ನಿಮಗೆ ಹೊಂದಿಕೆಯಾಗದ ರಾಶಿ ಚಕ್ರಗಳು! ಇವರೊಂದಿಗೆ ಡೇಟಿಂಗ್ ಬೇಡ!

ವಿವಾಹ ಎನ್ನುವುದು ಜೀವನದಲ್ಲಿ ಒಮ್ಮೆ ನೆರವೇರುವ ಪವಿತ್ರವಾದ ಬಂಧನ. ಈ ಬಂಧವು ಬದುಕಿಗೆ ತಿರುವನ್ನು ನೀಡುವುದರ ಮೂಲಕ ಜೀವನಕ್ಕೆ ಹೊಸ ಆರಂಭವನ್ನು ನೀಡುತ್ತದೆ. ನಮ್ಮ ಆಸೆ, ಅಭಿಲಾಸೆಗಳಿಗೆ ಇನ್ನೊಂದು ಜೀವ ಸಾತ್ ನೀಡುತ್ತಾ, ಬದುಕಿನ ಖುಷಿಯನ್ನು ಹೆಚ್ಚಿಸುವ ಪರಿ ಅದು. ಎರಡು ಜೀವವು ಒಟ್ಟುಗೂಡಿ ಜೀವನದ ದಾರಿಯಲ್ಲಿ ಹೆಜ್ಜೆ ಹಾಕುವುದು ಎಂದರೆ ಅದೊಂದು ಅದ್ಭುತವಾದ ಅನುಭವ. ಕಷ್ಟ-ಸುಖಗಳಿಗೆ ಸದಾ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಜೀವನ ನಡೆಸುವುದರಿಂದ ಎರಡು ಕುಟುಂಬದವರಲ್ಲಿ ಸಂತೋಷ ಹಾಗೂ ಸಾರ್ಥಕ ಭಾವನೆ ನೆಲೆಸುವುದು.

ಸಂಗಾತಿಯಾಗಿ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಅದು ಸುಲಭವಲ್ಲ. ಅಲ್ಲದೆ ಅವರೊಂದಿಗೆ ಜೀವನ ಪರ್ಯಂತ ಇರುವುದು, ಹೊಂದಾಣಿಕೆ ಮಾಡಿಕೊಳ್ಳುವುದು ಬಹು ಮುಖ್ಯ. ಇಲ್ಲವಾದರೆ ಜೀವನದಲ್ಲಿ ಹೊಂದಾಣಿಕೆ ಇಲ್ಲದೆ ಮನಃಶಾಂತಿ ಕಳೆದುಕೊಳ್ಳಬೇಕಾಗುವುದು. ಜೊತೆಗೆ ಪ್ರೀತಿಯ ಕೊರತೆ ಉಂಟಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಪ್ರತಿಯೊಂದು ರಾಶಿ ಚಕ್ರದವರು ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವಾಗ ಅಥವಾ ಡೇಟಿಂಗ್ ನಡೆಸಲು ಅವರವರ ರಾಶಿಚಕ್ರಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗುವ ರಾಶಿಚಕ್ರದವರೊಂದಿಗೆ ಸಂಬಂಧ ಬೇಳೆಸಬೇಕು ಎಂದು ಹೇಳಲಾಗುವುದು. ಇಲ್ಲವಾದರೆ ಸಂತೋಷಕ್ಕಿಂತ ಹೆಚ್ಚು ದುಃಖವನ್ನು ಅನುಭವಿಸಬೇಕಾಗುವುದು. ನೀವು ನಿಮ್ಮ ಸಂಗಾತಿಯ ಹುಡುಕಾಟದಲ್ಲಿದ್ದರೆ ನಿಮ್ಮ ರಾಶಿ ಚಕ್ರಕ್ಕೆ ಹೊಂದಾಣಿಕೆಯಾಗುವ ರಾಶಿಗಳು ಯಾವವು? ಎನ್ನುವುದನ್ನು ಮೊದಲು ಪರಿಶೀಲಿಸಿ. ಈ ಕುರಿತು ಹೆಚ್ಚಿನ ವಿವರಣೆಗೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

