For Quick Alerts
ALLOW NOTIFICATIONS  
For Daily Alerts

ಆಘಾತಕಾರಿ! ಹೇರ್ ಡೈ ಬಳಸಿ ತಲೆ ಊದಿಸಿಕೊಂಡ ಮಹಿಳೆ

|

ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಹೆಚ್ಚಾಗಿ ಹಾನಿಕಾರಕವಾಗಿರುವಂತಹ ರಾಸಾಯನಿಕಗಳನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ದೀರ್ಘಕಾಲಕ್ಕೆ ಇದನ್ನು ಬಳಸಿಕೊಂಡರೆ ಅದರಿಂದ ಅಡ್ಡಪರಿಣಾಮವು ಕಟ್ಟಿಟ್ಟ ಬುತ್ತಿ. ಹೀಗಾಗಿ ಯಾವುದೇ ಉತ್ಪನ್ನಗಳನ್ನು ಖರೀದಿಸಿ ಅದನ್ನು ಬಳಸುವ ಮೊದಲು ಅದಕ್ಕೆ ಯಾವ ವಿಧದ ರಾಸಾಯನಿಕಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಯುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ಇಂತಹ ರಾಸಾಯನಿಕಗಳಿಂದ ದೇಹದ ಮೇಲೆ ಅಡ್ಡಪರಿಣಾಮಗಳು ಆಗುವುದು. ಇನ್ನು ಕೆಲವರಿಗೆ ಅಲರ್ಜಿ ಉಂಟಾಗಬಹುದು. ಅಲರ್ಜಿಯಿಂದಾಗಿ ಪ್ರಾಣಹಾನಿಯು ಸಂಭವಿಸಬಹುದು. ಈ ಎಲ್ಲಾ ಕಾರಣಗಳಿಂದಾಗಿ ಯಾವುದೇ ಉತ್ಪನ್ನಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿರುವುದು. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಹೇರ್ ಡೈ ಬಳಸಿಕೊಂಡು ತಲೆಯನ್ನು ಊದಿಸಿಕೊಂಡಿರುವಂತಹ ಮಹಿಳೆಯ ಬಗ್ಗೆ ನೈಜ ಸಂಗತಿ. ಈ ಮಹಿಳೆಯ ಚಿತ್ರಗಳನ್ನು ನೋಡಿದ ಬಳಿಕ ನೀವು ಹೇರ್ ಡೈ ಬಳಸುವುದನ್ನೇ ನಿಲ್ಲಿಸಬಹುದು. ಇಲ್ಲವಾದಲ್ಲಿ ಹೇರ್ ಡೈಯ ಪಾಕೆಟ್ ನಲ್ಲಿ ಇರುವಂತಹ ಕೆಲವೊಂದು ಸೂಚನೆಗಳನ್ನು ನೀವು ಪಾಲಿಸಿಕೊಂಡು ಹೋಗಬಹುದು.

Woman’s Head Expanded After She Used Hair Dye

ಹೇರ್ ಡೈಯಿಂದ ಅಲರ್ಜಿಗೆ ಒಳಗಾಗಿರುವ ಮಹಿಳೆಯ ಬಗ್ಗೆ ನೀವು ಓದುತ್ತಾ ಸಾಗಿ....

ಎಸ್ಟೆಲ್ಲಾ ಎನ್ನುವ ಮಹಿಳೆಯು ಇದಕ್ಕೆ ಮೊದಲು ತನ್ನ ಕೂದಲಿಗೆ ಬಣ್ಣ ಹಾಕಿಸಿಕೊಂಡಿದ್ದ ವೇಳೆ ಆಕೆಗೆ ಅಲರ್ಜಿಯಾಗಿತ್ತು. ಇದರಿಂದ ಆಕೆ ಇನ್ನು ಮತ್ತೆ ಬಳಸುವ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿಕೊಂಡು ಪರೀಕ್ಷೆ ಮಾಡಿಕೊಳ್ಳಲು ನಿರ್ಧರಿಸಿದರು.

ಆಕೆ ತಪ್ಪು ಮಾಡಿದಳು

ಆಕೆ ಇಲ್ಲಿ ಪರೀಕ್ಷೆ ಮಾಡುವ ವೇಳೆ ದೊಡ್ಡ ಮಟ್ಟದ ತಪ್ಪು ಮಾಡಿದರು. ಯಾಕೆಂದರೆ ಪ್ಯಾಕೆಟ್ ನಲ್ಲಿ ಇರುವಂತೆ ದೇಹದ ಯಾವುದಾದರೂ ಭಾಗಕ್ಕೆ ಹಚ್ಚಿಕೊಂಡು ಅದು ಅಲರ್ಜಿ ಉಂಟು ಮಾಡುತ್ತದೆಯಾ ಎಂದು ತಿಳಿಯಲು ಸುಮಾರು 48 ಗಂಟೆಗಳ ಕಾಲ ಕಾಯಬೇಕು. ಆದರೆ ಈ ಮಹಿಳೆ ಕೇವಲ 30 ನಿಮಿಷ ಮಾತ್ರ ಕಾದು ಬಳಿಕ ಹೇರ್ ಡೈ ಹಚ್ಚಿಕೊಂಡರು.

