For Quick Alerts
ALLOW NOTIFICATIONS  
For Daily Alerts

  ಮದುವೆಯ ವಿಚಾರದಲ್ಲಿ ಈ ಮೂರು ರಾಶಿಯ ಪುರುಷರಿಂದ ದೂರವಿರಿ!

  By Deepu
  |

  ವ್ಯವಹಾರದಲ್ಲಿ ಅಥವಾ ಸ್ನೇಹಿತರ್ಯಾರೋ ಮೋಸ ಮಾಡಿದರು ಅಥವಾ ಕೊಟ್ಟ ಮಾತಿಗೆ ತಕ್ಕಂತೆ ನಡೆದಿಲ್ಲ ಎಂದಾಗ ಸ್ವಲ್ಪ ಸಮಯ ಬೇಸರವಾಗುವುದು. ನಂತರ ದಿನಕಳೆದಂತೆ ಅವೆಲ್ಲವೂ ಮರೆತು ಪುನಃ ಎಂದಿನಂತೆ ಜೀವನ ಸಾಗುವುದು. ಆದರೆ ನಮ್ಮ ಜೀವದ ಉಸಿರಾಗಿ, ನಮ್ಮ ಪ್ರಪಂಚವೇ ಆಗಿರುವಂತರ ಸಂಗಾತಿಯಾದವರು ಮೋಸ ಮಾಡಿದಾಗ ಜೀವನದಲ್ಲಿ ಚಂಡಮಾರುತವೇ ಎದ್ದು ಬಿಡುತ್ತದೆ. ಜೊತೆಗೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ಸಂಬಂಧದಲ್ಲಿ ಮೋಸವಾಯಿತು ಎಂದಾಗ ಸಾಮಾನ್ಯವಾಗಿ ಇಬ್ಬರೂ ಬೇರೆಯಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ.

  ಸಂಬಂಧ ಎನ್ನುವುದು ಬಹಳ ನಾಜೂಕಾದ ವಿಚಾರ ಎನ್ನಬಹುದು. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಒಂದು ಸಂಬಂಧವನ್ನು ಬೆಳೆಸುವಾಗ ಎಲ್ಲಾ ತರಹದಿಂದಲೂ ವ್ಯಕ್ತಿಯ ಬಗ್ಗೆ ಹಾಗೂ ವ್ಯಕ್ತಿಯ ಕುಟುಂಬದ ಬಗ್ಗೆ ಸೂಕ್ತ ರೀತಿಯ ತನಿಖೆ ಹಾಗೂ ವಿಚಾರಣೆಯನ್ನು ನಡೆಸುತ್ತಾರೆ. ನಂತರ ಸಕಾರಾತ್ಮಕ ಅಭಿಪ್ರಾಯಗಳು ಲಭಿಸಿತು ಎಂದ ನಂತರವೇ ಸಂಬಂಧವನ್ನು ಮುಂದುವರಿಸಲಾಗುವುದು.

  ಮದುವೆಗೆ ಈ 4 ರಾಶಿಗಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಅವರೇ ಪುಣ್ಯವಂತರು!!

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಕ್ರದ ಪುರುಷರು ಪ್ರೀತಿಯ ಜೀವನವನ್ನು ಸಂಗಾತಿಯೊಂದಿಗೆ ಕಳೆಯುವುದಿಲ್ಲ. ಇವರಿಂದ ಸದಾ ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿರುತ್ತಾರೆ ಎಂದು ಹೇಳಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು ಎನ್ನುವುದನ್ನು ಈ ಮುಂದಿರುವ ವಿವರಣೆಯಿಂದ ತಿಳಿಯಿರಿ....