 ಮೇಷ

ಮೇಷ

ಈ ರಾಶಿಯವರು ಪ್ರಮುಖವಾಗಿ ಮೇಷ, ವೃಷಭ ಹಾಗೂ ಮಕರ ರಾಶಿಯವರೊಂದಿಗೆ ಸಂಬಂಧ ಅಥವಾ ಡೇಟಿಂಗ್ ಹೋಗಬಾರದು. ಸಂಗಾತಿಗಳಿಬ್ಬರು ಮೇಷರಾಶಿಯವರಾಗಿದ್ದರೆ ಪರಸ್ಪರ ಸ್ಪರ್ಧೆ ಏರ್ಪಡುವುದರಿಂದ ಸಂಗಾತಿಯ ಜೀವನದಲ್ಲಿ ಸುಖ ಇರುವುದಿಲ್ಲ. ವೃಷಭ ಹಾಗೂ ಮೇಷರಾಶಿಯವರಲ್ಲಿ ಒಂದೇ ಬಗೆಯ ಮೊಂಡುತನ ಇರುವುದರಿಂದ ಇಬ್ಬರಲ್ಲಿ ವಾದಗಳು ಏರ್ಪಟ್ಟರೆ ಎಂದಿಗೂ ಅದನ್ನು ಪರಿಹರಿಸಲು ಸಾಧ್ಯವಾಗದು. ಮಕರ ಮತ್ತು ಮೇಷ ರಾಶಿಯವರ ನಡುವೆಯೂ ಇದೇ ತರಹದ ಸಮಸ್ಯೆ ಏರ್ಪಡುವುದು. ಇವರು ಪರಸ್ಪರ ಭಾವನೆಯನ್ನು ಹಂಚಿಕೊಳ್ಳುವಲ್ಲಿ ಕಷ್ಟಪಡುವರು. ಪರಸ್ಪರ ಟೀಕೆ ಮತ್ತು ಪ್ರತಿಕ್ರಿಯೆ ಎದುರಾಗುತ್ತಲೇ ಇರುತ್ತವೆ. ಈ ಕಾರಣದಿಂದಾಗಿ ಸಂಬಂಧದಲ್ಲಿ ಸಂತೋಷ ಕಾಣಲು ಕಷ್ಟವಾಗುವುದು.

ವೃಷಭ

ವೃಷಭ

ಇವರು ಮೇಷ, ಮಿಥುನ ಮತ್ತು ಕುಂಭ ರಾಶಿಯವರೊಂದಿಗೆ ವಿವಾಹ ಸಂಬಂಧ ಅಥವಾ ಡೇಟಿಂಗ್ ಹೊಂದುವುದು ಸೂಕ್ತವಲ್ಲ. ಮೇಷ ಮತ್ತು ವೃಷಭ ರಾಶಿಯವರು ಈ ಮೊದಲೆ ಹೇಳಿದ ಹಾಗೆ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ. ಹಾಗೆಯೇ ಮಿಥುನ ರಾಶಿ ಹಾಗೂ ವೃಷಭ ರಾಶಿಯವರಲ್ಲಿ ಪರಸ್ಪರ ನಂಬಿಕೆಯ ಕೊರತೆ ಇರುತ್ತದೆ. ಜೀವನದಲ್ಲಿ ನಂಬಿಕೆಯೇ ಇರದ ಮೇಲೆ ಪಾಲುದಾರರೊಂದಿಗೆ ಸಂತೋಷದಿಂದ ಇರಲು ಸಾಧ್ಯವಿಲ್ಲ. ಕುಂಭ ರಾಶಿಯವರು ತಮ್ಮದೇ ಆದ ವಿಭಿನ್ನ ಸಂವಹನ ಹಾಗೂ ವರ್ತನೆಯನ್ನು ತೋರುವುದರಿಂದ ಅವು ವೃಷಭದವರೊಂದಿಗೆ ಹೊಂದಾಣಿಕೆಯಾಗದೆ ಇರಬಹುದು. ಇಂತಹ ಸಂಬಂಧಗಳು ದೀರ್ಘಕಾಲದವರೆಗೆ ಸುಂದರವಾಗಿ ಮುಂದುವರಿಯದು.

