For Quick Alerts
ALLOW NOTIFICATIONS  
For Daily Alerts

1-10-2018: ಸೋಮವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು.

ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿ ಯಾಗುತ್ತೇವೆ. ಇನ್ನು ವೃತ್ತಿ ಜೀವನಕ್ಕೆ ಎಂದಿನಂತೆ ಹಿಂತಿರುಗುವ ಈ ಸೋಮವಾರ ನಿಮ್ಮ ಬದುಕಲ್ಲಿ ಯಾವೆಲ್ಲಾ ಬದಲಾವಣೆ ತರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈನ ದಿನ ಭವಿಷ್ಯವನ್ನು ಪರಿಶೀಲಿಸಬೇಕು. ನಿಮ್ಮ ಭವಿಷ್ಯ ಹಾಗೂ ಪರಿಹಾರ ಕ್ರಮಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ....

ಮೇಷ (1 ಅಕ್ಟೋಬರ್, 2018)

ಮೇಷ (1 ಅಕ್ಟೋಬರ್, 2018)

ಧನಾದಾಯ ಉತ್ತಮ.ಸಂಗಾತಿಯ ಆದಾಯ ಹೆಚ್ಚಾಗುತ್ತದೆ.ಉದ್ಯೋಗ ದೊರೆಯುವ ಎಲ್ಲಾ ಸಾಧ್ಯತೆಗಳಿವೆ.ಹಳೆಯ ಯೋಜನೆಗಳನ್ನು ಈಗ ಮುಂದುವರಿಸಬಹುದು.ಸಂತಾನ ಅಪೇಕ್ಷಿಸುತ್ತಿರುವವರಿಗೆ ಶುಭ ಸಂದೇಶ. ಮಕ್ಕಳಿಗೆ ನೀವು ಧನಸಹಾಯ ಮಾಡುವುದು ಅನಿವಾರ್ಯ.

ವೃಷಭ

ವೃಷಭ

ಬಹಳ ಸಂತೋಷವಾಗಿರುವಿರಿ.ವೈಯಕ್ತಿಕ ಅಲಂಕಾರದಲ್ಲಿ ನಿಗಾವಹಿಸಿರಿ.ತಾಯಿಯಿಂದ ನಿಮಗೆ ಧನಸಹಾಯ. ಆಸ್ತಿಯ ಮೇಲೆ ಬಂಧುಗಳ ಕಾಕದೃಷ್ಟಿ ಬೀಳುತ್ತದೆ. ಪಿತ್ರಾಜಿತ ಆಸ್ತಿಗಳು ಒದಗಿ ಬರುತ್ತವೆ. ಭೂಮಿ ಮೇಲೆ ಹೂಡಿದ ಹಣ ಸಾಕಷ್ಟು ಬೆಳೆಯುತ್ತದೆ.ವೃತ್ತಿಯಲ್ಲಿ ಒತ್ತಡ.

Most Read: ವಾಸ್ತು ಟಿಪ್ಸ್: ಮನೆಯಲ್ಲಿ ಮೀನಿನ ಅಕ್ವೇರಿಯಮ್ಸ್ ಹೀಗಿದ್ದರೆ-ಮನೆಯಲ್ಲಿ ಶಾಂತಿ ನೆಲೆಸುತ್ತದೆ

ಮಿಥುನ

ಮಿಥುನ

ನಿಮ್ಮ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಹರಿದು ಬರುತ್ತದೆ.ಸರ್ಕಾರಿ ಮೂಲದ ಆಸ್ತಿ ಖರೀದಿ ಮಾಡಲು ಇದು ಸಕಾಲ. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಭೂ ಹೆಡುವಳಿದಾರರಿಗೆ ದಾಖಲೆಗಳನ್ನು ಪಡೆಯಲು ಸಕಾಲ. ನಿಮ್ಮ ಮಾತಿನಿಂದ ನಿಮಗೆ ಶತ್ರುಗಳು ಜಾಸ್ತಿಯಾಗುವ ಸಾಧ್ಯತೆ.

