ಕೈ ಬೆರಳಿನ ಉಗುರುಗಳು ಕೂಡ ನಿಮ್ಮ ವ್ಯಕ್ತಿತ್ವ ಬಿಚ್ಚಿಡುತ್ತದೆ!

Posted By: Hemanth
Subscribe to Boldsky

ವ್ಯಕ್ತಿಯೊಬ್ಬನ ದೇಹದ ಅಂಗಾಂಗಗಳನ್ನು ನೋಡಿಕೊಂಡು ಆತ ಯಾವ ರೀತಿಯ ವ್ಯಕ್ತಿತ್ವ ಹೊಂದಿದ್ದಾನೆ ಎನ್ನುವುದನ್ನು ಹೇಳಬಹುದಾಗಿದೆ. ಮೂಗು, ಕೈಬೆರಳು ಮತ್ತು ಉಗುರಿನ ಗಾತ್ರವನ್ನು ನೋಡಿಕೊಂಡು ವ್ಯಕ್ತಿಯ ವ್ಯಕ್ತಿತ್ವ ಅರಿಯಬಹುದು.

ಉಗುರಿನ ಗಾತ್ರವು ಯಾವ ರೀತಿ ವ್ಯಕ್ತಿತ್ವ ಹೊರಹಾಕಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಉದ್ದಗಿನ, ಆಯತಾಕಾರದ ಉಗುರಿನಿಂದ ಹಿಡಿದು, ತ್ರಿಕೋನಾಕಾರ ಅಥವಾ ಬಾದಾಮಿಯಂತಹ ಉಗುರುಗಳು ನಿಮ್ಮ ವ್ಯಕ್ತಿತ್ವವನ್ನು ತಿಳಿಸಲಿದೆ. ಅದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ...

ಉದ್ದ, ಅಗಲ, ಆಯತಾಕಾರದ ಉಗುರು

ಉದ್ದ, ಅಗಲ, ಆಯತಾಕಾರದ ಉಗುರು

ಅಗಲ, ಉದ್ದ, ಆಯತಾಕಾರದ ಉಗುರು ಹೊಂದಿರುವಂತಹ ವ್ಯಕ್ತಿಗಳು ಜನ್ಮತಃ ನಾಯಕರಾಗಿರುವರು. ಇವರು ತಾವು ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲಿ ಜವಾಬ್ದಾರಿ ವಹಿಸುವರು. ಇವರು ತುಂಬಾ ತಾಳ್ಮೆ, ಸ್ವತಂತ್ರ ಮತ್ತು ಲೌಕಿಕವಾಗಿ ಸಮತೋಲನದಲ್ಲಿರುವ ವ್ಯಕ್ತಿಗಳು. ಇದನ್ನು ಹೊರತುಪಡಿಸಿ ಈ ವ್ಯಕ್ತಿಗಳು ತುಂಬಾ ವಿಶಾಲ ಮನಸ್ಸಿನವರು ಆಗಿರುವರು.

ಉದ್ದಗಿನ ಸಪೂರ ಉಗುರುಗಳು

ಉದ್ದಗಿನ ಸಪೂರ ಉಗುರುಗಳು

ಈ ರೀತಿಯ ಉಗುರುಗಳನ್ನು ಹೊಂದಿರುವಂತಹವರು ತುಂಬಾ ಐಷಾರಾಮ ಇಷ್ಟಪಡುವರು ಮತ್ತು ಇವರು ತಾವು ಬಯಸಿದಂತಹ ಇತರರು ಗಮನಿಸದೆ ಇದ್ದಾಗ ತುಂಬಾ ನಿರಾಶೆಗೊಳ್ಳುವರು. ಇವರು ತುಂಬಾ ಲೆಕ್ಕಾಚಾರ ಮತ್ತು ಅಹಂ ಹೊಂದಿರುವವರು ಆಗಿರುವರು.

ಸಣ್ಣ ವೃತ್ತಕಾರದ ಉಗುರು

ಸಣ್ಣ ವೃತ್ತಕಾರದ ಉಗುರು

ಈ ರೀತಿಯ ಉಗುರು ಹೊಂದಿರುವ ವ್ಯಕ್ತಿಗಳು ತುಂಬಾ ವ್ಯವಹಾರಶೀಲ, ಹೊಂದಿಕೊಳ್ಳುವ ಮತ್ತು ಜಾಣರಾಗಿರುವರು. ಇವರಲ್ಲಿ ತ್ವರಿತ ಬುದ್ದಿ ಇದೆ. ಇನ್ನೊಂದು ರೀತಿಯಲ್ಲಿ ಇವರು ತುಂಬಾ ಆಕ್ರಮಣಶೀಲರು, ಹೊಟ್ಟೆಕಿಚ್ಚುಪಡುವವರು ಮತ್ತು ಹಣಕ್ಕಾಗಿ ತುಂಬಾ ದುರಾಶೆಯುಳ್ಳವರು ಆಗಿರುವರು.

