Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾರ್ವಜನಿಕ ಶೌಚಾಲಯಗಳು ಸಂಪೂರ್ಣ ಮುಚ್ಚಿರುವುದಿಲ್ಲ ಯಾಕೆ ಗೊತ್ತೇ?
ಸಾರ್ವಜನಿಕ ಶೌಚಾಲಯಗಳೆಂದರೆ ಅದರ ಕಡೆ ಹೋಗುವುದೇ ಬೇಡ ಎಂದು ಅನಿಸುವುದು. ಆದರೆ ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯವಾಗಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಅದರೊಳಗೆ ನುಗ್ಗಿರುತ್ತೇವೆ. ಆದರೆ ಅದನ್ನು ನೋಡಿದರೆ ಎಲ್ಲಿ ನೋಡಿದರೂ ಸೂರ್ಯನೇ ಅದರೊಳಗೆ ನುಸುಳಿದಂತೆ ತೆರೆದಿರುತ್ತದೆ. ಮನೆಯಲ್ಲಿನ ತುಂಬಾ ಮುಚ್ಚಿರುವಂತಹ ಶೌಚಾಲಯಗಳಲ್ಲಿ ಕುಳಿತುಕೊಂಡು ಅಭ್ಯಾಸವಿರುವವರಿಗೆ ಇದು ತುಂಬಾ ಮುಜುಗರ ಉಂಟು ಮಾಡುವುದು.
ಆದರೆ ಸಾರ್ವಜನಿಕ ಶೌಚಾಲಯಗಳು ಹೀಗೆ ಯಾಕೆ ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ಅದರ ಬಾಗಿಲುಗಳು ಸಣ್ಣದಿರುವುದು, ಮೇಲ್ಗಡೆ ಹಾಗೂ ಕೆಳಗಡೆ ತೆರೆದಿರುವುದು. ಬದಿಯಲ್ಲೂ ತೆರೆದಿರುವುದು. ಹೀಗೆ ಯಾಕೆ ಎಂದು ನೀವು ಯಾವತ್ತಾದರೂ ಅದರೊಳಗೆ ಕುಳಿತುಕೊಂಡು ಯೋಚಿಸಿದ್ದೀರಾ? ಇಲ್ಲ ತಾನೇ? ಇದಕ್ಕೂ ಕೆಲವೊಂದು ಕಾರಣಗಳಿವೆ. ಯಾಕೆಂದರೆ ಇದು ಸಾರ್ವಜನಿಕ ಶೌಚಾಲಯವಾಗಿರುವ ಹಿನ್ನೆಲೆಯಲ್ಲೆ ಅದರೊಳಗೆ ಕುಳಿತುಕೊಳ್ಳುವವರಿಗೆ ಹೆಚ್ಚು ಆರಾಮವಾಗದಿರಲಿ ಎನ್ನುವುದು. ಇದು ಸಂಪೂರ್ಣ ಮುಚ್ಚದೆ ಇರಲು ಇರುವ ಇನ್ನಷ್ಟು ಕಾರಣಗಳನ್ನು ನೀವು ತಿಳಿಯಿರಿ.

ಸ್ವಚ್ಛ ಮಾಡುವುದು ಸುಲಭ
ಶೌಚಾಲಯದ ಬಾಗಿಲುಗಳು ಸಣ್ಣದಾಗಿದ್ದರೆ ಆಗ ಸ್ವಚ್ಛಗೊಳಿಸುವುದು ತುಂಬಾ ಸುಲಭವಾಗಿರುವುದು. ನೆಲವನ್ನು ಒರೆಸುವುದು, ಪವರ್ ವಾಷಿಂಗ್ ಅಥವಾ ಕೆಳಗಡೆ ಸ್ವಚ್ಛಗೊಳಿಸುವುದು ತುಂಬಾ ಸುಲಭ. ಅದರಲ್ಲೂ ಶೌಚಾಲಯದ ಕೆಳಗಡೆ ಭಾಗವು ತೆರೆದಿರುವ ಸಂದರ್ಭದಲ್ಲಿ ಇದು ಸುಲಭ. ನೀರಿನ ಹರಿವು ಉತ್ತಮವಾಗಿರುವುದು ಮತ್ತು ಹೆಚ್ಚು ಶ್ರಮವಹಿಸದೆ ಮತ್ತು ಸಮಯವನ್ನು ಉಳಿಸಿ ಸ್ವಚ್ಛ ಮಾಡಬಹುದು.

ಯಾವುದೇ ತುರ್ತು ಸಂದರ್ಭದಲ್ಲಿ...
ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ ಬಾಗಿಲು ಸಿಲುಕಿಕೊಂಡರೆ ಆಗ ಅದರಿಂದ ಹೊರಬರಬಹುದು ಮತ್ತು ಒಳಗಡೆ ಸಿಲುಕಿದ್ದರೆ ಆಗ ಹೊರಗಿರುವಂತಹ ಜನರಿಗೆ ಬಾಗಿಲು ತೆರೆಯಲು ಸುಲಭವಾಗುವುದು.

ಲೈಂಗಿಕ ಚಟುವಟಿಕೆ ತಡೆಯಲು
ಕೆಲವು ಜೋಡಿಗಳು ಈ ಶೌಚಾಲಯವನ್ನು ತನ್ನ ಲೈಂಗಿಕ ಆಸೆ ತಣಿಸಲು ಬಳಸಿಕೊಳ್ಳಬಹುದು ಮತ್ತು ಆದರೆ ಸಣ್ಣ ಬಾಗಿಲುಗಳು ಇರುವ ಕಾರಣದಿಂದ ಹೀಗೆ ಮಾಡಿದರೆ ಅದು ಹೊರ ಪ್ರಪಂಚಕ್ಕೆ ತಿಳಿಯುವುದು. ಇದರ ಬದಲು ಒಂದು ರೂಮ್ ಮಾಡಿಕೊಳ್ಳುವುದು ಒಲಿತು.

ದುಬಾರಿಯಲ್ಲ
ಶೌಚಾಲಯಗಳಲ್ಲಿ ಸಣ್ಣ ಬಾಗಿಲು ಇರುವ ಕಾರಣದಿಂದಾಗಿ ಬಾಗಿಲಿಗೆ ಬಳಸುವಂತಹ ಮರವು ಕಡಿಮೆಯಾಗುವುದು. ಇದರ ಹೊರತಾಗಿ ಸಾರ್ವಜನಿಕ ಶೌಚಾಲಯಗಳು ತುಂಬಾ ಅಗ್ಗದ್ದಾಗಿರುವುದು. ಯಾಕೆಂದರೆ ಇದನ್ನು ಸಣ್ಣ ಸಣ್ಣ ಇಟ್ಟಿಗೆಗಳನ್ನು ಬಳಸಿಕೊಂಡು ಕಟ್ಟಲಾಗುತ್ತದೆ. ಈ ಕಾರಣಗಳಿಂದ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆಯಾ? ಬೇರೆ ಯಾವುದೇ ಕಾರಣಗಳು ಇದ್ದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
