ಮಲಗುವ ಭಂಗಿ ನಿಮ್ಮ ವ್ಯಕ್ತಿತ್ವ ತಿಳಿಸುತ್ತದೆ! ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ?

Posted By: Arshad
Subscribe to Boldsky

ವಿಜ್ಞಾನ ಎದುರಿಸಿದ ಇದುವರೆಗಿನ ಕ್ಲಿಷ್ಟಕರ ವಿಷಯಗಳಲ್ಲಿ ಸುಪ್ತಾವಸ್ಥೆಯಲ್ಲಿ ದೇಹ ಮತ್ತು ಮನಸ್ಸಿನ ಚಟುವಟಿಕೆಗಳೂ ಒಂದು. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಮೂಲಕ ಮಲಗುವ ಭಂಗಿಯಲ್ಲಿ ದೇಹ ನಮ್ಮ ನಿಜವಾದ ವ್ಯಕ್ತಿತ್ವವನ್ನು ಪ್ರಕಟಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಮನಃಶಾಸ್ತ್ರಜ್ಞರ ಪ್ರಕಾರ ನಿದ್ದೆಯ ಸಮಯದಲ್ಲಿ ನಮ್ಮ ಸುಪ್ತಾವಸ್ಥೆ ದೇಹವನ್ನು ನಿಯಂತ್ರಿಸುತ್ತದೆ ಹಾಗೂ ಈ ಸಮಯದಲ್ಲಿ ಯಾವುದೇ ನಟನೆ ನಡೆಯದು.

ಓರ್ವ ವ್ಯಕ್ತಿಯ ಮಲಗುವ ಭಂಗಿ ಆತನ/ಆಕೆಯ ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ವಿವರಿಸುತ್ತದೆ. ಇಂದಿನ ಲೇಖನದಲ್ಲಿ ಹೆಚ್ಚಿನವರು ಮಲಗುವ ಸಾಮಾನ್ಯವಾದ ನಾಲ್ಕು ಭಂಗಿಗಳ ಬಗ್ಗೆ ವಿವರಿಸಲಾಗಿದ್ದು ನೀವು ಈ ನಾಲ್ಕರಲ್ಲಿ ಯಾವ ಭಂಗಿಯನ್ನು ಅನುಸರಿಸುತ್ತೀರಿ ಎಂಬುದನ್ನು ಕಂಡುಕೊಳ್ಳುವ ಮೂಲಕ ನಿಮ್ಮ ವ್ಯಕ್ತಿತ್ವವನ್ನೂ ಅರಿಯಬಹುದು.... 

ಭ್ರೂಣದ ಭಂಗಿ

ಭ್ರೂಣದ ಭಂಗಿ

ಎರಡೂ ಕಾಲುಗಳನ್ನು ಬಗ್ಗಿಸಿ ಮೊಣಕಾಲುಗಳ ಬಳಿ ಮುಖವನ್ನು ಹುದುಗಿಸಿ ಮಲಗುವ ಭಂಗಿ ಸಾಮಾನ್ಯವಾದ ಭಂಗಿಯಾಗಿದೆ. ಗರ್ಭದಲ್ಲಿರುವ ಮಗು ಇದೇ ಭಂಗಿಯಲ್ಲಿ ಕನಿಷ್ಠ ಸ್ಥಳಾವಕಾಶವನ್ನು ಪಡೆಯುತ್ತದೆ. ಈ ಭಂಗಿಯಲ್ಲಿ ಮಲಗುವವರು ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿದ್ದು ಏಕಾಂತವನ್ನೂ ಪ್ರಕಟಿಸುತ್ತದೆ. ಈ ವ್ಯಕ್ತಿಗಳು ತಮ್ಮ ಸ್ವಂತ ವ್ಯಕ್ತಿತ್ವವನ್ನು ಹೊಂದುವುದಕ್ಕಿಂತಲೂ ತಮ್ಮ ಆದರ್ಶಪ್ರಾಯ ವ್ಯಕ್ತಿಯ ಗಮನ ಸೆಳೆಯುವತ್ತ ಹೆಚ್ಚು ಉತ್ಸುಕರಾಗಿರುತ್ತಾರೆ.