ಸಣ್ಣ ಉಗುರುಗಳು

ಸಣ್ಣ ಉಗುರುಗಳು

ಸಣ್ಣ ಉಗುರುಗಳನ್ನು ಹೊಂದಿರುವಂತಹ ವ್ಯಕ್ತಿಗಳು ಅಸಮರ್ಪಕ ಪರಿಪೂರ್ಣತೆ ಹೊಂದಿರುವವರು. ಇವರು ತಮ್ಮ ರೀತಿಯಲ್ಲಿ ಕೆಲಸ ಮಾಡಲು ತುಂಬಾ ಒದ್ದಾಡುವರು. ಇಂತಹ ವ್ಯಕ್ತಿಗಳು ತುಂಬಾ ಕೋಷಿಷ್ಠರು ಮತ್ತು ತಾಳ್ಮೆ ಕಳೆದುಕೊಳ್ಳುವವರು ಆಗಿರುವರು. ಇನ್ನೊಂದು ಬದಿಯಲ್ಲಿ ಇವರು ತ್ವರಿತವಾಗಿ ತಮ್ಮ ಜಾಣ್ಮೆ ಉಪಯೋಗಿಸುವರು. ಇತರರಿಗೆ ಹೋಲಿಸಿದರೆ ಈ ವ್ಯಕ್ತಿಗಳು ತುಂಬಾ ಬೇಡಿಕೆಯವರಾಗಿರುವರು.

ಬಾದಾಮಿ ಗಾತ್ರದ ಉಗುರು

ಬಾದಾಮಿ ಗಾತ್ರದ ಉಗುರು

ಬಾದಾಮಿ ಗಾತ್ರದ ಉಗುರು ಹೊಂದಿರುವ ವ್ಯಕ್ತಿಗಳು ತುಂಬಾ ಮೃಧು ಮತ್ತು ಭಾವನಾತ್ಮಕವಾಗಿರುವವರು. ಇವರು ಬೇಗನೆ ಕೋಪಗೊಳ್ಳುವರು. ಆದರೆ ಇನ್ನೊಂದು ಬದಿಯಲ್ಲಿ ಇವರು ಇತರರಿಗೆ ನೆರವಾಗುವಂತಹವರು. ಇದನ್ನು ಹೊರತುಪಡಿಸಿ ಇವರು ಆದರ್ಶತ್ಮಕ ದೃಷ್ಟಿಕೋನ ಹೊಂದಿರುವ ರೋಮ್ಯಾಂಟಿಕ್ ಮತ್ತು ಸೂಕ್ಷ್ಮ ವ್ಯಕ್ತಿಯಾಗಿರುವರು.

ತ್ರಿಕೋನಾಕೃತಿಯ ಉಗುರು

ತ್ರಿಕೋನಾಕೃತಿಯ ಉಗುರು

ತ್ರಿಕೋನಾಕೃತಿಯ ಉಗುರು ಹೊಂದಿರುವ ವ್ಯಕ್ತಿಗಳು ಯಾವುದೇ ರೀತಿಯಿಂದ ಸೋಲುವುದನ್ನು ದ್ವೇಷಿಸುವರು. ಇವರು ಪ್ರಸಿದ್ಧಿ ಹಾಗೂ ಗುರುತಿಸಲ್ಪಡಲು ಬಯಸುವರು. ಕಲಾತ್ಮಕ ಮನಸ್ಸನ್ನು ಹೊಂದಿರುವ ಇವರ ಮನಸ್ಥಿತಿ ಬದಲಾಗುತ್ತಾ ಇರುವುದು. ಇದರಿಂದಾಗಿ ಅವರ ವ್ಯಕ್ತಿತ್ವವನ್ನು ಬದಲಾಯಿಸಿಬಿಡುತ್ತದೆ. ಇವರು ತುಂಬಾ ನವಿರಾದ ವ್ಯಕ್ತಿಗಳಾಗಿರುವರು.

English summary

what-your-nail-shape-reveals-about-your-personality

There are so many physical aspects that define our personality. From the shape of our nose, to the shape of the fingers, to even the nail shape! A lot can be revealed by looking at these physical features of an individual. Check them out, as we bring to you the details of how the nail shape can reveal about a person's personality.