ಮಿಥುನ

ಮಿಥುನ

ಈ ರಾಶಿಯವರು ಮೀನ, ಮಿಥುನ ಮತ್ತು ಕರ್ಕ ರಾಶಿಯವರೊಂದಿಗೆ ಸಂಬಂಧವನ್ನು ಹೊಂದಬಾರದು. ಇವರು ಮಿಥುನ ರಾಶಿಯವರೊಂದಿಗೆ ಸಂಬಂಧ ಬೆಳೆಸಬಾರದು ಪರಸ್ಪರ ಇಬ್ಬರಲ್ಲೂ ವಿವಿಧ ವ್ಯಕ್ತಿತ್ವ ಸ್ವಭಾವ ಇರುವುದರಿಂದ ಸಂಬಂಧ ಸೂಕ್ತವಾಗಿ ನಡೆಯದು. ಕರ್ಕ ಹಾಗೂ ಮಿಥುನ ರಾಶಿಯವರಲ್ಲಿ ಪರಸ್ಪರ ಲೈಂಗಿಕ ಹಾಗೂ ಭಾವನಾತ್ಮಕ ವಿಚಾರದಲ್ಲಿ ಹೊಂದಾಣಿಕೆಯ ಕೊರತೆ ಹಾಗೂ ಭಿನ್ನತೆ ಉಂಟಾಗುವುದು. ಇದರಿಂದ ಸಂಬಂಧ ಸೂಕ್ತವಾಗಿರದು. ಮೀನ ರಾಶಿಯವರೊಂದಿಗೆ ಸೂಕ್ತ ಹೊಂದಾಣಿಕೆ ಇಲ್ಲದೆ ಸಂಬಂಧ ಕೊನೆಗೊಳ್ಳುವ ಸಾಧ್ಯತೆಗಳಿರುತ್ತವೆ.

ಕರ್ಕ

ಕರ್ಕ

ಈ ರಾಶಿಯವರು ಮೇಷ, ಮಿಥುನ, ಕರ್ಕ ಮತ್ತು ವೃಶ್ಚಿಕ ರಾಶಿಯವರನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬಾರದು. ಕರ್ಕ ರಾಶಿಯವರು ಅತ್ಯಂತ ಹೆಚ್ಚು ಸಹನೆಯ ಗುಣವನ್ನು ಹೊಂದಿರುತ್ತಾರೆ. ಮೇಷರಾಶಿಯವರು ಈ ವಿಚಾರದಲ್ಲಿ ವಿರುದ್ಧ ಮನಸ್ಸಿನವರು. ಇವರ ಅಸಹನೆಯ ಶೀಲವು ಪರಸ್ಪರ ಹೊಂದಾಣಿಕೆಯನ್ನು ತಂದುಕೊಡದು. ಮಿಥುನ ರಾಶಿಯವರೊಂದಿಗೆ ಕರ್ಕ ರಾಶಿಯವರಿಗೆ ಲೈಂಗಿಕ ಹಾಗೂ ಭಾವನಾತ್ಮಕ ಹೊಂದಾಣಿಕೆ ಕಾಣಲು ಕಷ್ಟವಾಗಬಹುದು. ಕರ್ಕ ರಾಶಿಯವರು ಕರ್ಕ ರಾಶಿಯವರನ್ನೇ ಡೇಟಿಂಗ್ ಅಥವಾ ಸಂಗಾತಿಯನ್ನಾಗಿ ಪಡೆದರೆ ಹೆಚ್ಚು ಆತಂಕಕ್ಕೆ ಒಳಗಾಗಬೇಕಾಗುವುದು. ಎಲ್ಲಾ ವಿಚಾರದಲ್ಲೂ ಅಸಹನೆ ಹಾಗೂ ಹೊಂದಾಣಿಕೆ ಇಲ್ಲದೆ ಹೋಗುವುದು. ವೃಶ್ಚಿಕ ಮತ್ತು ಕರ್ಕ ರಾಶಿಯವರಲ್ಲಿ ಸಮತೋಲನ ಕಂಡುಕೊಳ್ಳಲು ಕಷ್ಟವಾಗುವುದು. ಈ ಕಾರಣಗಳಿಂದಲೇ ಉತ್ತಮ ಮನಃಸ್ಥಿತಿ ಇರದು.

