ಬುಧವಾರದ ದಿನ ಭವಿಷ್ಯ

Posted By: Divya Pandit
Subscribe to Boldsky
ದಿನ ಭವಿಷ್ಯ - Kannada Astrology 10-01-2018 - Your Day Today - Oneindia Kannada

ಅಹಂಕಾರ ಇರುವ ಮನುಷ್ಯ ಬಹುಬೇಗ ತನ್ನ ಜೀವನದ ಹಾದಿಯನ್ನು ತಪ್ಪುತ್ತಾನೆ. ತಾನೇ ಶ್ರೇಷ್ಠ, ತನಗಿಂತ ಶ್ರೇಷ್ಠರಿಲ್ಲ ಎನ್ನುವ ಭಾವನೆಯಿಂದ ಸೊಕ್ಕುತ್ತಾನೆ. ಯಾರು ಅಹಂಕಾರವನ್ನು ಅಥವಾ ತಾನೇ ಶ್ರೇಷ್ಠ ಎನ್ನುವ ಭಾವವನ್ನು ತಳೆಯುವುದಿಲ್ಲವೋ ಅಂತಹವರು ಯಾವುದೇ ಗ್ರಂಥವನ್ನು ಓದದೆ, ಯಾವುದೇ ಧಾರ್ಮಿಕ ಕಾರ್ಯವನ್ನು ಮಾಡದೆ ಇದ್ದರೂ ಮೋಕ್ಷವನ್ನು ಪಡೆದುಕೊಳ್ಳುತ್ತಾರೆ.

ಅಹಂಕಾರ ಇಲ್ಲದ ವ್ಯಕ್ತಿ ತನ್ನ ಸುತ್ತಲಿನ ಜನರಿಗೆ ಸಹಾಯ ಮಾಡುತ್ತಾನೆ. ಬಡವರಿಗೆ ಹಾಗೂ ಅಸಹಾಯಕರಿಗೆ ಕೈಲಾದ ಸಹಾಯ ಮಾಡಿರುತ್ತಾನೆ. ಆತ ಮಾಡುವ ಒಳ್ಳೆಯ ಕೆಲಸಗಳೇ ಅವನ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಾವು ಸಹ ಇತರರಿಗೆ ಕೆಟ್ಟದನ್ನು ಮಾಡದೆ, ಕೈಲಾದ ಸಹಾಯ ಮಾಡುವುದರ ಮೂಲಕ ಜೀವನ ಪಾವನಗೊಳಿಸಿಕೊಳ್ಳಬಹುದು.

ಬುಧವಾರವಾದ ಈ ಶುಭದಿನ ನಿಮ್ಮ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳು ಸಂಭವಿಸುತ್ತದೆ? ಅದರಿಂದ ಯಾವೆಲ್ಲಾ ಲಾಭ-ನಷ್ಟವನ್ನು ನೀವು ಅನುಭವಿಸಬೇಕಾಗುವುದು ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ರಾಶಿ ಭವಿಷ್ಯವನ್ನು ಓದುವುದರ ಮೂಲಕ ತಿಳಿದುಕೊಳ್ಳಿ...

 ಮೇಷ:

ಮೇಷ:

ಇಂದು ನಿಮಗೆ ಸಮಾಧಾನಕರವಾದ ದಿನ. ಬಂಧು ಮಿತ್ರರಿಂದ ಉತ್ತಮ ಸಹಕಾರವನ್ನು ನೀವು ನಿರೀಕ್ಷಿಸಬಹುದು. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ.

ಸಂತೋಷದ ಬದುಕಿಗೆ ನೀವು ಸಾಕ್ಷಿಯಾಗಲಿದ್ದೀರಿ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಎಲ್ಲಾ ಬಗೆಯ ವ್ಯಾಪಾರ ಹಾಗೂ ವಹಿವಾಟುಗಳಲ್ಲಿ ನೆಮ್ಮದಿಯನ್ನೇ ಪಡೆದುಕೊಳ್ಳುವಿರಿ.

