Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಭವಿಷ್ಯದಲ್ಲಿ ನಿಮ್ಮದು ಪ್ರೇಮ-ವಿವಾಹವಾಗಲಿದೆಯೇ? ಹಸ್ತರೇಖೆಗಳು ಈ ಸತ್ಯವನ್ನು ಬಿಚ್ಚಿ ಡಬಲ್ಲವು!
ಪ್ರತಿ ವ್ಯಕ್ತಿಯ ಬದುಕಿನಲ್ಲಿಯೂ ಪ್ರೇಮ ಮತ್ತು ವಿವಾಹ ಇವೆರಡೂ ಅತಿ ಮಹತ್ವವಾದ ಘಟ್ಟಗಳಾಗಿವೆ. ಪ್ರೀತಿಸಿದ ವ್ಯಕ್ತಿಯೊಂದಿಗೇ ವಿವಾಹವಾಗುವುದಾದರೆ ಇದು ಪ್ರೀತಿಗೂ ವಿವಾಹಕ್ಕೂ ಹೆಚ್ಚಿನ ಮೆರುಗು ನೀಡುತ್ತದೆ. ಒಂದು ವೇಳೆ ನೀವಿನ್ನೂ ಅವಿವಾಹಿತರಾಗಿದ್ದರೆ, ನಿಮ್ಮ ವಿವಾಹ ಪ್ರೇಮವಿವಾಹವಾಗುವುದೇ ಎಂಬುದನ್ನು ನಿಮ್ಮ ಹಸ್ತದ ರೇಖೆಗಳು ಪ್ರಚುರಗೊಳಿಸಬಲ್ಲವು. ಹಸ್ತದಲ್ಲಿರುವ ಉದ್ಯೋಗ, ನಡವಳಿಕೆ ಮೊದಲಾದವುಗಳನ್ನು ವ್ಯಕ್ತಗೊಳಿಸುವ ರೇಖೆಗಳಂತೆಯೇ ಕೆಲವು ರೇಖೆಗಳು ಭವಿಷ್ಯದಲ್ಲಿ ನಿಮ್ಮ ವಿವಾಹ ಪ್ರೇಮವಿವಾಹವೇ ಎಂಬುದನ್ನು ಸ್ಪಷ್ಟಗೊಳಿಸಲಿವೆ.
ವಿವಾಹ ರೇಖೆ:
ಮೊದಲಿಗೆ ವಿವಾಹ ರೇಖೆ ಎಂದರೇನು ಎಂಬುದನ್ನು ನೋಡೋಣ. ಹಸ್ತದ ಕಿರುಬೆರಳಿನ ಕೆಳಗೆ, ಹಸ್ತದ ಹಿಂಭಾಗದಿಂದ ಪ್ರಾರಂಭವಾಗುವಂತೆ ತೋರುವ ಸ್ಪಷ್ಟವಾದ, ಆದರೆ ಕಿರಿದಾಗಿದ್ದು ಆಳವಾಗಿಯೂ ಇರುತ್ತದೆ. ಆದರೆ ಪ್ರತಿ ವ್ಯಕ್ತಿಯಲ್ಲಿಯೂ ಈ ರೇಖೆ ಚಿಕ್ಕ ಪುಟ್ಟ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಈ ಚಿಕ್ಕ ವ್ಯತ್ಯಾಸಗಳೇ ಭಿನ್ನವಾದ ಸೂಚನೆಗಳನ್ನು ನೀಡುತ್ತವೆ.

ಹೃದಯ ರೇಖೆ:
ವಿವಾಹ ರೇಖೆಯನ್ನು ಅರಿಯುವ ಮುನ್ನ ಇನ್ನೊಂದು ರೇಖೆಯನ್ನು ಅರಿಯುವುದು ಅಗತ್ಯವಾಗಿದೆ, ಇದೇ ಹೃದಯ ರೇಖೆ. ಹಸ್ತದಲ್ಲಿ ಆಳವಾಗಿ, ಸ್ಪಷ್ಟವಾಗಿ ಕಾಣುವ ರೇಖೆಗಳಲ್ಲಿ ಈ ರೇಖೆಯೂ ಒಂದಾಗಿದೆ.
ಈ ರೇಖೆ ವ್ಯಕ್ತಿಯ ನಡವಳಿಕೆಯನ್ನು ತಿಳಿಸುವ ಜೊತೆಗೇ ಆ ವ್ಯಕ್ತಿಯ ಪ್ರೇಮಜೀವನದ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಅಷ್ಟಕ್ಕೂ, ಪ್ರೀತಿಗೂ ಹೃದಯಕ್ಕೂ ಆಳವಾದ ಮತ್ತು ನಿಕಟವಾದ ಸಂಬಂಧವಿರುವುದು ನಮಗೆಲ್ಲಾ ತಿಳಿದಿದೆ. ಭವಿಷ್ಯದಲ್ಲಿ ನೀವು ಪ್ರೀತಿಸಿದ ವ್ಯಕ್ತಿಯನ್ನು ವರಿಸಲು ಸಾಧ್ಯವೇ? ಈ ವ್ಯಕ್ತಿಯೊಂದಿಗೆ ಜಗತ್ತನ್ನು ಜೊತೆಯಾಗಿ ವಿಹರಿಸಲು ಸಾಧ್ಯವೇ? ಪರಸ್ಪರರ ಸಾಂಗತ್ಯದಲ್ಲಿ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ, ಮೊದಲಾದವು ನಿಮ್ಮ ಮನದಲ್ಲಿ ಈಗಾಗಲೇ ಮೂಡಿರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಹಸ್ತದ ಹೃದಯ ಹಾಗೂ ಜೀವನ ರೇಖೆಗಳೇ ಉತ್ತರ ನೀಡಲಿವೆ.
ನಿಮ್ಮ ಜೀವನದ ಯಶಸ್ಸು ಹಾಗೂ ಪ್ರೀತಿಯ ಸಾಫಲ್ಯವನ್ನು ಈ ರೇಖೆಗಳು ವಿವರಿಸುತ್ತವೆ. ಬನ್ನಿ, ನಿಮ್ಮ ಪ್ರೀತಿಯ ಜೀವನ ಹೇಗೆ ಮುಂದುವರೆಯಲಿದೆ ಹಾಗೂ ಯಾವ ಗುರಿಯನ್ನು ತಲುಪಲಿದೆ ಎಂಬುದನ್ನು ಅರಿಯೋಣ. ಹಸ್ತಸಾಮುದ್ರಿಕಾಶಾಸ್ತ್ರದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿದ್ದು ಇವುಗಳಲ್ಲಿ ಪ್ರಮುಖವಾದುದನ್ನು ಅರಿಯೋಣ:

