Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲವು ಮಹಿಳೆಯರು ಇತರ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ! ಯಾಕೆ ಗೊತ್ತೇ?
ಲೈಂಗಿಕ ಆಕರ್ಷಣೆ, ನಮಗೆಲ್ಲಾ ನಿಸರ್ಗದತ್ತವಾಗಿ ಬಂದಿರುವ ಗುಣವಾಗಿದ್ದು ಸಹಜವಾಗಿ ಮೈಮಾಟ ಎಲ್ಲರನ್ನೂ ಆಕರ್ಷಿಸಿಯೇ ಇರುತ್ತದೆ. ಯಾವಾಗ ಈ ಆಕರ್ಷಣೆ ತನ್ನದೇ ಲಿಂಗದ ವ್ಯಕ್ತಿಯ ಬಗ್ಗೆ ಇರುತ್ತದೆಯೋ, ಆಗ ಕೆಲವು ಅನುಮಾನಗಳು ಕಾಡುವುದು ಸಹಜ. ಇಂದಿನ ಲೇಖನದಲ್ಲಿ ಮಹಿಳೆಯರು ಇತರ ಮಹಿಳೆಯರನ್ನು ಆಕರ್ಷಿಸುವ ಕೆಲವು ಅಮೂಲ್ಯ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.
ಏಕಾಗಿ ಇವರು ಇತರರಲ್ಲಿ ಆಕರ್ಷಿತರಾಗುತ್ತಾರೆ? ಒಂದು ಸಮೀಕ್ಷೆಯ ಪ್ರಕಾರ "ವೀಡಿಯೋಗಳಲ್ಲಿ ಕಂಡುಬರುವ ಸುಂದಯ ಯುವಕ ಹಾಗೂ ಯುವತಿಯರಿಂದ ತಾವು ಲೈಂಗಿಕವಾಗಿ ಉದ್ರೇಕಗೊಳ್ಳುತ್ತೇವೆ" ಎಂದು 74% ರಷ್ಟು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಬನ್ನಿ, ಈ ಆಕರ್ಷಣೆಗೇನು ಕಾರಣ ಎಂದು ನೋಡೋಣ...

ಇದು ನೈಸರ್ಗಿಕ
ಸಂಶೋಧಕರ ಪ್ರಕಾರ, ಸಮಾಜದಲ್ಲಿ ಒಬ್ಬರಿಗೊಬ್ಬರು ಸಹಕರಿಸುವ ಸಂದರ್ಭದಲ್ಲಿ ಈ ಬಗೆಯ ಆಕರ್ಷಣೆ ಸ್ವಾಭಾವಿಕವಾಗಿದೆ. ಪರಸ್ಪರ ಫೋನ್ ಸಂಭಾಷಣೆಯಲ್ಲಿ ಘಂಟೆಗಟ್ಟಲೇ ಹರಟುವುದರಿಂದ ಹಿಡಿದು ಆತ್ಮೀಯವಾಗಿ ತಬ್ಬಿಕೊಳ್ಳುವುದರವರೆಗೆ ಈ ನಿಕಟವರ್ತನೆ ಮುಂದುವರೆಯಬಹುದು. ಇವು ಸ್ವಾಭಾವಿಕ ನಡವಳಿಕೆಗಳೇ ಆಗಿವೆ.

ಇದೊಂದು ಅಪ್ಪಟವಾದ ಭಾವನೆ
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಎಲ್ಲಾ ಮಹಿಳೆಯರು ಪುರುಷರನ್ನು ಕಂಡಾಗಲೂ ಇತರ ಮಹಿಳೆಯರನ್ನು ಕಂಡಾಗಲೂ ಲೈಂಗಿಕವಾಗಿ ಉದ್ರೇಕಿತರಾಗುತ್ತಾರೆ. ಹಾಗಾಗಿ ಓರ್ವ ಮಹಿಳೆ ಇನ್ನೋರ್ವ ಮಹಿಳೆಯನ್ನು ಕಂಡಾಗ ಲೈಂಗಿಕವಾಗಿ ಆಕರ್ಷಿತಗೊಳ್ಳುವುದು ನಿಸರ್ಗನಿಯಮವಾಗಿದ್ದು ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಇದೊಂದು ಕೇವಲ ಭ್ರಮಾಲೋಕ
ಕಲ್ಪನೆಯಲ್ಲಿ ಲೈಂಗಿಕವಾಗಿ ಅಸಾಧ್ಯವಾದುದನ್ನು ಕಲ್ಪಿಸಿಕೊಳ್ಳುವುದಲ್ಲಿ ಏನೂ ಅರ್ಥವಿಲ್ಲದೇ ಹೋದರೂ ಈ ಭ್ರಮೆಯನ್ನು ಮಾತ್ರ ಎಲ್ಲರೂ ಇಷ್ಟಪಡುತ್ತಾರೆ. ಇದು ಆಯಾ ವ್ಯಕ್ತಿಯ ಅತ್ಯಂತ ಖಾಸಗಿ ಕಲ್ಪನೆಯಾಗಿದ್ದು ಇದಕ್ಕೆ ಯಾವುದೇ ಆಳವಾದ ಅರ್ಥವಿರುವುದಿಲ್ಲ. ಈ ವಿಷಯವನ್ನೂ ವಿಜ್ಞಾನ ಸಾಬೀತುಗೊಳಿಸಿದೆ.