ವಿದ್ಯಾರ್ಥಿಗಳಿಗೂ ಇಂದು ಉತ್ತಮವಾದ ದಿನ. ಸಮಸ್ಯೆಗಳ ಪರಿಹಾರ ಹಾಗೂ ಸಮೃದ್ಧ ಬದುಕಿಗೆ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

 ವೃಷಭ:

ವೃಷಭ:

ನೀವು ಆರ್ಥಿಕ ವಲಯದಲ್ಲಿ ಏರುಪೇರುಗಳನ್ನು ಅನುಭವಿಸುವಿರಿ. ವಿಪರೀತವಾದ ಆಯಾಸ. ಹದಗೆಟ್ಟ ಆರೋಗ್ಯಕ್ಕೆ ವೈದ್ಯರನ್ನು ಸಂಪರ್ಕಿಸಲೇ ಬೇಕಾದ ಪರಿಸ್ಥಿತಿ ಎದುರಾಗುವುದು.

ಸ್ತ್ರೀಯರಿಂದ ಅವಮಾನ ಉಂಟಾಗುವುದು. ವ್ಯಾಪಾರ ವಹಿವಾಟಿನಲ್ಲಿ ಪೂರ್ತಿ ಪ್ರಮಾಣದ ನೆಮ್ಮದಿಯನ್ನು ಕಾಣಲು ಕಷ್ಟವಾಗುವುದು.

ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗುವ ಮಾನಸಿಕ ನೋವು ನಿಮ್ಮನ್ನು ತಲ್ಲಣಗೊಳಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ವಿಷ್ಣುವಿನ ಆರಾಧನೆ ಮಾಡಿ.

 ಮಿಥುನ:

ಮಿಥುನ:

ಮಾಡುತ್ತಿರುವ ಉದ್ಯೋಗವನ್ನು ಬದಲಾಯಿಸದಿರಿ. ಬೇರೆಯವರ ವಿಚಾರದಲ್ಲಿ ನೀವು ಹಸ್ತಕ್ಷೇಪ ಮಾಡದಿರಿ. ಇಂದು ನಿಮಗೆ ಉತ್ತಮವಾದ ದಿನ. ಮಾನಸಿಕವಾದ ಕೆಲವು ಕಿರಿಕಿರಿ ನಿಮ್ಮನ್ನು ಹೈರಾಣಗೊಳಿಸುವುದು.

ವಿದ್ಯಾರ್ಥಿಗಳ ಕನಸಿಗೆ ಒಂದಿಷ್ಟು ಸಹಕಾರ ದೊರೆಯುವುದು. ಸರ್ಕಾರದ ಮನ್ನಣೆಗೆ ಒಳಗಾಗುವ ಸಾಧ್ಯತೆಗಳಿವೆ. ಖಾಸಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಅನುಕೂಲವನ್ನು ಕಾಣುವರು. ಪ್ರಗತಿಪರ ಬದುಕು ಹಾಗೂ ಸಮೃದ್ಧ ಜೀವನಕ್ಕಾಗಿ ವಿಷ್ಣುವಿನ ಆರಾಧನೆ ಮಾಡಿ.

 ಕರ್ಕ:

ಕರ್ಕ:

ಇಂದು ನೀವು ಸಮಾಧಾನಕರ ದಿನವನ್ನು ಕಾಣಲಿದ್ದೀರಿ. ಬಂಧುಗಳು ಸಹ ನಿಮಗೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುವರು. ಮಾಧ್ಯಮ ಮಿತ್ರರಿಗೂ ಅನುಕೂಲಕರವಾದ ದಿನ.

ರಾಜಕೀಯ ಕ್ಷೇತ್ರದಲ್ಲಿರುವವರು ಅನುಕೂಲ ಪಡೆದುಕೊಳ್ಳುವರು. ಉತ್ತಮ ಸ್ಥಾನಮಾನಕ್ಕೆ ಏರುವ ಸಾಧ್ಯತೆಗಳು ಇವೆ. ಇಂದು ಸಮಾಜ ಸುಧಾರಕರಿಗೂ ನೆಮ್ಮದಿಯ ದಿನ.