ಬೆನ್ನಿನ ಮೇಲೆ ನೆಟ್ಟಗೆ ಮಲಗುವ ಭಂಗಿ

ಬೆನ್ನಿನ ಮೇಲೆ ನೆಟ್ಟಗೆ ಮಲಗುವ ಭಂಗಿ

ಈ ಭಂಗಿಯಲ್ಲಿ ಬೆನ್ನಿನ ಮೇಲೆ ಮಲಗಿ ಕೈಗಳನ್ನು ಎರಡೂ ಬದಿ ಚಾಚಿ ಮಲಗುತ್ತಾರೆ. ಈ ಭಂಗಿಗೆ ಸೈನಿಕ ಭಂಗಿ ಎಂದೂ ಕರೆಯಲಾಗುತ್ತದೆ. ಈ ವ್ಯಕ್ತಿಗಳು ತಮ್ಮ ಮಾತುಗಳಿಗಿಂತಲೂ ತಾವು ನಿರ್ವಹಿಸುವ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಒಂದು ವ್ಯಾಪ್ತಿಗೆ ಮೀಸಲಾಗಿದ್ದು ಈ ವ್ಯಾಪ್ತಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ಇವರು ಇತರರಿಗಿಂತ ಹೆಚ್ಚು ಮಾನಸಿಕ ಸ್ಥೈರ್ಯವುಳ್ಳವರಾಗಿರುತ್ತಾರೆ.

ಹೊಟ್ಟೆಯ ಮೇಲೆ ಮಲಗುವ ಭಂಗಿ

ಹೊಟ್ಟೆಯ ಮೇಲೆ ಮಲಗುವ ಭಂಗಿ

ಈ ಭಂಗಿಯನ್ನು 'ಮಕಾಡೆ ಭಂಗಿ' ಎಂದೂ ಕರೆಯಲಾಗುತ್ತದೆ. ಈ ಭಂಗಿಯಲ್ಲಿ ಮಲಗುವ ವ್ಯಕ್ತಿಗಳು ತಮ್ಮ ಭಾವನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವರೂ ಕುತೂಹಲಿಗಳೂ ಆಗಿರುತ್ತಾರೆ. ಇವರು ಜವಾಬ್ದಾರಿಗಳನ್ನು ತಾವಾಗಿಯೇ ಹೊರಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇದರ ಹೊರತಾಗಿ ಇವರು ಒಂದು ಗುರಿಯನ್ನು ಹೊಂದಿದ್ದು ತಮ್ಮ ಗಮನವನ್ನು ಗುರಿ ಮುಟ್ಟುವತ್ತ ಕೇಂದ್ರೀಕರಿಸುತ್ತಾರೆ. ಇದಕ್ಕಾಗಿ ಇವರು ಯಾವುದೇ ಟೀಕೆಯನ್ನು ಎದುರಿಸಲೂ ಸಿದ್ಧರಾಗಿರುತ್ತಾರೆ.

ಒಂದು ಮಗ್ಗುಲಲ್ಲಿ ಮಲಗುವವರು

ಒಂದು ಮಗ್ಗುಲಲ್ಲಿ ಮಲಗುವವರು

ಬಲ ಅಥವಾ ಎಡ ಮಗ್ಗುಲಲ್ಲಿ ಮಲಗುವ ವ್ಯಕ್ತಿಗಳು ಇತರರಿಗಿಂತಲೂ ಸೌಮ್ಯ ವ್ಯಕ್ತಿಗಳಾಗಿದ್ದು ನಂಬಿಕಸ್ತರೂ ಆಗಿರುತ್ತಾರೆ. ಇವರಿಗೆ ಜಗತ್ತಿನ ಆಗುಹೋಗುಗಳಲ್ಲಿ ಹೆಚ್ಚಿನ ಉತ್ಸಾಹವಿರುವುದಿಲ್ಲ. ಇವರಿಗೆ ದೇಶ ಸುತ್ತುವ ಅಭಿಲಾಶೆ ಇರುತ್ತದೆ ಹಾಗೂ ಇವರು ಉತ್ತಮ ವರ್ಚಸ್ಸನ್ನೂ ಹೊಂದಿರುತ್ತಾರೆ. ಇವರು ನಾಲ್ಕು ಜನರ ನಡುವೆ ಇದ್ದಾಗ ವಿನೋದಮಯವಾಗಿ ಮಾತನಾಡುವ ಮೂಲಕ ಎಲ್ಲರ ಮನ ಗೆಲ್ಲುತ್ತಾರೆ.

