ಕೆಲವರು ಲೈಂಗಿಕ ಕಲ್ಪನೆಗಳಲ್ಲಿ ತೊಡಗಿಕೊಂಡೇ ಸಂತೋಷಗೊಳ್ಳುವರು!

By Hemanth

ಜೀವನದ ಪ್ರಮುಖ ಉದ್ದೇಶವೆಂದರೆ ದೇಹವನ್ನು ಸುಖವಾಗಿಡುವುದು, ಅದು ಆರೋಗ್ಯ ಮತ್ತು ಅದರ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ. ಕೆಲವರು ಲೈಂಗಿಕ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಜೀವನ ಸಾಗಿಸಿದರೆ, ಇನ್ನು ಕೆಲವರು ಇದರಲ್ಲಿ ಸರ್ವಸುಖ ಪಡೆಯುವರು. ಲೈಂಗಿಕ ಕ್ರಿಯೆಯಲ್ಲಿ ನಿಮಗೆ ಯಾವ ರೀತಿಯ ಸುಖ ಬೇಕಿರುವುದು ಎನ್ನುವುದರ ಬಗ್ಗೆ ಸಂಗಾತಿ ಜತೆಗೆ ಚರ್ಚಿಸುತ್ತಾ ಲೈಂಗಿಕ ಜೀವನದಲ್ಲಿ ಉನ್ನತ ಮಟ್ಟದ ಸುಖ ಪಡೆಯಬಹುದು. ಆದರೆ ಕೆಲವರು ಕಲ್ಪನೆಗಳಲ್ಲಿ ತೊಡಗಿಕೊಂಡು ತಮ್ಮ ಲೈಂಗಿಕ ಆಕಾಂಕ್ಷೆಗಳನ್ನು ಪೂರೈಸಿ ಕೊಳ್ಳುವರು.

ಇದರಲ್ಲಿ ಮೆದುಳು ಪ್ರಮುಖ ಪಾತ್ರ ವಹಿಸುವುದು. ಲೈಂಗಿಕ ಕಲ್ಪನೆಗಳನ್ನು ಮಾಡಿಕೊಳ್ಳುವುದು ಮೆದುಳಿನ ದೊಡ್ಡ ಶಕ್ತಿಯೆನ್ನಬಹುದು. ಹೀಗಿದ್ದರೂ ಕೆಲವರಲ್ಲಿ ಪ್ರಶ್ನೆಗಳು ಹಾಗೆ ಉಳಿದುಬಿಡುತ್ತದೆ. ಇದಕ್ಕಾಗಿ ಸಾಮಾಜಿಕ ಮನ ಶಾಸ್ತ್ರಜ್ಞ ಜಸ್ಟಿನ್ ಲೆಹಮಿಲ್ಲರ್ ಅವರು 18-87ರ ಹರೆಯದ ಸುಮಾರು 4000 ಜನರನ್ನು ಮಾತನಾಡಿಸಿದ್ದಾರೆ.

ಅವರ ಲೈಂಗಿಕ ಕಲ್ಪನೆ, ಲೈಂಗಿಕ ಇತಿಹಾಸ ಮತ್ತು ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೆಲ್ಲವೂ ತುಂಬಾ ಗೌಪ್ಯವಾಗಿ ನಡೆಸಲಾಗಿದೆ. ಇದರ ಬಳಿಕ ಅವರು ಟೆಲ್ ಮಿ ವಾಟ್ ಯು ವಾಂಟ್: ದ ಸೈನ್ಸ್ ಆಫ್ ಸೆಕ್ಷುಲ್ ಡಿಸೈರ್ ಆ್ಯಂಟ್ ಹೌ ಇಟ್ ಕ್ಯಾನ್ ಇಂಪ್ರೂವ್ ಯುವರ್ ಸೆಕ್ಸ್ ಲೈಫ್'ಎನ್ನುವ ಪುಸ್ತಕ ಬರೆದಿದ್ದಾರೆ. ನಿಮ್ಮ ವ್ಯಕ್ತಿತ್ವವು ಕಲ್ಪನೆಯನ್ನು ಹೇಗೆ ಹೇಳುತ್ತದೆ ಎನ್ನುವುದನ್ನು ಇದರಲ್ಲಿ ತಿಳಿಸಲಾಗಿದೆ. ಇದರ ಬಗ್ಗೆ ಓದುತ್ತಾ ತಿಳಿಯಿರಿ...

