Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತ್ರೀಯರು ಈ 4 ರಾಶಿಚಕ್ರದವರಿಗೆ ಹೆಚ್ಚು ಆಕರ್ಷಿತರಾಗುತ್ತಾರಂತೆ!
ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮವಾದದ್ದು. ಆಕೆಯ ಆಯ್ಕೆ ಹಾಗೂ ಮನಸ್ಸಿನ ಬಗ್ಗೆ ತಿಳಿದು ಕೊಳ್ಳುವುದು ಎಂದರೆ ಸ್ವಲ್ಪ ಕಷ್ಟ ಎಂತಲೇ ಹೇಳಬಹುದು. ಅನೇಕ ವಿಚಾರಗಳಿಂದ ಸಮಂಜಸ ಎಂದೆನಿಸಿದ ವಿಚಾರಗಳಿಗೆ ಮಾತ್ರ ಆಕೆ ಸೈ ಎನ್ನುತ್ತಾಳೆ. ಹಾಗಾಗಿಗೆ ಅನೇಕರು ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಅದೊಂದು ಕಷ್ಟದ ಸಂಗತಿ ಎನ್ನುತ್ತಾರೆ. ಆದರೆ ಕೆಲವು ರಾಶಿ ಚಕ್ರದ ಪುರುಷರು ಮಹಿಳೆಯರಿಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಸಾಮಾನ್ಯವಾಗಿ ಅಷ್ಟು ಸುಲಭವಾಗಿ ಒಬ್ಬ ವ್ಯಕ್ತಿಯ ಗುಣಲಕ್ಷಣ, ನೈಜ ಸ್ವರೂಪ, ಇಷ್ಟ-ಕಷ್ಟಗಳನ್ನು ಇಷ್ಟಪಡುವುದು ಅಥವಾ ಒಪ್ಪಿಗೆ ಸೂಚಿಸುವುದು ಎಂದರೆ ಅಷ್ಟು ಸರಳವಾದ ವಿಚಾರವಲ್ಲ. ಆದರೆ ಕೆಲವು ರಾಶಿಚಕ್ರದ ಪುರುಷರ ಇಷ್ಟಕಷ್ಟಗಳು ಬಹುಬೇಗ ಸ್ತ್ರೀಯರಿಗೆ ಇಷ್ಟವಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆ ರಾಶಿಚಕ್ರದವರ ಇಷ್ಟವಾದ ಗುಣಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಅರಿಯಿರಿ....

ಮಿಥುನ
ಈ ರಾಶಿಯ ಪುರುಷರು ಅತ್ಯಂತ ಅದೃಷ್ಟವಂತರು ಎನ್ನಬಹುದು. ಸ್ತ್ರೀಯರ ಗಮನ ಸೆಳೆಯಲು ಇವರು ಕಷ್ಟಪಡುವ ಅಗತ್ಯವಿಲ್ಲ. ಇವರ ಆಕರ್ಷಕ ವ್ಯಕ್ತಿತ್ವವು ಮಹಿಳೆಯರನ್ನು ಬಹುಬೇಗ ಆಕರ್ಷಣೆಗೆ ಒಳಪಡಿಸುತ್ತದೆ. ಇವರ ಸ್ಪಷ್ಟವಾದ ನಿಲುವು, ಮೃದುವಾದ ಸ್ವಭಾವ ಹಾಗೂ ಪ್ರಕೃತಿ ದತ್ತವಾದ ಪ್ರಣಯದ ಸ್ವಭಾವವು ಮಹಿಳೆಯರಿಗೆ ಬಹುಬೇಗ ಇಷ್ಟವಾಗುವುದು.

ಮಿಥುನ
ಈ ರಾಶಿಯ ಪುರುಷರು ಮಹಿಳೆಯರೊಂದಿಗೆ ಅಥವಾ ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಭಾವನಾತ್ಮಕವಾದ ಇವರ ಸ್ವಭಾವವು ಮಹಿಳೆಯರಿಗೆ ಇಷ್ಟವಾಗುವುದು. ಇವರಲ್ಲಿ ಸ್ತ್ರೀಯರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಹಾಗಾಗಿಯೇ ಈ ರಾಶಿಚಕ್ರದವರು ಹುಡುಗಿಯರ ಹೃದಯವನ್ನು ಬಹುಬೇಗ ಗೆಲ್ಲುತ್ತಾರೆ.

ಸಿಂಹ
ಈ ರಾಶಿಯವರು ಸಂಬಂಧಗಳಲ್ಲಿ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರು ಸ್ವಭಾವತಹ ಅತ್ಯಂತ ಪ್ರಣಯ ಪೂರಕ ಪ್ರವೃತ್ತಿಯವರಾಗಿರುತ್ತಾರೆ. ಇವರು ಸ್ತ್ರೀಯರೊಂದಿಗೆ ಬಹುಬೇಗ ಸ್ನೇಹಿತರಾಗಲು ಹಾಗೂ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಯಾವುದೇ ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಈ ರಾಶಿಯವರು ಬಹಳ ಪ್ರಭಾವಶಾಲಿಗಳಾಗಿರುತ್ತಾರೆ.

