Latest Updates
-
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ
ಯಾವ್ಯಾವ ರಾಶಿಗೆ ಯಾವ ತಿಂಗಳು ಹೆಚ್ಚು 'ಲಕ್ಕಿ' ಎಂಬುದನ್ನು ನೋಡಿ

ಕಷ್ಟಗಳು ಎದುರಾದಾಗ ಮಾನಸಿಕವಾಗಿ ಕುಗ್ಗುವುದು ಸಹಜ. ಆದರೆ ಆ ನೋವನಲ್ಲಿ ಜೀವನದ ಬಗ್ಗೆ ಜಿಗುಪ್ಸೆಯನ್ನು ಹೊಂದಬಾರದು. ಸೋಲು ಮತ್ತು ನೋವು ಉಂಟಾದಾಗ ಹೆದರಿ ನಮ್ಮ ಹೆಜ್ಜೆಯನ್ನು ಹಿಂದೆ ತೆಗೆಯಬಾರದು. ಸೋಲು ಉಂಟಾದರೂ ಧೈರ್ಯದಿಂದ ಸಮಸ್ಯೆಯನ್ನು ಎದುರಿಸುತ್ತಾ ಮುಂದೆ ನಡೆದರೆ ಸಾಧನೆಯನ್ನು ಗೈಯಬಹುದು. ಅಲ್ಲದೆ ನಾವು ಕೈಗೊಂಡ ಉತ್ತಮ ನಿರ್ಧಾರ ಹಾಗೂ ಧೈರ್ಯದೆಡೆಗೆ ಇಟ್ಟ ಹೆಜ್ಜೆಯಿಂದ ಇತಿಹಾಸವೂ ರಚನೆಯಾಗಬಹುದು. ಜೀವನದಲ್ಲಿ ಕಷ್ಟಗಳು ಹಾಗೂ ನೋವು ಉಂಟಾಗುವುದು ಸಹಜ. ಸಂತೋಷ ಹಾಗೂ ಸಮೃದ್ಧಿಗಾಗಿ ಸಮಯವನ್ನು ಕಾಯಬೇಕು.

ಪ್ರತಿಯೊಂದು ರಾಶಿಚಕ್ರದವರು ವಿಶೇಷ ಗುಣಲಕ್ಷಣಗಳು ಹಾಗೂ ಅದೃಷ್ಟಗಳನ್ನು ಹೊಂದಿರುತ್ತವೆ. ಗ್ರಹಗತಿಗಳ ಸಂಚಾರ ಹಾಗೂ ನಕ್ಷತ್ರಗಳ ಪ್ರಭಾವವು ವ್ಯಕ್ತಿಗಳ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೂ ಒಂದೊಂದು ಮಾಸವು ವಿಭಿನ್ನ ಬಗೆಯ ಅನುಭವವನ್ನು ನೀಡುತ್ತವೆ. ಜೊತೆಗೆ ಅದೃಷ್ಟವನ್ನು ಕಲ್ಪಿಸುವುದು. ಅಂತಹ ಅದೃಷ್ಟ ನಿಮ್ಮ ಪಾಲಿಗೆ ಯಾವ ತಿಂಗಳಲ್ಲಿ ಒಲಿಯುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ.

ಮೇಷ
ಈ ವರ್ಷದಲ್ಲಿ ಶುಕ್ರನು ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮೇಷ ರಾಶಿಯವರಿಗೆ ಜನವರಿ ತಿಂಗಳು ಅತ್ಯುತ್ತಮ ಅದೃಷ್ಟವನ್ನು ತಂದುಕೊಡುವುದು. ಮಾರ್ಚ್ ಮತ್ತು ವರ್ಷಾಂತ್ಯದ ತಿಂಗಳಲ್ಲಿ ಅತ್ಯುತ್ತಮ ಆಲೋಚನೆಯನ್ನು ಪಡೆದುಕೊಳ್ಳುವಿರಿ. ಡಿಸೆಂಬರ್ ತಿಂಗಳಲ್ಲಿ ಗುರುವಿನ ಸಂಯೋಜನೆ ಹೊಂದುವುದರಿಂದ ಕನಸುಗಳು ನನಸಾಗುವುದು.

ವೃಷಭ
ಈ ವರ್ಷದಲ್ಲಿ ಉಂಟಾಗುವ ಮಂಗಳ ಹಾಗೂ ಬುಧನ ಸಂಚಾರ ಅಥವಾ ಬದಲಾವಣೆಗಳು ವೃಷಭ ರಾಶಿವರ ಮೇಲೆ ಪ್ರಭಾವ ಬೀರುವುದು. ಇದರಿಂದ ಇವರಿಗೆ ಮಾರ್ಚ್ ತಿಂಗಳು ಅತ್ಯುತ್ತಮ ಸಮಯವನ್ನು ನೀಡುವುದು. ಶುಕ್ರನ ಪ್ರಭಾವದಿಂದ ಜೂನ್ ತಿಂಗಳಲ್ಲಿ ಅತ್ಯುತ್ತಮ ರೂಪಾಂತರವನ್ನು ಪಡೆದುಕೊಳ್ಳುವರು.

