For Quick Alerts
ALLOW NOTIFICATIONS  
For Daily Alerts

  ಜ್ಯೋತಿಷ್ಯದ ಪ್ರಕಾರ ನಿಮ್ಮ ಆಕರ್ಷಣೆಯನ್ನು ರಾಶಿಚಕ್ರವೇ ನಿರ್ಣಯಿಸುತ್ತದೆ!

  By Deepu
  |

  ನಮ್ಮ ಸುತ್ತಲಿನ ಸಮಾಜದಲ್ಲಿ, ಕುಟುಂಬದವರ ನಡುವೆ ಹಾಗೂ ಸಂಬಂಧಿಕರ ಮಧ್ಯೆ ಇರುವಾಗ ನಾವು ಕೆಲವರನ್ನು ಬಹಳ ಮನಃಪೂರ್ವಕವಾಗಿ ಇಷ್ಟಪಡುತ್ತೇವೆ. ಅವರೊಂದಿಗೆ ಬೆರೆಯುವುದು, ಮಾತನಾಡುವುದು, ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದು ಎಲ್ಲವೂ ಒಂದು ರೀತಿಯ ಖುಷಿಯನ್ನು ತಂದುಕೊಡುತ್ತದೆ. ಅದೇ ಕೆಲವು ವ್ಯಕ್ತಿಗಳನ್ನು ಕಂಡರೆ ಮನಸ್ಸಿಗೆ ಒಂದು ರೀತಿಯ ಕಿರಿಕಿರಿ ಉಂಟಾಗುವುದು. ಆ ವ್ಯಕ್ತಿಯ ದರ್ಶನವಾದರೂ ಏಕಾಯಿತು? ಎನ್ನುವಷ್ಟು

  ಬೇಸರವಾಗುತ್ತದೆ. ಅವರ ವರ್ತನೆ, ಹಾವಭಾವ, ಮಾತುಗಳೆಲ್ಲವೂ ನಮಗೆ ಅತಿರೇಕ ಅನಿಸುತ್ತದೆ. ಹೌದು, ಎಂದು ನಿಮಗೆ ಅನಿಸಬಹುದು. ಹಾಗಾದರೆ ಏಕೆ ಹೀಗಾಗುತ್ತದೆ? ಎನ್ನುವ ಪ್ರಶ್ನೆಯು ನಿಮ್ಮನ್ನು ಕಡಬಹುದು... ನಮ್ಮ ಮನಸ್ಸಿಗೆ ಉಂಟಾಗುವ ಈ ಬಗೆಯ ಭಾವನೆಗಳು ಅಥವಾ ಆಕರ್ಷಣೆಗಳೆಲ್ಲವೂ ಗ್ರಹಗತಿಗಳ ಪ್ರಭಾವದಿಂದ ಉಂಟಾಗುವುದು. ನಾವು ಒಬ್ಬ ವ್ಯಕ್ತಿಯಿಂದ ಆಕರ್ಷಣೆಗೆ ಒಳಗಾಗುತ್ತಿದ್ದೇವೆ ಅಥವಾ ದ್ವೇಷಕ್ಕೆ ಕಾರಣವಾಗುತ್ತಿದ್ದೇವೆ ಅಂದರೆ ಅದು ರಾಶಿ ಚಕ್ರದ ಪ್ರಭಾವವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ನಿಮಗೂ ನಿಮ್ಮ ರಾಶಿ ಚಕ್ರದ ಆಧಾರದ ಮೇಲೆ ಯಾವೆಲ್ಲಾ ಗುಣಗಳಿಗೆ ನೀವು ಜನರಿಗೆ ಇಷ್ಟವಾಗುವ ವ್ಯಕ್ತಿಯಾಗುತ್ತೀರಿ? ಯಾವ ವಿಚಾರಗಳಿಗೆ ನಿಮ್ಮನ್ನು ಜನರು ದ್ವೇಷಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನಿಸುತ್ತಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

