For Quick Alerts
ALLOW NOTIFICATIONS  
For Daily Alerts

ಈ ರಾಶಿಯವರು ಕುಡಿದಾಗ ಹೇಗೆಲ್ಲಾ ವರ್ತಿಸುತ್ತಾರೆ ಗೊತ್ತಾ?

By Sushma Charhra
|

ನೀವು ಯಾವತ್ತಾದ್ರೂ ಯೋಚಿಸಿದ್ದೀರಾ. ನೀವು ಕುಡಿದ ಅಮಲಿನಲ್ಲಿದ್ದಾಗ ಎಂತಹ ವ್ಯಕ್ತಿಗಳಾಗಿರುತ್ತೀರಿ ಎಂಬುದನ್ನು? ಜ್ಯೋತಿಷ್ಯದ ಪ್ರಕಾರ ನಿಮ್ಮ ಕುಡಿದಾಗಿನ ವ್ಯಕ್ತಿತ್ವವನ್ನು ನೀವು ಹುಟ್ಟಿದ ರಾಶಿಗೆ ಹೊಂದಿಸಿ ಹೇಳಬಹುದು. ನಾವಿಲ್ಲಿ ಯಾವ ರಾಶಿಯವರು ಕುಡಿದಾಗ ಅತ್ಯಂತ ಕೆಟ್ಟವರಾಗಿರುತ್ತಾರೆ ಎಂಬುದನ್ನು ಅವರ ರಾಶಿಗೆ ಅನುಗುಣವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವೆ. ನಿಮಗೂ ಕುಡಿಯುವ ಅಭ್ಯಾಸವಿದ್ದು, ಜ್ಯೋತಿಷ್ಯದ ಮೇಲೂ ನಂಬಿಕೆ ಇದ್ದರೆ, ಖಂಡಿತ ಈ ಲೇಖನವನ್ನೊಮ್ಮೆ ಒದಲೇ ಬೇಕು.. ಎಣ್ಣೆ ಸೇವಿಸಿದಾಗ ನೀವು ಎಂತವರಾಗಿರುತ್ತೀರಿ.

ಪ್ರತಿ ರಾಶಿಯವರು ಕುಡಿದಾಗ ಬೇರೆಬೇರೆ ರೀತಿಯಾಗಿ ವರ್ತಿಸುತ್ತಾರೆ. ಅದು ಸ್ವಲ್ಪವೇ ಏರಿಸಿರಲಿ ಅಥವಾ ಹೆಚ್ಚೇ ಆಗಿರಿಲಿ..ಪರಮಾತ್ಮ ಒಳಗೆ ಸೇರಿದಾಗ ಒಬ್ಬೊಬ್ಬರನ್ನು ಒಂದೊಂದು ರೀತಿ ಆಡಿಸುತ್ತಾನೆ. ಆದರೆ ರಾಶಿ ಪ್ರಕಾರ ಅದನ್ನೂ ತಿಳಿಯಬಹುದೆಂಬುದೇ ಆಶ್ಚರ್ಯದ ಸಂಗತಿ. ಹಾಗಾದ್ರೆ ನಿಮ್ಮ ಕೂತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಇಲ್ಲಿದೆ. ಮುಂದೆ ಓದಿ....

ಮೇಷ (ಮಾರ್ಚ್ 21- ಎಪ್ರಿಲ್ 19)

ಮೇಷ (ಮಾರ್ಚ್ 21- ಎಪ್ರಿಲ್ 19)