 ಸಿಂಹ

ಸಿಂಹ

ಈ ರಾಶಿಯವರು ಕನ್ಯಾ, ಮಿಥುನ ಮತ್ತು ಮಕರ ರಾಶಿಯವರೊಂದಿಗೆ ಉತ್ತಮ ಸಂಬಂಧ ಸಾಧಿಸಲು ಕಷ್ಟವಾಗುವುದು. ಸಿಂಹ ಮತ್ತು ಕನ್ಯಾ ರಾಶಿಯವರ ನಡುವೆ ಭಾವನಾತ್ಮಕ ಬಂಧಗಳು ಇರುವುದಿಲ್ಲ. ಸಿಂಹ ಮತ್ತು ಮಿಥುನ ರಾಶಿಯವರ ಮಧ್ಯೆ ಸಾಕಷ್ಟು ಗೊಂದಲ ಹಾಗೂ ಅಸಮಧಾನ ಉಂಟಾಗುವುದು. ಸೂಕ್ತ ನಿರ್ಣಯ ಕೈಗೊಳ್ಳಲಾಗದೆ ಸಮಸ್ಯೆಗೆ ಒಳಗಾಗುವರು. ಸಿಂಹ ಮತ್ತು ಮಕರ ರಾಶಿಯವರ ನಡುವೆ ನಾಟಕೀಯ ಪ್ರೀತಿ ಹುಟ್ಟ ಬಹುದು ಅಷ್ಟೆ. ಇವರ ನಡುವೆ ಪರಸ್ಪರ ಸವಾಲುಗಳು ಹಾಗೂ ವಾದಗಳಿಂದಾಗಿ ಸಂಬಂಧ ಹಾಳಾಗುವ ಸಾಧ್ಯತೆಗಳಿರುತ್ತವೆ.

ಕನ್ಯಾ

ಕನ್ಯಾ

ಈ ರಾಶಿಯವರು ಮೇಷ, ಧನು ಮತ್ತು ಕನ್ಯಾರಾಶಿಯವರನ್ನು ಸಂಗಾತಿಯನ್ನಾಗಿ ಅಥವಾ ಡೇಟಿಂಗ್ ಹೊಂದಲು ಆಯ್ಕೆಮಾಡಿಕೊಳ್ಳಬಾರದು. ಕನ್ಯಾರಾಶಿ ಮತ್ತು ಮೇಷ ರಾಶಿಯವರ ನಡುವೆ ಸಂಗತಿಗಳು ತೀರಾ ಗಂಭೀರ ಸ್ಥಿತಿಯನ್ನು ಪಡೆದುಕೊಳ್ಳುತ್ತವೆ. ಕಾಲ್ಪನಿಕ ಸಂಬಂಧವನ್ನು ಬಯಸುತ್ತೀರಿ ಎಂದಾದರೆ ಕನ್ಯಾ ರಾಶಿಯವರು ಧನುರಾಶಿಯವರನ್ನು ವರಿಸಬಹುದು. ಕನ್ಯಾ ಮತ್ತು ಧನು ರಾಶಿಯವರಲ್ಲಿ ಸಾಕಷ್ಟು ಅನುಮಾನಗಳು ಹಾಗೂ ಅವಿಶ್ವಾಸ ಹೆಚ್ಚಾಗಿರುತ್ತದೆ ಎನ್ನಲಾಗುವುದು. ಕನ್ಯಾ ಮತ್ತು ಕನ್ಯಾ ರಾಶಿಯವರು ಸಂಗಾತಿಗಳಾಗಿ ಇರಬಾರದು. ಪರಸ್ಪರ ಸಕಾರಾತ್ಮಕ ಗುಣಗಳಿಂದ ಪೂರಕ ಸ್ಥಿತಿ ಉಂಟಾಗಬಹುದು. ಆದರೆ ಪರಸ್ಪರ ನಕಾರಾತ್ಮಕ ಗುಣಗಳಿಂದ ಸಮಸ್ಯೆ ಉಂಟಾಗಬಹುದು.

