For Quick Alerts
ALLOW NOTIFICATIONS  
For Daily Alerts

  ಸೆಕ್ಸ್ ವೇಳೆ ಪುರುಷರು ಸದಾ ನಿಮ್ಮಲ್ಲಿ ಏನನ್ನು ಗಮನಿಸುತ್ತಾರೆ?

  |

  ಸಮಾಗಮ, ಅಥವಾ ಲೈಂಗಿಕ ಕ್ರಿಯೆಯು ನಿಸರ್ಗ ಪ್ರತಿ ಜೀವಿಗೆ ನೀಡಿರುವ ಅತ್ಯಂತ ಸುಂದರ ವ್ಯವಸ್ಥೆಯಾಗಿದ್ದು ಜೋಡಿಯೊಂದು ಪರಸ್ಪರರಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ, ಅದಕ್ಕಿಂತಲೂ ಹೆಚ್ಚಾಗಿ ಆತ್ಮಗಳ ಮಿಲನಕ್ಕೆ ನೀಡಿರುವ ಒದಗಿಸಿರುವ ವ್ಯವಸ್ಥೆಯಾಗಿದೆ. ದಂಪತಿಗಳ ಅತ್ಯಂತ ಖಾಸಗಿ ಮತ್ತು ಆಪ್ತ ಕ್ಷಣವಾದ ಈ ಮಿಲನದ ಸಮಯದಲ್ಲಿ ಇಬ್ಬರ ಮನದಲ್ಲಿಯೂ ಭಿನ್ನವಾದ ಭಾವನೆ ಮೂಡಬಹುದು. ಈ ಸಮಯದಲ್ಲಿ ಇಬ್ಬರೂ ಸಮಾನರಾಗಿ ಪಾತ್ರ ವಹಿಸುವುದು ಅಗತ್ಯವಾಗಿದೆ.

  ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳು ಕೃತಕವಾಗಿ ಈ ಕಾರ್ಯವನ್ನು ಮುಗಿಸಿ ತಮ್ಮ ಸ್ಥಳಕ್ಕೆ ಮರಳುತ್ತಾರೆ. ವಾಸ್ತವದಲ್ಲಿ ಇಬ್ಬರಿಗೂ ತಮ್ಮ ಸಂಗಾತಿಗೆ ಈ ಸಮಯದಲ್ಲಿ ಹೇಳಬೇಕಾಗಿರುವ ಅತ್ಯಂತ ಖಾಸಗಿ ಮಾತುಗಳಿರುತ್ತವೆ, ಬಯಕೆಗಳಿರುತ್ತವೆ. ಆದರೆ ಹೇಳಿದ ಬಳಿಕ ಎಲ್ಲಾದರೂ ಸಂಗಾತಿ ಇದನ್ನು ಇಷ್ಟಪಡದೇ ಹೋದರೆ ಎಂಬ ಯೋಚನೆಯಿಂದ ಇವು ಮನದಲ್ಲಿಯೇ ಉಳಿದು ಬಿಡುತ್ತವೆ. ದಂಪತಿಗಳಲ್ಲಿ, ವಿಶೇಷವಾಗಿ ಪತ್ನಿಯ ಮನದಲ್ಲಿ ಮೂಡುವ ಇಂತಹ ಅತ್ಯಂತ ಸಾಮಾನ್ಯ ಯೋಚನೆಗಳನ್ನು

  ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ದಾಂಪತ್ಯದಲ್ಲಿರುವ ಪ್ರತಿ ಪುರುಷನಿಗೂ ಅನ್ವಯಿಸುತ್ತದೆ. ಹಾಗಾಗಿ ಒಂದು ವೇಳೆ ಈ ವಿಚಾರಗಳನ್ನು ನಿಮ್ಮ ಪತ್ನಿ ನಿಮ್ಮಲ್ಲಿ ಹೇಳಿರದೇ ಇದ್ದರೆ, ಈ ಮೂಲಕ ಅವರು ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ತಿಳಿದುಕೊಳ್ಳಬಹುದು. ಏನೆನ್ನುತ್ತಾರೆ ಇವರು? ಮುಂದೆ ಓದಿ......

