ಸಣ್ಣ ಪ್ರಾಯದಲ್ಲಿಯೇ ಸೆಕ್ಸ್ ಗೀಳು ಅಂಟಿಕೊಳ್ಳುವುದು ಯಾಕೆ? ಇಲ್ಲಿದೆ ಕಾರಣಗಳು

Posted By: Hemanth
Subscribe to Boldsky

ಭಾರತದಲ್ಲಿ ಹಿಂದಿನಿಂದಲೂ ಲೈಂಗಿಕ ಶಿಕ್ಷಣದ ಬಗ್ಗೆ ತುಂಬಾ ಹಿಂಜರಿಕೆ. ಸಾವಿರಾರು ವರ್ಷಗಳ ಹಿಂದಿನ ದೇವಾಲಯಗಳನ್ನು ನೋಡಿದರೆ ಅಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಪ್ರತಿಯೊಂದು ದೃಶ್ಯಗಳು ಕಂಡುಬರುವುದು. ಆದರೆ ಲೈಂಗಿಕತೆ ಎನ್ನುವುದು ಕೇವಲ ನಾಲ್ಕು ಗೋಡೆಗಳ ಮಧ್ಯೆ. ಅದನ್ನು ಬಹಿರಂಗವಾಗಿ ಚರ್ಚಿಸಬಾರದು ಎನ್ನುವ ಮನೋಭಾವ ನಮ್ಮದಾಗಿದೆ. ಇದರಿಂದಾಗಿಯೇ ಹದಿಹರೆಯದವರು ಸೆಕ್ಸ್ ಅಥವಾ ನೀಲಿ ಚಿತ್ರಗಳ ಬಗ್ಗೆ ಗೀಳು ಅಂಟಿಸಿಕೊಳ್ಳುವುದು.

ಈ ಲೇಖನದಲ್ಲಿ ಜನರು ಸೆಕ್ಸ್ ಮತ್ತು ನೀಲಿಚಿತ್ರಗಳ ಗೀಳಿಗೆ ಬೀಳುವುದು ಯಾಕೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವ. ಲೈಂಗಿಕತೆ ಬಗ್ಗೆ ಶೋಧನೆ ಅಥವಾ ಚರ್ಚೆ ಮಾಡುವುದು ಯಾವುದೇ ಪಾಪವಲ್ಲ. ಸೆಕ್ಸ್ ಬಗ್ಗೆ ಗೀಳು ಇರುವ ಜನರು ಕೆಲವೊಂದು ಸಂದರ್ಭದಲ್ಲಿ ಮಾನಸಿಕವಾಗಿಯೂ ಸಮಸ್ಯೆಗೆ ಒಳಗಾಗಬಹುದು. ಇದರ ಬಗ್ಗೆ ಆಳವಾಗಿ ಚರ್ಚಿಸಲು ಈ ಲೇಖನ ನಿಮ್ಮ ಮುಂದಿಡಲಾಗಿದೆ...

ಸರಿಯಾದ ಶಿಕ್ಷಣವಿಲ್ಲದೆ ಇರುವುದು

ಸರಿಯಾದ ಶಿಕ್ಷಣವಿಲ್ಲದೆ ಇರುವುದು

ಶಾಲಾ ದಿನಗಳಲ್ಲಿ ನಮ್ಮ ಪಠ್ಯಗಳಲ್ಲಿ ಸಂತಾನೋತ್ಪತ್ತಿ ಬಗ್ಗೆ ಪಾಠಗಳು ಇರುತ್ತದೆ. ಆದರೆ ಇದರ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ನೀಡುವುದೇ ಇಲ್ಲ. ಯಾಕೆಂದರೆ ನಾವಿರುವ ಸಮಾಜದಲ್ಲಿ ಲೈಂಗಿಕತೆ ಬಗ್ಗೆ ಮಾತನಾಡುವುದು ಮತ್ತು ಚರ್ಚಿಸುವುದು ದೊಡ್ಡ ಪಾಪವೆಂದು ತಿಳಿಯಲಾಗುತ್ತದೆ.

ಕುತೂಹಲಕ್ಕಾಗಿ

ಕುತೂಹಲಕ್ಕಾಗಿ

ಮಕ್ಕಳ ದೇಹವು ಪ್ರೌಢಾವಸ್ಥೆಗೆ ಬಂದಾಗ ಅವರಲ್ಲಿ ಹಲವಾರು ಬದಲಾವಣೆಗಳು ಆಗುವುದು. ಆದರೆ ಲೈಂಗಿಕ ಕ್ರಿಯೆಯಿಂದ ಯಾವ ರೀತಿಯ ಪರಿಣಾಮಗಳು ಉಂಟಾಗಬಹುದು ಎಂದು ಅವರು ಯೋಚಿಸಿರುವುದಿಲ್ಲ. ಒಂದು ವಯಸ್ಸಿನ ತನಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇದ್ದರೆ ಆಗ ಸಾಮಾಜಿಕವಾಗಿ ಅಸ್ಪೃಶ್ಯರಂತೆ ಕಾಣಲಾಗುತ್ತದೆ ಎಂದು ಭಾವಿಸುತ್ತಾರೆ. ಜನರು ಇದನ್ನು ನಂಬಿದ್ದಾರೆ ಮತ್ತು ಸೆಕ್ಸ್ ನ ಗೀಳಿಗೆ ಬೀಳುತ್ತಾರೆ.