 ತುಲಾ

ತುಲಾ

ಇವರು ತುಲಾ, ವೃಷಭ ಮತ್ತು ಕರ್ಕ ರಾಶಿವರನ್ನು ಸಂಗಾತಿಯನ್ನಾಗಿ ಪಡೆಯಬಾರದು. ತುಲಾ ರಾಶಿಯವರು ಪರಸ್ಪರ ಅದೇ ರಾಶಿಯವರನ್ನು ಆಯ್ಕೆ ಮಾಡಿಕೊಂಡರೆ ಪ್ರಾಮಾಣಿಕತೆಯಲ್ಲಿತುಲನಾತ್ಮಕವಾಗಿ ಕಷ್ಟ ಉಂಟಾಗುವುದು. ಅಲ್ಲದೆ ಪರಸ್ಪರ ಸ್ವಾರ್ಥ ಗುಣವು ಒಂದಷ್ಟು ಸಮಸ್ಯೆಯನ್ನು ನಿರ್ಮಿಸುವುದು. ತುಲಾ ಮತ್ತು ವೃಷಭ ರಾಶಿಯವರ ನಡುವೆ ಹೋರಾಟ ಹಾಗೂ ದ್ವೇಷದ ಭಾವನೆ ಹೆಚ್ಚಾಗಿ ಕಾಡುವುದು. ತುಲಾ ಮತ್ತು ಕರ್ಕ ರಾಶಿಯವರ ನಡುವೆ ಬೇರೆ ಬೇರೆ ರೀತಿಯ ಚಿಂತನೆ ಹಾಗೂ ಜೀವನ ಶೈಲಿಯನ್ನು ಬಯಸುತ್ತಾರೆ. ಇವರು ಒಟ್ಟಿಗೆ ಬಾಳಲು ಸಾಕಷ್ಟು ಕಷ್ಟಪಡುವರು.

 ವೃಶ್ಚಿಕ

ವೃಶ್ಚಿಕ

ಇವರು ಮೇಷ, ವೃಶ್ಚಿಕ ಮತ್ತು ಕುಂಭ ರಾಶಿಯವರೊಂದಿಗೆ ಸಂಬಂಧ ಬೆಳೆಸಬಾರದು. ವೃಶ್ಚಿಕ ಮತ್ತು ಮೇಷ ರಾಶಿಯವರ ನಡುವಿನ ಸಂಬಂಧ ದುರಂತವನ್ನು ಸೃಷ್ಟಿಸುವುದು. ಇವರ ನಡುವೆ ಸಾಕಷ್ಟು ಘರ್ಷಣೆ ಹಾಗೂ ಮನಃಸ್ಥಾಪ ಉಂಟಾಗುವುದು. ವೃಶ್ಚಿಕ ಮತ್ತು ಕುಂಭ ರಾಶಿವರ ನಡುವೆ ಸಂಬಂಧ ಸುಂದರವಾಗಿ ಉಳಿಯದು. ಏಕೆಂದರೆ ಇಬ್ಬರಲ್ಲೂ ಪರಸ್ಪರ ತಮ್ಮದೇ ಆದ ವೈಯಕ್ತಿಕ ಚಿಂತನೆ ಹಾಗೂ ಭಾವನೆಗಳಿಗೆ ಬೆಲೆಕೊಡುವವರಾಗಿರುತ್ತಾರೆ. ವೃಶ್ಚಿಕ ಮತ್ತು ವೃಶ್ಚಿಕ ರಾಶಿಯವರ ಸಂಬಂಧಗಳಲ್ಲಿ ಕೆಲವು ಗುಣಗಳಿಂದ ಪರಸ್ಪರ ಸಕಾರಾತ್ಮಕ ಸ್ಥಿತಿ ಉಂಟಾಗಬಹುದು. ಆದರೆ ಪರಸ್ಪರ ನಕಾರಾತ್ಮಕ ಗುಣಗಳಿಂದ ಸಮಸ್ಯೆ ಉಂಟಾಗಬಹುದು.