  ಮೇಷ: 28 ಮಾರ್ಚ್ -20 ಏಪ್ರಿಲ್

  ಮೇಷ: 28 ಮಾರ್ಚ್ -20 ಏಪ್ರಿಲ್

  ಈ ರಾಶಿಯವರ ಉತ್ಸಾಹ ಪ್ರವೃತ್ತಿಯೇ ಎಲ್ಲರನ್ನು ಆಕರ್ಷಿಸುವಂತೆ ಮಾಡುತ್ತದೆ. ಇವರು ಸದಾ ತಮ್ಮದೇ ಆದ ಧನಾತ್ಮಕ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಎಂತಹ ಕಠಿಣ ಸ್ಥಿತಿ ಎದುರಾದರು ಅದರಲ್ಲಿ ಅವರು ಬದಲಾವಣೆಯನ್ನು ತರುವುದಿಲ್ಲ. ಇವರು ಜನರನ್ನು ಸದಾ ಲವಲವಿಕೆಯ ಸ್ಥಿತಿಯಲ್ಲಿ ಇರುವಂತೆ ಮಾಡುತ್ತಾರೆ. ಎಲ್ಲಾ ವಿಚಾರದಲ್ಲೂ ಇವರು ಶೇ.100ರಷ್ಟು ಪ್ರಮಾಣದಲ್ಲಿ ತಲ್ಲೀನರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಗತ್ಯ ಇದ್ದಾಗ ತಮ್ಮನ್ನು ತಾವು ಸ್ವಯಂ ಸೇವಕರಾಗಿಯೂ ಸಹ ಕೆಲಸ ನಿರ್ವಹಿಸಲು ಸಿದ್ಧರಾಗಿರುತ್ತಾರೆ.

  ವೃಷಭ: 21 ಏಪ್ರಿಲ್ -21 ಮೇ

  ವೃಷಭ: 21 ಏಪ್ರಿಲ್ -21 ಮೇ

  ಈ ರಾಶಿಯವರು ಅಗತ್ಯವಿರುವಾಗ ಇತರರೊಂದಿಗೆ ಸಹಾಯ ಪಡೆಯಲು ಹಾಗೂ ಇತರರಿಗೆ ಸಹಾಯದ ಅಗತ್ಯವಿದ್ದಾಗ ಸಹಾಯ ಮಾಡಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಅಲ್ಲದೆ ಬಹುತೇಕ ಸಂದರ್ಭದಲ್ಲಿ ಸನ್ನಿವೇಶಗಳನ್ನು ಪ್ರೌಢ ರೀತಿಯಲ್ಲಿ ನಿಭಾಯಿಸುತ್ತಾರೆ. ಈ ಕಾರಣಕ್ಕೆ ಜನರು ಇವರನ್ನು ಮೆಚ್ಚಿಕೊಳ್ಳುತ್ತಾರೆ. ಇನ್ನು ಇವರು ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ.

  ಮಿಥುನ: ಮೇ 21 ಜೂನ್ 20

  ಮಿಥುನ: ಮೇ 21 ಜೂನ್ 20

  ಈ ರಾಶಿಯಲ್ಲಿ ಸಂದರ್ಭಗಳಿಗೆ ಅನುಸಾರವಾಗಿ ವಿನೋಧವನ್ನು ಕಂಡುಕೊಳ್ಳುತ್ತಾರೆ. ಇವರ ಉತ್ಸಾಹ ಭರಿತ ವ್ಯಕ್ತಿತ್ವ ಮತ್ತು ಹೆಚ್ಚಿನ ಶಕ್ತಿಯ ಮಟ್ಟಕ್ಕೆ ಆಕರ್ಷಿಸಲ್ಪಡುತ್ತಾರೆ. ಇವರು ಎಲ್ಲರನ್ನೂ ಸಮಾನರಾಗಿ ಸ್ವೀಕರಿಸುವುದು, ಎಲ್ಲರೊಂದಿಗೂ ನಗು ಮುಖದಿಂದ ವರ್ತಿಸುವ ಗುಣವನ್ನು ಜನರು ಇಷ್ಟಪಡುತ್ತಾರೆ. ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ.