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರು ಶಾಂತ ಸ್ವಭಾವ, ಹೆಚ್ಚಿನದನ್ನು ಬಯಸದ ಮತ್ತು ಗೌರವಯುತ ಜೀವನ ನಡೆಸಲು ಬಯಸುವವರಾಗಿದ್ದಾರೆ. ಇವರು ಭಾವಪರವಶರೂ ಮತ್ತು ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ. ಇವರು ಹೊಸಬರನ್ನು ತಕ್ಷಣಕ್ಕೆ ನಂಬುವುದಿಲ್ಲ. ಎಲ್ಲಾ ರೀತಿಯಿಂದ ತಾಳೆ ನೋಡಿ ನಂಬಿಕೆಗೆ ಅರ್ಹ ಎಂದ ಬಳಿಕವೇ ತಮ್ಮ ಸಹಾಯಹಸ್ತವನ್ನು ಚಾಚುತ್ತಾರೆ ಹಾಗೂ ಜೀವನಪರ್ಯಂತ ಇದನ್ನು ನಿಭಾಯಿಸುವವರಾಗಿದ್ದಾರೆ.

ಏನಾದರೊಂದನ್ನು ಓದುತ್ತಾ ಮಲಗುವುದು

ಏನಾದರೊಂದನ್ನು ಓದುತ್ತಾ ಮಲಗುವುದು

ಮಲಗುವ ಮುನ್ನ ಏನಾದರೂ ಓದಿ ಮಲಗುವವರು ತಮ್ಮ ಜೀವನದಲ್ಲಿ ಶಾಂತಿ ಬಯಸುವ ಜನರಾಗಿದ್ದಾರೆ. ಜೀವನದಲ್ಲಿ ಚಿಂತೆ, ದುಗುಡ, ಕಷ್ಟಗಳನ್ನು ಬಯಸದ ಇವರು ಹೊಸ ವಿಷಯವನ್ನು ಕಲಿಯಲು ನಿಧಾನಿಸುತ್ತಾರೆ. ಇತರರೊಂದಿಗೆ ಹೊಂದಿಕೊಳ್ಳಲು ಇವರಿಗೆ ಹೆಚ್ಚಿನ ಸಮಯಾವಕಾಶ ಬೇಕು. ಕೆಲವೊಮ್ಮೆ ಜೊತೆಯವರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾದಗೇ ಅವರಿಂದ ದೂರವಿರಲು ಬಯಸುತ್ತಾರೆ. ಆದರೆ ಒಗ್ಗಿಕೊಂಡವರಿಗೆ ಮಾತ್ರ ಪ್ರಾಣ ತೆರಲೂ ಸಿದ್ದರಿರುತ್ತಾರೆ.

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರಿಗೆ ಯಾವುದೇ ಚಿಂತೆ, ಭಯ ಅಥವಾ ಉದ್ವೇಗ ಕಾಡುತ್ತಿರುವ ಸ್ಪಷ್ಟ ಸಂಕೇತವಾಗಿದೆ. ಭವಿಷ್ಯದ ಬಗ್ಗೆ ಹೆದರಿಕೆ ಹೊಂದಿರುವ, ಸದಾ ಚಿಂತಿಸುತ್ತಲೇ ಇರುವ ಮತ್ತು ನಿರಾಶಾವಾದಿಗಳು ಈ ಭಂಗಿಯಲ್ಲಿ ಮಲಗುತ್ತಾರೆ. ಒಂದು ವೇಳೆ ಮಕ್ಕಳು ಈ ಭಂಗಿಯಲ್ಲಿ ಮಲಗಿದ್ದು ನಡುಕ ಸಹಾ ಕಂಡುಬಂದರೆ ಅವರ ಮನದಲ್ಲಿ ಭಯ ಬೀಡುಬಿಟ್ಟಿದೆ ಎಂದು ತಿಳಿದುಕೊಳ್ಳಬೇಕು. ಸಾವಕಾಶವಾಗಿ ಅವರ ಮನ ಗೆದ್ದು ಭಯಕ್ಕೆ ಕಾರಣವನ್ನು ಹುಡುಕಬೇಕು. ಪಾಲಕರಲ್ಲಿ ಹೇಳಲು ಹೆದರುವ ಈ ಭೀತಿ ಅವರನ್ನು ಇಡಿಯ ಜೀವಮಾನವೂ ಕಾಡಬಹುದು.

English summary

What Does Your Sleeping Position Reveal About You?

According to science our subconscious state of mind defines our body language and exposes the real side of ours. Psychologists reveal that one cannot fake themselves when they are sleeping or when they are in their unconscious state of mind. A person's sleeping position can reveal a lot about his/her personality. Here, we bring to you the 4 most common positions that most of us sleep in.