  ಮೀನ

  ಮೀನ

  ಈ ರಾಶಿಯ ಪುರುಷರು ಭಯಾನಕವಾದ ವಿಷಕಾರಿ ಸಂಬಂಧವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರಿಂದ ಉಂಟಾದ ಸಮಸ್ಯೆಗಳಿಗೆ ಅಥವಾ ಇನ್ಯಾವುದೋ ತಪ್ಪುಗಳಿಗೆ ಸಂಗಾತಿಯೇ ಕಾರಣ ಎನ್ನುವಂತೆ ಬೆರಳುಮಾಡಿ ತೋರಿಸುತ್ತಾರೆ. ತಮ್ಮ ತಪ್ಪುಗಳಿಗೆ ಯಾವುದೇ ಚಿಂತನೆಯನ್ನು ನಡೆಸುವುದಿಲ್ಲ. ಸಂಬಂಧದಲ್ಲಿ ಹೆಚ್ಚು ವಿಚಾರವನ್ನು ತಿಳಿದವರಂತೆ ವರ್ತಿಸುತ್ತಾರೆ. ಇವರು ಸ್ಥಿರವಾದ ಅಭದ್ರತೆಗೆ ಒಳಗಾದಾಗ ವಿಷಯಗಳನ್ನು ನಾಶಮಾಡುತ್ತಾರೆ. ತಮ್ಮ ನಿರೀಕ್ಷೆಯಂತೆಯೇ ತಮ್ಮ ಸಂಬಂಧವು ಇರಬೇಕು ಹಾಗೂ ಅದರಂತೆಯೇ ನಡೆದುಕೊಂಡು ಹೋಗಬೇಕು ಎಂದು ಬಯಸುತ್ತಾರೆ. ಪೂರ್ವಾಗ್ರಹ ಪೀಡಿತ ಮನೋಸ್ಥಿತಿ ಹೊಂದಿರುವ ಇವರು ತಮ್ಮ ಸಂಗಾತಿಗೆ ಉಸಿರುಗಟ್ಟಿಸುವಂತಹ ಪರಿಸರವನ್ನು ಸೃಷ್ಟಿಸಿಬಿಡುವರು.

  ಮೀನ

  ಮೀನ

  ತಮ್ಮ ನಿರೀಕ್ಷೆಯಂತೆಯೇ ಸಂಬಂಧವು ಇರಬೇಕು ಎಂದು ಅಧಿಕಾರ ಚಲಾಯಿಸಲು ನೋಡುತ್ತಾರೆ. ಸಂಬಂಧದಲ್ಲಿ ತೊಡಕು ಉಂಟಾದಾಗ ಪುನಃ ಸಂಗಾತಿಯ ವರ್ತನೆ ಹಾಗೂ ದೋಷಗಳಿಂದಲೇ ಹೀಗೆ ಉಂಟಾಯಿತು ಎಂದು ಹೇಳುತ್ತಾರೆ. ಇವರ ಅನುಮಾನ ಹಾಗೂ ಅತಿಯಾದ ಬಯಕೆಗಳು ಸಂಗಾತಿಯನ್ನು ಉಸಿರುಗಟ್ಟಿಸುವಂತಹ ಪರಿಸ್ಥಿತಿಗೆ ದೂಡುತ್ತದೆ.

  ಕನ್ಯಾ

  ಕನ್ಯಾ

  ಈ ರಾಶಿಯ ಪುರುಷರು ಅನ್ಯಾಯ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ತಮ್ಮ ಅವ್ಯವಸ್ಥೆಯಲ್ಲಿ ಸಿಲುಕಿಕೊಂಡಾಗ ಸಂಗಾತಿಯೊಂದಿಗೆ ತರ್ಕಕ್ಕೆ ಇಳಿಯುತ್ತಾರೆ. ಜೊತೆಗೆ ಪ್ರಣಯದ ಸಂಬಂಧವನ್ನು ನಾಶಗೊಳಿಸುತ್ತಾರೆ. ಸದಾ ತಮ್ಮ ಸಂಬಂಧದಲ್ಲಿ ಮುಖವಾಡವನ್ನು ಧರಿಸಿದ ಜೀವನವನ್ನು ನಡೆಸುತ್ತಾರೆ. ಸ್ತ್ರೀಯರ ಮುಂದೆ ತಾವು ಎಲ್ಲಾ ವಿಚಾರದಲ್ಲೂ ಮೇಲುಗೈ ಸಾಧಿಸಿರುವಂತೆ ತೋರುತ್ತಾರೆ. ಇವರ ಉದ್ವೇಗದ ಸ್ವಭಾವವು ಪ್ರೀತಿಯ ಜೀವನವನ್ನು ಆಘಾತಕ್ಕೊಳಗಾಗುವಂತೆ ಮಾಡುತ್ತದೆ. ತಮ್ಮ ತಪ್ಪಿಗೆ ಸಂಗಾತಿಯನ್ನು ಶಿಕ್ಷಿಸುತ್ತಾರೆ. ಒಟ್ಟಾರೆಯಾಗಿ ಇವರ ವ್ಯಕ್ತಿತ್ವವು ಕೆಟ್ಟಗುಣಗಳಿಂದ ಒಳಗೊಂಡಿದೆ ಎಂದು ಹೇಳಲಾಗುವುದು.