  ನಿಮ್ಮಿಂದಾಗುವ ಪ್ರಾರಂಭ

  ನಿಮ್ಮಿಂದಾಗುವ ಪ್ರಾರಂಭ

  ಒಂದು ವೇಳೆ ಎಲ್ಲಾ ಕೆಲಸವನ್ನು ನಾವೇ ಮಾಡುತ್ತಿದ್ದು ನೀವು ಮಾತ್ರ ಸುಮ್ಮನೇ ಕುಳಿತು ನೋಡುತ್ತಿದ್ದು ಮುಂದೇನಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದರೆ, ನಾವು ನಿಮಗೆ ನಮ್ಮಲ್ಲಿ ಯಾವುದೇ ಉತ್ಸುಕತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದುಬಿಡುತ್ತೇವೆ. ಕೊಂಚವಾದರೂ ಉತ್ಸಾಹವನ್ನೇಕೆ ನೀವು ತೋರಬಾರದು? ಕನಿಷ್ಟ ನಮ್ಮ ಉಡುಪುಗಳನ್ನು ಕಳಚಲಾದರೂ ನೆರವು ನೀಡಬಹುದಲ್ಲ? ಅಥವಾ ಇನ್ನೇನಾದರೂ! ಕಡೆಯ ಪಕ್ಷ ಸುಮ್ಮನೇ ಉರುಳಾಡಿಸಿ ಈ ಕ್ಷಣವನ್ನು ಕೊಂಚವಾದರೂ ರಸಮಯವಾಗಿಸಲು ನಮಗೆ ನೆರವಾಗಿ.

  ನಿಮ್ಮ ದೇಹ ಚಲಿಸುವ ಬಗೆ

  ನಿಮ್ಮ ದೇಹ ಚಲಿಸುವ ಬಗೆ

  ಒಂದು ವೇಳೆ ನೀವು ಸೆಟೆದುಕೊಂಡಿದ್ದರೆ ಆ ಕ್ಷಣಕ್ಕೆ ನಮಗೆ ಚಳಕು ಹಿಡಿದಂತಾಗುತ್ತದೆ. ನಿಮ್ಮ ಸ್ವಯಂ ಪ್ರಜ್ಞೆ ಜಾಗೃತಗೊಂಡು ನಿಮ್ಮನ್ನು ವಿಮುಖರಾಗಿಸುತ್ತಿದೆಯೇ ಅಥಾ ಇನ್ನೇನಾದರೂ ತೊಂದರೆ ಎದುರಾಗಿದೆಯೇ ಎಂದು ನಮಗೆ ಆತಂಕವಾಗುತ್ತದೆ. ಬದಲಿಗೆ, ನೀವೇ ಹೆಚ್ಚು ಆತುರಗೊಂಡು ನಮ್ಮಲ್ಲಿ ಉತ್ಸುಕತೆ ತೋರಿದರೆ, ಇದೇ ನಮ್ಮನ್ನೂ ಹೆಚ್ಚು ಪ್ರಚೋದಿಸುತ್ತದೆ. ನಮಗೆ ನಿಮ್ಮ ದೇಹ ನಮ್ಮ ದೇಹವನ್ನು ಹಿತವಾಗಿ ಬಳಸುವುದು ಬೇಕಿದೆ. ನಿಮ್ಮ ಹರವಾದ ಎದೆ ನಮ್ಮ ಎದೆಯನ್ನು ಹಿತವಾಗಿ ಒತ್ತುವ, ನಿಮ್ಮ ತೊಡೆಗಳು ನಮ್ಮ ತೊಡೆಗಳ ನಡುವೆ ಚಲಿಸುವುದನ್ನು ನಾವು ಅನುಭವಿಸಲಿಚ್ಛಿಸುತ್ತೇವೆ. ನಿಮ್ಮ ಇಡಿಯ ದೇಹವನ್ನು ಹೆಚ್ಚು ಹೆಚ್ಚು ಚಲಿಸುವ ಮೂಲಕ ನಾವು ಹೆಚ್ಚು ಹೆಚ್ಚು ಪ್ರಚೋದನೆಗೊಳ್ಳುತ್ತೇವೆ.