  ಕರ್ಕ: ಜೂನ್ 21-ಜುಲೈ 22

  ಕರ್ಕ: ಜೂನ್ 21-ಜುಲೈ 22

  ಈ ವ್ಯಕ್ತಿಗಳು ಯಾವಾಗಲೂ ತಮ್ಮ ಆರಾಮದಾಯಕ ಸ್ವಭಾವ ಹಾಗೂ ತೀರ್ಪಿನ ಗುಣವನ್ನು ಹೊಂದಿದ್ದಾರೆ. ಇವರ ಈ ಗುಣಗಳು ಜನರಿಗೆ ಬಹಳ ಸ್ಪಷ್ಟವಾಗಿ ಹಾಗೂ ನೈಜ ಸ್ಥಿತಿಯನ್ನು ಹೇಗೆ ಉತ್ತಮಗೊಳಿಸುವುದು ಎನ್ನುವುದನ್ನು ಇವರು ಸುಂದರವಾಗಿ ತಿಳಿದಿರುತ್ತಾರೆ. ಇವರ ಈ ಗುಣವನ್ನು ಜನರು ಅತಿಯಾಗಿ ಇಷ್ಟಪಡುತ್ತಾರೆ. ಇವರು ಹೊಸ ಹೊಸ ಯೋಜನೆ ಕೈಗೊಳ್ಳುವ ಮೊದಲು ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಲುಕ್ ಬದಲಾದರೆ ಲಕ್ ಸಹ ಬದಲಾಗುತ್ತದೆ. ಯಶಸ್ಸು ಸಹ ಸಿಕ್ಕುತ್ತದೆ ಎಂದು ಹೇಳುತ್ತದೆ ರಾಶಿ ಭವಿಷ್ಯ. ಇನ್ನು ಈ ರಾಶಿಯವರು ಕರಣಾಮಯಿಗಳು, ಕಲಾತ್ಮಕತೆ ಹಾಗೂ ರಕ್ಷಣಾತ್ಮಕವಾಗಿರುವ ವ್ಯಕ್ತಿಗಳಾಗಿರುತ್ತಾರೆ.

  ಸಿಂಹ: ಜುಲೈ 23-ಆಗಸ್ಟ್ 23

  ಸಿಂಹ: ಜುಲೈ 23-ಆಗಸ್ಟ್ 23

  ಇವರು ತಮ್ಮ ಜೀವನ ಎನ್ನುವುದು ಬೆರಳ ತುದಿಯಲ್ಲಿದೆ ಎಂದು ಭಾವಿಸುತ್ತಾರೆ. ಇವರು ನಿರ್ಭೀತರಾಗಿರಲು ಇಷ್ಟಪಡುತ್ತಾರೆ. ಇವರು ಪ್ರತಿದಿನವನ್ನು ಸಂಪೂರ್ಣವಾಗಿ ಆನಂದಿಸಲು ಅಥವಾ ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರ ಈ ಉತ್ಸಾಹದ ಗುಣ ಹಾಗೂ ಎಲ್ಲರೊಂದಿಗೂ ಬೆರೆಯುವ ಗುಣವನ್ನು ಜನರು ಇಷ್ಟಪಡುತ್ತಾರೆ. ಇನ್ನು ಜನರ ನಡುವೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಿಕೆ ಇವರಿಗೆ ಜನ್ಮಜಾತವಾಗಿ ಬಂದಿರುತ್ತದೆ. ಇದನ್ನು ಬಳಸಿಕೊಂಡರೆ ಸಾಕು ಇವರು ಯಶಸ್ಸು ಗಳಿಸಬಹುದು. ಅಲ್ಲದೆ ಅಧಿಕಾರ ಹಾಗೂ ನಾಯಕತ್ವದ ನಿಜವಾದ ಅಭಿಲಾಷೆ ಇವರಲ್ಲಿ ಇರುತ್ತದೆ. ಇವರು ತುಂಬಾ ಆತ್ಮವಿಶ್ವಾಸ, ಆಶಾವಾದಿ, ವರ್ಚಸ್ವಿ ಮತ್ತು ಹುಟ್ಟು ಮನೋರಂಜಕರಾಗಿರುತ್ತಾರೆ.

