ರಾಶಿಚಕ್ರದ ಪ್ರಕಾರ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಪದದ ಅರ್ಥ

By Divya Pandit

ಯಾರಾದರೂ "ನಾನು ನಿನ್ನನ್ನು ಇಷ್ಟಪಡುತ್ತೇನೆ" ಎಂದು ಹೇಳಿದಾಗ ಅದೊಂದು ಬಗೆಯ ಸಂತೋಷ ಅಥವಾ ಖುಷಿ ನಮ್ಮ ಮನಸ್ಸಿಗೆ ಆಗುತ್ತದೆ. ಅದರಲ್ಲೂ ನಮ್ಮ ಸಂಗಾತಿ ಅಥವಾ ನಾವು ಇಷ್ಟ ಪಡುವ ವ್ಯಕ್ತಿ ಈ ಶಬ್ದಗಳನ್ನು ಹೇಳಿದರೆ ಆಗ ಉಂಟಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆ ಖುಷಿಯಲ್ಲಿ ಅವರಿಗೆ ಏನು ಬೇಕೋ ಅದನ್ನೆಲ್ಲಾ ಮಾಡಿಕೊಡುತ್ತೇವೆ.

What Each Zodiac Means By - I Love You?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಈ ಶಬ್ದಗಳನ್ನು ಹೇಳುವಾಗ ಕೆಲವು ಪ್ರಮುಖ ಉದ್ದೇಶಗಳಿರುತ್ತವೆ. ಸನ್ನಿವೇಶಗಳಿಗೆ ತಕ್ಕಂತೆ ಅವರು ಆ ಶಬ್ದಗಳನ್ನು ಹೇಳುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ನೀವು ನಿಮ್ಮವರು ಈ ಶಬ್ದಗಳನ್ನು ಹೇಳುತ್ತಿದ್ದಾರೆ ಎಂದರೆ ಮೊದಲು ಈ ಚಿಂತನೆಗಳನ್ನು ಮಾಡಬೇಕಾಗುವುದು. ಹಾಗಾದರೆ ಆ ಚಿಂತನೆಗಳು ಏನು? ಅವರು ಏಕೆ ಈ ಶಬ್ದಗಳನ್ನು ಹೇಳುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯವರು ನೇರ ಮನಸ್ಸಿನವರು. ಅವರು ಪ್ರತಿಯೊಂದನ್ನು ಅರ್ಥಗರ್ಭಿತವಾಗಿ ಯೋಚಿಸುತ್ತಾರೆ. ನಿರ್ಧಾರ ಕೈಗೊಳ್ಳಲು ಸ್ವಲ್ಪ ಸಮಯ ಕೈಗೊಳ್ಳಬಹುದು. ನಿಜವಾದ ಪ್ರೀತಿಗೆ ಪ್ರಾಣವನ್ನು ಕೊಡಬಲ್ಲವರು. ಒಮ್ಮೆ ಇವರು ಬದ್ಧತೆಗೆ ಒಳಗಾದರೆ ಏನುಬೇಕಾದರೂ ನಿರ್ವಹಿಸಬಲ್ಲರು. ಇವರ ವ್ಯಕ್ತಿತ್ವ ಹಾಗೂ ಪ್ರವೃತ್ತಿಯು ನೈಸರ್ಗಿಕದತ್ತವಾಗಿರುತ್ತದೆ. "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರಿಗೆ ನೀವು ಎಲ್ಲವೂ ಆಗಿರುತ್ತದೆ ಎಂದರ್ಥ.

ವೃಷಭ

ವೃಷಭ

ಇವರು ಸಂಬಂಧಗಳಿಗೆ ವಿಶೇಷ ಸ್ಥಾನವನ್ನು ನೀಡುತ್ತಾರೆ. ಒಮ್ಮೆ ಇವರು ಯಾರಿಗಾದರೂ ಮನಸ್ಸನ್ನು ಕೊಟ್ಟರೆ ಅವರೊಂದಿಗೆ ಬದ್ಧರಾಗಿರುತ್ತಾರೆ. ಸಂಬಂಧವನ್ನು ಶಾಶ್ವತವಾಗಿ ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ಈ ರಾಶಿಯವರು ಯಾರಿಗಾದರೂ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರ ಮೆಚ್ಚಿನ ವ್ಯಕ್ತಿಗಳ ಪಟ್ಟಿಯಲ್ಲಿ ನೀವು ಒಬ್ಬರಾಗಿರುತ್ತೀರಿ.