  ನಿಮ್ಮ ಕಣ್ಣುಗಳು

  ನಿಮ್ಮ ಕಣ್ಣುಗಳು

  ನಿಮ್ಮ ಕಣ್ಣುಗಳು ನಮ್ಮ ಕಣ್ಣುಗಳ ಆಳವನ್ನು ನಿಟ್ಟಿಸುತ್ತಿವೆಯೇ? ಅಥವಾ ನೀವು ನಮ್ಮ ಹಸಿದೇಹವನ್ನು ಕಣ್ಣುಗಳಿಂದ ಆಸ್ವಾದಿಸುತ್ತಿದ್ದೀರೋ, ಎರಡೂ ನಡೆದೀತು, ಆದರೆ ಒಂದು ವೇಳೆ ನಮ್ಮ ದೇಹವನ್ನು ಬಿಟ್ಟು ನೀವು ಬೇರೆಡೆ ಅಥವಾ ಕೆಳಗೆ ನೋಡುತ್ತಿದ್ದರೆ (ಇದರಲ್ಲಿ ಏನಾದರೂ ಅನುಮಾನವಿದೆಯೇ?) ಅಥವಾ ನಿಮ್ಮ ದೇಹವನ್ನೇ ನೋಡುತ್ತಿದ್ದರೆ (ಆತ್ಮವಿಶ್ವಾಸದ ಕೊರತೆಯೇ?) ಅಥವಾ ಗೋಡೆಯ ಅಥವಾ ಛಾವಣಿಯ ಕಡೆಗೆ ದಿಟ್ಟಿಸುತ್ತಿದ್ದರೆ (ಬೇಸರವಾಗಿದೆಯೇ)? ನಿಮ್ಮ ದೃಷ್ಟಿಯ ಮೂಲಕ ನಾವು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡದಿರಿ. ನೀವು ಈ ಕ್ಷಣ ನಮ್ಮೊಂದಿಗಿದ್ದೀರಿ ಎಂಬುದನ್ನು ನಮ್ಮನ್ನು ನಿಟ್ಟಿಸುವ ಮೂಲಕ ಖಚಿತಪಡಿಸಿ.

  ನಿಮ್ಮ ಉಸಿರು!

  ನಿಮ್ಮ ಉಸಿರು!