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ಇವರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಇವರು ಕೆಲವು ಕಠಿಣ ಸಮಯದಲ್ಲೂ ಅಗತ್ಯವಿದ್ದಾಗ ಜನರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಇವರನ್ನು ಜನರು ಕೆಲವು ಹಾಸ್ಯದ ಅರ್ಥದಲ್ಲೂ ಇಷ್ಟಪಡುತ್ತಾರೆ. ಇವರಲ್ಲಿ ಇರುವ ಕೆಲವು ಕರುಣಾ ಭಾವವು ಇತರರನ್ನು ಆಕರ್ಷಿಸುತ್ತದೆ. ಕನ್ಯಾ ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಲ್ಲದೆ ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ಇವರು ಎಲ್ಲರ ಬಗ್ಗೆಯೂ ಸಮಾನವಾಗಿ ಚಿಂತಿಸುತ್ತಾರೆ. ಇವರ ಉಪಸ್ಥಿತಿಯು ಇತರರು ಇಷ್ಟಪಡುತ್ತಾರೆ. ಇವರು ಇತರರ ಬಗ್ಗೆ ಉತ್ತಮ ಮಾಹಿತಿ ಹಾಗೂ ಅವರನ್ನು ತಿಳಿದುಕೊಳ್ಳುವುದು, ಅವರ ವಿಶೇಷ ದಿನಗಳನ್ನು ನೆನಪಿಸಿ ಶುಭಕೋರುವ ಕೆಲಸವನ್ನು ಮಾಡುತ್ತಾರೆ. ಕೆಲವು ವಿಶೇಷ ಸಂದರ್ಭದಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಾಗೂ ಬಂಧುಮಿತ್ರರಿಗೆ ಉಡುಗೊರೆಯನ್ನು ನೀಡುವುದರ ಮೂಲಕ ಬಹಳ ಪ್ರೀತಿಪಾತ್ರರಾಗಿರುತ್ತಾರೆ. ಇವರು ಕೆಲಸದ ಮೇಲೆ ನಿಗಾವಹಿಸಬೇಕು ಮತ್ತು ಕೆಲಸದ ನಡುವೆ ವಿಶ್ರಾಂತಿಯನ್ನು ಸಹ ಪಡೆಯಬೇಕಾಗುತ್ತದೆ. ವಿಶ್ರಾಂತಿಗಳು ಇವರ ಗಮನವನ್ನು ಗುರಿಯೆಡೆಗೆ ಕೇಂದ್ರೀಕರಿಸಲು ನೆರವಾಗುತ್ತದೆ ಮತ್ತು ಯಶಸ್ಸನ್ನು ಸಹ ನೀಡುತ್ತದೆ. ಒತ್ತಡ ರಹಿತವಾಗಿ ಕೆಲಸ ಮಾಡಿ ಯಶಸ್ಸು ಪಡೆಯಿರಿ. ಈ ರಾಶಿಯವರು ರಾಜತಾಂತ್ರಿಕ ಮತ್ತು ಸ್ನೇಹಪರರಾಗಿರುತ್ತಾರೆ.

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ಇವರು ತಮ್ಮ ಜೀವನವನ್ನು ಬಹಳ ನಿಖರತೆಯಲ್ಲಿ ನಿರ್ವಹಿಸುತ್ತಾರೆ. ಇವರು ಯಾವುದೇ ಸಾಹಸ ಕ್ರಿಯೆಗಳಿಗೆ ಅಥವಾ ಸಂತೋಷದ ಕ್ಷಣಗಳನ್ನು ಆನಂದಿಸಲು ಹೆದರುವುದಿಲ್ಲ. ಜೀವನದಲ್ಲಿ ಅವಕಾಶಗಳನ್ನು ಎದುರಿಸುವ ಪರಿಗೆ ಯಾವುದೇ ಹಿಂಜರಿಕೆ ತೋರುವುದಿಲ್ಲ. ಈ ಗುಣವನ್ನು ಜನರು ಹೆಚ್ಚು ಮೆಚ್ಚಿಗೆ ವ್ಯಕ್ತಪಡಿಸುತ್ತಾರೆ. ಸಂಪನ್ಮೂಲ, ವಿಶ್ಲೇಷಾತ್ಮಕ ಹಾಗೂ ಅರ್ಥಗರ್ಭಿತ ಸ್ವಭಾವದವರು ಇವರಾಗಿರುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ.

  ಧನು: 23 ನವೆಂಬರ್ -22 ಡಿಸೆಂಬರ್

  ಧನು: 23 ನವೆಂಬರ್ -22 ಡಿಸೆಂಬರ್

  ಇವರು ತಮ್ಮ ಕೊನೆಯ ಘಳಿಗೆಯವರೆಗೂ ತಾವು ಬಯಸಿದಂತೆಯೇ ಬದುಕುತ್ತಾರೆ. ಇವರು ಸಾಸ ಕ್ರೀಡೆ ಅಥವಾ ಕೆಲಸಗಳನ್ನು ಮಾಡಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಜೀವನದಲ್ಲಿ ಯಾವುದೇ ಹೊಸತನವನ್ನು ಎದುರಿಸಲು ಹಿಂಜರಿಯುವುದಿಲ್ಲ. ಇವರ ಈ ಗುಣಗಳನ್ನು ಜನರು ಬಹಳ ಇಷ್ಟಪಡುತ್ತಾರೆ.