ಕಟಕ

ಕಟಕ

ಅತಿಯಾದ ಆತ್ಮಾಭಿಮಾನವಿರುತ್ತದೆ.ಒಡಹುಟ್ಟಿದವರು ಧನಸಹಾಯಕ್ಕಾಗಿ ಬರುತ್ತಾರೆ. ಕೊಟ್ಟ ಹಣ ವಾಪಸ್ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ . ಮೂಳೆ ನೋವು ಬಾಧಿಸಬಹುದು.ಹೊಸ ವ್ಯವಹಾರ ಆರಂಭಿಸುವ ಮುಂಚೆ ಅದರ ಬಗ್ಗೆ ತಿಳಿಯಿರಿ.ಉದ್ದಿಮೆ ನಡೆಸುವವರಿಗೆ ಉತ್ತಮ ಅವಕಾಶ ಲಭಿಸಲಿದೆ.

ಸಿಂಹ

ಸಿಂಹ

ಧನಾದಾಯ ಪರವಾಗಿಲ್ಲ. ಹೊಸ ವ್ಯಾಪಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತದೆ. ವಾಹನದ ಮಾಲೀಕರಿಗೆ ಅದರ ದುರಸ್ತಿಗಾಗಿ ಸಾಕಷ್ಟು ಖರ್ಚಾಗುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ಬಡ್ತಿ ಸಿಗುವ ಸಾಧ್ಯತೆ.ಆಡಳಿತಾತ್ಮಕ ಹುದ್ದೆಯಲ್ಲಿ ಇರುವವರಿಗೆ ವರ್ಗಾವಣೆ ಸಾಧ್ಯತೆ.

ಕನ್ಯಾ

ಕನ್ಯಾ

ಧನಾದಾಯ ಸರಾಗವಾಗಿ ಹರಿದು ಬರುತ್ತದೆ. ನಿಮ್ಮ ಮಾತಿನಿಂದ ವ್ಯಕ್ತಿಗತ ಗೌರವಕ್ಕೆ ಧಕ್ಕೆ ಮಾಡಿಕೊಳ್ಳುವಿರಿ. ಆಸ್ತಿ ಬಗ್ಗೆ ತಗಾದೆಗಳು ತಲೆದೋರುತ್ತದೆ.ಮಕ್ಕಳು ಆಟಪಾಠಗಳಲ್ಲಿ ಒಳ್ಳೆಯ ಹೆಸರು ಗಳಿಸುವರು. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶವಿದೆ.ಹೊಟ್ಟೆ ಅಥವಾ ಶ್ವಾಸಕೋಶದಲ್ಲಿ ತೊಂದರೆ.

ತುಲಾ

ತುಲಾ

ಧನಾದಾಯ ಹೆಚ್ಚಳ. ನಿಮ್ಮ ಇಚ್ಚೆಯ ಆಭರಣ ಖರೀದಿಸಲು ಅನುಕೂಲವಾದ ವಾತಾವರಣವಿದೆ. ಸಂಗಾತಿಯ ಸಂತೋಷಕ್ಕಾಗಿ ಒಡವೆ,ವಸ್ತ್ರ ಖರೀದಿ. ಕೆಲವು ಮನೋಕಾಮನೆಗಳು ಈಡೇರುತ್ತವೆ. ಪರರ ಮೇಲೆ ತಪ್ಪು ಹೊರಿಸಲು ಹೋಗಿ ಸಿಕ್ಕು ಬೀಳುವ ಸಾಧ್ಯತೆ.ನೀರಿನಿಂದ ಆರೋಗ್ಯ ವ್ಯತ್ಯಾಸ ಸಾಧ್ಯತೆ.