ಕಲಾವಿದರಿಗೆ ಉತ್ತಮ ಅನುಕೂಲ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ವೆಂಕಟೇಶ್ವರನ ಆರಾಧನೆ ಮಾಡಿ.

ಸಿಂಹ:

ಸಿಂಹ:

ವಿಪರೀತವಾದ ದೇಹದ ಆಯಾಸ ನಿಮ್ಮನ್ನು ಕಾಡುವುದು. ಸಾಲವನ್ನು ಮಾಡಲೇ ಬೇಕಾದಂತಹ ಪರಿಸ್ಥಿತಿ ನಿಮ್ಮನ್ನು ಹೈರಾಣಗೊಳಿಸುವುದು.

ಅನೇಕ ದಿನದಿಂದ ತೀರ್ಮಾನಿಸಿದ ವಿಚಾರದಲ್ಲಿ ಅಡೆತಡೆ ಉಂಟಾಗುವುದು. ಸ್ಥಿರಾಸ್ತಿಯಲ್ಲಿ ಲಾಭ ಲಭಿಸದು. ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಕಷ್ಟ ಹಾಗೂ ನೋವನ್ನು ಅನುಭವಿಸ ಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

 ಕನ್ಯಾ:

ಕನ್ಯಾ:

ಇಂದು ನಿಮಗೆ ಸಂಪೂರ್ಣವಾದ ಸಮಾಧಾನ ದೊರೆಯದು. ಆದರೂ ಆ ಕುರಿತು ಚಿಂತಿಸುವ ಅಗತ್ಯವಿಲ್ಲ. ಸ್ಥಿರಾಸ್ತಿಗಾಗಿ ಕಿತ್ತಾಡದಿರಿ.

ವೈದ್ಯಕೀಯ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅನುಕೂಲ ಲಭಿಸದು. ಮಾಡುತ್ತಿರುವ ಉದ್ಯೋಗದಲ್ಲಿ ಶ್ರದ್ಧೆಯನ್ನು ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುವಿರಿ.

ವಿದ್ಯಾರ್ಥಿ ಜೀವನದಲ್ಲಿ ಏರುಪೇರುಗಳನ್ನು ಎದುರಿಸಬೇಕಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

 ತುಲಾ:

ತುಲಾ:

ಇಂದು ನೀವು ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಧಾನಕರವಾದ ದಿನವನ್ನು ಅನುಭವಿಸಲಿದ್ದೀರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

 ವೃಶ್ಚಿಕ:

ವೃಶ್ಚಿಕ:

ಇಂದು ನೀವು ಮಾನಸಿಕ ಕಿರಿಕಿರಿಯನ್ನು ಎದುರಿಸುವಿರಿ. ಹಿತ ಶತ್ರುಗಳು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ ಎನ್ನುವುದನ್ನು ಮರೆಯದಿರಿ.

ಉದ್ಯಮದಲ್ಲಿ ಯಶಸ್ಸನ್ನು ಸಾಧಿüಸುವಿರಿ. ಕಲಾವಿದರಿಗೆ ಹೊಸ ಹೊಸ ಅವಕಾಶಗಳು ಲಭ್ಯವಾಗುವುದು. ಕೆಲವು ರೀತಿಯ ಸಮಾಧಾನ ಹಾಗೂ ಕೆಲವು ವಿಚಾರದಲ್ಲಿ ಅಸಮಧಾನ ಮುಂದುವರಿಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

 ಧನು:

ಧನು:

ಇಂದು ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ಮಾರ್ಪಾಡನ್ನು ಕಾಣುವಿರಿ.

ಬಂಧುಮಿತ್ರರ ನಡುವೆ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯಲು ಅಸಾಧ್ಯವಾಗುವುದು. ವಾಹನ ಚಲಿಸುವಾಗ ಎಚ್ಚರಿಕೆಯನ್ನು ವಹಿಸಿ. ಆಮದು ಮತ್ತು ರಫ್ತು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆಗಳಿವೆ. ಸಮುದ್ರೋತ್ಪನ್ನ ವಸ್ತುಗಳ ವ್ಯಾಪಾರದಲ್ಲೂ ನಷ್ಟವಾಗುವುದು. ಬಂಧುಗಳು ಅಗಲಿದ ದುರ್ವಾತೆ ಕೇಳುವ ಸಾಧ್ಯತೆಗಳಿವೆ.