ಮೇಷ ರಾಶಿಯವರು ಕುಡಿಯಲು ಖುಷಿ ಪಡುತ್ತಾರೆ.ಇವರು ಯಾವ ರೀತಿಯ ವ್ಯಕ್ತಿಗಳೆಂದರೆ ಕುಡಿಯುವುದು ಎಂದರೆ ಇವರಿಗೆ ಬಹಳ ಪ್ರೀತಿ ಅದರಲ್ಲೂ ಯಾರು ಇವರ ಜೊತೆ ಆಪ್ತರಾಗಿರುತ್ತಾರೋ ಅವರ ಜೊತೆ ಕುಡಿಯುವುದು ಎಂದರೆ ಭಾರೀ ಅಚ್ಚುಮೆಚ್ಚು. ಇವರು ಉತ್ಸಾಹಭರಿತರಾಗಿರುತ್ತಾರೆ. ಕುಡಿದಾಗ ಇವರ ಸಂತೋಷ ಇಮ್ಮಡಿಗೊಳ್ಳುತ್ತದೆ.ಇವರು ಕುಡಿದಾಗ ಸಿಕ್ಕಾಪಟ್ಟೆ ನಗುತ್ತಾರೆ, ಅಪ್ಪಿಕೊಳ್ಳುತ್ತಾರೆ, ನಗಿಸುತ್ತಾರೆ ಮತ್ತು ಇವರ ಈ ಪರಿಯ ಸಂತೋಷ ಜೊತೆಗಿದ್ದವರಿಗೂ ಕೂಡ ಸಾಂಕ್ರಾಮಿಕದಂತೆ ಹರಡಿ ಬಿಡುತ್ತೆ.ಒಂದು ವೇಳೆ, ಡ್ರಿಂಕ್ಸ್, ಜೋಕು, ಮತ್ತು ಸಿಕ್ಕಾಪಟ್ಟೆ ಮೋಜಿನ ಸಮಯವನ್ನು ನೀವು ಆಶಿಸುತ್ತಿದ್ದರೆ, ಮೇಷ ರಾಶಿಯವರು ನಿಮ್ಮ ಉತ್ತಮ ಸಂಗಾತಿಗಳಾಗಬಹುದು.

ವೃಷಭ (ಎಪ್ರಿಲ್ 20 –ಮೇ 20)

ವೃಷಭ (ಎಪ್ರಿಲ್ 20 –ಮೇ 20)

ವೃಷಭ ರಾಶಿಯವರು ಕುಡಿದಾಗ ನೃತ್ಯ ಮಾಡ್ತಾರೆ. ಇವರು ಕುಡಿದಾಗ ಪ್ರಪಂಚದ ಇತರೆ ಯಾವುದೇ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇವರಿಗೆ ಕೇವಲ ಸಂತೋಷ ಮುಖ್ಯ ಅಷ್ಟೇ. ಇವರು ಮೊಂಡು ಸ್ವಭಾವದವರಾಗಿದ್ದರೂ ಕೂಡ ಕುಡಿದಾಗ ಯಾವುದೇ ವಿಚಾರವನ್ನೂ ತೆಗಳುವುದಿಲ್ಲ. ಕುಡಿದರೆ ಭಯಾನಕವಾಗಿ ನೃತ್ಯ ಮಾಡುವ ಇವರನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ. ಕುಡಿದು ನೃತ್ಯ ಮಾಡಿ ಎಲ್ಲರಿಗೂ ಮನರಂಜನೆ ನೀಡುತ್ತಾರೆ. ಕುಡಿತ ಮತ್ತು ಇಳಿಯುವವರೆಗೂ ಯಾರೂ ಇವರನ್ನು ಡ್ಯಾನ್ಸ್ ಮಾಡುವುದರಿಂದ ತಪ್ಪಿಸಲು ಸಾಧ್ಯವಿಲ್ಲ. ಆದರೆ ಇವರು ಕುಡಿದಾಗ ಯಾವಾಗಲೂ ಸಮಸ್ಯೆ ತಂದೊಡ್ಡುತ್ತಾರೆ.

ಮಿಥುನ (ಮೇ 21- ಜೂನ್ 20)

ಮಿಥುನ (ಮೇ 21- ಜೂನ್ 20)

ಕುಡಿದಾಗ ಇವರದ್ದು ಗಾನಬಜಾನ. ಅಂದ್ರೆ ಭಯಂಕರ ಹಾಡು ಹೇಳುತ್ತಾರೆ. ಇವರು ಒಂಥರಾ ಕ್ರೇಝಿ ಮನುಷ್ಯರು. ಕುಡಿದಾಗ ಇವರ ಹಾಡು ನಿಲ್ಲುವುದೇ ಇಲ್ಲ. ಒಳಗೆ ಸೇರಿದ ಪರಮಾತ್ಮ ಇವರನ್ನು ಆಡಿಸುವುದೇ ಹಾಡಿನ ಮೂಲಕ. ಒಳ್ಳೆಯ ಸಮಯ ಎಂದರೆ ಇವರಿಗೆ ಭಾರೀ ಇಷ್ಟ .ಕುಡಿದಾಗ ಇವರ ಬಾಯಲ್ಲಿ ಯಾವೆಲ್ಲ ಹಾಡು ಹೇಗೆಲ್ಲ ಬರ್ತದೆ ಹೇಳೋಕಾಗಲ್ಲ.