ಮಿಥುನ
ಏಪ್ರಿಲ್ ತಿಂಗಳಲ್ಲಿ ಮಂಗಳನ ಪ್ರಭಾವವನ್ನು ಅಧಿಕವಾಗಿ ಹೊಂದಿರುವುದರಿಂದ ಹೊಸ ಶಕ್ತಿ ಹಾಗೂ ಚೈತನ್ಯವನ್ನು ಪಡೆದುಕೊಳ್ಳುವಿರಿ. ಮೇ ತಿಂಗಳಲ್ಲಿ ಒಂದಿಷ್ಟು ಸಂತೋಷ ಹಾಗೂ ಅವಕಾಶಗಳು ದೊರೆಯುತ್ತವೆ. ಬುಧನು ಜೂನ್ ತಿಂಗಳಲ್ಲಿ ಪ್ರವೇಶಿಸಿದಾಗ ನಿಮ್ಮ ಕನಸಿನ ಸ್ಥಳಕ್ಕೆ ನೀವು ಪ್ರಯಾಣಿಸಬಹುದು.

ಕರ್ಕ
ಗುರು ಮತ್ತು ಮಕ್ರ್ಯುರಿ ಫೆಬ್ರವರಿ ಮತ್ತು ಜೂನ್ ತಿಂಗಳಲ್ಲಿ ಪ್ರಭಾವ ಬೀರುವುದರಿಂದ ಆಳವಾದ ಭಾವನೆಯನ್ನು ಸಂವಹಿಸಲು ಸಾಧ್ಯವಾಗುವುದು. ಮಂಗಳನ ಪ್ರಭಾವವು ಉತ್ತಮ ಪರಿಣಾಮ ಬೀರುವುದರಿಂದ ಈ ವರ್ಷದ ಜೂನ್ ತಿಂಗಳಲ್ಲಿ ಅತ್ಯುತ್ತಮ ಫಲಗಳನ್ನು ಅನುಭವಿಸುವರು ಎಂದು ಹೇಳಲಾಗುತ್ತದೆ.

ಸಿಂಹ
ಬುಧ, ಮಂಗಳ ಮತ್ತು ಸೂರ್ಯನು ಜೂನ್ ತಿಂಗಳಲ್ಲಿ ಅತ್ಯುತ್ತಮ ಪ್ರಭಾವ ಬೀರುವುದರಿಂದ ಸಿಂಹ ರಾಶಿಯವರಿಗೆ ಜುಲೈ ಮತ್ತು ಆಗಸ್ಟ್ ತಿಂಗಳು ಹೆಚ್ಚಿನ ಪ್ರೇರಣೆ ಹಾಗೂ ಸುದ್ದಿಯನ್ನು ಪಡೆಯಬಹುದು. ಶುಕ್ರನ ಅನುಗ್ರಹದಿಂದ ಆಗಸ್ಟ್ ತಿಂಗಳಲ್ಲಿ ಅತ್ಯುತ್ತಮ ಪ್ರಣಯ ಜೀವನವನ್ನು ಅನುಭವಿಸುವರು. ಜೀವನದಲ್ಲಿ ಹೆಚ್ಚಿನ ಬೆಳಕನ್ನು ಪಡೆಯುವರು.

ಕನ್ಯಾ
ಈ ವರ್ಷದ ಸಪ್ಟೆಂಬರ್ ತಿಂಗಳು ಕನ್ಯಾರಾಶಿಯವರಿಗೆ ಅದೃಷ್ಟವನ್ನು ತರುವುದು. ಮಂಗಳ, ಶುಕ್ರ ಮತ್ತು ಬುಧನ ಪ್ರಭಾವದಿಂದ ಅನೇಕ ವಿಚಾರದಲ್ಲಿ ತೃಪ್ತಿ ಹಾಗೂ ಸಂತೋಷವನ್ನು ಪಡೆದುಕೊಳ್ಳುವರು. ಅಲ್ಲದೆ ಸ್ಥಿರವಾದ ಪ್ರೀತಿಯ ಜೀವನವನ್ನು ಅನುಭವಿಸುವಿರಿ.

ತುಲಾ
ಅತ್ಯುತ್ತಮ ಗ್ರಹಗಳ ಪ್ರಭಾವ ಹಾಗೂ ಸಂಚಾರದಿಂದ ಈ ವರ್ಷದ ಅಕ್ಟೋಬರ್ ತಿಂಗಳು ಇವರಿಗೆ ಅದೃಷ್ಟವನ್ನು ತಂದುಕೊಡುವುದು. ಈ ತಿಂಗಳಲ್ಲಿ ತುಲಾ ರಾಶಿಯವರು ಸಾಕಷ್ಟು ಉತ್ತಮ ಫಲಗಳು ಹಾಗೂ ಅತ್ಯುತ್ತಮ ಕೆಲಸವನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು.