ವಿದೇಶಯಾನದ ಕನಸು ಭಗ್ನವಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

 ಮಕರ:

ಮಕರ:

ಇಂದು ಕೆಲವರು ಸಮಾಧಾನಕರವಾದ ಬದುಕನ್ನು ಕಾಣುವರು. ವಿಪರೀತವಾದ ದೇಹದ ಆಯಾಸ ನಿಮ್ಮನ್ನು ಕಾಡುವುದು. ಅತಿಯಾಗಿ ಹಣ ವ್ಯಯಮಾಡಿ ದೂರದ ಪ್ರಯಾಣ ಕೈಗೊಳ್ಳಬೇಕಾಗುವುದು.

ಖನಿಜೋತ್ಪನ್ನ ವ್ಯಾಪಾರ ವಹಿವಾಟಿನಲ್ಲಿ ಏರುಪೇರನ್ನು ಅನುಭವಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಸಮೃದ್ಧ ಬದುಕಿಗೆ ವಿಷ್ಣುವಿನ ಆರಾಧನೆ ಮಾಡಿ. ವಿಷ್ಣು ಅಥವಾ ಕೃಷ್ಣನಿಗೆ ತುಳಸಿ ಅರ್ಪಣೆ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳಿ.

 ಕುಂಬ:

ಕುಂಬ:

ಇಂದು ನಿಮಗೆ ಸುಖಮಯವಾದ ಜೀವನ. ನೆಮ್ಮದಿಯನ್ನು ಕಾಣುವಿರಿ. ಬಂಧು ಮಿತ್ರರಿಂದ ಅನುಕೂಲವನ್ನು ಪಡೆದುಕೊಳ್ಳುವಿರಿ. ತಂದೆತಾಯಂದಿರ ಆಶೀರ್ವಾದವೂ ಲಭ್ಯವಾಗುವುದು.

ಉತ್ತಮ ಪ್ರಗತಿಯ ಹಾದಿಯಲ್ಲಿ ನಿಮ್ಮ ಜೀವನ ಸಾಗುವುದು. ಮನೆಯ ವಿಚಾರ ಅಥವಾ ಆಂತರಿಕ ವಿಷಯವನ್ನು ಯಾರೊಂದಿಗೂ ಚರ್ಚಿಸದಿರಿ. ಸಹೋದರಿಯ ಸಹಕಾರ ದೊರೆಯುವುದು. ನಿರೀಕ್ಷಿತ ಮಟ್ಟದ ಯಶಸ್ಸು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಮೀನ:

ಮೀನ:

ಇಂದು ನಿಮಗೆ ಸುಖಪ್ರದವಾದ ದಿನವಾಗಲಿದೆ. ನೆಮ್ಮದಿಯ ದಿನವನ್ನು ನೀವು ಅನುಭವಿಸಲಿದ್ದೀರಿ. ನಿರೀಕ್ಷಿತ ಮಟ್ಟದ ಯಶಸ್ಸು ಸಹ ನಿಮಗೆ ಲಭ್ಯವಾಗುವುದು.

ಮಾಡುತ್ತಿರುವ ಉದ್ಯೋಗವನ್ನು ಮುಂದುವರಿಸುವುದು ಉತ್ತಮ. ಪತ್ನಿಯಿಂದ ಬರುವ ಆರ್ಥಿಕ ಹರಿವು ಸಮೃದ್ಧಿಯನ್ನು ತಂದುಕೊಡುವುದು. ವಿದೇಶಯಾನದ ಕನಸು ನನಸಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಜೀವನಕ್ಕಾಗಿ ದೇವಿ ಮತ್ತು ವಿಷ್ಣುವಿನ ಆರಾಧನೆ ಮಾಡಿ.

Read more about: ಭವಿಷ್ಯ
English summary

Your daily horoscope 10 january 2018

Know what astrology and the planets have in store for you today. Choose your zodiac sign and read the details..