Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೆಕ್ಸ್ ಬಗೆಗಿನ ಈ ರಹಸ್ಯ ವಿಷಯಗಳು ನಿಮಗೆ ತಿಳಿದಿರಲಿಕ್ಕೆಯೇ ಇಲ್ಲ!!
ಸಂಪ್ರದಾಯಬದ್ಧ ದೇಶವಾಗಿರುವಂತಹ ಭಾರತದಲ್ಲಿ ಸೆಕ್ಸ್ ಬಗ್ಗೆ ಮಾತನಾಡಲು ಹೆಚ್ಚಿನವರು ತುಂಬಾ ಹಿಂಜರಿಯುವರು. ಅದರಲ್ಲೂ ಇದರ ಬಗ್ಗೆ ಮುಕ್ತವಾಗಿ ಮಾತನಾಡಲು ಅಥವಾ ಚರ್ಚೆ ನಡೆಸಲು ಯಾರೂ ಮುಂದಾಗುವುದಿಲ್ಲ. ಈ ಲೇಖನದಲ್ಲಿ ನಿಮಗೆ ಸೆಕ್ಸ್ ಬಗ್ಗೆ ಯಾರೂ ಇದುವರೆಗೆ ಹೇಳದಿರುವ ಕೆಲವೊಂದು ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ. ಅರ್ಧಂಬರ್ಧ ಜ್ಞಾನವು ಯಾವಾಗಲೂ ಹಾನಿಗೆ ಕಾರಣವಾಗುವುದು. ಇದರಿಂದ ಸರಿಯಾಗಿ ತಿಳಿದುಕೊಂಡು ಸಾಗಿದರೆ ಒಳ್ಳೆಯದು. ಈ ವಿಚಾರಗಳು ಯಾವುದು ಎಂದು ತಿಳಿಯಿರಿ.
ಪರಾಕಾಷ್ಠೆ ತಲುಪದೆ ಇದ್ದರೂ ಚಿಂತಿಸಬೇಕಾಗಿಲ್ಲ!
ನೀವು ಪ್ರೀತಿಸುತ್ತಿರುವಂತಹ ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವ ವೇಳೆ ನೀವು ಪರಾಕಾಷ್ಠೆ ತಲುಪುವ ಬಗ್ಗೆ ಹೆಚ್ಚು ಚಿಂತಿತರಾಗಿರುವ ಕಾರಣದಿಂದಾಗಿ ನೀವು ಇದನ್ನು ತಲುಪಲು ಸಾಧ್ಯವಾಗದೆ ಇರಬಹುದು. ನೀವು ಆರಾಮವಾಗಿದ್ದು, ಸೆಕ್ಸ್ ನ್ನು ಆನಂದಿಸಬೇಕು. ಸೆಕ್ಸ್ ಎನ್ನುವುದು ನಿಮ್ಮನ್ನು ನೀವು ಸಂಗಾತಿಗೆ ಸಮರ್ಪಿಸಿಕೊಳ್ಳುವುದು. ಆತ ಮತ್ತು ನೀವು ಸಂತೋಷವನ್ನು ಪಡೆಯುವುದು. ನೀವು ಸರಿಯಾಗಿದ್ದೀರಾ ಅಥವಾ ತಪ್ಪಾಗಿದ್ದೀರಾ ಎನ್ನುವ ಬಗ್ಗೆ ಚಿಂತಿಸಿ, ವಿಶ್ಲೇಷಣೆ ಮಾಡುವಂತಹ ಸಮಯವಲ್ಲ. ನೀವು ಆ ರೀತಿಯಾಗಿ ವರ್ತಿಸಿದರೆ ಆಗ ಸಂಗಾತಿಗೆ ನೀವು ಆರಾಮವಾಗಿಲ್ಲವೆನ್ನುವ ಭಾವನೆ ಮೂಡುವುದು ಮತ್ತು ಆತ ಕೂಡ ನರ್ವಸ್ ಆಗುವನು. ಇದು ನಿಮ್ಮ ಮೊದಲ ಸಲವಾ ಅಲ್ಲವಾ ಎನ್ನುವುದು ಪ್ರಶ್ನೆಯಲ್ಲ. ನೀವು ಆರಾಮವಾಗಿದ್ದುಕೊಂಡು ಆನಂದಿಸಿ.