Most Read:ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

ವೃಶ್ಚಿಕ

ವೃಶ್ಚಿಕ

ತೆರಿಗೆ ತಜ್ಞರಿಗೆ ಬೇಡಿಕೆಗಳು ಹೆಚ್ಚುತ್ತವೆ.ಅವರ ಆದಾಯವು ವೃಧ್ಧಿಸುತ್ತದೆ. ನಿಮ್ಮಿಂದ ಧನಸಹಾಯ ಪಡೆದವರೇ ಹಿಂದಿನಿಂದ ನಿಮ್ಮನ್ನು ತೆಗಳುವರು. ಧನಾದಾಯ ಸಾಮಾನ್ಯ. ಕೃಷಿಕರಿಗೆ ಆದಾಯ ಹೆಚ್ಚಾಗುತ್ತದೆ. ಕೃಷಿ ಭೂಮಿ ವಿಸ್ತರಿಸಬಹುದು.ತಾಯಿಯಿಂದ ನಿಮ್ಮ ಕೆಲಸಗಳಿಗೆ ಪೂರ್ತಿ ಸಹಕಾರ ದೊರೆಯುತ್ತದೆ.

ಧನಸ್ಸು

ಧನಸ್ಸು

ಉದ್ಯೋಗದಲ್ಲಿ ಬಡ್ತಿ ಅಥವಾ ವೇತನ ಜಾಸ್ತಿಯಾಗುವ ಸಾಧ್ಯತೆ.ನೀವು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಲಾಭವಿರುತ್ತದೆ. ಕುಟುಂಬದವರು ನಿಮ್ಮ ವ್ಯವಹಾರಗಳಿಗೆ ಸೂಕ್ತ ಸಹಕಾರ ನೀಡುವರು. ನಿರೀಕ್ಷಿತ ಮೂಲಗಳಿಂದ ಧನಾದಾಯ ಹೆಚ್ಚಾಗುತ್ತದೆ. ಪ್ರೇಮಿಗಳಲ್ಲಿ ಮುನಿಸು ಕಾಣಿಸಬಹುದು.

ಮಕರ

ಮಕರ

ರಾಜಕೀಯ ವ್ಯಕ್ತಿಗಳಿಗೆ ಅವರು ಆಶಿಸಿದ್ದ ಸ್ಥಾನಮಾನ ದೊರೆಯುತ್ತದೆ.ವಕೀಲರಿಗೆ ನ್ಯಾಯಾಧೀಶರಾಗುವ ಸಾಧ್ಯತೆ.ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಸಾಧ್ಯತೆ ಇದೆ.ಮಕ್ಕಳಿಂದ ನಿಮಗೆ ಗೌರವ ಸಿಗುತ್ತದೆ.ಆಹಾರ ಪದಾರ್ಥ ತಯಾರಿಸಿ ಮಾರುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕುಂಭ

ಕುಂಭ

ನೀವು ಹಮ್ಮಿಕೊಂಡ ಕಾರ್ಯಸಾಧನೆಗಾಗಿ ಸಾಕಷ್ಟು ಓಡಾಟ. ವಸ್ತ್ರಗಳನ್ನು ನೇಯುವವರಿಗೆ ಬೇಡಿಕೆ ಬರುತ್ತದೆ.ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಬರುತ್ತದೆ. ಜವಳಿ ಉದ್ದಿಮೆ ವಿಸ್ತರಿಸಲು ಸಕಾಲ. ಕಬ್ಬಿಣ ಮತ್ತು ಉಕ್ಕು ತಯಾರಿಸುವವರಿಗೆ ಬೇಡಿಕೆ ಹೆಚ್ಚಿ ವ್ಯಾಪಾರ ವಿಸ್ತರಣೆಯಾಗುತ್ತದೆ.

ಮೀನ

ಮೀನ

ಅಮೂಲ್ಯ ವಸ್ತುಗಳು ಮತ್ತು ಒಡವೆಗಳನ್ನು ಜೋಪಾನ ಮಾಡಿಕೊಳ್ಳುವುದು ಉತ್ತಮ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಆಭರಣಗಳ ಕುಸುರಿ ಕೆಲಸ ಮಾಡುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಭೂ ವ್ಯಾಪಾರ ಮಾಡಿಸುವ ಮಧ್ಯವರ್ತಿಗಳಿಗೆ ಒಳ್ಳೆಯ ಕಮಿಷನ್ ದೊರೆಯುತ್ತದೆ. ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9845743807 call/ whatsapp.

Read more about: horoscope
English summary

your daily horoscope-1-october-2018

Know what astrology and the planets have in store for you today. Choose your zodiac sign and read the details..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more