ಕರ್ಕಾಟಕ(ಜೂನ್ 21 –ಜುಲೈ 22)

ಕರ್ಕಾಟಕ(ಜೂನ್ 21 –ಜುಲೈ 22)

ಕರ್ಕಾಟಕ ರಾಶಿಯವರಿಗೆ ಕುಡಿದಾಗ ಸಿಟ್ಟು ಬರುತ್ತೆ. ಇದನ್ನು ಇವರ ಜೊತೆಗಾರರು ನಿರೀಕ್ಷಿಸಿರುವುದೇ ಇಲ್ಲ. ಯಾವುದೇ ಸಣ್ಣ ವಿಷಯಕ್ಕೆ ದೊಡ್ಡ ಜಗಳವನ್ನೇ ಮಾಡಿ ಬಿಡುತ್ತಾರೆ. ಆದರೆ ನಿರೀಕ್ಷೆಯಂತೆ, ಯಾವಾಗಲೂ ಮಾಡುವಂತೆ, ಅವರ ಅಭಿಪ್ರಾಯಗಳನ್ನ ಮುಕ್ತವಾಗಿ ವ್ಯಕ್ತಪಡಿಸಲು ಅವರು ಹಿಂದೆಮುಂದೆ ನೋಡುವುದಿಲ್ಲ. ಕುಡಿದಾಗ ಇನ್ನಷ್ಟು ಹೆಚ್ಚು ಅಷ್ಟೇ.

ಸಿಂಹ (ಜುಲೈ 23- ಅಗಸ್ಟ್ 23)

ಸಿಂಹ (ಜುಲೈ 23- ಅಗಸ್ಟ್ 23)

ಸಿಂಹ ರಾಶಿಯವರು ಕುಡಿದಾಗ ಕ್ರೇಝಿಯಾಗಿರುತ್ತಾರೆ. ಇವರು ಕುಡಿದಾಗ ಅನಿರೀಕ್ಷಿತವಾಗಿರುವಂತೆ ವರ್ತಿಸುತ್ತಾರೆ. ಮನೆ ಮಹಡಿಯೇ ತೆರೆದುಕೊಳ್ಳುವಂತೆ ಗಳಗಳ ಅಂತ ಅಳಲು ಪ್ರಾರಂಭಿಸಿಬಿಡುತ್ತಾರೆ. ಕ್ರೇಝಿಯಾಗಿರುವ ವ್ಯಸನದ ಅನುಭವ ಸಿಗಬೇಕು ಎಂದರೆ ಈ ರಾಶಿಯವರ ಜೊತೆಗೆ ಕುಡಿಯಲು ತೆರಳಬೇಕು. ಇವರ ವಿಲಕ್ಷಣ ಗುಣಗಳ ದರ್ಶನವಾಗುವುದು ಗ್ಯಾರೆಂಟಿ. ಇವರು ಪ್ರಾಪಂಚಿಕವಾಗಿ ಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ.

ಕನ್ಯಾ(ಅಗಸ್ಟ್ 24- ಸೆಪ್ಟೆಂಬರ್ 23)

ಕನ್ಯಾ(ಅಗಸ್ಟ್ 24- ಸೆಪ್ಟೆಂಬರ್ 23)