ಸೆಕ್ಸ್ ವೇಳೆ ಅಳಬಹುದು
ನೀವು ಕೆಲವೊಂದು ಸಲ ತುಂಬಾ ಸುಂದರ, ಭೋಗಾಸಕ್ತ ಮತ್ತು ನೀವು ಅತಿಯಾಗಿ ಪ್ರೀತಿಸುತ್ತಿರುವ ಪುರುಷನ ಜತೆಗೆ ಲೈಂಗಿಕ ಅನುಭವ ಪಡೆಯುತ್ತಿರಬಹುದು. ಇದರ ಮಧ್ಯೆ ನೀವು ಯಾವುದೇ ಕಾರಣವಿಲ್ಲದೆ ಅಳಬಹುದು. ಅಳುವುದು ಯಾಕೆ ಎಂದು ನೀವು ತಿಳಿಯಲು ಪ್ರಯತ್ನಿಸಬಹುದು. ಆದರೆ ಯಾಕೆಂದು ನಿಮಗೆ ತಿಳಿಯಲ್ಲ. ಇದರ ಬಗ್ಗೆ ನಿಮಗೆ ಗೊಂದಲವಾಗಬಹುದು. ಇದು ಹೆಚ್ಚಿನ ಮಹಿಳೆಯರಿಗೆ ಆಗಿದೆ. ಯಾಕೆಂದರೆ ಅವರು ತುಂಬಾ ಸುಂದರವಾಗಿರುವುದನ್ನು ಅನುಭವಿಸಿದ್ದಾರೆ. ಅವರು ಈ ರೀತಿಯ ಅನುಭವ ಪಡೆಯುತ್ತೇವೆಂದು ಆಲೋಚಿಸಿಯೂ ಇರಲಿಕ್ಕಿಲ್ಲ. ಇದರಿಂದ ಅತ್ತು ಬಿಡಿ. ಸರಿಯಾದ ವ್ಯಕ್ತಿ ನಿಮ್ಮನ್ನು ಅರ್ಥ ಮಾಡಿಕೊಳ್ಳುವರು.

ಕೆಲವೊಮ್ಮೆ ಎಡವಟ್ಟು
ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಖಂಡಿತವಾಗಿಯೂ ಹೀಗೆ ಆಗುವುದು ಇದೆ. ಭಂಗಿ ಹೇಗೆ ಬದಲಾಯಿಸುವುದು ಎಂದು ತಿಳಿದಿರಲ್ಲ ಮತ್ತು ಸೆಕ್ಸ್ ವೇಳೆ ಬರುತ್ತಿರುವಂತಹ ಶಬ್ಧದಿಂದ ನಿಮಗೆ ನಾಚಿಗೆಯಾಗಬಹುದು. ನೀವು ನರಳಾಡಲು ಆರಂಭಿಸುವಿರಿ ಮತ್ತು ಈ ರೀತಿಯ ಭಾವನೆ ವಿಶ್ವದಲ್ಲಿ ತನಗೆ ಬೇರೆ ಏನೂ ತಂದುಕೊಡಲಾರದು ಎಂದು ನೀವು ಭಾವಿಸುವಿರಿ. ಆದರೆ ಇದರ ಬಗ್ಗೆ ನೀವು ಹೆಚ್ಚು ಚಿಂತೆ ಮಾಡಬೇಡಿ, ನಕ್ಕುಬಿಡಿ ಸಾಕು. ಯಾಕೆಂದರೆ ಉಳಿದವರಿಗೆ ಇದೇ ಅನುಭವವಾಗಿರುವುದು.

ಕಲೆಗಳು
ಸತ್ಯವು ಎಷ್ಟೇ ಸಲ ಸಾಬೀತಾದರೂ ಕೆಲವೊಂದು ಜನರಿಗೆ ತಮ್ಮ ಕಾರ್ಯದ ಬಳಿಕ ಹಾಸಿಗೆ ಮೇಲೆ ಕಲೆಗಳೂ ಬೇಕು. ಮೊದಲ ಸಲ ಲೈಂಗಿಕ ಕ್ರಿಯೆ ವೇಳೆ ಪ್ರತಿಯೊಬ್ಬರಿಗೂ ರಕ್ತಸ್ರಾವವಾಗಬೇಕೆಂದಿಲ್ಲವೆಂದು ಅರ್ಥ ಮಾಡಿಕೊಳ್ಳಬೇಕು.

ಗಲೀಜಾಗುವುದು
ಲೈಂಗಿಕ ಕ್ರಿಯೆಯೆಂದರೆ ಕೇವಲ ಸುಖ ಪಡೆಯುವುದು ಮಾತ್ರವಲ್ಲ, ಇಲ್ಲಿ ಇಬ್ಬರು ಗಲೀಜು ಕೂಡ ಆಗಬೇಕು. ಇದನ್ನು ನೀವು ಸೆಕ್ಸ್ ಬಳಿಕ ಶುದ್ಧ ಮಾಡಬೇಕು!

ಪ್ರತೀ ಸಲವು ನುಗ್ಗುವಿಕೆಯಲ್ಲ!
ನುಗ್ಗುವಿಕೆ ಮಾತ್ರ ಲೈಂಗಿಕ ಕ್ರಿಯೆ ಎನ್ನುವ ವಿಚಾರವನ್ನು ತಲೆಯಲ್ಲಿಟ್ಟುಕೊಂಡಿರುವವರು ಇದನ್ನು ತೆಗೆಯಬೇಕು. ದೇಹದ ವಿವಿಧ ಭಾಗಗಳೊಂದಿಗೆ ಆಟವಾಡುತ್ತಲೂ ಸಂಗಾತಿಯನ್ನು ತೃಪ್ತಿಪಡಿಸಬಹುದು.