ಧನು

ಧನು

ಇವರು ಕನ್ಯಾ, ಕರ್ಕ, ವೃಶ್ಚಿಕ ಮತ್ತು ಧನು ರಾಶಿಯವರೊಂದಿಗೆ ಸಂಬಂಧ ಹೊಂದಬಾರದು. ಧನು ಬೆಂಕಿಯ ಚಿಹ್ನೆ ಹಾಗೂ ಕನ್ಯಾ ಭೂಮಿಯ ಚಿಹ್ನೆ ಹೊಂದಿದವರಾದ್ದರಿಂದ ಇಬ್ಬರಲ್ಲೂ ಹೊಂದಾಣಿಕೆ ಸಮಸ್ಯೆ ಹೆಚ್ಚಾಗುವುದು. ಸೂಕ್ಷ್ಮ ಗುಣದವರಾದ ಕರ್ಕ ರಾಶಿಯವರು ಉತ್ಸಾಹಿಗಳಾದ ಧನು ರಾಶಿಯವರಿಗೆ ಸೂಕ್ತ ಸಂಗಾತಿಗಳಾಗಿ ಬಾಳಲು ಸಾಧ್ಯವಾಗದು. ಇವರ ನಡುವೆ ಸಾಕಷ್ಟು ಅಸಮಾನತೆ ಸೃಷ್ಟಿಯಾಗುವುದು. ವೃಶ್ಚಿಕ ಮತ್ತು ಧನು ರಾಶಿಯವರ ನಡುವಿನ ಗುಣಗಳು ಸಾಮಾನ್ಯವಾಗಿ ಎಲ್ಲವೂ ವಿಭಿನ್ನವಾಗಿರುತ್ತವೆ. ಹಾಗಾಗಿ ಇವರ ನಡುವಿನ ಸಂಬಂಧವು ಉತ್ತಮವಾಗಿರದು. ಧನು ಮತ್ತು ಧನು ರಾಶಿಯವರೇ ಸಂಬಂಧವನ್ನು ಹೊಂದಬಾರದು. ಸಂಬಂಧದಲ್ಲಿ ಅಸ್ಥಿರತೆ ಹಾಗೂ ಅವಿಶ್ವಾಸದ ಭಾವನೆ ಬಿರುಗಾಳಿಯನ್ನು ಎಬ್ಬಿಸುವುದು.

 ಮಕರ

ಮಕರ

ಇವರು ಮೇಷ, ತುಲಾ ಮತ್ತು ಮಕರ ರಾಶಿಯವರೊಂದಿಗೆ ಸಂಬಂಧ ಹೊಂದಬಾರದು. ಮಕರ ಮತ್ತು ಮೇಷರಾಶಿಯವರ ನಡುವೆ ಸಾಕಷ್ಟು ನರಕವನ್ನು ಸೃಷ್ಟಿಸುವುದು. ಶಾಶ್ವತವಾದ ಕಿರಿಕಿರಿ ತಲೆದೂರುವುದು. ಮಕರ ಮತ್ತು ತುಲಾ ರಾಶಿವರ ನಡುವೆ ವಿಷಯಗಳ ಬಗೆಗಿನ ದೃಷ್ಟಿಕೋನಗಳು ವಿಭಿನ್ನವಾಗಿರುತ್ತವೆ. ಅವು ಸಮಸ್ಯೆಯನ್ನು ಸೃಷ್ಟಿ ಮಾಡುತ್ತವೆ. ಮಕರ ಮತ್ತು ಮಕರ ರಾಶಿಯವರ ನಡುವೆ ಪರಸ್ಪರ ಮೊಂಡುತನ, ವಾದ ಹಾಗೂ ಕೆಲಸದ ಶೈಲಿ ವೈಮನಸ್ಸನ್ನುಂಟು ಮಾಡುವದು. ಅಲ್ಲದೆ ಸಂಬಂಧದಲ್ಲಿ ಬೇಸರ ಉಂಟಾಗುವುದು.