  ಮಕರ: ಡಿಸೆಂಬರ್ 23-ಜನವರಿ 20

  ಮಕರ: ಡಿಸೆಂಬರ್ 23-ಜನವರಿ 20

  ಇವರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ. ಕೇಳುವವರಿಗೆ ತಮ್ಮಿಂದ ದಯೆಯನ್ನು ತೋರಿಸುತ್ತಾರೆ. ಸಣ್ಣ ಸಣ್ಣ ಸಾಧನೆಗಳಿಗೂ ಜಗತ್ತು ಅತ್ಯುತ್ತಮ ವೇದಿಕೆ ಎನ್ನುವುದನ್ನು ನಂಬುತ್ತಾರೆ ಇವರು. ಇವರಲ್ಲಿರುವ ಕೆಲವು ವಿಶೇಷ ಚಿಂತನೆ ಹಾಗೂ ಸ್ವಭಾವಗಳನ್ನು ಜನರು ಮೆಚ್ಚುತ್ತಾರೆ. ಇವರು ಜನ್ಮತಃ ನಾಯಕರಾಗಿರುತ್ತಾರೆ ಆದರೆ ಇವರು ಯಾವಾಗಲೂ ಇತರರಿಗೆ ಉದಾಹರಣೆಯನ್ನು ನೀಡಲು ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸ್ವಲ್ಪ ಹಿಂದೆ ನಿಂತು ನೋಡುವುದು ಒಳ್ಳೆಯದು. ಯಾವಾಗಲೂ ಮುನ್ನುಗ್ಗಬೇಡಿ. ತಾಳ್ಮೆ ಇರಲಿ. ಇನ್ನು ಈ ರಾಶಿಯವರು ಹಠ, ಜವಾಬ್ದಾರಿ ಹಾಗೂ ರಾಜತಾಂತ್ರಿಕತೆ ಸ್ವಭಾವ ಹೊಂದಿರುತ್ತಾರೆ.

  ಕುಂಭ: ಜನವರಿ 20-ಫೆಬ್ರವರಿ 18

  ಕುಂಭ: ಜನವರಿ 20-ಫೆಬ್ರವರಿ 18

  ಇವರು ಸದಾ ನ್ಯಾಯಯುತವಾದ ಪರಿಹಾರವನ್ನು ಒದಗಿಸಲು ಶ್ರಮಿಸುತ್ತಾರೆ. ಜೀವನ ಎನ್ನುವುದು ಅಷ್ಟು ಸುಲಭ ಅಲ್ಲ ಎನ್ನುವುದು ಅವರ ಭಾವನೆಯಾಗಿರುತ್ತದೆ. ತಮ್ಮ ಸುತ್ತಲೂ ಅನೇಕ ಬದಲಾವಣೆಯನ್ನು ಇವರು ಮಾಡುತ್ತಾರೆ. ಜನರು ಇವರ ಪ್ರಾಮಾಣಿಕತೆಯನ್ನು ಹೆಚ್ಚು ಪ್ರೀತಿಸುತ್ತಾರೆ. ಕುಂಭ ಇವರು ಯಾವಾಗಲು ಪ್ರವಾಸ ಮಾಡುತ್ತಿರುತ್ತಾರೆ. ಇದರಿಂದ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ. ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ. ಇವರು ಮೂಲತಃ ಸಂಶೋಧಕರು ಮತ್ತು ಅಸಂಪ್ರದಾಯಿಕ ಚಿಂತಕರಾಗಿರುತ್ತಾರೆ.

  ಮೀನ: 20 ಫೆಬ್ರವರಿ -20 ಮಾರ್ಚ್

  ಮೀನ: 20 ಫೆಬ್ರವರಿ -20 ಮಾರ್ಚ್

  ಇವರು ಇತರರನ್ನು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇವರು ಕೆಲವು ವಿಚಾರಗಳಿಗೆ ಅರ್ಥಗರ್ಭಿತ ವ್ಯಕ್ತಿಗಳಾಗಿರುತ್ತಾರೆ. ಆ ಕಾರಣಕ್ಕಾಗಿಯೇ ಜನರು ಇವರನ್ನು ಪ್ರೀತಿಸುತ್ತಾರೆ. ಇನ್ನು ಈ ರಾಶಿಯವರು ಒಬ್ಬ ಸ್ವಯಂಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯ ವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯ ಹೆಚ್ಚಿನವರು ಹುತಾತ್ಮರಾಗುತ್ತಾರೆಂದು ಹೇಳಲಾಗುತ್ತದೆ. ಇವರು ತಮ್ಮ ಅಗತ್ಯತೆಯನ್ನು ಬದಿಗಿಟ್ಟು ಇತರರ ಅಗತ್ಯತೆಗಳನ್ನು ಮೊದಲು ಪೂರೈಸುವವರು.

  English summary

  What People Love About You, According To Your Zodiac

  Have you ever wondered as to what makes certain people lovable and famous? Their stars can be a reason as to what makes these individuals famous. If you think people love you the most, then you need to thank your zodiac signs, as the reason can be traced back to the characteristics that are associated with your zodiac sign. Here, we are about to reveal the details of the most loving factors of each zodiac sign. Find out yours.
  Story first published: Wednesday, January 24, 2018, 23:46 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more