ನರಳಾಟ ಮಾತ್ರವಲ್ಲ...
ಲೈಂಗಿಕ ಕ್ರಿಯೆ ವೇಳೆ ನರಳಾಟ ಮಾತ್ರ ಕಂಡುಬರಲ್ಲ. ಇದರೊಂದಿಗೆ ಇತರ ಕೆಲವು ವಿಚಿತ್ರ ಶಬ್ಧಗಳು ಸ್ವಲ್ಪ ತಮಾಷೆಯನ್ನು ಉಂಟು ಮಾಡಬಹುದು.

ಕೇವಲ ಒಂದು ಭಂಗಿಯಲ್ಲ!
ಭಂಗಿ ಬದಲಾಯಿಸುವುದು ತುಂಬಾ ಎಡವಟ್ಟು ಉಂಟು ಮಾಡಬಹುದು. ಸಿನಿಮಾಗಳಲ್ಲಿ ನೋಡಿರುವುದಕ್ಕಿಂತ ಇದು ಹೆಚ್ಚು ತೊಡಕನ್ನು ಉಂಟು ಮಾಡಬಹುದು. ಮೊಣಕೈಯನ್ನು ಸಂಗಾತಿಯ ಮುಖದ ಮೇಲಿಡುವುದು, ಗೋಡೆಗೆ ತಲೆ ಜಜ್ಜಿ ಹೋಗುವುದರಿಂದ ನಿಮ್ಮ ಸಂತೋಷದ ಕ್ಷಣಕ್ಕೆ ಅಡ್ಡಿಪಡಿಸಬಹುದು.

ಸೆಕ್ಸ್ ಗೂ ವಾಸನೆಯಿದೆ!!!
ಸೆಕ್ಸ್ ವೇಳೆ ಬಿಡುಗಡೆಯಾಗುವಂತಹ ಒಂದು ರೀತಿಯ ಸುವಾಸನೆಯು ಕೆಲವು ಕಾಲ ಗಾಳಿಯಲ್ಲಿ ಇರುವುದು. ಇದು ಕೆಟ್ಟ ವಾಸನೆಯಲ್ಲ. ಆದರೆ ಈ ಸುವಾಸನೆಯಿಂದ ಕೋಣೆಯಲ್ಲಿ ಯಾರಾದರೂ ಲೈಂಗಿಕ ಕ್ರಿಯೆ ನಡೆಸಿದ್ದಾರೆಯಾ ಅಥವಾ ಇಲ್ಲವಾ ಎಂದು ಹೇಳಬಹುದು. ನೀವು ಇದನ್ನು ಪತ್ತೆ ಮಾಡಲು ಪ್ರಯತ್ನಿಸಿ.

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮುಖ್ಯ!
ಲೈಂಗಿಕ ಕ್ರಿಯೆ ಬಳಿಕ ಕೆಲವೊಂದು ಬೇಡದ ಬ್ಯಾಕ್ಟೀರಿಯಾಗಳು ಮಹಿಳೆಯ ಗರ್ಭಕಂಠದೊಳಗೆ ಬರುವುದು. ಇದನ್ನು ಹೊರಹಾಕಬೇಕಾದರೆ ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಬೇಕು. ಇದರಿಂದ ಲೈಂಗಿಕ ಕ್ರಿಯೆ ಬಳಿಕ ಹೆಚ್ಚಿನ ಮಹಿಳೆಯರು ಮೂತ್ರ ವಿಸರ್ಜನೆಯನ್ನು ಕಡ್ಡಾಯವಾಗಿ ಮಾಡುವರು.

ತುಂಬಾ ತಮಾಷೆಯ ಮುಖಭಾವಗಳು
ಲೈಂಗಿಕ ಕ್ರಿಯೆ ವೇಳೆ ನಿಮ್ಮ ಸಂಗಾತಿಯ ಮುಖಭಾವವನ್ನು ನೋಡಿದರೆ ಆಗ ಕೆಲವೊಂದು ತಮಾಷೆಯ ಮುಖಭಾವ ಕಾಣಸಿಗುವುದು. ಇದರಿಂದ ಕೆಲವರಿಗೆ ನಿರಾಶೆಯಾಗಬಹುದು. ಇದರಿಂದ ಕತ್ತಲಿನ ಮೊರೆ ಹೋಗಿ.
ಇಂತಹ ಲೇಖನಗಳು ನಿಮಗೆ ಇಷ್ಟವೇ? ಹಾಗಾದರೆ ಇದೇ ಸೆಕ್ಷನ್ ನಲ್ಲಿ ಹುಡುಕುತ್ತಲಿರಿ.



Click it and Unblock the Notifications