ಮಿಥುನ

ಮಿಥುನ

ಇವರು ಹೆಚ್ಚು ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ. ಆದರೂ ತಮ್ಮ ವೈಯಕ್ತಿಕ ವಿಚಾರಗಳಲ್ಲಿ ಇವರು ಎಲ್ಲವನ್ನು ಹಂಚಿಕೊಳ್ಳುವುದಿಲ್ಲ. ಅನೇಕ ಬಾರಿ ತಮ್ಮ ಭಾವನೆಗಳನ್ನು ತೆರೆದುಕೊಳ್ಳುವುದಿಲ್ಲ. ಹಾಗೊಮ್ಮೆ ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರ ಮನಸ್ಸಿಗೆ ನೀವು ಹತ್ತಿರವಾದ ವ್ಯಕ್ತಿಗಳಾಗಿರುತ್ತೀರಿ. ಅಲ್ಲದೆ ಅವರು ಬಹಳ ಹಿರಿಮೆಯನ್ನು ಹೊಂದಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಕರ್ಕ

ಕರ್ಕ

ಈ ವ್ಯಕ್ತಿಗಳು ಹೊರನೋಟಕ್ಕೆ ಬಹಳ ಚೇಷ್ಟೆಯ ವ್ಯಕ್ತಿಗಳಂತೆ ಕಂಡುಬರುತ್ತಾರೆ. ಆದರೆ ಒಳ ನೋಟದಲ್ಲಿ ಇವರು ಬಹಳ ಶಿಸ್ತು ಬದ್ಧರಾಗಿರುತ್ತಾರೆ. ಇವರು ಆಂತರ್ಯದಲ್ಲಿ ಬಹಳ ಭಾವನಾತ್ಮಕ ಜೀವಿಗಳು. ಇವರ ಹೃದಯದಲ್ಲಿ ಬಲವಾದ ಮತ್ತು ಆಳವಾದ ಬಂಧಗಳು ಇರುತ್ತವೆ. ಕೆಲವೊಮ್ಮೆ ಇದು ಅಗಾಧವಾಗಬಹುದು. ಹಾಗೊಮ್ಮೆ ಇವರು ನಿಮಗೆ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರು ನಿಮ್ಮ ಬಗ್ಗೆ ಭಾವೋದ್ರಿಕ್ತರಾಗಿದ್ದಾರೆ ಹಾಗೂ ನಿಮ್ಮೊಂದಿಗೆ ಇಡೀ ಜೀವನವನ್ನು ಕಳೆಯಲು ಸಿದ್ಧರಾಗಿದ್ದಾರೆ ಎಂದು ತಿಳಿಯಬಹುದು.

ಸಿಂಹ

ಸಿಂಹ

ಇವರ ಹೃದಯವು ಕಠಿಣ ಹಾಗೂ ಪ್ರಶಂಸನೀಯ ಎಂದರೆ ತಪ್ಪಾಗಲಾರದು. ಇವರು ಸಾಮಾನ್ಯವಾಗಿ ಎಲ್ಲರನ್ನೂ ಇಷ್ಟಪಡುತ್ತಾರೆ. ಎಲ್ಲರೊಂದಿಗೂ ಬೆರೆಯಲು ಬಯಸುತ್ತಾರೆ. ಇವರು ಯಾರಿಗಾದರೂ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದರ್ಥ.

ಕನ್ಯಾ

ಕನ್ಯಾ

ಇವರು ಬಹಳ ಸುರಕ್ಷಿತ ಹಾಗೂ ಆರಾಮದಾಯಕ ಜೀವನವನ್ನು ಬಯಸುತ್ತಾರೆ. ಇವರು ಸದಾ ಜಾಗರೂಕರಾಗಿರುತ್ತಾರೆ. ಇತರರ ಬಗ್ಗೆ ಹೆಚ್ಚು ಕಾಳಜಿವಹಿಸುವವರಂತೆ ತೋರುತ್ತಾರೆ. ಇವರು ಯಾರಿಗಾದರೂ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಸಂಬಂಧಕ್ಕೆ ಬದ್ಧರಾಗಿದ್ದಾರೆ ಎಂದರ್ಥ. ಎದುರು ನೋಡುವ ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಬಯಸುವರು. ಅಲ್ಲದೆ ಸಂಬಂಧವು ದೀರ್ಘಾವಧಿಯವರೆಗೆ ಇರಬೇಕೆಂದು ಬಯಸುತ್ತಾರೆ.