ವೃಶ್ಚಿಕ
ಮಂಗಳ ಗ್ರಹದ ಪ್ರಭಾವದಿಂದ ಇವರು ಈ ವರ್ಷದ ಮೇ ತಿಂಗಳಲ್ಲಿ ಅತ್ಯುತ್ತಮ ಫಲಗಳನ್ನು ಅನುಭವಿಸುವರು. ಗುರುಗ್ರಹದ ಪ್ರಭಾವದಿಂದ ಯಶಸ್ಸನ್ನು ಪಡೆದುಕೊಳ್ಳುವರು. ಶುಕ್ರನ ಪ್ರಭಾವದಿಂದ ನವೆಂಬರ್ ತಿಂಗಳಲ್ಲಿ ಅತ್ಯಂತ ಕಾಮುಕರಂತೆ ವರ್ತಿಸಬಹುದು ಎಂದು ಹೇಳಲಾಗುವುದು.

ಧನು
ಈ ವರ್ಷದ ಜನವರಿ ತಿಂಗಳಲ್ಲಿ ಇವರು ಅತ್ಯುತ್ತಮ ಅದೃಷ್ಟವನ್ನು ಪಡೆಯುವರು. ಜನವರಿಯಲ್ಲಿ ಪಡೆದ ಹೆಸರು ಅದೃಷ್ಟದಿಂದಾಗಿ ವರ್ಷಾಂತ್ಯದ ವರೆಗೂ ಅತ್ಯುತ್ತಮ ಹೆಸರನ್ನು ಪಡೆದುಕೊಳ್ಳುವಿರಿ. ಡಿಸೆಂಬರ್ ತಿಂಗಳಲ್ಲಿ ಪ್ರೀತಿಯ ಹೊಸ ಜೀವನವನ್ನು ಅನುಭವಿಸುವ ಸಾಧ್ಯತೆಗಳಿವೆ.

ಮಕರ
ಈ ವರ್ಷದ ದೊಡ್ಡ ಪ್ರಮಾಣದ ಜೀವನ ಹಾಗೂ ಆಲೋಚನೆಯನ್ನು ಜನವರಿ ತಿಂಗಳಲ್ಲಿ ಅನುಭವಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆದ ಗುರು ಮತ್ತು ಮಂಗಳ ಗ್ರಹದ ಸಂಯೋಜನೆಯಿಂದ ಹೊಸ ಶಕ್ತಿಯನ್ನು ಪಡೆದುಕೊಳ್ಳುವರು. ಅಲ್ಲದೆ ಗಮನ ಕೇಂದ್ರೀಕರಿಸುವ ಶಕ್ತಿಯನ್ನು ಪಡೆದುಕೊಳ್ಳುವರು.

ಕುಂಭ
ಸೂರ್ಯ ಮತ್ತು ಬುಧ ಗ್ರಹದ ಪ್ರಭಾವದಿಂದ ಇವರು ಮಾರ್ಚ್ ತಿಂಗಳಲ್ಲಿ ಉತ್ತಮ ಫಲವನ್ನು ಪಡೆದುಕೊಳ್ಳುವರು. ಎಲ್ಲಾ ವೈಫಲ್ಯಗಳು ಯಶಸ್ಸನ್ನು ಪಡೆದುಕೊಳ್ಳುವುದು. ಹೆಚ್ಚಿನ ವಿಶ್ವಾಸ ಶಕ್ತಿಯನ್ನು ಪಡೆದುಕೊಳ್ಳುವಿರಿ. ಜುಲೈ ತಿಂಗಳಿನಿಂದ ಒಂದಿಷ್ಟು ಯಶಸ್ಸನ್ನು ಪಡೆದುಕೊಳ್ಳಲು ಪ್ರಾರಂಭಿಸುವಿರಿ.

ಮೀನ
ಈ ವರ್ಷದ ಜನವರಿ ತಿಂಗಳಲ್ಲಿ ಇವರಿಗೆ ಪ್ರೀತಿಯ ಜೀವನದಲ್ಲಿ ಪುನರುಜ್ಜೀವನವನ್ನು ಕಂಡುಕೊಳ್ಳುವರು. ಫೆಬ್ರುವರಿಯಲ್ಲಿ ಉಂಟಾದ ಸೂರ್ಯ ಮತ್ತು ಬುಧ ತಮ್ಮ ಸಮೂಹದಲ್ಲಿ ಕಾಣಿಸಿಕೊಳ್ಳುವುದರಿಂದ ಸೃಜನ ಶೀಲತೆಯ ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ. ಜೊತೆಗೆ ಈ ವರ್ಷ ನಿಮ್ಮ ಕನಸುಗಳು ನನಸಾಗುವುದು ಎಂದು ಹೇಳಲಾಗುವುದು.



Click it and Unblock the Notifications