1
ಒಂದು ವೇಳೆ ಹೃದಯ ಮತ್ತು ವಿವಾಹ ರೇಖೆಗಳೆರಡೂ ಪರಸ್ಪರ ತೀರಾ ದೂರವಿದ್ದರೆ, ಈ ವ್ಯಕ್ತಿ ಶೀಘ್ರವೇ ಅಂದರೆ ಇಪ್ಪತ್ತು ತುಂಬುವ ಮುನ್ನವೇ ವಿವಾಹವಾಗುವ ಯೋಗ ಹೊಂದಿರುತ್ತಾರೆ. ಅಲ್ಲದೇ ಈ ವ್ಯಕ್ತಿಗಳು ತಮ್ಮ ಜೀವನಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ ಹಾಗೂ ಬಹುತೇಕ ಈ ವಿವಾಹ ಪ್ರೇಮವಿವಾಹವೇ ಆಗಿರುತ್ತದೆ.

2
ಒಂದು ವೇಳೆ ವಿವಾಹರೇಖೆ ಪ್ರಾರಂಭವಾಗುವಲ್ಲಿ ಚಿಕ್ಕ ದಿಬ್ಬದಂತೆ ರೇಖೆ ವಕ್ರವಾಗಿದ್ದರೆ ವಿವಾಹವಾಗುತ್ತಿರುವ ಯುವತಿ ಯಾವುದೋ ತಪ್ಪು ತಿಳಿವಳಿಕೆಗೆ ಗುರಿಯಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

3
ಇದೇ ಪ್ರಕಾರ, ಒಂದು ವೇಳೆ ಹೃದಯ ರೇಖೆ ಮುಂದುವರೆಯುತ್ತಾ ಕೆಳಕ್ಕಿಳಿಯುತ್ತಾ ವಿವಾಹರೇಖೆಯನ್ನು ಹಾದು ಹೋಗುತ್ತಿದ್ದರೆ ಇದು ದುರಾದೃಷ್ಟಕರ ಎಂದು ಪರಿಗಣಿಸಲಾಗುತ್ತದೆ. ಈ ವ್ಯಕ್ತಿಗಳು ಪ್ರೇಮವಿವಾಹವಾಗಿದ್ದರೂ ಈ ಮದುವೆಯ ಬಳಿಕ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

4
ಒಂದು ವೇಳೆ ವಿವಾಹರೇಖೆಯ ಬಳಿ ತ್ರಿಶೂಲದಂತಹ ಚಿಹ್ನೆ ಕಂಡುಬಂದರೆ ಇದು ತುಂಬಾ ಅದೃಷ್ಟಕರ ಎಂದು ಪರಿಗಣಿಸಲ್ಪಡುತ್ತದೆ. ಈ ವ್ಯಕ್ತಿಗಳು ತಾವು ಪ್ರೀತಿಸಿದ ವ್ಯಕ್ತಿಯನ್ನೇ ಜೀವನಸಂಗಾತಿಯನ್ನಾಗಿ ಪಡೆಯಲಿದ್ದಾರೆ ಹಾಗೂ ಜೀವನವಿಡೀ ಇವರು ಸಂತಸದಿಂದ ಜೀವನ ಕಳೆಯಲಿದ್ದಾರೆ.

5
ಒಂದು ವೇಳೆ ವಿವಾಹರೇಖೆಯ ಬಳಿ ಚಿಕ್ಕ ಚೌಕಾಕಾರದ ಗುರುತೇನಾದರೂ ಕಂಡು ಬಂದರೆ ಈ ವ್ಯಕ್ತಿಗಳು ಜೀವನದ ಮುಂದಿನ ವರ್ಷಗಳಲ್ಲಿ ಆರೋಗ್ಯ ಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಸ್ತಸಾಮುದ್ರಿಕೆಯ ಪ್ರಕಾರ ನಿಮಗೆ ಇಷ್ಟವಾಗದಿದ್ದರೂ ಸರಿ ಈ ಮಾಹಿತಿಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.



Click it and Unblock the Notifications