ಕುಂಭ

ಕುಂಭ

ಇವರು ಸಂಬಂಧಗಳ ವಿಚಾರದಲ್ಲಿ ಕರ್ಕ, ಸಿಂಹ ಹಾಗೂ ಕನ್ಯಾ ರಾಶಿಯವರಿಂದ ದೂರ ಇರಬೇಕು. ಕುಂಭ ಮತ್ತು ಕರ್ಕ ರಾಶಿಯವರ ದೀರ್ಘಕಾಲದ ಸಂಬಂಧವು ಸುಂದರವಾಗಿ ಉಳಿಯದು. ಇಬ್ಬರಲ್ಲೂ ಅಧಿಕ ಭಿನ್ನಾಭಿಪ್ರಾಯವು ಬೇಸರವನ್ನುಂಟುಮಾಡುವುದು. ನಕ್ಷತ್ರಗಳ ಪ್ರಕಾರ ಕುಂಭ ಮತ್ತು ಸಿಂಹ ರಾಶಿಯ ವ್ಯಕ್ತಿಗಳ ನಡುವಿನ ಸಂಬಂಧವು ಸ್ಫೋಟಕದ ರೀತಿಯಲ್ಲಿ ಬದಲಾವಣೆ ಹೊಂದುವುದು. ಪರಸ್ಪರ ಪ್ರೀತಿ ವಿಶ್ವಾಸ ಇಲ್ಲದೆ ಹೋಗಬಹುದು. ಕುಂಭ ಮತ್ತು ಕನ್ಯಾ ರಾಶಿಯವರ ನಡುವೆ ಅಸ್ತವ್ಯಸ್ತತೆ ಹಾಗೂ ಹಾನಿಕಾರಕ ವ್ಯಸನಗಳಿಂದ ಬೇಸರ ಉಂಟಾಗುವುದು.

 ಮೀನ

ಮೀನ

ಈ ರಾಶಿಯವರು ಸಂಬಂಧಗಳ ವಿಚಾರದಲ್ಲಿ ಮೇಷ, ಸಿಂಹ ಮತ್ತು ಮೀನ ರಾಶಿಯವರಿಂದ ದೂರ ಇರಬೇಕು. ಮೀನ ಮತ್ತು ಮೇಷರಾಶಿಯವರ ನಡುವೆ ಸಾಕಷ್ಟು ವಾದಗಳು ಸೃಷ್ಟಿಯಾಗುತ್ತವೆ. ಅವು ಎಂದಿಗೂ ಸಮತೋಲನವನ್ನು ಕಾಣದು. ಇಬ್ಬರಲ್ಲೂ ಸಾಕಷ್ಟು ವಾದವಿವಾದಗಳು ಏರ್ಪಡುವವು. ಸಿಂಹ ಹಾಗೂ ಮೀನ ರಾಶಿಯವರ ನಡುವೆ ಭಾವನೆಗಳು ವಿಭಿನ್ನವಾಗಿರುತ್ತವೆ. ಪರಸ್ಪರ ಒಬ್ಬರಿಗೊಬ್ಬರು ನೋವನ್ನುಂಟುಮಾಡಬಹುದು. ಮೀನ ಮತ್ತು ಮೀನ ರಾಶಿಯವರ ಸಂಬಂಧಗಳಲ್ಲಿ ಕೆಲವು ಗುಣಗಳಿಂದ ಪರಸ್ಪರ ಸಕಾರಾತ್ಮಕ ಸ್ಥಿತಿ ಉಂಟಾಗಬಹುದು. ಆದರೆ ಪರಸ್ಪರ ನಕಾರಾತ್ಮಕ ಗುಣಗಳಿಂದ ಸಮಸ್ಯೆ ಉಂಟಾಗಬಹುದು.

English summary

Which Zodiac Signs Are Incompatible?

If we pay attention to our personality traits based on our zodiac sign, we're likely to figure out quite a bit about ourselves and the people around us. From which careers are an ideal match, to which zodiac signs are pretty much our mortal enemies, to what signs are the most compatible, and the signs we should avoid like the black plague, astrology can reveal a lot.
X
Desktop Bottom Promotion