ಕನ್ಯಾ ರಾಶಿಯವರು ಕುಡಿಯುವುದನ್ನು ಪ್ರೀತಿಸುತ್ತಾರೆ. ಸಂತೋಷವನ್ನು ಹರಡಲು ಬಯಸುವ ಇವರು ಕುಡಿದಾಗಲೂ ಅದೇ ಮನಸ್ಥಿತಿಯಲ್ಲಿರುತ್ತಾರೆ. ಜಂಟಲ್ ಮೆನ್ ಗಳಂತೆ ವರ್ತಿಸುತ್ತಾರೆ. ಇವರು ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ, ನಿಮ್ಮ ಜೊತೆ ನಗುತ್ತಾರೆ, ಸಂತೋಷವಾಗಿ ಸಮಯ ಕಳೆಯುತ್ತಾರೆ. ಯಾಕಂದರೆ ಇವರ ಹೃದಯದಲ್ಲಿ ಕೇವಲ ಪ್ರೀತಿ ಇದೆ. ಇವರದ್ದು ಕುಡಿದಾಗಲೂ ಪ್ರೀತಿಯನ್ನು ಹರಡಬೇಕು ಎಂಬ ಮನಸ್ಥಿತಿ. ಯಾವ ಮಟ್ಟಕ್ಕೆ ಹೋಗಬಹುದೆಂದರೆ ಅವರ ಸ್ನೇಹಿತರನ್ನೆಲ್ಲ ಕರೆದು ಕುಡಿತಿದೀವಿ ಬನ್ರಪ್ಪಾ ಅಂತ ಹೇಳುವಂತವರು ಇವರು.

ತುಲಾ (ಸೆಪ್ಟೆಂಬರ್ 24- ಅಕ್ಟೋಬರ್ 23)

ತುಲಾ (ಸೆಪ್ಟೆಂಬರ್ 24- ಅಕ್ಟೋಬರ್ 23)

ತುಲಾ ರಾಶಿಯವರು ಕುಡಿದಾಗ ಅಳುತ್ತಾರೆ. ಇವರು ಬಹಳ ಭಾವುಕರಾಗಿದ್ದು, ತಮ್ಮ ಭಾವನೆಗಳನ್ನು ತಮ್ಮ ಬಳಿಯೇ ಬಚ್ಚಿಟ್ಟುಕೊಂಡಿರುತ್ತಾರೆ. ಇವರು ಯಾವಾಗಲೂ ಬೇರೆಯವರಿಗೆ ಸಹಾಯ ಮಾಡುವವರಿರುತ್ತಾರೆ ಆದರೆ ತಮ್ಮಗೆ ಬೇಕಾದ ನೆರವನ್ನು ತಾವೇ ಮರೆತುಬಿಡುತ್ತಾರೆ. ಅವರ ತಲೆಯೊಳಗೆ ಅವರ ಭಾವನೆಗಳು ಯಾವಾಗಲೂ ಅವರನ್ನು ಯಾವಾಗಲೂ ವಿಚಲಿತರನ್ನಾಗಿಸುತ್ತೆ ಮತ್ತು ತಡೆಯಲಾಗದ ನೋವಿಗೆ ಕಾರಣವಾಗುತ್ತೆ. ಅದೇ ಕಾರಣಕ್ಕೆ ಇವರು ಕುಡಿಯುತ್ತಾರೆ. ಹೇಗೆ ಅವರ ಭಾವನೆಗಳನ್ನು ಹೊರ ಹಾಕಬಹುದು ಎಂದು ಯೋಚಿಸಿದರೆ ಅವರಿಗೆ ಸಿಗುವ ಉತ್ತರ ಅಳುವುದು. ಅದು ಕುಡಿದಾಗ ಹೊರಬರುತ್ತೆ. ನಿಮ್ಮ ಹೃದಯವೂ ಆಘಾತದಲ್ಲಿದ್ದರೆ ಖಂಡಿತ ತುಲಾ ರಾಶಿಯವರು ನಿಮಗೆ ಉತ್ತಮ ಕುಡಿಯಲು ಉತ್ತಮ ಕಂಪೆನಿ ನೀಡುತ್ತಾರೆ ಮತ್ತು ನಿಮ್ಮ ಹೃದಯಕ್ಕೂ ಸಮಾಧಾನ ನೀಡುತ್ತಾರೆ.

ವೃಶ್ಚಿಕ ( ಅಕ್ಟೋಬರ್ 24 – ನವೆಂಬರ್ 22)

ವೃಶ್ಚಿಕ ( ಅಕ್ಟೋಬರ್ 24 – ನವೆಂಬರ್ 22)