ಕೆಲವು ಜನರಿಗೆ ಲೈಂಗಿಕತೆ ಬಗ್ಗೆ ತುಂಬಾ ಕಲ್ಪನೆಗಳಿರುವುದು

ಕೆಲವು ಜನರಿಗೆ ಲೈಂಗಿಕತೆ ಬಗ್ಗೆ ತುಂಬಾ ಕಲ್ಪನೆಗಳಿರುವುದು

ಸಮೀಕ್ಷೆ ನಡೆಸಿದಂತಹ ಶೇ. 97ರಷ್ಟು ಜನರು ಲೈಂಗಿಕ ಕಲ್ಪನೆಗಳ ಬಗ್ಗೆ ಒಪ್ಪಿಕೊಂಡಿದ್ದಾರೆ ಮತ್ತು ಇದರಲ್ಲಿ ಹೆಚ್ಚಿನವರು ಯಾವಾಗಲೂ ಕಲ್ಪನಾ ಲೋಕದಲ್ಲಿರುವರು, ಕೆಲವರು ವಾರದಲ್ಲಿ ಕೆಲವು ದಿನ, ಇನ್ನು ಕೆಲವರು ದಿನದಲ್ಲಿ ಕೆಲವು ಸಲ.

ನಿಮ್ಮ ಕಲ್ಪನೆಯು ಈ ವಿಷಯಗಳಿಗೆ ಹೊಂದಿಕೊಳ್ಳಬಹುದು

ನಿಮ್ಮ ಕಲ್ಪನೆಯು ಈ ವಿಷಯಗಳಿಗೆ ಹೊಂದಿಕೊಳ್ಳಬಹುದು

ಹೆಚ್ಚಿನ ಕಲ್ಪನೆಗಳು ಕೆಲವೊಂದು ವಿಚಾರಗಳಿಗೆ ಹೊಂದಿಕೊಳ್ಳುವುದು. ಇದರಲ್ಲಿ ಬಹುಸಂಗಾತಿ ಲೈಂಗಿಕ ಕ್ರಿಯೆ, ಶಕ್ತಿ, ನಿಯಂತ್ರಣ ಮತ್ತು ಒರಟು ಲೈಂಗಿಕತೆ, ನವೀನ, ಸಾಹಸ ಮತ್ತು ವೈವಿಧ್ಯತೆ. ಇತರ ಕೆಲವು ಸಾಮಾನ್ಯ ವಿಚಾರಗಳೆಂದರೆ ಅದು ನಿಷೇಧ ಮತ್ತು ನಿಷಿದ್ಧ ಲೈಂಗಿಕತೆ, ಏಕಸಂಗಾತಿ, ಉತ್ಸಾಹ ಮತ್ತು ರೋಮ್ಯಾನ್ಸ್, ಕಾಮಪ್ರಚೋದಕ ನಮ್ಯತೆ.

ಬಹಿರ್ಮುಖಿ ವಿರುದ್ಧ ಅಂತರ್ಮುಖಿ

ಬಹಿರ್ಮುಖಿ ವಿರುದ್ಧ ಅಂತರ್ಮುಖಿ

ಬಹಿರ್ಮುಖಿ ಅಥವಾ ಅಂತರ್ಮುಖಿಯಾಗಿರುವುದು ಲೈಂಗಿಕ ಕಲ್ಪನೆ ಮೇಲೆ ಪ್ರಭಾವ ಬೀರುವುದು. ಅಂತರ್ಮುಖಿಗಳು ಗುಂಪು ಮತ್ತು ಏಕಸಂಗಾತಿಯಲ್ಲದ ಲೈಂಗಿಕತೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವರು. ಇವರ ಕಲ್ಪನೆಯಲ್ಲಿನ ಪ್ರದರ್ಶನಕ್ಕೆ ಇವರನ್ನು ಶ್ಲಾಘಿಸಲ್ಪಡುವರು. ಬಹಿಮುರ್ಖಿಗಳು ಕೇವಲ ಅನ್ಯೋನ್ಯತೆ ಮತ್ತು ಉತ್ಸಾಹವನ್ನು ಮಾತ್ರ ಕಲ್ಪಿಸಬಲ್ಲರು.

ಪ್ರಜ್ಞಾವಂತರಾಗಿರುವವರು

ಪ್ರಜ್ಞಾವಂತರಾಗಿರುವವರು

ತಮ್ಮನ್ನು ತಾವು ಮನಸಾಕ್ಷಿತ್ವದವರು ಎಂದು ಪರಿಗಣಿಸುವವರು ಹೆಚ್ಚು ವಿಸ್ತಾರವಾಗಿರುವಂತಹ ಕಲ್ಪನೆಗಳನ್ನು ಮಾಡಿಕೊಳ್ಳುವರು. ಆದರೆ ಇವರು ತಮ್ಮ ಸಂಗಾತಿಯನ್ನು ಖುಷಿಪಡಿಸುವಲ್ಲಿ ಹೆಚ್ಚು ಗಮನಹರಿಸುವರು.