  ಇಲ್ಲ, ನಿಮ್ಮ ಉಸಿರಿನ ದುರ್ವಾಸನೆಯ ಬಗ್ಗೆ ನಾವು ಹೇಳುತ್ತಿಲ್ಲ (ಆದರೂ ನಿಮ್ಮಿಂದ ಯಾವುದೇ ದುರ್ವಾಸನೆ ಬರದಿರಲಿ ಎಂದೇ ನಾವು ಬಯಸುತ್ತೇವೆ), ನಾವು ನಿಮ್ಮ ಉಸಿರು ಹೇಗೆ ಸದ್ದು ಮಾಡುತ್ತಿದೆ ಎಂಬುದನ್ನು ಕೇಳ ಬಯಸುತ್ತೇವೆ. ಸಮಾನ್ಯ ಸಮಯ್ಕ್ಕಿಂತಲೂ ಇದು ಈಗ ಹೆಚ್ಚು ದೀರ್ಘವಾಗಿದೆಯೇ? ಅಂತೆಯೇ ನಿಮ್ಮ ಧ್ವನಿ ಕೂಡಾ ಹೆಚ್ಚು ಆಳವಾಗಿದೆಯೇ? ಈ ಲಕ್ಷಣಗಳು ನೀವು ನಮ್ಮಲ್ಲಿ ಅನುರಕ್ತರಾಗಿದ್ದೀರೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಇದಕ್ಕಾಗಿ ನೀವು ಈಗ ತಾನೇ ಐದು ಕಿಮೀ ಓಡಿ ಬಂದಷ್ಟು ಜೋರಾಗಿ ಉಸಿರಾಡಬೇಕಾಗಿಲ್ಲ ಅಥವಾ ಯಾವುದೋ ವಾದ್ಯದ ಮಂದ್ರ ಸ್ತರದ ಸದ್ದನ್ನು ಹೊರಡಿಸಲು ಯತ್ನಿಸಬೇಕಾಗಿಲ್ಲ. ಒಂದು ವೇಳೆ ನಿಮಗೆ ನಮ್ಮಲ್ಲಿ ಆಸಕ್ತಿ ಮೂಡುತ್ತಿದ್ದರೆ ನಮ್ಮಲ್ಲಿ ಅದನ್ನು ಪ್ರಕಟಿಸಿ, ನಿಮ್ಮ ಉಸಿರನ್ನು ನಮ್ಮ ಕುತ್ತಿಗೆ ಅನುಭವಿಸುವಂತೆ ಮಾಡಿ, ಪೋಲಿ ವಿಷಯ ವನ್ನೇನಾದರೂ ನಮ್ಮ ಕಿವಿಯಲ್ಲಿ ಊದಿ ಅಥವಾ ಮುಂದೆ ಸಂಭವಿಸುವುದಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂಬಂತೆ ವರ್ತಿಸಿ. ಒಂದು ವೇಳೆ ನಿಮ್ಮ ಆಸಕ್ತಿ ಉಡುಗಿದರೆ ನಮ್ಮ ಆಸಕ್ತಿಯೂ ಉಡುಗುತ್ತದೆ. ಆದ್ದರಿಂದ ಉದ್ರೇಕಿತನಾಗಿದ್ದೇನೆ ಎಂದು ಪ್ರಕಟಿಸಿಕೊಳ್ಳಲು ಹೆದರದಿರಿ.

   ಅದು ಏನೇ ಆಗಲಿ ನೀವು ಮುಂದುವರೆಯಬಹುದು!

  ಅದು ಏನೇ ಆಗಲಿ ನೀವು ಮುಂದುವರೆಯಬಹುದು!

  ಒಂದು ವೇಳೆ ಈಗತಾನೇ ನೀವು ವ್ಯಾಕ್ಸಿಂಗ್ ಮೂಲಕ ರೋಮರಹಿತರಾಗಿದ್ದರೆ ಅಥವಾ ದುಬಾರಿ ಒಳ ಉಡುಪು ಧರಿಸಿದ್ದರೆ, ಹೀಗೆ ಆಗಿದ್ದರೂ ಆಗದಿದ್ದರೂ ಇದರಿಂದ ವ್ಯತ್ಯಾಸವೇನೂ ಕಾಣಬರುವುದಿಲ್ಲ. ಆದರೆ ಈ ಮೂಲಕ ನಾವು ನಿಮ್ಮನ್ನು ಆಕರ್ಷಿಸಲು ಹೆಚ್ಚಿನ ಪ್ರಯತ್ನ ನಡೆಸಿದ್ದೇವೆ ಹಾಗೂ ನಾವು ಈಗ ಸಿದ್ಧರಿದ್ದೇವೆ ಎಂದು ಇದರ ಅರ್ಧವಾಗಿದೆ. ಇದು ನೀವು ಮುಂದುವರೆಯಬಹುದು ಎಂಬ ಸಂಕೇತವೂ ಆಗಿದೆ.

  English summary

  Things Men ALWAYS Notice About You During Sex

  First off, the things we don’t notice: if your nails are chipping, your elbows are dry, or you have an ingrown hair somewhere along your bikini line. These are details that generally sail right past us. We’re more inclined to notice the big-picture behaviors that sparks flying? Are we turning you on? Are yougenuinely excited to be naked right now? These questions are important to men, and here’s what we look for to find answers.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more