Woman’s Head Expanded After She Used Hair Dye

ತಕ್ಷಣ ಪ್ರತಿಕ್ರಿಯೆ

ಹೇರ್ ಡೈ ಹಚ್ಚಿಕೊಂಡ ಕೆಲವೇ ನಿಮಿಷಗಳಲ್ಲಿ ಆಕೆಗೆ ತಲೆಬುರುಡೆಯಲ್ಲಿ ತುಂಬಾ ಕಿರಿಕಿರಿ ಕಾಣಿಸಿಕೊಂಡಿತು ಮತ್ತು ಸ್ವಲ್ಪ ಹೊತ್ತಿನಲ್ಲೇ ಆಕೆಯ ತಲೆಯು ಊದಿಕೊಳ್ಳಲು ಆರಂಭವಾಯಿತು. ಆಕೆಯ ದೇಹವು ಪಿಪಿಡಿ(ಪ್ಯಾರಾಫೆನಿಲೆನೆಡಮೈನ್) ಎನ್ನುವ ರಾಸಾಯನಿಕಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿತು. ಈ ರಾಸಾಯನಿಕವನ್ನು ಹೆಚ್ಚಾಗಿ ಎಲ್ಲಾ ಸೌಂದರ್ಯವರ್ಧಕದಲ್ಲೂ ಬಳಸಿಕೊಳ್ಳಲಾಗುತ್ತದೆ. ವೈದ್ಯರ ಸಲಹೆ ಮೇರೆಗೆ ಆಕೆ ಆಂಟಿಹಿಸ್ಟಮೈನ್ ಗಳನ್ನು ತೆಗೆದುಕೊಂಡರು. ಆದರೆ ಆಕೆಯ ಈ ಘೋರ ಅನುಭವ ಮಾತ್ರ ಮರೆಯಾಗಲೇ ಇಲ್ಲ. ಊದಿಕೊಂಡಿದ್ದ ತಲೆಯು ಮರುದಿನ ಮತ್ತಷ್ಟು ಊದಿಕೊಂಡಿತು.

Woman’s Head Expanded After She Used Hair Dye

ಆಕೆಯ ತಲೆಯು ಊದಿಕೊಂಡಿತು

ಹೇರ್ ಡೈ ಬಳಸಿಕೊಂಡ ಮರುದಿನ ಕೂಡ ಎಸ್ಟೆಲ್ಲಾ ತಲೆಯು ಊದಿಕೊಳ್ಳುತ್ತಾ ಹೋಯಿತು. ಸುಮಾರು 63 ಸೆ.ಮೀ.ನಷ್ಟು ತಲೆಯು ಊದಿಕೊಂಡಿತು. ಇದು ಸಾಮಾನ್ಯ ತಲೆಯು ಇರುವ 56 ಸೆ.ಮೀ.ಗಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಆಕೆಯು ತಕ್ಷಣ ಆಸ್ಪತ್ರೆಗೆ ದಾಖಲಾದಳು ಮತ್ತು ಅಲ್ಲಿ ಆಕೆಗೆ ಅಂಡ್ರಿನಾಲಿನ್ ಇಂಜೆಕ್ಷನ್ ಕೊಡಲಾಯಿತು ಮತ್ತು ರಾತ್ರಿಯಿಡಿ ವೈದ್ಯರು ಆಕೆಯ ನಿಗಾ ವಹಿಸಿದರು. ಆಕೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ. ಆದರೆ ತನಗೆ ಆಗಿರುವಂತಹ ಅನುಭವದ ಬಗ್ಗೆ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾಳೆ. ಇದರಿಂದ ಇನ್ನು ಮುಂದೆ ಸೌಂದರ್ಯವರ್ಧಕ ಬಳಸುವ ಮೊದಲು ಎಚ್ಚರಿಕೆ ವಹಿಸುವುದು ಅತೀ ಅಗತ್ಯ.

ನಿಮಗೆ ಈ ಲೇಖನ ಹೇಗನಿಸಿದೆ ಎಂದು ನಮಗೆ ತಿಳಿಸಲು ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಯನ್ನು ಬರೆಯಲು ಮರೆಯಬೇಡಿ.

Read more about: life
English summary

Woman’s Head Expanded After She Used Hair Dye

A Parisian student named Estelle purchased an at-home hair dye from a supermarket. She applied the dye, and she instantly suffered from a reaction from the chemical PPD found in most hair dyes. In no time her head became swollen from 56 cm to 63 cm and she had a tough time when she was struggling to breathe. After getting medicated, she is fine now.
Story first published: Thursday, December 6, 2018, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more