ಸಿಂಹ
ಇವರು ಸ್ನೇಹಿತರಾಗಿ ವರ್ತಿಸುವಂತಹ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರ ಈ ಗುಣವನ್ನು ಸ್ತ್ರೀಯರು ಪ್ರಶಂಸಿಸುತ್ತಾರೆ. ಈ ರಾಶಿಯವರು ತಮ್ಮ ನೋಟದಿಂದಲೇ ಸ್ತ್ರೀಯರನ್ನು ಆಕರ್ಷಿಸುತ್ತಾರೆ. ಇವರಲ್ಲಿ ಉದಾರವಾದ ಭಾವನೆ ಹಾಗೂ ಮನಸ್ಸು ಸ್ತ್ರೀಯರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ತುಲಾ
ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಆಶ್ಚರ್ಯಕರ ವ್ಯಕ್ತಿತ್ವದವರು ಎನ್ನಲಾಗುತ್ತದೆ. ಸುಂದರವಾದ ಮಹಿಳೆಯರನ್ನು ಬಹಳ ಬೇಗ ಆಕರ್ಷಿಸುತ್ತಾರೆ. ಇವರ ಕೆಲವು ವರ್ತನೆ ಹಾಗೂ ಹವ್ಯಾಸದ ಶೈಲಿಯು ಬಹುಬೇಗ ಇತರರಿಗೆ ಆಕರ್ಷಕವಾಗುತ್ತದೆ. ಇವರು ಪ್ರೀತಿಗೆ ಬಹಳ ಆಳವಾದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

ತುಲಾ
ಇವರು ಪ್ರೀತಿ ಮತ್ತು ಕರ್ತವ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಬಹಳ ಚಿಂತನೆ ನಡೆಸುತ್ತಾರೆ. ಇವರಲ್ಲಿ ಸ್ವಲ್ಪ ನಾಚಿಕೆ ಸ್ವಭಾವ ಇದೆ. ಆದರೆ ಕೆಲವು ಸೂಕ್ತ ಸಮಯದಲ್ಲಿ ಹುಡುಗಿಯರೊಂದಿಗೆ ಬೆರೆಯಲು ಅಥವಾ ಅವರಿಗಾಗಿ ಸಮಯ ನೀಡುತ್ತಾರೆ. ಜೊತೆಗೆ ತಮ್ಮ ಗೆಳತಿಯಾಗಿ ಬಂದವರಿಗೆ ಉತ್ತಮ ರಕ್ಷಣೆ ನೀಡುತ್ತಾರೆ.

ಮಕರ
ಇವರು ಅತ್ಯುತ್ತಮ ಆಕರ್ಷಕ ನೋಟವನ್ನು ಹೊಂದಿರುತ್ತಾರೆ. ಇವರ ನೋಟದಿಂದಲೇ ಸ್ತ್ರೀಯರನ್ನು ಬಹುಬೇಗ ಆಕರ್ಷಿಸುತ್ತಾರೆ. ಈ ರಾಶಿಯವರು ಆಕರ್ಷಕ ವ್ಯಕ್ತಿತ್ವ ಹೊಂದಿರುವ ಸುಂದರ ವ್ಯಕ್ತಿಗಳಾಗಿರುತ್ತಾರೆ. ಇವರು ಬೇರೆಯವರನ್ನು ಆಕರ್ಷಿಸಲು ಯಾವುದೇ ಕೃತಕ ವರ್ತನೆಯನ್ನು ತೋರುವುದಿಲ್ಲ. ಇವರು ಸ್ತ್ರೀಯರಿಗೆ ತೋರುವ ಒಲವು ಹಾಗೂ ಮಾತುಗಳು ಇತರರಿಗಿಂತ ಭಿನ್ನವಾಗಿರುತ್ತದೆ.

ಮಕರ
ಈ ರಾಶಿಯವರು ಅತ್ಯುತ್ತಮ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ತಮ್ಮ ಕೆಲಸದಲ್ಲಿ ಅತ್ಯುತ್ತಮ ಸಕ್ರಿಯತೆ ಹಾಗೂ ಕ್ರಿಯಾಶೀಲತೆಯನ್ನು ತೋರುತ್ತಾರೆ. ಇವರ ಈ ಸ್ವಭಾವವು ಹುಡುಗಿಯರನ್ನು ಆಕರ್ಷಿಸುತ್ತದೆ. ಜೊತೆಗೆ ಇವರನ್ನು ನೋಡಿದಾಗ ಆಶ್ಚರ್ಯಕರವಾದಂತಹ ಮೆಚ್ಚುಗೆಯು ವ್ಯಕ್ತವಾಗುತ್ತದೆ.



Click it and Unblock the Notifications