ತುಲಾ

ತುಲಾ

ಇವರು ಇತರರ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಇವರ ಸಮಸ್ಯೆ ಎಂದರೆ ತಮ್ಮ ಭಾವನೆಗಳಿಗೆ ತಮ್ಮದೇ ಆದ ಗೋಡೆಯನ್ನು ನಿರ್ಮಿಸಿಕೊಂಡಿರುತ್ತಾರೆ. ಸಂಬಂಧಗಳಲ್ಲಿ ಪ್ರೀತಿ ಸದಾ ಕಾಲ ಮುಂದುವರಿಯುವಂತೆ ನೋಡಿಕೊಳ್ಳುವರು. ಇವರು ಅತ್ಯಂತ ಪ್ರಾಮಾಣಿಕ ಹಾಗೂ ಕಾಳಜೀಪರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರು ನಿಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರ ಜೀವನಕ್ಕೆ ನೀವು ಬೇಕಾಗಿದೆ ಎಂದು ತಿಳಿದುಕೊಂಡಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಸದಾ ಎಲ್ಲವನ್ನು ಸ್ಪರ್ಧಾತ್ಮಕ ಮನೋಭಾವದಿಂದಲೇ ನೋಡುತ್ತಾರೆ. ಸಂಬಂಧಗಳಲ್ಲಿ ಇರುವಾಗ ಇವರು ಕುಂಡಿಯಂತೆ ಇರಬೇಕು ಎಂದು ಬಯಸುತ್ತಾರೆ. ಪ್ರೀತಿಯನ್ನು ಸದಾಕಾಲ ಉಳಿಸಿಕೊಳ್ಳಲು ಪ್ರಯತ್ನಿಸುವರು. ಇವರು ಪ್ರೀತಿಯನ್ನು ಯಾರಿಗಾಗಿಯೂ ಪ್ರದರ್ಶನ ಮಾಡಲು ಬಯಸುವುದಿಲ್ಲ. ಯಾರಿಗಾದರೂ ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಆ ವ್ಯಕ್ತಿಯ ಬಗ್ಗೆ ಆಳವಾದ ನಂಬಿಕೆ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ ಎಂದರ್ಥ.

ಧನು

ಧನು

ಇವರು ಸಾಮಾನ್ಯವಾಗಿ ಸ್ವಾತಂತ್ರ್ಯವನ್ನು ಹೆಚ್ಚು ಇಷ್ಟಪಡುವರು. ಇವರು ಸ್ವಭಾವತಃ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಬಲು ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ. ಅವರ ಅವಿರತ ಶ್ರಮದ ಪರಿಣಾಮದಿಂದ ಇವರು ಪ್ರೀತಿಯ ಜೀವನವನ್ನು ಬಯಸುತ್ತಾರೆ. ಇವರು ಸಂಬಂಧವನ್ನು ಬಹಳ ಕಾಲದವರೆಗೆ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಮಕರ

ಮಕರ

ಇವರು ಮಹತ್ವಾಕಾಂಕ್ಷಿಗಳು ಹಾಗೂ ವೃತ್ತಿ ಪ್ರಜ್ಞಾಪೂರ್ವಕ ವ್ಯಕ್ತಿಗಳು. ಯಶಸ್ಸು ಎನ್ನುವುದು ಇವರಿಗೆ ಬಹಳಷ್ಟು ತಂದುಕೊಟ್ಟಿರುತ್ತದೆ. ಇವರ ಗುರಿಗೆ ಅಡ್ಡವಾದ ವಿಚಾರದ ಬಗ್ಗೆ ಬಹು ಬೇಗ ಕಿರಿಕಿರಿಗೆ ಒಳಗಾಗುತ್ತಾರೆ. ಯಾರಿಗಾದರೂ ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಇವರ ವೃತ್ತಿಯಷ್ಟೇ ಮುಖ್ಯವೆಂದು ಅವರನ್ನು ಪರಿಗಣಿಸಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಕುಂಭ

ಕುಂಭ

ಇವರು ಸಂಬಂಧಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ಏಕಾಂತವಾಗಿ ಇರಲು ಬಯಸುತ್ತಾರೆ ಆದರೂ ಸಂಬಂಧಗಳ ವಿಚಾರದಲ್ಲಿ ಗಂಭೀರತೆಯನ್ನು ತೋರುತ್ತಾರೆ. ಯಾರಿಗಾದರೂ ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ಅವರು ಆ ವ್ಯಕ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಅಥವಾ ಅವರೊಂದಿಗೆ ಇರಲು ಬಯಸಿದ್ದಾರೆ ಎಂದರ್ಥ.

ಮೀನ

ಮೀನ

ಪ್ರಣಯ ಪೂರಕ ವರ್ತನೆಯನ್ನು ತೋರುವ ಇವರು ಹೆಚ್ಚು ಕಾಳಜಿ ಹಾಗೂ ಶಾಂತ ಸ್ವಭಾವವನ್ನು ತೋರುತ್ತಾರೆ. ಇವರು ಕೆಲವೊಮ್ಮೆ ಅನೇಕ ವಿಚಾರಗಳಿಗೆ ಕ್ಷಮೆಯನ್ನು ನೀಡುವುದಿಲ್ಲ. ಇವರು ಇವರು ಸಂಗತಿಯನ್ನು ಹಾಗೆಯೇ ಒಪ್ಪಿಕೊಳ್ಳುವುದಿಲ್ಲ. ಯಾರಿಗಾದರೂ ಇವರು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾರೆ ಎಂದಾದರೆ ತಮ್ಮ ಜೀವಿತಾವಧಿಯಲ್ಲಿ ಅವರನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಎಂದರ್ಥ.

English summary

What Each Zodiac Means By - I Love You?

Those three words that you so desperately want to hear from your partner might have a lot of different meanings as two people saying 'I love you', might not mean the same thing. Their perception about love life and their choice about their partner depends upon their overall personality, which further relies on their stars. And finding it out is easy through their zodiacs.
Story first published: Tuesday, August 28, 2018, 8:30 [IST]
X
Desktop Bottom Promotion