ವೃಶ್ಚಿಕ ರಾಶಿಯವರು ಕುಡಿದಾರ ಬಡಿದಾಡುತ್ತಾರೆ.,ಕುಡಿದ ಅಮಲಿನಲ್ಲಿ ಇವರು ಬೇರೆಯವರನ್ನು ಚುಚ್ಚುವುದು ಗ್ಯಾರೆಂಟಿ. ಇವರು ತಮ್ಮ ಕುಡಿತವನ್ನು ಒಂದು ಹಂತದವರೆಗೆ ಮಾತ್ರ ತಹಬದಿಯಲ್ಲಿಟ್ಟುಕೊಂಡಿರುತ್ತಾರೆ. ಯಾವಾಗ ಆ ಕಂಟ್ರೋಲ್ ಕಳೆದುಕೊಳ್ಳುತ್ತಾರೋ, ಆಗ ಉದ್ವೇಗಕ್ಕೆ ಒಳಗಾಗುತ್ತಾರೆ. ಯಾರಾದರೂ ಸಣ್ಣದಾಗಿ ಇವರನ್ನು ಕೆರಳಿಸಿದರೂ ಸಾಕು, ಅದು ಹಾದಿತಪ್ಪುವ ಹಂತಕ್ಕೆ ಹೋಗುತ್ತೆ. ಹಾಗಾಗಿ ಇವರ ಜೊತೆ ಪಾರ್ಟಿ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಇವರ ಕೋಪ ಪಾರ್ಟಿಯ ವಾತಾವರಣವನ್ನೇ ಹಾಳು ಮಾಡಿಬಿಡಬಹುದು.

 ಧನು( ನವೆಂಬರ್ 23 –ಡಿಸೆಂಬರ್ 22)

ಧನು( ನವೆಂಬರ್ 23 –ಡಿಸೆಂಬರ್ 22)

ಕುಡಿದಾಗ ಧನು ರಾಶಿಯವರು ತತ್ವಜ್ಞಾನಿಗಳಾಗಿ ಬಿಡುತ್ತಾರೆ. ಇವರೊಳಗೆ ಪರಮಾತ್ಮ ಅದೆಂತಾ ಮಾತುಗಳನ್ನಾಡಿಸುತ್ತಾನೆಂದರೆ ಇವರಷ್ಟು ತಿಳಿದವರು ಬೇರೆ ಯಾರೂ ಇಲ್ಲ ಎಂದುಕೊಳ್ಳಬೇಕು ಅಷ್ಟರ ಮಟ್ಟಿಗೆ ಬೋಧಿಸುತ್ತಾರೆ. ತತ್ವಸಿದ್ಧಾಂತಗಳನ್ನು ಹೇಳಲು ಪ್ರಾರಂಭಿಸಿ ಬಿಡುತ್ತಾರೆ. ಜೀವನದ ಅರ್ಥ ಏನು, ಜೀವನ ಹೇಗಿರಬೇಕು, ಅಬ್ಬ ಜೀವನದ ಬಗ್ಗೆ ಇವರಷ್ಟು ತಿಳಿದವರು, ಅರ್ಥೈಸಿಕೊಂಡವರು ಬೇರೆ ಯಾರೂ ಇರೋದಿಲ್ಲ, ಅಷ್ಟರ ಮಟ್ಟಿಗೆ ಧನು ರಾಶಿಯವರು ಕುಡಿದಾಗ ಒಳ್ಳೆಯವರಾಗಿ ಬಿಡುತ್ತಾರೆ. ಯಾವೆಲ್ಲ ಉಪಾಯ ಮತ್ತು ಶೈಲಿಯನ್ನು ಅಳವಡಿಸಿಕೊಂಡರೆ ಜೀವನ ಸುಖವಾಗಿರುತ್ತೆ ಎಂಬುದೆಲ್ಲ ಇವರಿಗೆ ತಿಳಿದಿರುತ್ತೆ. ..

ಮಕರ (ಡಿಸೆಂಬರ್ 23- ಜನವರಿ 20)

ಮಕರ (ಡಿಸೆಂಬರ್ 23- ಜನವರಿ 20)