ಆಕೆ ಸಲಿಂಗಕಾಮಿಯಾಗಿರುವ ಸೂಚನೆಯಾಗಿರಬಹುದು!
ಒಂದು ವೇಳೆ ಯುವತಿ ಯುವಕರ ಬದಲು ಕೇವಲ ಇತರ ಯುವತಿಯರತ್ತಲೇ ತನ್ನ ಗಮನವನ್ನು ನೀಡಿದರೆ ಇದು ಆಕೆ ಸಲಿಂಗಕಾಮಿಯಾಗಿರುವ ಸೂಚನೆಯಾಗಿರಬಹುದು. ಈ ಮಹಿಳೆಯರು ಇತರ ಮಹಿಳೆಯ ಬಗ್ಗೆ ಇಲ್ಲಸಲ್ಲದ ಕಲ್ಪನೆಗಳನ್ನು ಹೊಂದಿದ್ದು ಈ ಸಮಯದಲ್ಲಿ ಅವುಗಳನ್ನೆಲ್ಲಾ ಅದುಮಿಟ್ಟಿದ್ದಾಳೆ ಎಂದು ಊಹಿಸಬಹುದು.

ದೈಹಿಕವಾಗಿಯೂ ಇತರ ಮಹಿಳೆಯರತ್ತ ಆಕರ್ಷಿತರಾಗುವುದು
ಕೆಲವು ಮಹಿಳೆಯರು ದೈಹಿಕವಾಗಿ ಇತರ ಮಹಿಳೆಯರಿಗೆ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡಂತೆ, ಅರ್ಧದಷ್ಟು ಸಲಿಂಗಕಾಮಿ ಮಹಿಳೆಯರು ಇತರ ಮಹಿಳೆಯರ ಸೌಂದರ್ಯಕ್ಕೆ ಸೋಲುತ್ತಾರೆ. ಇವರು ಇತರ ಮಹಿಳೆಯರೊಂದಿಗೆ ನಿಕಟ ಸಂಬಂಧವಿರಿಸಿಕೊಳ್ಳುತ್ತಾರೆ, ಈ ಮೂಲಕ ಲೈಂಗಿಕ ಭಾವನೆ ಹಾಗೂ ದೈಹಿಕ ಆಕರ್ಷಣೆಗಳು ಭುಗಿಲೇಳುತ್ತವೆ.

ಅಧ್ಯಯನಗಳಲ್ಲಿ ಕಂಡುಕೊಂಡ ವಿವರಗಳು
ಒಂದು ಅಧ್ಯಯನದಲ್ಲಿ ಪುರುಷರೂ ಮಹಿಳೆಯರೂ ಸಮಾನ ಪಾತ್ರದಲ್ಲಿದ್ದ ಕಾಮವಿಷಯದ ಚಲನಚಿತ್ರಗಳನ್ನು ಕೆಲವು ಮಹಿಳೆಯರಿಗೆ ತೋರಿಸಲಾಯ್ತು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೆಲವು ದಿಟ್ಟ ಮಹಿಳೆಯರು ಮಾತ್ರ ತಾವು ಪುರುಷರನ್ನು ಕಂಡಾಗಲೂ ಮಹಿಳೆಯರನ್ನು ಕಂಡಾಗಲೂ ಹೆಚ್ಚು ಉದ್ರೇಕಗೊಂಡಿದ್ದೇವೆ ಎಂದು ತಿಳಿಸಿದರು. ಆದರೆ ಲೈಂಗಿಕ ಸಂಗಾತಿಯಾಗಿ ಮಾತ್ರ ಪುರುಷರನ್ನೇ ಬಯಸುವುದಾಗಿ ತಿಳಿಸಿದರು. ಈ ಪ್ರಕಾರ ಲೈಂಗಿಕ ಆಕರ್ಷಣೆ ಮಹಿಳೆಯರಿಗೆ ಕೇವಲ ಪುರುಷರಿಂದ ಮಾತ್ರವಲ್ಲ, ಇತರ ಮಹಿಳೆಯರಿಂದಲೂ ಇರುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ವಿಚಾರಗಳನ್ನು ಕೆಳಗಿನ ಕಮೆ಼ಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.



Click it and Unblock the Notifications
