ: 1

ಮಕರ

ಮಕರ

ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ನೀವು ಚಿತ್ತಚಾಂಚಲ್ಯಕ್ಕೆ ಒಳಗಾಗದೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.ವ್ಯರ್ಥವಾದ ಪ್ರಯತ್ನಗಳಿಂದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು

ಅದೃಷ್ಟ ಸಂಖ್ಯೆ: 8

 ಕುಂಭ

ಕುಂಭ

ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.ನಿಮ್ಮ ಕೈ ಕೆಳಗಿನ ಕೆಲಸಗಾರರನ್ನು ಸಂತೋಷಪಡಿಸಿ. ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಗುರುಹಿರಿಯರ ಆಶೀರ್ವಾದ ಪಡೆಯಿರಿ.

ಅದೃಷ್ಟ ಸಂಖ್ಯೆ: 5

ಮೀನ

ಮೀನ

ತಲೆ ಗಟ್ಟಿ ಇದೆ ಎಂದು ಯಾರೂ ಬಂಡೆಗೆ ತಲೆ ಚಚ್ಚಿಕೊಳ್ಳುವುದಿಲ್ಲ. ಅಂತೆಯೇ ಎಲ್ಲಾ ವಿಷಯಗಳಲ್ಲೂ ಯಶಸ್ಸು ಹೊಂದುತ್ತೇನೆ ಎಂಬ ಭ್ರಮೆ ಬೇಡ. ತಗ್ಗಿ-ಬಗ್ಗಿ ನಡೆದಲ್ಲಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ.ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು.

ಅದೃಷ್ಟ ಸಂಖ್ಯೆ: 1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

Read more about: horoscope
English summary

your daily horoscope-14-october-2018

Know what astrology and the planets have in store for you today. Choose your zodiac sign and read the details...
Story first published: Saturday, October 13, 2018, 15:43 [IST]
X
Desktop Bottom Promotion