Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರನ್ನು ಕಾಡುವ 'ಚಳಿಗಾಲದ ಶಿಶ್ನ'ದ ಸಮಸ್ಯೆ!
ನಮ್ಮ ದೇಹವು ವಿವಿಧ ರೀತಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ ಹೊಂದಿದೆ. ಕೆಲವೊಂದು ಕಡೆ ತುಂಬಾ ಶೀತಲ ವಾತಾವರಣವಿದ್ದರೂ ದೇಹವು ಇದಕ್ಕೆ ಕ್ರಮವೇ ಒಗ್ಗಿಕೊಳ್ಳುತ್ತದೆ. ಅದೇ ರೀತಿ ಹೆಚ್ಚು ಉಷ್ಣತೆ ಇರುವಂತಹ ಜಾಗದಲ್ಲೂ ಹೀಗೆ. ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಹೆಚ್ಚು ಚಳಿಯಾದರೆ, ಬೇಸಿಗೆಯಲ್ಲಿ ಅಧಿಕ ಉಷ್ಣತೆಯಿಂದಾಗಿ ಮೈಯೆಲ್ಲಾ ಬೆವರುವುದು.
ಈ ಲೇಖನದಲ್ಲಿ ಚಳಿಗಾಲದ ಶಿಶ್ನದ ಬಗ್ಗೆ ತಿಳಿಸಲಿದ್ದೇವೆ. ಇದು ಪುರುಷರಿಗೆ ಹೇಗೆ ಪರಿಣಾಮ ಬೀರಲಿದೆ ಎಂದು ತಿಳಿಸಲಿದ್ದೇವೆ. ಚಳಿಗಾಲದ ಶಿಶ್ನದಿಂದಾಗಿ ಪುರುಷರಿಗೆ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಇದು ಪರಿಣಾಮ ಬೀರುವುದು. ಈ ಪರಿಸ್ಥಿತಿ ಬಗ್ಗೆ ನೀವು ತಿಳಿಯಿರಿ.

ಶಿಶ್ನಗಳು ಕುಗ್ಗುವುದು ಮಾತ್ರವಲ್ಲ
ಚಳಿಗಾಲದಲ್ಲಿ ಚಳಿಯು ಹೆಚ್ಚಾದಂತೆ ಪುರುಷರಲ್ಲಿ ಕೆಲವೊಂದು ಪ್ರಮುಖ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ `ಚಳಿಗಾಲದ ಶಿಶ್ನದ ಪರಿಸ್ಥಿತಿ'ಯಲ್ಲಿ ಪುರುಷರ ಶಿಶ್ನವು ಕುಗ್ಗುವುದು. ನಿಮಿರುವಿಕೆ ಕೂಡ ಕಡಿಮೆಯಾಗುವುದು. ಪರಾಕಾಷ್ಠೆ ತಲುಪಲು ಅವರಿಗೆ ಕಷ್ಟವಾಗುವುದು.

ತಜ್ಞರ ಪ್ರಕಾರ...
ತಜ್ಞರ ಪ್ರಕಾರ ಪುರುಷರ ಶಿಶ್ನವು ಚಳಿಯು ಹೆಚ್ಚಾದಂತೆ ಶೇ.50ರಷ್ಟು ಉದ್ದ ಮತ್ತು ಶೇ. 20-30ರಷ್ಟು ಅಗಲದಲ್ಲಿ ಕುಗ್ಗಬಹುದು. ಈ ಸಮಯದಲ್ಲಿ ವೃಷಣವು ಕುಗ್ಗಿ, ದೇಹಕ್ಕೆ ತುಂಬಾ ಹತ್ತಿರವಾಗಿ ಬಿಸಿಯಾಗಿರಲು ಪ್ರಯತ್ನಿಸುವುದು.

ಚಳಿ ಮತ್ತು ದೇಹದ ಉದ್ವಿಗ್ನತೆ
ತೀವ್ರ ಚಳಿಯಾದಾಗ ದೇಹವು ಮೊಟಕುಗೊಳ್ಳುವುದು. ಈ ಸಮಯದಲ್ಲಿ ಕಾಮೋದ್ರೇಕಗೊಳ್ಳುವುದು ಮತ್ತು ಪರಾಕಾಷ್ಠೆ ತಲುಪುವುದು ತುಂಬಾ ಸವಾಲಿನ ಕೆಲಸ. ಇದರ ಹೊರತಾಗಿ ಚಳಿಗಾಲದ ಸಂದರ್ಭದಲ್ಲಿ ಶಿಶ್ನವು ಹೆಚ್ಚು ಸ್ಪರ್ಶಜ್ಞಾನ ಹೊಂದಿರಲ್ಲ ಮತ್ತು ಯಾವುದೇ ಸ್ಪರ್ಶಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ.

ನಿಮಗೂ ಈ ಕಾಯಿಲೆ ಕಾಡಬಹುದು
ಸೀಸನಲ್ ಎಫೆಕ್ಟಿವ್ ಡಿಸಾರ್ಡರ್(ಎಸ್ ಎಡಿ)ಯು ಚಳಿಗಾಲದಲ್ಲಿ ನಿಮಗೂ ಕಾಡಬಹುದು ಎಂದು ತಜ್ಞರು ಹೇಳುತ್ತಾರೆ. ಈ ಕಾಯಿಲೆ ಕಾಡುವ ವ್ಯಕ್ತಿಗಳು ವರ್ಷದ ಬೇರೆ ಸಮಯದಲ್ಲಿ ಸರಿಯಾದ ಮಾನಸಿಕ ಆರೋಗ್ಯವಿರುವುದು. ಆದರೆ ಚಳಿಗಾಲದಲ್ಲಿ ಇವರಿಗೆ ಖಿನ್ನತೆಯು ಆವರಿಸುವುದು.



Click it and Unblock the Notifications