ಮಕರ ರಾಶಿಯವರು ಕುಡಿದಾಗ ಪ್ರಬುದ್ಧರು. ಇವರಿಗೆ ತಾವು ಕುಡಿದಿದ್ದೇವೆ ಎಂದರೆ ಹೇಗಿರಬೇಕು ಎಂಬುದು ಗೊತ್ತು. ಅವರ ಕುಡಿತವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದು ಕೂಡ ಇವರಿಗೆ ತಿಳಿದಿರುತ್ತೆ. ತಮ್ಮ ಮಧ್ಯಪಾನವನ್ನು ಹೇಗೆ ಸಂತೋಷದಿಂದ ಸ್ವೀಕರಿಸಬೇಕು ಮತ್ತು ಅದನ್ನು ನಿಭಾಯಿಸಬೇಕು ಎಂಬ ಬಗ್ಗೆ ಇವರು ಚಾಣಾಕ್ಷರು. ಯಾವಾಗಲೂ ಶಾಂತಚಿತ್ತರಾಗಿಯೇ ವರ್ತಿಸುವ ಇವರು ಕುಡಿದಾಗಲೂ ಹಾಗೆಯೇ ಇರುತ್ತಾರೆ. ಹಾಟ್ ಡ್ರಿಂಕ್ಸ್ ಕುಡಿದರೂ ಕೂಲ್ ಆಗಿರುತ್ತಾರೆ ಇವರು.

ಕುಂಭ ( ಜನವರಿ 21- ಫೆಬ್ರವರಿ 18)

ಕುಂಭ ( ಜನವರಿ 21- ಫೆಬ್ರವರಿ 18)

ಪಾರ್ಟಿ ಮಾಡೋದು ಹೇಗೆ ಅನ್ನೋದನ್ನು ಚೆನ್ನಾಗಿ ಅರಿತಿರುವವರು ಕುಂಭ ರಾಶಿಯವರು. ಇವರಿಗೆ ಪಾರ್ಟಿ ಮಾಡುವುದೆಂದರೆ ಬಹಳ ಇಷ್ಟ. ಅತಿಯಾಗಿ ಕುಡಿದಾಗಲಂತೂ ಇವರೊಂದು ಅಧ್ಬುತ ಎಂದೇ ಹೇಳಬಹುದು. ಪಾರ್ಟಿಯನ್ನು ಎಂಜಾಯ್ ಮಾಡುವುದನ್ನು ಇವರನ್ನು ನೋಡಿ ಕಲಿಯಬೇಕು. ಪಾರ್ಟಿಯನ್ನು ಆಕರ್ಷಣೀಯವಾಗಿ ಮಾಡುವ ತಾಕತ್ತು ಇವರಿಗಿದೆ. ಕುಡಿಯುವುದಕ್ಕೆ ನಾಳೆ ಮತ್ತೆ ಬರುವುದಿಲ್ಲವೆಂಬಂತೆ ಇವರು ಕುಡಿಯುತ್ತಾರೆ.

ಮೀನ (ಫೆಬ್ರವರಿ 19 – ಮಾರ್ಚ್ 20)

ಮೀನ (ಫೆಬ್ರವರಿ 19 – ಮಾರ್ಚ್ 20)

ಮೀನ ರಾಶಿಯವರು ಮೀನಿನಂತೆಯೇ ಕುಡಿಯಬಲ್ಲರು ಮತ್ತು ತಮಾಷೆ ಮಾಡಿ ಉತ್ತಮ ಸಮಯ ಕಳೆಯಬಲ್ಲರು. ಅಪಾರವಾಗಿ ಕುಡಿಯುವ ತಾಕತ್ತು ಮೀನರಾಶಿಯವರಿಗಿರುತ್ತೆ. ಗ್ಯಾಲೋನ್ ನಷ್ಟು ಬೇಕಾದರೂ ಇವರು ಏರಿಸಬಲ್ಲರು. ಇವರು ಉತ್ಸಾಹಭರಿತರೂ, ತಮಾಷೆಯ ಸ್ವಭಾವದವರು. ಇವರದ್ದು ಕುಡಿದು ಮುಗಿದ ಕೂಡಲೇ ಆ ಜಾಗದಿಂದ ಸೀದ ಹೊರಟುಬಿಡುತ್ತಾರೆ. ಇವರಲ್ಲಿ ನೀವೆಂತ ಕುಡುಕರು... ?

English summary

What Kind Of A Drunk Are You, Based On Your Zodiac Sign

Have you ever wondered what kind of an individual you are in terms of being an alcoholic? Well, according to astrology, your alcohol addiction can be defined by your zodiac sign. Here, in this article, we are revealing to you details about the zodiac signs which are known to be the worst in terms of being an alcoholic.
X
Desktop Bottom Promotion