ಕಠಿಣ ಲೈಂಗಿಕತೆ ಬಗ್ಗೆ ಮಹಿಳೆಯರು ದಿನದಲ್ಲಿ ಕನಸು ಕಾಣುವರು

ಕಠಿಣ ಲೈಂಗಿಕತೆ ಬಗ್ಗೆ ಮಹಿಳೆಯರು ದಿನದಲ್ಲಿ ಕನಸು ಕಾಣುವರು

ಲೆಹಮಿಲ್ಲರ್ ಅಧ್ಯಯನದ ಪ್ರಕಾರ ಮಹಿಳೆಯರು ಹೆಚ್ಚಾಗಿ ಬಂಧನ ಮತ್ತು ಹಸ್ತಮೈಥುನ ಬಗ್ಗೆ ಹೆಚ್ಚು ಕಲ್ಪನೆ ಮಾಡಿಕೊಳ್ಳುವರು.

ಪುರುಷರು ಹೆಚ್ಚಾಗಿ ವ್ಯಕ್ತಿಯ ಬಗ್ಗೆ

ಪುರುಷರು ಹೆಚ್ಚಾಗಿ ವ್ಯಕ್ತಿಯ ಬಗ್ಗೆ

ಪುರುಷರು ಹಾಗೂ ಮಹಿಳೆಯರ ಕಲ್ಪನೆಗಳಲ್ಲಿ ಭಾವನೆಯ ಅಂಶವು ತುಂಬಾ ಪ್ರಮುಖವಾಗಿರುವುದು. ಇದರಲ್ಲಿ ಅವರು ತಮ್ಮನ್ನು ಸಮರ್ಥ ಹಾಗೂ ತಡೆಯಲಾಗದ ಎಂದು ಬಿಂಬಿಸಿಕೊಳ್ಳುವರು. ಪುರುಷರು ಹೆಚ್ಚಾಗಿ ತಮ್ಮ ಕಲ್ಪನೆಯಲ್ಲಿ ಒಬ್ಬ ಮಹಿಳೆಯನ್ನು ದೃಷ್ಟಿಯಲ್ಲಿರಿಸಿಕೊಳ್ಳುವರು.

ವಯಸ್ಸಾದವರ ಕಲ್ಪನೆಯು ಗುಂಪು ಲೈಂಗಿಕತೆ ಬಗ್ಗೆ

ವಯಸ್ಸಾದವರ ಕಲ್ಪನೆಯು ಗುಂಪು ಲೈಂಗಿಕತೆ ಬಗ್ಗೆ

ಹೆಚ್ಚಾಗಿ ವಯಸ್ಸಾದವರು ಮೂವರೊಂದಿಗಿನ ಅಥವಾ ಗುಂಪು ಲೈಂಗಿಕತೆ ಬಗ್ಗೆ ಕಲ್ಪನೆಗಳನ್ನು ಮಾಡಿಕೊಳ್ಳುವರು. ಅದೇ ಹದಿಹರೆಯದವರು ಉಲ್ಲಾಸ ಮತ್ತು ರೋಮ್ಯಾನ್ಸ್ ಬಗ್ಗೆ ಗಮನಹರಿಸುವರು. ಮಹಿಳೆಯರು ಕೂಡ ಗುಂಪು ಲೈಂಗಿಕತೆ ಬಗ್ಗೆ ಕಲ್ಪನೆ ಮಾಡುವರು. ಆದರೆ ಪುರುಷರು ಮಾಡಿದಷ್ಟಲ್ಲ. ಮಹಿಳೆಯರು ಕೂಡ ಪುರುಷರಂತೆ ಕಲ್ಪನೆಗಳನ್ನು ಮಾಡಿಕೊಳ್ಳುವರು. ಆದರೆ ಹೀಗೆ ಮಾಡಿದಾಗ ಅವರು ಪುರುಷರ ಕಡೆ ಹೆಚ್ಚು ಗಮನಹರಿಸುವರು.

English summary

what-your-sexual-fantasies-says-about-your-personality

Turns out you're not the only one who fantasises about rough sex. Lets Check here what sexual fantasies tells about one's personality!
X
Desktop Bottom Promotion