  ಕನ್ಯಾ

  ಕನ್ಯಾ

  ಇವರು ಒಮ್ಮೆ ಉದ್ವೇಗಕ್ಕೆ ಒಳಗಾದರು ಎಂದರೆ ಸಂಬಂಧದಿಂದ ಹೊರ ಬರಲು ಇಷ್ಟಪಡುತ್ತಾರೆ. ಅವರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ತಿದ್ದಿಕೊಳ್ಳಲು ಪ್ರಯತ್ನಿಸುವುದಿಲ್ಲ. ಅವರ ಕೆಲವು ಕೆಟ್ಟ ವರ್ತನೆ ಸಂಸಾರದ ಸುಖ ಹಾಗೂ ಶಾಂತಿಯನ್ನು ಕೆಡಿಸುವುದು.

  ವೃಷಭ

  ವೃಷಭ

  ಈ ರಾಶಿಚಕ್ರದ ಪುರುಷರು ಭಾವನಾತ್ಮಕವಾಗಿ ಬೇರ್ಪಟ್ಟಿರುವ ವ್ಯಕ್ತಿಗಳು ಎನ್ನಬಹುದು. ಇವರಿಗೆ ಸಂಗಾತಿಯ ಪ್ರೀತಿಯನ್ನು ವೈಯಕ್ತಿಕವಾಗಿ ಆಯ್ಕೆ ಮಾಡಿಕೊಳ್ಳಲು ಅಥವಾ ಹೀರಿಕೊಳ್ಳಲು ಇಷ್ಟವಿರುವುದಿಲ್ಲ. ಇವರ ಜೀವನದಲ್ಲಿ ಪ್ರಣಯ ಭರಿತ ಜೀವನಕ್ಕೆ ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಇವರು ಸಂಗಾತಿಯು ತಮ್ಮ ವೈಯಕ್ತಿಕ ಪ್ರಾಮುಖ್ಯತೆಯನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಜೊತೆಗೆ ಸಂಗಾತಿಯ ಕೊರತೆಯನ್ನು ಸದಾ ಮಾತನಾಡುತ್ತಾರೆ. ಇವರು ಸಂಗಾತಿಯೊಂದಿಗೆ ಅಷ್ಟಾಗಿ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಇವರು ಸಂಗಾತಿಯಾಗಿ ಇರಬಹುದು ಆದರೆ ಜೀವನವನ್ನು ಸಂತೋಷಪಡಿಸುವ ಗೋಜಿಗೆ ಹೋಗುವುದಿಲ್ಲ ಎನ್ನಬಹುದು.

  ವೃಷಭ

  ವೃಷಭ

  ಇನ್ನು ಸಂಗಾತಿಯು ಸದಾ ತನ್ನನ್ನು ಗೌರವಿಸುತ್ತಲೇ ಇರಬೇಕು ಎಂದು ಬಯಸುತ್ತಾರೆ. ತಮ್ಮ ನಡವಳಿಕೆಯನ್ನೇ ಸದಾ ಶ್ಲಾಘಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಯಾವುದೇ ಆಸಕ್ತಿ ಇಲ್ಲದವರಂತೆ ವರ್ತಿಸುತ್ತಾರೆ. ತಾವು ಇಲ್ಲದೆಯೇ ಸಂಸಾರದ ಘನತೆ ಹಾಗೂ ಸಂತೋಷದಿಂದ ಕೂಡಿರುವುದಿಲ್ಲ ಎನ್ನುವ ಭಾವನೆಯನ್ನು ತಳೆದಿರುತ್ತಾರೆ.

  English summary

  Worst Male Relationship Partner Based On Their Zodiac Signs

  These women are all left with one thought in the end- When and how did their once, romantic relationship turn into an entanglement? For some women, the biggest challenge in their relationship is to keep up with their unruly partners. It all starts with them bearing the maximum weight of their relationship, without their partner’s help.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more