Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಕೆಲವು ಮಹಿಳೆಯರು ಯೋನಿ ಬಿಗಿಗೊಳಿಸಲು ಕಣಜದ ಗೂಡು ಬಳಸುತ್ತಾರಂತೆ!
ಹೆರಿಗೆ ಬಳಿಕ ಯೋನಿಯು ದೊಡ್ಡದಾಗುವುದು ಸಹಜ ಪ್ರಕ್ರಿಯೆ. ಇದೇ ಕಾರಣದಿಂದಾಗಿ ಕೆಲವು ಪುರುಷರು ತಮ್ಮ ಸಂಗಾತಿ ಮೇಲಿನ ಆಸಕ್ತಿ ಕಳೆದುಕೊಳ್ಳುವರು. ಇದರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸವೇ ಕಳೆದುಹೋಗುವುದು. ಇದರಿಂದ ಯೋನಿ ಬಿಗಿತ ಹೆಚ್ಚಿಸಲು ಹೆಚ್ಚಿನ ಮಹಿಳೆಯರು ಹಲವಾರು ವಿಧಾನಗಳನ್ನು ಕಂಡುಕೊಳ್ಳುವರು.

ಯೋನಿಯನ್ನು ಮತ್ತೆ ಹಿಂದಿನಂತೆ ಮಾಡಲು ಹಲವಾರು ರೀತಿಯ ವಿಧಾನಗಳು ಇವೆ. ಇದರಲ್ಲಿ ಕೆಲವು ಮಹಿಳೆಯರು ಯೋನಿಯೊಳಗೆ ಕಣಜದ ಗೂಡನ್ನು ತುರುಕುವರು. ಆದರೆ ಇದನ್ನು ಯಾಕೆ ತುರುಕಲಾಗುತ್ತದೆ ಮತ್ತು ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ನಾವು ಈ ಲೇಖನದಲ್ಲಿ ವಿಸ್ತಾರವಾಗಿ ತಿಳಿಯುವ....

ಮಹಿಳೆಯರ ನಂಬಿಕೆ
ಆನ್ ಲೈನ್ ನಲ್ಲಿ ಇರುವ ಪ್ರಕಾರ, ಹೆರಿಗೆ ಬಳಿಕ ನೆಲದ ಮೇಲಿನ ವಸ್ತುವೊಂದು ಗರ್ಭಾಶಯದ ಗೋಡೆಯ ಪುನರ್ ಸ್ಥಾಪಿಸಲು ನೆರವಾಗುವುದು. ಇದು ಗಾಯಗಳನ್ನು ಕೂಡ ಶಮನಮಾಡುವುದು ಮತ್ತು ಯೋನಿಯನ್ನು ಸ್ವಚ್ಛಗೊಳಿಸಲು ನೆರವಾಗುವುದು ಎಂದು ನಂಬಲಾಗಿದೆ.

ತಪ್ಪು ಮಾಹಿತಿ
ಸಾಂಪ್ರದಾಯಿಕ ಔಷಧಿಗಳ ಕೆಲವೊಂದು ವೆಬ್ ಸೈಟ್‌ಗಳ ಪ್ರಕಾರ ಓಕ್ ಗಲ್ ಯೋನಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಗಲ್ ಅಥವಾ ಕಣಜದ ಗೂಡನ್ನು ಪೇಸ್ಟ್ ಮಾಡಿ ಹಂಚಿಕೊಂಡರೆ ಇದು ಯೋನಿ ಬಿಗಿಗೊಳಿಸಿ, ಒಣಗಿಸುವುದು ಎಂದು ಹೇಳಲಾಗುತ್ತದೆ.

ಓಕ್ ಗಲ್ ಅಲ್ಲ, ಆದರೆ ಕಣಜದ ಗೂಡು
ಓಕ್ ಗಲ್ ಗಳು ಕಣಜದ ಗೂಡಿನಲ್ಲಿ ಹೆಣ್ಣು ಕಣಜವು ಮೊಟ್ಟೆಯನ್ನು ಇಟ್ಟಾಗ ಅದರಿಂದ ಒಳಗಡೆಯೇ ಲಾರ್ವ ಸೃಷ್ಟಿಯಾಗುವುದು. ಇದರಿಂದ ಹೆರಿಗೆ ಬಳಿಕ ಗರ್ಭಕೋಶದ ಪದರವನ್ನು ಮರುಸ್ಥಾಪಿಸಬಹುದು ಎಂದು ಹೇಳಲಾಗಿದೆ.

ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ...
ವೈದ್ಯರ ಪ್ರಕಾರ ಕಣಜದ ಗೂಡಿನ ಈ ಚಿಕಿತ್ಸೆಯು ಯಾವುದೇ ರೀತಿಯಿಂದ ಪರಿಣಾಮಕಾರಿಯಲ್ಲ. ಇದರ ಅಡ್ಡಪರಿಣಾಮವಾಗಿ ಲೈಂಗಿಕ ಕ್ರಿಯೆ ವೇಳೆ ನೋವು, ಆರೋಗ್ಯಕಾರಿ ಬ್ಯಾಕ್ಟೀರಿಯಾ ಕೊರತೆ ಮತ್ತು ಎಚ್ ಐವಿ ಬರುವ ಸಾಧ್ಯತೆಯು ಹೆಚ್ಚಾಗಿರುವುದು.

ಇದು ಯೋನಿಯನ್ನು ಒಣಗಿಸುವುದು
ಯೋನಿಯ ಲೋಳೆಯು ಒಣಗಿ ಹೋಗುವುದರಿಂದ ಲೈಂಗಿಕಕ್ರಿಯೆ ವೇಳೆ ತುಂಬಾ ಒರಟಾಗಬಹುದು. ಕಣಜದ ಗೂಡನ್ನು ಒಳಗೆ ಹಾಕುವುದರಿಂದ ರಕ್ಷಣಾತ್ಮಕ ಲೋಳೆಯ ಪದರ ನಾಶವಾಗಬಹುದು ಮತ್ತು ಇದರಿಂದ ಒಳ್ಳೆಯ ಬ್ಯಾಕ್ಟೀರಿಯಾ ನಾಶವಾಗಬಹುದು.

ನಮ್ಮ ಸಲಹೆ
ನೀವು ಇಂತಹ ವಿಚಿತ್ರ ತಂತ್ರಗಳನ್ನು ಅನುಸರಿಸುವ ಬದಲು ವೈದ್ಯರ ಸಲಹೆ ಪಡೆಯಿರಿ. ನಿಮ್ಮದೇ ಕ್ರಮ ತೆಗೆದುಕೊಂಡರೆ ತುಂಬಾ ಅಪಾಯಕಾರಿಯಾಗಬಹುದು.



Click it and Unblock the Notifications