ಪ್ರಯೋಗಾತ್ಮಕ ಆರಂಭ

ಪ್ರಯೋಗಾತ್ಮಕ ಆರಂಭ

ಸ್ನೇಹಿತರ ಅನುಭವಗಳನ್ನು ಕೇಳಿಕೊಂಡು ಅದನ್ನು ಅನುಕರಿಸಲು ಪ್ರಯತ್ನಿಸುವುದರಿಂದ ದೊಡ್ಡ ಮಟ್ಟದ ಸಮಸ್ಯೆಗೆ ಸಿಲುಕಬಹುದು. ಇದರಿಂದಾಗಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುವುದು ಮತ್ತು ಮಗುವಿಗೆ ಜನ್ಮ ನೀಡುವುದು. ಸೆಕ್ಸ್ ನ ಗೀಳು ಅವರನ್ನು ಗರ್ಭಿಣಿಯಾಗುವ ತನಕ ಕೊಂಡೊಯ್ಯುವುದು.

ಲೈಂಗಿಕ ಶಿಕ್ಷಣ ನಿಷೇಧಿಸುವುದು

ಲೈಂಗಿಕ ಶಿಕ್ಷಣ ನಿಷೇಧಿಸುವುದು

ಹದಿಹರೆಯದ ಮಕ್ಕಳಲ್ಲಿ ಹಾರ್ಮೋನು ಮಟ್ಟವು ಶಿಖರದಲ್ಲಿರುವ ಕಾರಣದಿಂದಾಗಿ ಅವರಿಗೆ ಅವಕಾಶ ನೀಡಿದರೆ ದೊಡ್ಡ ಮಟ್ಟದ ಸ್ಫೋಟವಾಗಬಹುದು. ಆದರೆ ಇದರಿಂದ ಅವರನ್ನು ತಡೆಹಿಡಿದರೆ ಕುತೂಹಲವು ಹೆಚ್ಚಾಗುವುದು. ಇದರಿಂದ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ.

ಪ್ರತಿಯೊಂದು ಇಂಟರ್ನೆಟ್ ನಲ್ಲಿ ಲಭ್ಯ

ಪ್ರತಿಯೊಂದು ಇಂಟರ್ನೆಟ್ ನಲ್ಲಿ ಲಭ್ಯ

ಹಿಂದೆಲ್ಲಾ ಕುತೂಹಲ ತಣಿಯಬೇಕಾದರೆ ಸ್ನೇಹಿತರು ಅಥವಾ ತುಂಬಾ ಆಪ್ತರದಲ್ಲಿ ಈ ಬಗ್ಗೆ ಕೇಳಬೇಕಿತ್ತು. ಆದರೆ ಇಂದು ಎಲ್ಲದಕ್ಕೂ ಗೂಗಲ್ ಉತ್ತರಿಸುವುದು. ಇಲ್ಲಿ ದೊಡ್ಡ ಮಟ್ಟದ ಜ್ಞಾನ ಕೋಶವೇ ಇದೆ. ಹಲವಾರು ವೀಡಿಯೋಗಳು, ಚಿತ್ರಗಳು ಲಭ್ಯವಾಗುವುದು. ಇಂತಹ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡಿಕೊಂಡ ಬಳಿಕ ಜನರಲ್ಲಿ ಸೆಕ್ಸ್ ಬಗ್ಗೆ ಗೀಳು ಹೆಚ್ಚಾಗುವುದು.

ಕಿವಿಮಾತುಗಳೇ ಇದನ್ನೆಲ್ಲಾ ಸೃಷ್ಟಿಸುವುದು....

ಕಿವಿಮಾತುಗಳೇ ಇದನ್ನೆಲ್ಲಾ ಸೃಷ್ಟಿಸುವುದು....

ಸ್ನೇಹಿತನೊಬ್ಬನು ಇತರರಿಗೆ ತನ್ನ ಲೈಂಗಿಕ ಕ್ರಿಯೆ ಬಗ್ಗೆ ಹೇಳಿಕೊಳ್ಳುವಾಗ ಆತ ತಾನು ಬಳಸಿದ ರಕ್ಷಣೆ ಅಸ್ತ್ರ ಮತ್ತು ಇತರ ವಿಚಾರಗಳನ್ನು ಮುಚ್ಚಿಡುತ್ತಾನೆ. ತೃಪ್ತಿ ಎನ್ನುವ ಪದವು ಆತನ ತಲೆಯಲ್ಲಿ ತಿರುಗುತ್ತಾ ಇರುವುದು ಮತ್ತು ಆತ ಇದೇ ಗುಂಗಿನಲ್ಲಿ ಸೆಕ್ಸ್ ಗೀಳಿಗೆ ಸಿಲುಕುತ್ತಾನೆ.

ಕಿವಿಮಾತುಗಳೇ ಇದನ್ನೆಲ್ಲಾ ಸೃಷ್ಟಿಸುವುದು....

ಕಿವಿಮಾತುಗಳೇ ಇದನ್ನೆಲ್ಲಾ ಸೃಷ್ಟಿಸುವುದು....

ಇದನ್ನು ಓದಿದ ಪ್ರತಿಯೊಬ್ಬರು ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ. ತಮ್ಮ ಕುತೂಹಲ ತಣಿಸಲು ಇದನ್ನು ಓದುವ ಜನರೂ ಇದ್ದಾರೆ!

English summary

Why People Are Obsessed With Sex??

Have you ever wondered why people are so obsessed with lovemaking? There are many reasons which make a person to be crazy about sex, even if they are not desperate about it. Being inquisitive about making love is something that will make certain people be misunderstood at times.Here, in this article, we are just about to discuss some of the reasons as to why people are obsessed about making love or even watching porn.