Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಾವುಗಳೇ ಈಕೆಯ ಸ್ನೇಹಿತೆಯರು! ವಿಡಿಯೋ ನೋಡಿ
ಹಾವುಗಳನ್ನು ಕಂಡು ಬೆಚ್ಚಿ ಬೀಳುವವರೇ ಹೆಚ್ಚು. ಯಾಕೆಂದರೆ ಅವುಗಳಲ್ಲಿ ಇರುವಂತಹ ವಿಷವು ಪ್ರಾಣಕ್ಕೆ ಕುತ್ತು ತರಬಹುದು ಎನ್ನುವ ಭೀತಿ. ಆದರೆ ಕೆಲವರು ಹಾವುಗಳನ್ನು ಕೂಡ ಪ್ರೀತಿಸುವರು. ಲಂಡನ್ ನಲ್ಲಿ ಹುಡುಗಿಯೊಬ್ಬಳು ತನ್ನ ಮನೆಯಲ್ಲಿ ಹಾವುಗಳ ದೊಡ್ಡ ಸಂಗ್ರಹವನ್ನೇ ಮಾಡಿದ್ದಾಳೆ. ಇದರಲ್ಲಿ ಆಕೆ ಹಲವಾರು ರೀತಿಯ ಹಾವುಗಳನ್ನು ಸಾಕಿದ್ದಾರೆ. ಬರ್ಮಾದ ಸುಮಾರು 16 ಅಡಿ ಉದ್ದದ ಹೆಬ್ಬಾವು ಕೂಡ ಈಕೆಯ ಸಂಗ್ರಹದಲ್ಲಿದೆ. ಈ ಪ್ರಾಣಿ ಪ್ರಿಯೆಗೆ ಕೇವಲ 21ರ ಹರೆಯ. ಪಶುವೈದ್ಯ ನರ್ಸ್ ಆಗಿರುವ ಝೀ ಎಂಬಾಕೆ ತನ್ನ ಆರನೇ ವಯಸ್ಸಿನಲ್ಲಿ ಹಾವುಗಳ ಕಡೆ ಆಕರ್ಷಣೆಗೆ ಒಳಗಾಗಿದ್ದಾಳೆ.
14ನೇ ವಯಸ್ಸಿನಲ್ಲಿ ಈಕೆ ತನ್ನ ಸೋದರನ ಜತೆಗೆ ಒಂದು ಹಾವನ್ನು ಹಿಡಿದುಕೊಂಡು ಮನೆಗೆ ಬಂದು, ತನ್ನ ಹಾವುಗಳ ಕೊಠಡಿಯಲ್ಲಿಟ್ಟು ಸಾಕಲು ಆರಂಭಿಸಿದಳು. ಈಗ ಝೀ ಬಳಿಯಲ್ಲಿ ಸುಮಾರು 16 ಹಾವುಗಳು ಇವೆ. ಇದರಲ್ಲಿ 16 ಅಡಿ ಉದ್ದದ ಬರ್ಮಾದ ಹೆಬ್ಬಾವು ಕೂಡ ಸೇರಿದೆ. ಇದು ಅಲ್ಲೇ ಲಾಬಿಯಲ್ಲಿ ಸುತ್ತಲು ಓಡಾಡುತ್ತಾ ಇರುತ್ತದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಆಕೆ, ನಾನು ಲೆಕ್ಕಹಾಕಲಾಗದ ಸಂದರ್ಭಗಳಲ್ಲಿ ಕಡಿತಕ್ಕೆ ಒಳಗಾಗಿದ್ದೇನೆ. ಕೆಲವೊಂದು ಸಲ ಲಘು, ಇನ್ನು ಕೆಲವು ಅದರ ಗಂಭೀರತೆಯನ್ನು ಅವಲಂಬಿಸಿದೆ.
ಹಾವು ಕಚ್ಚಿದರೆ ಆಗ ನೀವು ಅದರಿಂದ ಬಿಡಿಸಿಕೊಳ್ಳಬೇಕಾದರೆ ನೀವು ಮದ್ಯದಲ್ಲಿ ಹಾವಿನ ತಲೆಯನ್ನು ಮುಳಗಿಸುವುದು ಸೂಕ್ತ. ಹಾವುಗಳು ನಿಮ್ಮ ಪ್ರಾಣಕ್ಕೆ ಹಾನಿಯುಂಟು ಮಾಡಲು ಬಯಸುವುದಿಲ್ಲ. ಅವುಗಳು ತುಂಬಾ ಆತಂಕದ ಜೀವಿಗಳಾಗಿರುವ ಕಾರಣ ಕಚ್ಚುತ್ತವೆ' ಎಂದು ಹೇಳಿದ್ದಾರೆ.
ಆಕೆಯ ಸಂಗ್ರಹದಲ್ಲಿರುವ ಬರ್ಮಾದ ದೊಡ್ಡ ಹೆಬ್ಬಾವು ಸುಮಾರು 28 ಕೆಜಿ ಭಾರವಿದೆ. ಇದನ್ನು ಎತ್ತಲು ಇಬ್ಬರು ಬೇಕಂತೆ!
ಹಾವುಗಳ ಆಹಾರದ ಬಗ್ಗೆ ಮಾತನಾಡಿರುವ ಆಕೆ, ಹೆಬ್ಬಾವಿಗೆ ತಿಂಗಳಲ್ಲಿ ಒಂದು ಸಲ ದೊಡ್ಡ ಗಾತ್ರದ ಮೊಲ ನೀಡುತ್ತದೆ. ಇದು ಮೂರರಿಂದ ಆರು ಕಿ.ಲೋ. ಇರುತ್ತದೆ. ಸಣ್ಣ ಹಾವುಗಳಿಗೆ ಇಲಿಗಳು ಮತ್ತು ಅದರ ಮರಿಗಳನ್ನು ನೀಡಲಾಗುತ್ತದೆ. 16 ಅಡಿ ಉದ್ದದ ಹೆಬ್ಬಾವಿನ ಜತೆಗೆ ಮಲಗುವುದು ತನಗೆ ತುಂಬಾ ಆರಾಮ ನೀಡುತ್ತದೆ ಎಂದು ಆಕೆ ತಿಳಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯದಿರಿ.



Click it and Unblock the Notifications
