Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಯಾದ ವಿಷಯವನ್ನು ವಿಸ್ಮಯ ರೀತಿಯಲ್ಲಿ ಗಂಡನಿಗೆ ಹೇಳಿರುವುದು ನೋಡಿ...
ಜೀವನದಲ್ಲಿ ಸಂತೋಷ ಪಡಲು ಸಾಕಷ್ಟು ವಿಚಾರಗಳಿರುತ್ತವೆ. ಅವುಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ? ಅದನ್ನು ಹೇಗೆ ಹಂಚಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಸಂತೋಷ ಅಡಗಿರುತ್ತವೆ. ಜೀವನದಲ್ಲಿ ಬರುವ ಸಂದರ್ಭಗಳನ್ನು ಹೇಗೆಲ್ಲಾ ವಿಸ್ಮಯ ರೀತಿಯಲ್ಲಿ ಅನುಭವಿಸಬಹುದು ಎನ್ನುವುದನ್ನು ಎಷ್ಟೋ ಬಾರಿ ಊಹಿಸಿಯೇ ಇರುವುದಿಲ್ಲ. ಅಂತಹ ಒಂದು ಸುಂದರ ಕ್ಷಣಗಳಲ್ಲಿ ತಂದೆ-ತಾಯಿಯಾಗುವ ವಿಚಾರವೂ ಒಂದು.
ಇಲ್ಲೊಂದು ಸಂಸಾರ ಒಂದು ಪುಟ್ಟ ಮಗುವಿನಿಂದ ಮನೆಯನ್ನು ತುಂಬಿಕೊಂಡು, ಸಂತೋಷವನ್ನು ಅನುಭವಿಸುತ್ತಿದೆ. ಈ ದಂಪತಿಗಳು ಪರಸ್ಪರ ಪ್ರೀತಿ-ವಿಶ್ವಾಸದ ಮೂಲಕ ಜೀವನವನ್ನು ಸುಂದರವಾಗಿ ಕಳೆಯುತ್ತಿದ್ದಾರೆ. ಇವರ ಜೀವನದಲ್ಲಿ ಇದೀಗ ಇನ್ನೊಂದು ಪುಟ್ಟ ಮಗು ಮನೆಗೆ ಬರಲು ಸಿದ್ಧವಾಗಿದೆ. ಈ ವಿಚಾರ ತಿಳಿದ ಹೆಂಡತಿ ತನ್ನ ಗಂಡನಿಗೆ ಅದ್ಭುತ ರೀತಿಯಲ್ಲಿ ವಿಸ್ಮಯಗೊಳಿಸಿದ್ದಾಳೆ.

ತನ್ನ ತಾಯ್ತನವನ್ನು ಗಂಡನಿಗೆ ಸುಂದರ ಭಾವನೆಗಳ ಮೂಲಕ ಹಂಚಿಕೊಂಡಿದ್ದಾಳೆ. ಅವಳ ವಿಸ್ಮಯ ರೀತಿಯ ವಿಷಯ ವಿತರಣೆಯು ಗಂಡನಿಗೆ ಅದ್ಭುತ ಎನಿಸಿದೆ. ಜೊತೆಗೆ ತನ್ನ ಪ್ರೀತಿಯನ್ನು ಕಣ್ಣೀರುಗಳ ಮೂಲಕ ವ್ಯಕ್ತ ಪಡಿಸಿದ್ದಾಳೆ. ಮನುಷ್ಯನಿಗೆ ಅತಿಯಾದ ಸಂತೋಷ ಅಥವಾ ಊಹಿಸದೆ ಇರುವಾಗ ಉಂಟಾಗುವ ಅದ್ಭುತ ಖುಷಿಯಿಂದ ಮನಸ್ಸು ಅಂಕೆಯಿಲ್ಲದಷ್ಟು ಸಂತೋಷವನ್ನು ಅನುಭವಿಸುತ್ತದೆ. ಆ ಸಂದರ್ಭದಲ್ಲಿ ಕಣ್ಣುಗಳಲ್ಲಿ ಆನಂದ ಭಾಷ್ಪ ಉಂಟಾಗುವುದು ಎನ್ನಲಾಗುತ್ತದೆ. ನಿಮಗೂ ಈ ಅದ್ಭುತವಾದ ಚಿತ್ರಣವನ್ನು ನೋಡಬೇಕು ಎಂದಿದ್ದರೆ ಇಲ್ಲಿರುವ ವಿಡಿಯೋ ಚಿತ್ರಣವನ್ನು ವೀಕ್ಷಿಸಬಹುದು.
ಮಾತಿನಲ್ಲಿ ಹೇಳಲಾಗದ ವಿಸ್ಮಯದ ಪರಿ:
ವಿಲ್ಗರ್ ಕ್ಯಾರಿಸ್ಸಾ ನುನೆಜ್ ತನ್ನ ಗಂಡನಿಗೆ ಗರ್ಭಧಾರಣೆಯ ವಿಚಾರವನ್ನು ವಿಸ್ಮಯ ರೀತಿಯಲ್ಲಿ ಹೇಳುವುದರ ಮೂಲಕ ಆಶ್ಚರ್ಯ ಪಡಿಸಿದ್ದಾಳೆ. ಕ್ಯಾರಿಸಾ ನುನೆಜ್ ಅವರ ಪತಿ ನಿಕ್ "ಮೆಕ್ಸಿಕನ್ ಆಹಾರ"ವನ್ನು ಶುಕ್ರವಾರ ರಾತ್ರಿ ಸವಿಯಲು ಇಷ್ಟಪಡುತ್ತಾರೆ. ಹಾಗಾಗಿಯೇ ಕ್ಯಾರಿಸ್ಸಾ ತನ್ನ ಗಂಡನಿಗೆ ಶುಕ್ರವಾರ ರಾತ್ರಿ ಅವನ ಇಷ್ಟದ ಊಟವನ್ನು ಟೇಬಲ್ ಮೇಲೆ ಇರಿಸಿ, ಅದರ ಮೇಲೆ "ಬುರ್ರಿಟೋ #2" ಎಂದು ಬರೆದು ಅಭಿನಂದಿಸಿದ್ದಾಳೆ.
ವಿಶೇಷವಾದ ಈ ಸಂಗತಿಯನ್ನು ವಿಸ್ಮಯ ರೀತಿಯಲ್ಲಿ ಅರಿತಿರುವ ನಿಕ್ ಸಂತೋಷದಿಂದ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾನೆ. ಜೊತೆಗೆ ತನ್ನ ಹೆಂಡತಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಅದ್ಭುತವಾದ ಭಾವನೆಯನ್ನ ಹೊಂದಿರುವ ಈ ಕ್ಷಣದ ಚಿತ್ರಣ ವೀಡಿಯೋದಲ್ಲಿ ಸುಂದರವಾಗಿ ಮೂಡಿಬಂದಿದೆ. ಇದನ್ನು ನೋಡಿದಾಗ ದಂಪತಿಗಳು ಎಷ್ಟು ಪ್ರೀತಿ-ವಿಶ್ವಾಸದಿಂದ ಇದ್ದಾರೆ ಎನ್ನುವುದು ತಿಳಿಯುತ್ತದೆ. ನಿಕ್ ತನ್ನ ಬ್ಲಾಗ್ ಅಲ್ಲಿ ಸುಮಧುರವಾದ ಈ ವೀಡಿಯೋವನ್ನು ಹಾಕುವುದರ ಮೂಲಕ ಅನೇಕರಿಗೆ ತನ್ನ ಸಂತಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.



Click it and Unblock the Notifications
